Search
 • Follow NativePlanet
Share
ಮುಖಪುಟ » ಸ್ಥಳಗಳು» ಅಲಹಾಬಾದ್

ಅಲಹಾಬಾದ್ - ಮೂರು ಪವಿತ್ರ ನದಿಗಳ ಪವಿತ್ರ ಸಂಗಮ

41

ಉತ್ತರ ಪ್ರದೇಶದ ಅತಿ ದೊಡ್ಡ ಪಟ್ಟಣಗಳಲ್ಲಿ ಅಲಹಾಬಾದ್ ಸಹ ಒಂದು. ಅಲಹಾಬಾದ್ ವಿವಿಧ ಆಯಾಮಗಳನ್ನು ಹೊಂದಿರುವ ಪಟ್ಟಣ. ಹಿಂದೂಗಳ ಒಂದು ಪವಿತ್ರ ಯಾತ್ರಾ ಸ್ಥಳವಾಗಿರುವ ಅಲಹಾಬಾದ್, ಆಧುನಿಕ ಬಾರತದ ನಿರ್ಮಾಣದಲ್ಲಿಯೂ ವಿಶೇಷವಾದ ಪಾತ್ರ ವಹಿಸಿದೆ. ಹಿಂದಿನ ಕಾಲದಲ್ಲಿ ಅಲಹಾಬಾದ್ ಪ್ರಯಾಗ್ ಎಂದು ಕಲೆಯಲ್ಪಡುತ್ತಿತ್ತು. ಇದರ ಬಗ್ಗೆ ಭಾರತದ ಧರ್ಮಗ್ರಂಥಗಳಲ್ಲಿ, ಅಂದರೆ ವೇದಗಳಲ್ಲಿ, ರಾಮಾಯಣ ಮತ್ತು ಮಹಾಭಾರತದಂಥ ಗ್ರಂಥಗಳಲ್ಲಿ ಉಲ್ಲೇಖವಿದೆ.

ಅಲಹಾಬಾದ್ ಇತಿಹಾಸ

1575ರಲ್ಲಿ ಮೊಘಲ್ ದೊರೆ ಅಕ್ಬರ್ ಈ ಪ್ರಯಾಗ್ ಪಟ್ಟಣವನ್ನು ಇಲಹಾಬಾದ್ ಎಂದು ಮರುನಾಮಕರಣ ಮಾಡಿದ. ಕಾಲಾನುಕ್ರಮೇಣ ಅಲಹಾಬಾದ್ ಆಗಿ ಮಾರ್ಪಟ್ಟಿತು. ಜಲಮಾರ್ಗದ ಮೈಲಿಗಲ್ಲಾಗಿದ್ದ ಅಲಹಾಬಾದ್‌ನ ಮಹತ್ವವನ್ನು ಅರಿತು ಸಂಗಮ ತಟದಲ್ಲಿ ಒಂದು ಬೃಹತ್ತಾದ ಕೋಟೆಯನ್ನು ಅಕ್ಬರ್ ದೊರೆ ಕಟ್ಟಿಸಿದ. ಶತಮಾನಗಳ ನಂತರ ಮತ್ತೊಮ್ಮೆ ಅಲಹಾಬಾದ್ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. 1885ರಲ್ಲಿ ಮೊತ್ತ ಮೊದಲ ಬಾರಿಗೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪಿತವಾಗಿದ್ದು ಇದೇ ಊರಿನಲ್ಲಿ. 1920ರಲ್ಲಿ ಮಹಾತ್ಮಾ ಗಾಂಧಿ ತಮ್ಮ ಅಹಿಂಸಾ ಚಳವಳಿಯನ್ನು ಶುರು ಮಾಡಿದ್ದು ಕೂಡ ಇದೇ ಊರಲ್ಲಿ.

ಬ್ರಿಟಿಷರ ಕಾಲದಲ್ಲಿ ವಾಯವ್ಯ ಪ್ರಾಂತ್ಯಗಳಿಗೆ ಅಲಹಾಬಾದ್ ಕೇಂದ್ರ ಕಚೇರಿಯಾಗಿತ್ತು. ಈ ಯುಗದ ಕುರುಹಾಗಿ ಮುಯಿರ್ ಕಾಲೇಜು ಮತ್ತು ಆಲ್ ಸೇಂಟ್ಸ್ ಕೆಥೆಡ್ರಲ್ ಅಸ್ತಿತ್ವದಲ್ಲಿವೆ.

