Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಹಾಬಾದ್ » ಹವಾಮಾನ

ಅಲಹಾಬಾದ್ ಹವಾಮಾನ

ಉತ್ತರ ಭಾರತದ ಇತರ ಪಟ್ಟಣಗಳಂತೆ ಈ ಪಟ್ಟಣಕ್ಕೂ ಪ್ರವಾಸ ಕೈಗೊಳ್ಳುವ ಸೂಕ್ತ ಸಮವೆಂದರೆ ನವೆಂಬರ್ ನಿಂದ ಮಾರ್ಚ್ ವರೆಗೆ. ಇತರ ತಿಂಗಳುಗಳಲ್ಲಿ ಒಣಹವೆಯಿಂದ ಕೂಡಿದ್ದು ತಾಪಮಾನ ಹೆಚ್ಚಿರುತ್ತದೆ. ಅಲಹಾಬಾದ್ ಒಂದು ತೀರ್ಥಯಾತ್ರಾ ಸ್ಥಳವಾಗಿರುವುದರಿಂದ ಬಹಳಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬೇಸಿಗೆಗಾಲ

ಅಲಹಾಬಾದ್ ನಲ್ಲಿ ಬೇಸಿಗೆ ಕಾಲ ಮಾರ್ಚ್ ನಿಂದ ಜೂನ್ ವರೆಗೆ ಇರುತ್ತದೆ. ಈ ಅವಧಿಯಲ್ಲಿ ಮರಕ್ಯೂರಿ 45 ಡಿಗ್ರಿ ಸೆಂಟಿಗ್ರೇಡ್ ವರೆಗೆ ಏರಿಕೆಯಾಗುತ್ತದೆ.

ಮಳೆಗಾಲ

ಮಳೆಗಾಲ ಜುಲೈನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ಮಳೆ ಸುರಿಯುವುದರಿಂದ ಹವಾಮಾನ ತೇವಾಂಶದಿಂದ ಕೂಡಿರುತ್ತದೆ.

ಚಳಿಗಾಲ

ಚಳಿಗಾಲ ಡಿಸೆಂಬರ್ ನಿಂದ ಫೆಬ್ರವರಿವರೆಗೆ ಚಳಿಗಾಲವಿರುತ್ತದೆ. ಹವಾಮಾನ ತಂಪಾಗಿ ಇದ್ದು, ಉಷ್ಣಾಂಶ ಶೇ.12 ಡಿಗ್ರಿ ಸೆಂಟಿಗ್ರೇಡ್ ನಿಂದ 20 ಡಿಗ್ರಿವರೆಗೆ ಕುಸಿದಿರುತ್ತದೆ. ಹಿತಕರ ವಾತಾವರಣವಿರುತ್ತದೆ. ಜನವರಿ ತಿಂಗಳಲ್ಲಿ ಮಂಜುಗಟ್ಟುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ಸುಮಾರು ಫ್ಲೈಟ್ ಗಳು ರದ್ದಾಗುವ ಹಾಗು ರೈಲುಗಳ ಸಮಯ ಏರುಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ.