Search
  • Follow NativePlanet
Share
ಮುಖಪುಟ » ಸ್ಥಳಗಳು» ಅಂಬೋಲಿ

ಅಂಬೋಲಿ - ಪ್ರಮುಖವಾದ ಐತಿಹಾಸಿಕ ಕೇಂದ್ರ

13

ಭಾರತದಲ್ಲಿ ಬ್ರಿಟೀಷರು ಆಡಳಿತ ನಡೆಸುತಿದ್ದ ಸಂದರ್ಭದಲ್ಲಿ ಅಂಬೋಲಿ ಪ್ರದೇಶವನ್ನು ರಕ್ಷಣಾ ಸೈನ್ಯದ ತರಬೇತಿ ಕೇಂದ್ರವನ್ನಾಗಿ ಬಳಕೆ ಮಾಡುತ್ತಿದ್ದರು ಹಾಗು ಇಲ್ಲಿಂದ ಕೇಂದ್ರ ಹಾಗೂ ದಕ್ಷಿಣ ಭಾರತದ ಪ್ರದೇಶಗಳಿಗೆ ಸೇನೆಯನ್ನು ಕಳುಹಿಸಲಾಗುತ್ತಿತ್ತು.1880 ರ ಸುಮಾರಿನಲ್ಲಿ ಅಂಬೋಲಿಯನ್ನು ಬೆಟ್ಟ ಪ್ರದೇಶವೆಂದು ಗುರುತಿಸಲಾಯಿತು.

ಬ್ರಿಟಿಷರಿಗೂ ಮೊದಲು ಇಲ್ಲಿನ ಸ್ಥಳೀಯ ಸಾವಂತವಾಡಿಯನ್ನು ಒಂದು ಅದ್ಭುತವಾದ ಪ್ರದೇಶ ಎಂಬುದಾಗಿ ಗುರುತಿಸಲಾಗಿತ್ತು. ಆದಾಗ್ಯೂ ಮಹರಾಷ್ಟ್ರದಲ್ಲಿ ಇದು ಅತ್ಯಂತ ಶೀತ ಪ್ರದೇಶವಾಗಿದ್ದು ಬ್ರಿಟೀಷರಿಗೆ ಬೇಸಿಗೆಯಲ್ಲಿ ಇದು ರಿಟ್ರೀಟ್ ಕೇಂದ್ರವಾಗಿತ್ತು. ಮಹರಾಷ್ಟದ ಭೂಪಟದಲ್ಲಿ ಇದು ಯಾರ ಕಣ್ಣಿಗೂ ಬೀಳದ ಸುಂದರ ಕನ್ನಿಕೆಯಾಗಿಯೇ ಉಳಿದ ಪ್ರದೇಶವಾಯಿತು.

ಪ್ರಶಾಂತವಾದ ಬೆಟ್ಟ ಪ್ರದೇಶ

ಇಡೀ ವಾರದ ಬದುಕಿನ ಜಂಜಾಟದ ನಡುವೆ ವಾರಾತ್ಯಂದ ದಿನ ಕಳೆಯಲು ಅಂಬೋಲಿಯು ಒಂದು ಸುಂದರ ಸ್ಥಳ, ಅದರಲ್ಲೂ ಪ್ರೇಮಿಗಳಿಗೆ ಹೇಳಿ ಮಾಡಿಸಿದ್ದು ಎಂದರೆ ತಪ್ಪಾಗಲಾರದು! ದಿನ ನಿತ್ಯದ ವೇಗದ ಬದುಕಿನ ನಡುವೆ ಇಂಥ ಸ್ಥಳಕ್ಕೊಮ್ಮೆ ಭೇಟಿ ನೀಡಿ, ಮನಸ್ಸಿನ ಆತಂಕ, ದುಗುಡ ಹಾಗು ದುಮ್ಮಾನಗಳು ಒಂದಷ್ಟು ಕಡಿಮೆಯಾಗುತ್ತದೆ.

ಅಂಬೋಲಿ ಜಲಪಾತಗಳಿರುವ ಸ್ವರ್ಗ. ಶರ್ಗಾಂಕರ್ ಜಲಪಾತ, ಮಹಾದೇವ ಜಲಪಾತ ಹಾಗೂ ನಘಟ್ಟ ಜಲಪಾತ ಇಂಥಹ ಅನೇಕ ಜಲಪಾತಗಳು ಇಲ್ಲಿನ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ನಘಟ್ಟ ಜಲಪಾತವು ಅತ್ಯಂತ ಸುಂದರವಾಗಿದ್ದು ಪಿಕ್ ನಿಕ್ ಹಾಗೂ ವಿಶ್ರಾಂತಿ ಪಡೆಯಲು ಬಯಸುವವರಿಗೆ ವೆಚ್ಚುಗೆಯಾಗುವ ಸ್ಥಳವಾಗಿದೆ.