ಅಲಹಾಬಾದ್ ಒಂದು ಪವಿತ್ರ ಯಾತ್ರಾ ಸ್ಥಳ

ಸದ್ಯ ಅಲಹಾಬಾದ್ ಉತ್ತರ ಭಾರತದ ದೊಡ್ಡ ತೀರ್ಥ ಯಾತ್ರಾ ಸ್ಥಳವೆಂದೇ ಹೆಸರುವಾಸಿಯಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಸೃಷ್ಟಿಕರ್ತನಾದ ಬ್ರಹ್ಮನು ಒಮ್ಮೆ ಪ್ರಕೃಷ್ಟ ಯುದ್ಧಕ್ಕೆ ಅಲಹಾಬಾದ್ ನನ್ನೇ ಆಯ್ಕೆ ಮಾಡಿದ್ದನಂತೆ. ಅದರ ಪಾವಿತ್ರ್ಯತೆಗೆ ಅನುಗುಣವಾಗಿ ಅದನ್ನು 'ತೀರ್ಥರಾಜ' ಎಂದು ನಾಮಕರಣ ಮಾಡಿದ್ದನಂತೆ.

ಮೂರು ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿಯ ಮಿಲನಕ್ಕೆ ಅಲಹಾಬಾದ್ ಮನೆ ಮಾಡಿಕೊಟ್ಟಿದೆ. ಸಾಕಷ್ಟು ಧಾರ್ಮಿಕ ಆಚರಣೆಗಳಿಗೆ, ಹಬ್ಬಗಳಿಗೆ ಸಂಗಮ ಕೇಂದ್ರ ಬಿಂದುವಾಗಿದೆ. ಪವಿತ್ರ ಸಂಗಮದಲ್ಲಿ (ಪ್ರತಿ 12 ವರ್ಷಗಳಿಗೊಮ್ಮೆ) ನಡೆಯುವ ಕುಂಭಮೇಳ ಭಾರತದಾದ್ಯಂತ ಮತ್ತು ವಿಶ್ವದೆಲ್ಲೆಡೆಯಿಂದ ಭಕ್ತರು ಬಂದು ಈ ಸಂಗಮದಲ್ಲಿ ಮುಳುಗೇಳುತ್ತಾರೆ. ಇದು ವಿಶ್ವದ ಅತ್ಯಂತ ದೊಡ್ಡ ಮೇಳಗಳಲ್ಲೊಂದಾಗಿದೆ.

ಕುಂಭಮೇಳ

ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ಜರುಗುತ್ತದೆ. ಕಳೆದ 2001ನೇ ಸಾಲಿನಲ್ಲಿ ಈ ಮೇಳ ನಡೆದಿತ್ತು. ಸುಮಾರು 40 ಮಿಲಿಯನ್ ಗೂ ಹೆಚ್ಚು ಜನ ವಿಶ್ವದಾದ್ಯಂತ ಆಗಮಿಸಿದ್ದರಿಂದ ದಾಖಲೆ ಸ್ಥಾಪಿಸಿತ್ತು.

ಇದರ ಹೊರತಾಗಿ ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ ನಡೆಯುತ್ತದೆ. ವರ್ಷಕ್ಕೊಮ್ಮೆ ಪ್ರತಿ ಜನವರಿ ತಿಂಗಳಲ್ಲಿ ಮಾಘ ಮೇಳವು ಸಂಗಮದ ಪ್ರದೇಶದಲ್ಲಿ ಜರುಗುತ್ತದೆ. ಮೈ ಕೊರೆಯುವ ಚಳಿಯಲ್ಲಿ ಪವಿತ್ರ ನದಿಗಳ ಸಂಗಮದಲ್ಲಿ ಮುಳುಗೆದ್ದು ತಮ್ಮ ಪಾಪಗಳನ್ನು ಭಕ್ತಾದಿಗಳು ತೊಳೆದುಕೊಳ್ಳುತ್ತಾರೆ. ಇದರಿಂದಾಗಿ ಅಲಹಾಬಾದ್ ಪ್ರವಾಸೋದ್ಯಮ ಇಲಾಖೆ ಉತ್ತುಂಗಕ್ಕೆ ಏರಿದೆ.

