Search
  • Follow NativePlanet
Share
ಮುಖಪುಟ » ಸ್ಥಳಗಳು» ಅಮರಾವತಿ

ಅಮರಾವತಿ: ಇತಿಹಾಸದೊಳಗೊಂದು ನೆನಪಿನ ನಡಿಗೆ

18

ಆಂಧ್ರಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ಕೃಷ್ಣ ನದಿಯ ದಂಡೆಯ ಮೇಲೆ ಅಮರಾವತಿಯೆಂಬ ಪುಟ್ಟ ಪಟ್ಟಣವಿದೆ. ಇಲ್ಲಿರುವ ಅಮರೇಶ್ವರ ದೇವಸ್ಥಾನದಿಂದಾಗಿ ಪ್ರಪಂಚದಾದ್ಯಂತ ಈ ಸ್ಥಳ ಗಮನ ಸೆಳೆಯುತ್ತದೆ. ಅಮರಾವತಿಯಲ್ಲಿರುವ ಬೌದ್ಧ ಸ್ತೂಪವೂ ಕೂಡ ಪ್ರಸಿದ್ದ. ಮೌರ್ಯ ಸಾಮ್ರಾಜ್ಯ ಸ್ಥಾಪನೆಗೂ ಮುಂಚೆ ಈ ಬೌದ್ಧ ಸ್ತೂಪವನ್ನು ಕಟ್ಟಲಾಗಿದೆ ಎಂಬ ನಂಬಿಕೆಯಿದೆ. ನಂತರ ಈ ಸ್ಥಳ ಧನ್ಯಕಟಕ ಅಥವಾ ಧರಣಿಕೋಟ ಎಂಬ ಹೆಸರು ಪಡೆದುಕೊಂಡಿತು. ಅಮರಾವತಿ ಆಂಧ್ರಪ್ರದೇಶವನ್ನು ಮೊದಲು ಆಳಿದ ಶಾತವಾಹನರ ರಾಜಧಾನಿಯಾಗಿತ್ತು.

ಶಾತವಾಹನರು 2 ಮತ್ತು 3 ನೇ ಶತಮಾನದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತಾರ ಮಾಡಿದರು. ಅಮರಾವತಿಯಲ್ಲಿ ಭಗವಾನ್ ಬುದ್ಧ ತಪಗೈದ ಮತ್ತು ಕಾಲಚಕ್ರ ಉತ್ಸವವನ್ನು ಕೈಗೊಂಡ. ಅಮರಾವತಿ 500 BCE ಗಿಂತಲೂ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ವಜ್ರಾಯಣ ಪುಸ್ತಕದಲ್ಲಿ ದಾಖಲೆಗಳಿವೆ. ಇಂದು, ಅಮರಾವತಿ ಸ್ತೂಪ ಮತ್ತು ಪುರಾತತ್ವ ಸಂಗ್ರಹಾಲಯಗಳಿಂದಾಗಿ ಪ್ರಸಿದ್ದ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಪಕ್ಕದಲ್ಲಿಯೇ ಕೃಷ್ಣ ನದಿ ಹರಿಯುವುದರಿಂದ ಅಮರಾವತಿ ಸದ್ಯ ಸ್ಥಳಿಯರಿಗೆ ಮತ್ತು ಪ್ರವಾಸಿಗರಿಗೆ ಅತ್ಯುತ್ತಮ ವಿಹಾರತಾಣ.