ಇಲ್ಲಿನ ಗುಹೆಯ ಮುಂಭಾಗದಲ್ಲಿರುವ ಶಿವನ ದೇವಾಲಯವು ಹಿರಣ್ಯಕೇಶಿ ಜಲಪಾತಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟಿದೆ. ಈ ದೇವಾಲಯವು ಖುದ್ದು ಶಿವನ ಸ್ವಶರೀರವೇ ಆಗಿದೆ ಎಂಬ ಹೇಳಿಕೆಗಳೂ ಕೇಳಿ ಬರುತ್ತವೆ. ಇದಕ್ಕೆ ಹಿರಣ್ಯ ಕೇಶಿ ದೇವಾಲಯ ಎಂಬ ಹೆಸರು ಖುದ್ದು ಪಾರ್ವತಿಯಿಂದಲೆ ಬಂದಿದ್ದು ಆಕೆಯನ್ನು ಸಹ ಭಕ್ತರು ಇದೆ ಹೆಸರಿನಿಂದಲೆ ಕರೆಯುತ್ತಾರೆ.

ಅಂಬೋಲಿಯು ಒಂದು ಗಿರಿಧಾಮವಾಗಿರುವುದರಿಂದ ಹಲವಾರು ವೀಕ್ಷಣಾ ಸ್ಥಳಗಳನ್ನು ಹೊಂದಿದೆ. ಪ್ರಮುಖವಾದವುಗಳೆಂದರೆ, ಸಿ ವಿವ್ ಪಾಯಿಂಟ್, ಕಾವೇಲ್ಸದ್ ಪಾಯಿಂಟ್, ಪರೀಕ್ಷಿತ್ ಪಾಯಿಂಟ್ ಮತ್ತು ಮಹಾದೇವ್ ಗಡ್ ಪಾಯಿಂಟ್. ಈ ಎಲ್ಲ ಸ್ಥಳಗಳು ಅರೇಬಿಯನ್ ಸಮುದ್ರ ಮತ್ತು ಕೊಂಕಣ ಕರಾವಳಿಯ ವಿಹಂಗಮ ನೋಟಗಳನ್ನು ನೋಡುಗರಿಗೆ ಒದಗಿಸುತ್ತವೆ.

ಯಾವಾಗ ಭೇಟಿ ನೀಡಬಹುದು ಹಾಗೂ ಹೋಗುವುದು ಹೇಗೆ?

ಅಂಬೋಲಿ ಬೆಟ್ಟ ಪ್ರದೇಶವಾದ್ದರಿಂದ ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡುವುದೆ ಉತ್ತಮ ಅಲ್ಲದೆ ಇದು ಎತ್ತರ ಪ್ರದೇಶದಲ್ಲಿರುವುದರಿಂದ ಬೇಸಿಗೆಯಲ್ಲಿಯೂ ಇಲ್ಲಿ ತಂಪಾದ ವಾತಾವರಣ ಇರುತ್ತದೆ. ಆದರೂ ಮೇ ತಿಂಗಳಿನಲ್ಲಿ ಇಲ್ಲಿ ಹೆಚ್ಚು ಶೆಕೆ ಇರುವುದರಿಂದ ಆ ತಿಂಗಳಲ್ಲಿ ಇಲ್ಲಿಗೆ ಹೋಗದೆ ಇರುವುದು ಒಳ್ಳೆಯದು. ಮಳೆಗಾಲದಲ್ಲಿ ಇಲ್ಲಿನ ಹವಾಮಾನ ಕನಿಷ್ಠಿ 20 ಡಿಗ್ರಿ ಸೆಲ್ಶಿಯಸ್ ಗೆ ಬರುವುದರಿಂದ ಇಂತಹ ದಿನಗಳು ನಿಜಕ್ಕೂ ಪ್ರವಾಸಿಗರಿಗೆ ಹಿತವಾಗಿರುತ್ತದೆ. ಚಳಿಗಾಲ ಇನ್ನೂ ಮನಮೋಹಕವಾಗಿದ್ದು ಪ್ರೇಮಿಗಳಿಗೆ ಸೂಕ್ತವಾದ ಕಾಲವಾಗಿದೆ.

ಗೋವಾ ಹಾಗೂ ಸಾವಂತವಾಡಿ ಮೂಲಕ ರೈಲು, ಬಸ್ಸು ಹಾಗೂ ವಿಮಾನ ಮಾರ್ಗವಾಗಿ ಸುಲಭವಾಗಿ ಅಂಬೋಲಿ ತಲುಪಬಹುದು. ವಿಮಾನ ಮಾರ್ಗವಾಗಿ ಹೋಗಲು ಬಯಸುವವರಿಗೆ ಗೋವಾ ಹತ್ತಿರದ ನಿಲ್ದಾಣವಾಗಿದ್ದು ಅಲ್ಲಿಂದ ಅಂಬೋಲಿಗೆ ಕೇವಲ 70 ಕಿ.ಮೀ.ಅಂತರವಿದೆ. ರೈಲು ಮಾರ್ಗವಾಗಿ ಬರುವವರು ಸಾವಂತವಾಡಿ ರೈಲು ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಯಾವುದಾದರೂ ಟ್ಯಾಕ್ಸಿ, ಕ್ಯಾಬ್ ಗಳ ಮೂಲಕ ಅಂಬೋಲಿ ತಲುಪಬಹುದು. ಮುಂಬೈಯಿಂದ 550 ಕಿ.ಮೀ. ಹಾಗೂ ಪೂಣೆಯಿಂದ 400 ಕಿ.ಮೀ.ದೂರದಲ್ಲಿರುವ ಅಂಬೋಲಿಗೆ ಅನೇಕ ಬಸ್ ಗಳ ಸೌಕರ್ಯವಿದೆ. ಇವೆರಡು ನಗರಗಳಿಂದ ಮಾತ್ರವಲ್ಲಿ ಇತರ ಪಟ್ಟಣ ಹಾಗೂ ನಗರಗಳಿಂದಲೂ ಬಸ್ ಸಂಚಾರವಿದೆ.