ಸುಮಾರು ಕಾಲದಿಂದಲೂ ಅಲಹಾಬಾದ್ ಭಾರತದ ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ವಿಷಯಗಳಿಗೆ ಸಂಬಂಧ ಪಟ್ಟ ಹಾಗೆ ಅನೇಕ ಘಟ್ಟಗಳಲ್ಲಿ ತನ್ನದೇ ಆದ ಮುಖ್ಯ ಪಾತ್ರವನ್ನು ವಹಿಸಿದೆ. ಅನೇಕ ಸುಪ್ರಸಿದ್ಧ ಜನರು, ವಿದ್ವಾಂಸರು ಈ ಭೂಮಿಯಲ್ಲಿ ಜನ್ಮ ತಳೆದಿದ್ದಾರೆ. ಅವರುಗಳ ಪೈಕಿ ಮಹಾದೇವಿ ವರ್ಮಾ, ಹರಿವಂಶರಾಯ್ ಬಚ್ಚನ್, ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಮುರಳಿ ಮನೋಹರ ಜೋಶಿ ಪ್ರಮುಖರು. ಅಲಹಾಬಾದ್ ಪ್ರವಾಸೋದ್ಯಮ ಇಲಾಖೆ ಧಾರ್ಮಿಕ, ಸಾಂಸ್ಕೃತಿ ಮತ್ತು ಐತಿಹಾಸಿಕ ಛಾಯೆ ಹೊಂದಿರುವುದರಲ್ಲಿ ಸಂಶಯವೇ ಇಲ್ಲ.

ಅಲಹಾಬಾದ್ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಆಸಕ್ತಿಯಿರುವ ಪ್ರವಾಸಿಗನಿಗೆ ಅಲಹಾಬಾದ್ ಪ್ರವಾಸೋದ್ಯಮ ಒಂದು ದೊಡ್ಡ ಕೊಡುಗೆಯಾಗಿದೆ. ಮಂದಿರಗಳು, ಕೋಟೆಗಳು ಹಾಗು ವಿಶ್ವವಿದ್ಯಾಲಯಗಳು ಮುಂತಾದ ಹಲವಾರು ಪ್ರವಾಸಿ ತಾಣಗಳಿವೆ. ಇದು ಒಂದು ದೊಡ್ಡ ತೀರ್ಥಯಾತ್ರಾ ಸ್ಥಳವಾಗಿರುವುದರಿಂದ ಇಲ್ಲಿ ಅನೇಕ ಮಂದಿರಗಳನ್ನು ಕಾಣುತ್ತೇವೆ. ಅವುಗಳಲ್ಲಿ ಪಾತಾಲ್ ಪುರಿ ಮಂದಿರ, ಹನುಮಾನ್ ಮಂದಿರ, ಬಡೇ ಹನುಮಾನ್ ಜಿ ಮಂದಿರ, ಶಿವಕೋಟಿ ಮಹಾದೇವ್ ಮಂದಿರ, ಅಲೋಪಿ ದೇವಿ ಮಂದಿರ, ಕಲ್ಯಾಣಿದೇವಿ ಮಂದಿರ, ಮಂಕಮೇಶ್ವರ ಮಂದಿರ, ನಾಗವಾಸುಕಿ ಮಂದಿರ ಮತ್ತು ಬೇಣಿಮಾಧವ ಮಂದಿರ ಮುಖ್ಯವಾದವುಗಳು.

ಜವಾಹರಲಾಲ್ ನೆಹರೂರವರ ಪೂರ್ವಜರ ಮನೆಯಾದ ಆನಂದ್ ಭವನಕ್ಕೂ ಭೇಟಿ ಕೊಡಲೇಬೇಕು. ಸ್ವಾತಂತ್ರ್ಯ ಚಳವಳಿಯಲ್ಲಿ ಅನೇಕ ಮುಖ್ಯ ರಾಜಕೀಯ ಧುರೀಣರ ಕೇಂದ್ರ ಕಚೇರಿ ಇದಾಗಿತ್ತು. ಮುಘಲ್ ಹಾಗು ಬ್ರಿಟಿಷರ ಕಾಲದ ಅನೇಕ ಅವಶೇಷಗಳು ಈ ಪಟ್ಟಣದಲ್ಲಿವೆ. ಅವುಗಳಲ್ಲಿ ಅಲಹಾಬಾದ್ ಕೋಟೆ, ಮಿಂಟೋ ಪಾರ್ಕ್, ಹಚ್ಚಹರಿಸಿನಿಂದ ಕೂಡಿರುವ ಆಲ್ಫ್ರೆಡ್ ಪಾರ್ಕ್, ಥಾರ್ನ್ ಹಿಲ್ ಮೇನ್ ಮೆಮೋರಿಯಲ್ ಮತ್ತು ಮುಘಲ್ ಉದ್ಯಾನವನ ಖುಸ್ರೋ ಭಾಗ್.

