30 ಅಡಿ ಎತ್ತರದ ಕಬ್ಬಿನ ಗಣೇಶನ ಜೊತೆ 4ಸಾವಿರ ಕೆ.ಜಿಯ ಲಡ್ಡು ನೋಡೋ ಭಾಗ್ಯ ನಿಮಗೆ


ಗಣೇಶ ಚತುರ್ಥಿ ಹಬ್ಬ ಬಂತೆಂದರೆ ಎಲ್ಲರಿಗೂ ಸಂಭ್ರಮ. ಗಣೇಶ ದೇವಸ್ಥಾನಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಈ ದೇವಾಲಯಗಳನ್ನು ಹೊರತು ಪಡಿಸಿ ಇನ್ನೂ ಅನೇಕ ಸಂಘ ಸಂಸ್ಥೆಗಳು, ಅಲ್ಲಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

ಎಲ್ಲೆಡೆ ಗಣೇಶೋತ್ಸವ

ಬೆಂಗಳೂರಿನಲ್ಲಿ ಅನೇಕ ಕಡೆಗಳಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೊಡ್ಡ ದೊಡ್ಡ ಗಣೇಶನ ವಿಗ್ರಹವನ್ನು ಪ್ರತಿಷ್ಢಾಪಿಸುವ ಮೂಲಕ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತಾರೆ.

ಸತ್ಯ ಗಣಪತಿ

ಬೆಂಗಳೂರಿನ ಜೆಪಿ ನಗರದ ಬಳಿಯ ಪುಟ್ಟೇನಹಳ್ಳಿಯಲ್ಲಿನ ಸತ್ಯ ಗಣಪತಿ ದೇವಸ್ಥಾನದಲ್ಲಿ ಈ ಬಾರಿ ಒಂದು ವಿಶೇಷ ಗಣೇಶನನ್ನು ಇಡಲಾಗುತ್ತಿದೆ. ಇಲ್ಲಿನ ವಿಶೇಷವೆಂದರೆ ಗಣೇಶನನ್ನು ಕಬ್ಬಿನಿಂದ ತಯಾರಿಸಲಾಗುತ್ತಿದೆ. ಈಗಾಗಲೇ ಗಣೇಶನ ತಯಾರಿ ಕಾರ್ಯ ನಡೆಯುತ್ತಿದೆ.

ಓಂ ನಮಃ ಶಿವಾಯ್ ಹೇಳಿದ್ರೆ ಇಲ್ಲಿ ಏನೆಲ್ಲಾ ಚಮತ್ಕಾರ ನಡೆಯುತ್ತೆ ಗೊತ್ತಾ?

ಕಬ್ಬಿನ ಗಣೇಶ

ಇಲ್ಲಿನ ಗಣೇಶನನ್ನು ಕಬ್ಬಿನಿಂದ ತಯಾರಿಸಲಾಗುತ್ತಿದೆ. 30 ಅಡಿ ಎತ್ತರದ ಗಣೇಶ ಇದಾಗಿದೆ. 4 ಟನ್ ಕಬ್ಬನ್ನು ಈ ಗಣೇಶನನ್ನು ತಯಾರಿಸಲು ಬಳಸಲಾಗಿದೆ. ಹಳದಿ ಹಾಗೂ ಇನ್ನಿತರ ಪೂಜಾ ಸಮಾಗ್ರಿಗಳನ್ನು ಬಳಸಿ ಗಣೇಶನನ್ನು ಅಲಂಕರಿಸಲಾಗಿದೆ.

30 ಜನರ ಶ್ರಮ

ಈ 30 ಅಡಿ ಎತ್ತರದ ಕಬ್ಬಿನ ಗಣೇಶನನ್ನು ತಯಾರಿಸಲು 30 ಜನ ಕೆಲಸಗಾರರು ಶ್ರಮವಹಿಸಿದ್ದಾರೆ. ಈ ಮೂವತ್ತು ಮಂದಿ 21 ದಿನಗಳ ಕಾಲ ಶ್ರಮವಹಿಸಿ ಈ ಅದ್ಭುತ ಗಣೇಶನನ್ನು ತಯಾರಿಸಿದ್ದಾರೆ.

9 ಬಗೆಯ ವಿಷದಿಂದ ತಯಾರಾದ ವಿಗ್ರಹ ಇದು; ಅಭಿಷೇಕದ ತೀರ್ಥ ಕುಡಿದ್ರೆ ಏನಾಗುತ್ತೆ ?

4 ಸಾವಿರ ಕೆ.ಜಿಯ ಲಡ್ಡು

ಇಲ್ಲಿನ ಗಣೇಶ ಮಾತ್ರ ವಿಶೇಷವಲ್ಲ ಗಣೇಶನಿಗೆ ಅರ್ಪಿಸಲಾಗುವ ನೈವೇದ್ಯ ಕೂಡಾ ವಿಶೇಷವಾಗಿದೆ. ಈ ಗಣೇಶನಿಗೆ 4 ಸಾವಿರ ಕೆ.ಜಿಯ ಲಡ್ಡನ್ನು ಅರ್ಪಿಸಲಾಗುತ್ತಿದೆ. ಕೆಜಿಗಟ್ಟಲೆ ಗೋಡಂಬಿ, ದ್ರಾಕ್ಷಿ, ಏಲಕ್ಕಿ, ತುಪ್ಪ, ಸಕ್ಕರೆ,ಕಡಲೆ ಹುಡಿ ಹಾಕಿ ಈ ಲಡ್ಡನ್ನು ತಯರಿಸಲಾಗಿದೆ.

ಲಡ್ಡಿನ ಪ್ರಸಾದ

ಇಲ್ಲಿನ ಲಡ್ಡನ್ನು ಗಣೇಶ ವಿಸರ್ಜನೆಯಾದ ಬಳಿಕ ಭಕ್ತರಲ್ಲಿ ಪ್ರಸಾದ ರೂಪದಲ್ಲಿ ಹಂಚಲಾಗುವುದು ಎನ್ನಲಾಗಿದೆ. ಹಾಗಾಗಿ ಬೆಂಗಳೂರಿನ ಜನತೆಗೆ ಈ ಗಣೇಶ ಹಬ್ಬದಂದು ಒಂದು ವಿಶೇಷ ಗಣೇಶನ ದರ್ಶನವಾಗಲಿದೆ. ನೀವೂ ಕೂಡಾ ಈ ಗಜಮುಖನ ದರ್ಶನ ಪಡೆದು ಜೀವನ ಪಾವನವಾಗಿಸಿ.

Read More About: india travel temple ಭಾರತ

Have a great day!
Read more...

English Summary

The Ganesha idol is made of 4 tonnes of sugarcane and it took 30 workers 21 days to make the statue.