Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಹವಾಮಾನ

ಅಹಮದಾಬಾದ್ ಹವಾಮಾನ

ಬೇಸಿಗೆಗಾಲ

ಬೇಸಿಗೆಯು ಅಹಮದಾಬಾದ್‍ನಲ್ಲಿ ಅತ್ಯಂತ ಬಿಸಿಲಿನಿಂದ ಕೂಡಿರುತ್ತದೆ. ಮಾರ್ಚ್ ನಿಂದ ಜೂನ್ ತಿಂಗಳುಗಳು ಇಲ್ಲಿ ಬೇಸಿಗೆಯನ್ನು ನಾವು ಕಾಣಬಹುದು. ಆಗ ಇಲ್ಲಿನ ಉಷ್ಣಾಂಶವು ಕನಿಷ್ಠ 27 °ಸೆಲ್ಶಿಯಸ್ ಅಥವಾ 81°ಫ್ಯಾ. ಹೀಟ್ ಮತ್ತು ಸರಾಸರಿ 41 °ಸೆಲ್ಶಿಯಸ್ ಅಥವಾ 106° ಫ್ಯಾರನ್ ಹೀಟ್ ಇರುತ್ತದೆ. ಇಲ್ಲಿ ಏರುತ್ತಿರುವ ವಾಯು ಮಾಲಿನ್ಯವು ಪ್ರವಾಸಿಗರಿಗೆ ಸ್ವಲ್ಪ ಅಸೌಕರ್ಯವನ್ನುಂಟು ಮಾಡುತ್ತದೆ.

ಮಳೆಗಾಲ

 ನೈಋತ್ಯ ಮಾನ್ಸೂನ್ ಮಾರುತಗಳು ಈ ನಗರಕ್ಕೆ ಮಳೆಗಾಲವನ್ನು ತಂದು ಕೊಡುತ್ತದೆ. ಇಲ್ಲಿ ಮಳೆಗಾಲದಲ್ಲಿ ಅಧಿಕ ಮಳೆಯು ಬೀಳುತ್ತದೆ. ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಇರುವ ಮಳೆಗಾಲದಲ್ಲಿ ಇಲ್ಲಿ ಸರಾಸರಿ 800 ಮಿ.ಮೀ/ 31 ಇಂಚು ಮಳೆಯಾಗುತ್ತದೆ.

ಚಳಿಗಾಲ

ನವೆಂಬರ್ ನಿಂದ ಫೆಬ್ರವರಿಯವರೆಗಿನ ಅವಧಿಯು ಇಲ್ಲಿ ಚಳಿಗಾಲವಾಗಿರುತ್ತದೆ. ಉತ್ತರದಿಂದ ಬೀಸುವ ಶೀತಗಾಳಿಗಳು ಇಲ್ಲಿನ ಚಳಿಗಾಲವನ್ನು ಕೊರೆಯುವ ಚಳಿಯಿಂದ ತುಂಬಿಸುತ್ತವೆ. ಜನವರಿ ತಿಂಗಳು ಇಲ್ಲಿ ಅಧಿಕ ಚಳಿಯ ತಿಂಗಳಾಗಿದೆ. ಈ ಚಳಿಗಾಲದ ತಿಂಗಳುಗಳು ತಣ್ಣನೆಯ ತಿಂಗಳುಗಳಾಗಿದ್ದು, ಪ್ರವಾಸಿಗರಿಗೆ ಅಹಮದಾಬಾದನ್ನು ಸುತ್ತಿ ನೋಡಲು ಅವಶ್ಯಕವಾಗುವ ವಾತಾವರಣವನ್ನು ಒದಗಿಸುತ್ತವೆ. ಹಾಗಾಗಿ ಈ ಕಾಲವನ್ನು ಇಲ್ಲಿಯ ಪ್ರವಾಸಿ ಋತುವನ್ನಾಗಿ ಪರಿಗಣಿಸಲಾಗಿದೆ.