ಅಲಹಾಬಾದ್ ಬಹುಮುಖ್ಯ ಶೈಕ್ಷಣಿಕ ಕೇಂದ್ರವೂ ಆಗಿತ್ತು. ಪುರಾತನ ಆಂಗ್ಲ ಭಾಷಾ ವಿಶ್ವವಿದ್ಯಾಲಯಗಳಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯವೂ ಒಂದು. ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು ಸರ್ ವಿಲಿಯಂ ಮುಯಿರ್. ಈ ಪಟ್ಟಣದಲ್ಲಿ ಇವರದ್ದೇ ಹೆಸರಿನ ಕಾಲೇಜೂ ಇದೆ. ಇವಿಂಗ್ ಕ್ರಿಶ್ಚಿಯನ್ ಕಾಲೇಜು ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿದೆ. ಇದು ಸಾರ್ವಜನಿಕ ಗ್ರಂಥಾಲಯವನ್ನೂ ಒಳಗೊಂಡಿದೆ.

ಅಲಹಾಬಾದ್ ನಲ್ಲಿರುವ ಜವಾಹರ ಪ್ಲಾನಿಟೇರಿಯಂನಲ್ಲಿ ಸೋಲಾರ್ ಸಿಸ್ಟಂ ಹಾಗು ಬಾಹ್ಯಾಕಾಶದ ನಕ್ಷತ್ರಗಳ ವೀಕ್ಷಣೆ ಮಾಡಬಹುದು. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಸ್ಥಾಪಿತಗೊಂಡ ಅಲಹಾಬಾದ್ ಹೈಕೋರ್ಟ್ ಕೂಡ ಭೇಟಿ ನೀಡತಕ್ಕಂಥ ಸ್ಥಳ.

ಅಲಹಾಬಾದ್ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ

ನವೆಂಬರ್ ನಿಂದ ಮಾರ್ಚ್ ಇಲ್ಲಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ. ಉಳಿದ ಎಲ್ಲಾ ತಿಂಗಳಲ್ಲಿ ಒಣಹವೆಯಿಂದ ಕೂಡಿರುತ್ತದೆ. ಬಿಸಿಲು ಹೆಚ್ಚಾಗಿರುತ್ತದೆ. ಇದು ಒಂದು ಮುಖ್ಯವಾದ ತೀರ್ಥಯಾತ್ರಾ ಸ್ಥಳವಾಗಿರುವುದರಿಂದ ಅನೇಕ ಪ್ರವಾಸಿಗರನ್ನು ಹಬ್ಬಗಳಲ್ಲಿ, ಧಾರ್ಮಿಕ ಆಚರಣೆಗಳಲ್ಲಿ ತನ್ನತ್ತ ಸೆಳೆಯುತ್ತದೆ.

ಅಲಹಾಬಾದ್ ತಲುಪುವ ಬಗೆಯಾತ್ರಾರ್ಥಿಗಳು ಅಲಹಾಬಾದ್ ಪಟ್ಟಣ ತಲುಪಲು ಯಾವುದೇ ವಾಯುಯಾನ, ರೈಲುಯಾನ ಅಥವಾ ಬಸ್ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಅಲಹಾಬಾದ್ ಪ್ರಸಿದ್ಧವಾಗಿದೆ