ಅಂಬೋಲಿ ಒಂದು ನೈಸರ್ಗಿಕ ಮಹತ್ವವುಳ್ಳ ಸುಂದರ ಪ್ರದೇಶವಾಗಿದ್ದು ಇಲ್ಲಿ ಅನೇಕ ಪ್ರಭೇದ ಹಾಗೂ ಜಾತಿಯ ಸಸ್ಯ ಹಾಗೂ ಹೂಗಳನ್ನು ಕಾಣಬಹುದು. ಏಕಾಂತ ಬಯಸಿ ಬರುವವರಿಗೆ ಅಂಬೋಲಿಗಿಂತ ಉತ್ತಮವಾದ ಪ್ರದೇಶ ಮತ್ತೊಂದಿಲ್ಲ. ಎತ್ತರವಾದ ಬೆಟ್ಟಗಳು ಹಾಗೂ ದಟ್ಟ ಅರಣ್ಯದ ನಡುವೆ ತಂಪಾಗಿ ಬೀಸುವ ಹಿತವಾದ ಗಳಿಯ ವಾತಾವರಣವು, ಸ್ವರ್ಗವನ್ನು ನೆನಪಿಗೆ ತರದೆ ಇರಲಾರದು.

ಅಂಬೋಲಿ ಪ್ರಸಿದ್ಧವಾಗಿದೆ

ಅಂಬೋಲಿ ಹವಾಮಾನ

ಉತ್ತಮ ಸಮಯ ಅಂಬೋಲಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಅಂಬೋಲಿ

  • ರಸ್ತೆಯ ಮೂಲಕ
    ಪಣಜಿ, ಕೊಲ್ಹಾಪುರ ಹಾಗೂ ಬೆಳಗಾವಿಯಿಂದ ರಸ್ತೆ ಮಾರ್ಗವಾಗಿ ಅಂಬೋಲಿ ನಗರಕ್ಕೆ ಸುಲಭವಾಗಿ ತಲುಪಬಹುದು. ಮುಂಬೈ 550 ಕಿ.ಮೀ. ಹಾಗೂ ಪುಣೆ 400 ಕಿ.ಮೀ.ದೂರದಲ್ಲಿದೆ. ಈ ನಗರ ಹಾಗೂ ಪಟ್ಟಣಗಳಿಂದ ಅನೇಕ ರಾಜ್ಯ ಸರ್ಕಾರದ ಬಸ್ ಹಾಗೂ ಖಾಸಗಿ ಬಸ್ ಗಳು ಅಂಬೋಲಿಗೆ ಸಂಪರ್ಕ ಹೊಂದಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸುಮಾರು 30 ಕಿ.ಮೀ.ದೂರದಲ್ಲಿರುವ ಸಾವಂತವಾಡಿ ರೈಲು ನಿಲ್ದಾಣ ಹತ್ತಿರದ ರೈಲು ನಿಲ್ದಾಣವಾಗಿದೆ. ಇಲ್ಲಿಂದ ಅಂಬೋಲಿ ತಲುಪಲು ಅನೇಕ ಟ್ಯಾಕ್ಸಿ ಹಾಗೂ ಕ್ಯಾಬ್ ಗಳೂ ಲಭ್ಯವಿರುತ್ತವೆ. ಇದಕ್ಕೆ ಸುಮಾರು 350 ರೂ.ಗಳ ಶುಲ್ಕ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಅಂಬೋಲಿಯಿಂದ ಸುಮಾರು 67 ಕಿ.ಮೀ. ದೂರದಲ್ಲಿರುವ ಗೋವಾ ಹತ್ತಿರದ ಡೊಮೆಸ್ಟಿಕ್ ವಾಯು ನಿಲ್ದಾಣ. ಮಹರಾಷ್ಟ್ರದ ಸುತ್ತಲಿನ ಎಲ್ಲಾ ನಗರಗಳಿಗೂ ಇದು ಸಮೀಪದ ವಿಮಾನ ನಿಲ್ದಾಣವಾಗಿದ್ದು ಪ್ರತಿನಿತ್ಯ ವಿಮಾನಗಳು ಬಂದು ಹೋಗುತ್ತವೆ. ಸುಮಾರು 555 ಕಿ.ಮೀ. ದೂರದಲ್ಲಿರುವ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ ಸಮೀಪದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat