Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜಂತಾ » ಹವಾಮಾನ

ಅಜಂತಾ ಹವಾಮಾನ

ಹವಾಮಾನದ ಬದಲಾವಣೆ ಅಜಂತಾ ಗುಹೆಗಳಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ. ಆದ್ದರಿಂದ ಬಿಸಿಲು, ಶೀತ  ಅಥವಾ ಸುರಿಯುವ ಮಳೆಯಾಗಲಿ ಪ್ರವಾಸಿಗರಿಗೆ ಈ ಸ್ಥಳದ ಆತಿಥ್ಯದ ಭರವಸೆಯನ್ನು ನೀಡುತ್ತದೆ ಮತ್ತು ನಮ್ಮ ಹಿಂದಿನ ಐತಿಹಾಸಿಕತೆಯನ್ನು ಅನ್ವೇಷಿಸುವ ಆಸಕ್ತಿಯನ್ನೂ ಹೆಚ್ಚಿಸುತ್ತದೆ. ಚಳಿಗಾಲ ಮತ್ತು ಮಳೆಗಾಲ ಈ ಸ್ಥಳಕ್ಕೆ ಭೇಟಿ ನೀಡಬಹುದಾದ ಅತ್ಯಂತ ಸೂಕ್ತ ಸಮಯ.

ಬೇಸಿಗೆಗಾಲ

ಬೇಸಿಗೆಯಲ್ಲಿ ತಾಪಮಾನ ಹೆಚ್ಚಿರುವುದರಿಂದ ಸುಡು ಬಿಸಿಲಿನಲ್ಲಿ ಪ್ರವಾಸಿಗರಿಗೆ ಅನುಕೂಲಕರವಿರುವುದಿಲ್ಲ, ಅದರಲ್ಲೂ ವಿದೇಶಿಯರು ಈ ವಾತಾವರಣಕ್ಕೆ ಒಗ್ಗಲು ಸ್ವಲ್ಪ ಅನಾನುಕೂಲವಾಗಿರುತ್ತದೆ.

ಮಳೆಗಾಲ

ಮುಂಗಾರಿನಲ್ಲಿ ಅಜಂತಾ ಗುಹೆಗಳ ಉತ್ತಮ ಅನುಭವವನ್ನು ಪಡೆಯಬಹುದು. ಮಳೆ ಈ ಸ್ಥಳವನ್ನು ಮಾಂತ್ರಿಕವಾಗಿ ರೂಪಾಂತರಿಸಿ ಒಂದು ಐತಿಹಾಸಿಕ ಬೆಡಗನ್ನು ನೀಡುತ್ತದೆ. ಜುಲೈ ನಿಂದ ನವಂಬರ್ ಅವಧಿಯಲ್ಲಿ ಗುಹೆಗಳ ಕೆಳಗಿನ ನದಿಗಳು ರಭಸವಾಗಿ ಹರಿಯುತ್ತಿರುತ್ತವೆ.

ಚಳಿಗಾಲ

ಚಳಿಗಾಲ ತಂಪಾಗಿದ್ದು ಮತ್ತು ಆತಿಥ್ಯವನ್ನು ನೀಡಲು ಅನುಕೂಲಕರವಾಗಿರುತ್ತದೆ ಮತ್ತು ಈ ಸ್ಥಳದಲ್ಲಿ ವಿಹರಿಸಲು ಹಾಗು ಶೋಧಿಸಲು ಒಳ್ಳೆಯ ಸಮಯ. ಇದು ಮಾರ್ಚ್ ನಿಂದ ಅಕ್ಟೋಬರ್ ವರೆಗು ವಿಸ್ತರಿಸುತ್ತದೆ.