ಅಲಹಾಬಾದ್ ಹವಾಮಾನ

ಅಲಹಾಬಾದ್
16oC / 61oF
 • Partly cloudy
 • Wind: WNW 8 km/h

ಉತ್ತಮ ಸಮಯ ಅಲಹಾಬಾದ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅಲಹಾಬಾದ್

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 2 ಮತ್ತು 22 ಅಲಹಾಬಾದ್ ಸೇವೆಯಲ್ಲಿವೆ. ಸುತ್ತಮುತ್ತಲಿನ ನಗರ ಹಾಗು ಪಟ್ಟಣಗಳಿಂದ ಬಸ್ಸುಗಳು ಅಲಹಾಬಾದ್ ನತ್ತ ಮತ್ತು ಅಲಹಾಬಾದ್ ನಿಂದ ಓಡಾಡುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಅಲಹಾಬಾದ್‌ನ ರೈಲು ಸಂಚಾರದ ಸಂಪರ್ಕ ಉತ್ತಮವಾಗಿದೆ. ದಿಲ್ಲಿ, ಕೋಲ್ಕತಾ, ಮುಂಬಯಿ ಮುಂತಾದ ಮಹಾ ನಗರಗಳಿಗೆ ರೈಲು ಮಾರ್ಗ ಕೂಡಿಕೊಂಡಿದೆ. ಈ ಪಟ್ಟಣದಲ್ಲಿ ದಾರಾಗಂಗ್, ಪ್ರಯಾಗ್, ರಾಮಬಾಗ್ ಮತ್ತು ಅಲಹಾಬಾದ್ ಜಂಕ್ಷನ್ ಎಂಬ ನಾಲ್ಕು ದೊಡ್ಡ ರೈಲ್ವೆ ನಿಲ್ದಾಣಗಳಿವೆ. ಮತ್ತೊಂದು ಪ್ರಯಾಗ್ ಘಾಟ್ ಎಂಬ ನಿಲ್ದಾಣವನ್ನು ಹಬ್ಬಹರಿದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರ ಅನುಕೂಲಕ್ಕೆ ಬಳಸಲಾಗುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ನೀವು ವಿದೇಶದಿಂದ ಬರುವವರಾಗಿದ್ದರೆ ನವದೆಹಲಿಯ ವಿಮಾನ ನಿಲ್ದಾಣ ಬಹಳ ಹತ್ತಿರವಾದದ್ದು. ಇಲ್ಲಿಂದ ನೀವು ಡ್ಯುರಾಂಟೋ ಎಕ್ಸ್ ಪ್ರೆಸ್ ರೈಲು ಹತ್ತಿ ದೆಹಲಿಯಿಂದ ಅಲಹಾಬಾದ್ ತಲುಪಬಹುದು. ಇದೇ ರೀತಿ ಕೋಲ್ಕತಾ ರಾಜಧಾನಿ ಎಕ್ಸ್ ಪ್ರೆಸ್ ಹಾಗು ಪ್ರಯಾಗ್ ರಾಜ್ ಎಕ್ಸ್ ಪ್ರೆಸ್ ರೈಲುಗಳ ಮುಖಾಂತರವೂ ತಲುಪಬಹುದು. ಅಲಹಾಬಾದ್ ವಿಮಾನ ನಿಲ್ದಾಣಕ್ಕೆ ಬಮ್ ರೌಲಿ ಫೀಲ್ಡ್ ಎಂಬ ಮತ್ತೊಂದು ಹೆಸರಿದೆ. ಇದು ಮಿಲಿಟರಿ ಬೇಸ್ ಆಗಿದ್ದು, ಏರ್ ಇಂಡಿಯಾ ವಾಣಿಜ್ಯ ವಿಮಾನ ಕಾನಪುರ ಮೂಲಕ ದೆಹಲಿಯಿಂದ ಅಲಹಾಬಾದ್ ಗೆ ಹಾರಾಡುತ್ತದೆ. ವಿಮಾನದ ಮೂಲಕ ವಾರಣಾಸಿ ಅಥವಾ ಲಖನೌ ತಲುಪಿ, ಅಲ್ಲಿಂದ ಬಸ್ ಅಥವಾ ರೈಲು ಹಿಡಿದು ಹೋದರೆ ಸೂಕ್ತ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Feb,Mon
Return On
19 Feb,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Feb,Mon
Check Out
19 Feb,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Feb,Mon
Return On
19 Feb,Tue
 • Today
  Allahabad
  16 OC
  61 OF
  UV Index: 8
  Partly cloudy
 • Tomorrow
  Allahabad
  19 OC
  66 OF
  UV Index: 9
  Partly cloudy
 • Day After
  Allahabad
  19 OC
  66 OF
  UV Index: 9
  Partly cloudy