ಪ್ರವಾಸಿ ಗಮ್ಯಸ್ಥಾನವಾಗಿರುವ ಅಮರಾವತಿ ಪಟ್ಟಣವನ್ನು ರೈಲು, ಬಸ್ಸು ಮತ್ತು ದೋಣಿಗಳ ಮೂಲಕ ಆರಾಮವಾಗಿ ತಲುಪಬಹುದು. ವಿಜಯವಾಡಾ ಜಿಲ್ಲೆಯಲ್ಲಿ ಹತ್ತಿರದ ವಿಮಾನ ನಿಲ್ದಾಣವಿದೆ. ಆಂಧ್ರಪ್ರದೇಶದ ಬೇರೆ ಬೇರೆ ಜಿಲ್ಲೆಗಳಿಂದ ಸರ್ಕಾರಿ ಬಸ್ ಸೌಲಭ್ಯ ಬೇಕಾದಷ್ಟಿವೆ. ವಾತಾವರಣ ಪದೇ ಪದೇ ಬದಲಾಗುತ್ತಿದ್ದು ಬೇಸಿಗೆಯಲ್ಲಿ ಅತಿ ಉಷ್ಣತೆ ಮತ್ತು ಒಣಹವೆ, ಚಳಿಗಾಲದಲ್ಲಿ ವಿಪರೀತ ಚಳಿ ಇರುತ್ತದೆ. ಅಮರಾವತಿ ಪಟ್ಟಣ ತನ್ನೊಳಗೆ ಇತಿಹಾಸದ ಪದರವನ್ನು ಅವಿತಿಟ್ಟುಕೊಂಡಿರುವ ಕಾರಣಕ್ಕೆ ಕೇವಲ ಇತಿಹಾಸ ಪ್ರಿಯರಿಗೆ ಮಾತ್ರವಲ್ಲ ಅಧ್ಯಯನಶೀಲರಿಗೂ ಕೂಡ ನೆಚ್ಚಿನ ತಾಣವಾಗಿದೆ.

ಅಮರಾವತಿ ಪ್ರಸಿದ್ಧವಾಗಿದೆ

ಅಮರಾವತಿ ಹವಾಮಾನ

ಉತ್ತಮ ಸಮಯ ಅಮರಾವತಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಅಮರಾವತಿ

  • ರಸ್ತೆಯ ಮೂಲಕ
    ಅಮರಾವತಿ ಪಟ್ಟಣಕ್ಕೆ ದೇಶದ ಬೇರೆ ಬೇರೆ ಭಾಗಗಳಿಂದ ಉತ್ತಮ ರಸ್ತೆ ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿಯೊಂದು ಅಮರಾವತಿಯಿಂದ ಹಾದುಹೋಗಿದ್ದು ಆಂಧ್ರಪ್ರದೇಶ ಮತ್ತು ಹೊರ ರಾಜ್ಯಗಳಿಂದಲೂ ಸರಕಾರಿ ಮತ್ತು ಖಾಸಗಿ ಬಸ್ ಸೌಕರ್ಯಗಳಿವೆ. ಕರ್ನಾಟಕ ಮತ್ತು ತಮಿಳುನಾಡುಗಳಿಂದಲೂ ವಿಶೇಷ ಬಸ್ಸುಗಳಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಅಮರಾವತಿ ಪಟ್ಟಣದ ಮಧ್ಯಭಾಗದಲ್ಲಿ ರೈಲ್ವೇ ನಿಲ್ದಾಣವಿದ್ದು ಹತ್ತಾರು ರೈಲುಗಳು ಗುಂಟೂರಿನಿಂದ ಸಂಪರ್ಕ ಹೊಂದಿವೆ. ಹೀಗಾಗಿ, ದೇಶದ ವಿವಿಧ ಭಾಗಗಳಿಂದ ಗುಂಟೂರಿಗೆ ಹೊಂದಿಕೊಂಡ ರೈಲುಗಳನ್ನು ಹತ್ತಿ ಅಮರಾವತಿ ಸೇರಿಕೊಳ್ಳಬಹುದು. ರೈಲ್ವೇ ನಿಲ್ದಾಣದಿಂದ ಪಟ್ಟಣಕ್ಕೆ ಟ್ಯಾಕ್ಸಿ, ಆಟೋ ಅಥವಾ ಬಸ್ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಅಮರಾವತಿಗೆ ಹತ್ತಿರದ ವಿಮಾನನಿಲ್ದಾಣ ವಿಜಯವಾಡಾದಲ್ಲಿದ್ದು ನಗರದಿಂದ 65 ಕಿಲೋ ಮೀಟರ್ ದೂರದಲ್ಲಿದೆ. ಸುಮಾರು 271 ಕಿಲೋ ಮೀಟರ್ ದೂರದಲ್ಲಿ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ವಿಮಾನನಿಲ್ದಾಣದಿಂದ ಕ್ಯಾಬ್ ಗಳು ಲಭ್ಯವಿವೆ. ಹೈದರಾಬಾದ್ ನಿಂದ ಕ್ಯಾಬ್ ಗಳಲ್ಲಿ ಬರುವುದಾದರೆ 3000ಐಎನ್ಆರ್ ತೆರಲು ತಯಾರಾಗಿರಿ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri