Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬೋಲಿ » ಹವಾಮಾನ

ಅಂಬೋಲಿ ಹವಾಮಾನ

ಯಾವುದೇ ಕಾಲದಲ್ಲಿಯಾದರೂ ಅಂಬೋಲಿಗೆ ಭೇಟಿ ನೀಡಬಹುದು, ಪ್ರಯಾಣಕ್ಕೂ ಎಲ್ಲಾ ಸೌಕರ್ಯಗಳಿರುತ್ತದೆ. ಚಳಿಗಾಲ ಅಂಬೋಲಿಗೆ ಭೇಟಿ ನೀಡಲು ಅತ್ಯಂತ ಹಿತವಾದ ಸಮಯವಾಗಿದೆ ಎಂದು ಅನುಭವಿಗಳು ಹೇಳುತ್ತಾರೆ.

ಬೇಸಿಗೆಗಾಲ

ಮಾರ್ಚ್ ತಿಂಗಳಿನಿಂದ ಮೇ ವರೆಗೂ ಹಗಲೂ ರಾತ್ರಿ ವಿಪರೀತ ಶೆಕೆ ಇದ್ದು ತಾಪಮಾನ ಸುಮಾರು ಕನಿಷ್ಠ 22 ಡಿಗ್ರಿ ಸೆಲ್ಶಿಯಸ್ ನಿಂದ ಹಿಡಿದು ಗರಿಷ್ಠ 40 ಡಿಗ್ರಿ ಸೆಲ್ಶಿಯಸ್ ವರೆಗೂ ಇರುತ್ತದೆ. ಈ ಪ್ರದೇಶಕ್ಕೆ ಮೇ ತಿಂಗಳಲ್ಲಿ ಭೇಟಿ ನೀಡುವುದು ಬೇಡವೇ ಬೇಡ.

ಮಳೆಗಾಲ

ಅಂಬೋಲಿಯಲ್ಲಿ ಜೂನ್ ನಿಂದ ಸೆಪ್ಟಂಬರ್ ತಿಂಗಳವರೆಗೆ ಜೋರು ಮಳೆ ಇದ್ದೇ ಇರುತ್ತದೆ. ಈ ಕಾಲದಲ್ಲಿ ತಾಪಮಾನ ಸುಮಾರು 20 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಈ ಹವಾಮಾನ ನಿಮಗೆ ಇಷ್ಟವಾಗುವುದಾದರೆ ಒಂದು ಗಳಿಗೆಯೂ ತಡಮಾಡದೆ ಲಗೇಜ್ ಸಿದ್ಧ ಮಾಡಿಕೊಂಡು ಅಂಬೋಲಿಗೆ ಹೊರಟು ಬಿಡಿ ಏಕೆಂದರೆ ಅಂತ್ಯಂತ ಸುಂದರ ಹಾಗೂ ಆಕರ್ಷಣೀಯ ಜಲಪಾತಗಳನ್ನು ಈ ಸಮಯದಲ್ಲಿ ಇಲ್ಲಿ ಕಾಣಬಹುದು.

ಚಳಿಗಾಲ

ಡಿಸೆಂಬರ್ ತಿಂಗಳಿನಿಂದ ಆರಂಭವಾಗುವ ಚಳಿಗಾಲವು ಫೆಬ್ರವರಿ ಕೊನೆವರೆಗೂ ಅಂಬೋಲಿಯಲ್ಲಿರುತ್ತದೆ. ಈ ಕಾಲದಲ್ಲಿ ಇಲ್ಲಿನ ತಾಪಮಾನ ಹಿತಕರವಾಗಿದ್ದು ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದರಿಂದ ಸುತ್ತಲಿನ ಪ್ರದೇಶಗಳನ್ನೆಲ್ಲಾ ಒಮ್ಮೆ ನೋಡಿಕೊಂಡು ಬರಬಹುದಾಗಿದೆ. ಚಳಿಗಾಲದಲ್ಲಿ ತಾಪಮಾನ ತಣ್ಣಗಿದ್ದು ಸುಮಾರು ಕನಿಷ್ಠ 10 ಡಿಗ್ರಿ ಸೆಲ್ಶಿಯಸ್ ನಿಂದ ಗರಿಷ್ಠ 30 ಡಿಗ್ರಿ ವರೆಗೆ ಇರುತ್ತದೆ.