Search
  • Follow NativePlanet
Share
ಮುಖಪುಟ » ಸ್ಥಳಗಳು» ಆಗುಂಬೆ

ಆಗುಂಬೆ- ಕಾಳಿಂಗ ಸರ್ಪಗಳ ರಾಜಧಾನಿ.

33

 

 

ಆಗುಂಬೆಯು ಮಲೆನಾಡು ಪ್ರಾಂತ್ಯದ ತೀರ್ಥಹಳ್ಳಿ (ರಾಷ್ಟ್ರಕವಿ ಕುವೆಂಪು ಅವರ ತವರು) ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಇಲ್ಲಿನಿಂದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡಬಹುದು. ಆ ಸೂರ್ಯಾಸ್ತದ ದೃಶ್ಯಕ್ಕಾಗಿ ಈ ಜಾಗ  ಪ್ರಸಿದ್ಧವಾಗಿದೆ. ಅಲ್ಲದೆ ಈ ಊರಿನಲ್ಲಿ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮಳೆ ಬೀಳುತ್ತದೆ. ತನ್ನ ನಯನ ಮನೋಹರ ಪ್ರಾಕೃತಿಕ ಸೊಬಗಿಗೆ ಇದು ಹೆಸರುವಾಸಿ.

ಆಗುಂಬೆಯ ಕುರಿತು

ಆಗುಂಬೆಯಲ್ಲಿ ಕಾಣಸಿಗುವ  ಪ್ರಾಣಿ ಮತ್ತು ಸಸ್ಯಸಂಕುಲಗಳಿಗಾಗಿ ನಾವು ಮಲೆನಾಡಿಗೆ ವಿಶೇಷ ಧನ್ಯವಾದವನ್ನು ಅರ್ಪಿಸಬೇಕು. ಹಾಗಾಗಿಯೇ ಆಗುಂಬೆಯು ಭಾರತದ ಮಲೆನಾಡು ಸಂಶೋಧನಾ ಕೇಂದ್ರವಾಗಿದೆ. ಅಲ್ಲದೆ ಆಗುಂಬೆಯು ಆಯುರ್ವೇದ ಗಿಡಮೂಲಿಕೆಗಳ ಸಂರಕ್ಷಿತ ಪ್ರದೇಶವಾಗಿರುವುದರಿಂದ ಪ್ರವಾಸಿಗರು ವಿವಿಧೆಡೆಗಳಿಂದ ಸ್ವಾಸ್ಥ್ಯವನ್ನು ಸುಧಾರಿಸಿಕೊಳ್ಳಲು ಆಗುಂಬೆಗೆ ಆಗಮಿಸುತ್ತಾರೆ. ಅಲ್ಲದೆ ಈ ಪ್ರಾಂತ್ಯ ಹಲವು ಸುಂದರವಾದ ಜಲಪಾತಗಳನ್ನು ಸಹಾ ಒಳಗೊಂಡಿದೆ.

ಆಗುಂಬೆಯು 3 ಚ ,ಕಿ.ಮೀ ವಿಸ್ತೀರ್ಣವೊಂದಿದ್ದು 500 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದೆ. ಇವರು ಮುಖ್ಯವಾಗಿ ಅಡಿಕೆ ತೋಟಗಳನ್ನು ಮತ್ತು ಕಾಡಿನ ಉತ್ಪನ್ನಗಳನ್ನು ಅವಲಂಬಿಸಿ ಬದುಕು ಸಾಗಿಸುತ್ತಿದ್ದಾರೆ. ಕಾಡಿನಲ್ಲಿ ನಿಬಿಡವಾಗಿರುವ ವೃಕ್ಷಸಮೂಹ ಮತ್ತು ಅದರೆಡೆ ವಾಸಿಸುವ ಜೀವಿಗಳ ಹೊರತಾಗಿಯು, ಆಗುಂಬೆ ಪರಿಸರ ಪ್ರಿಯರಿಗೆ ಒಂದು ಉತ್ತಮ ಚಾರಣದ ಅವಕಾಶವನ್ನು ಒದಗಿಸುತ್ತದೆ. ಆಗುಂಬೆಯು ಅತಿ ಉದ್ದವಾದ ಮತ್ತು ವಿಷಪೂರಿತವಾದ ಕಾಳಿಂಗ ಸರ್ಪಗಳ ತವರಾಗಿದೆ, ಈ ಸರ್ಪಗಳು ಇಲ್ಲಿನ ಹೆಗ್ಗುರುತು.

ನೀವು ಆಗುಂಬೆಗೆ ಭೇಟಿಕೊಟ್ಟಾಗ ಬರ್ಕನ ಜಲಪಾತ, ಕುಂಚಿಕಲ್ ಜಲಪಾತ, ಒನಕೆ ಅಬ್ಬಿ ಜಲಪಾತ, ಜೋಗಿ ಗುಂಡಿ ಮತ್ತು ಕೂಡ್ಲು ತೀರ್ಥ ಜಲಪಾತಗಳನ್ನು ವೀಕ್ಷಿಸಬಹುದು. ಆಗುಂಬೆಗೆ ರಸ್ತೆ ಮತ್ತು ರೈಲಿನ ಮೂಲಕ ತಲುಪಬಹುದು( ಹತ್ತಿರದ ರೈಲ್ವೆ ಜಂಕ್ಷನ್ ಉಡುಪಿಯಲ್ಲಿದೆ). ಇಲ್ಲಿ ನೀವು ಸ್ಥಳೀಯ ಆಹಾರದ ರುಚಿ ಸವಿಯಬಹುದು. ಪ್ರವಾಸಿಗರಿಗೆ ಉಳಿದುಕೊಳ್ಳಲು ಪ್ರವಾಸಿ ಬಂಗಲೆ ಮತ್ತು ಅತಿಥಿಗೃಹ ಎರಡು ಸ್ಥಳ ಮಾತ್ರ ಇಲ್ಲಿ ಸಿಗುತ್ತದೆ. ಅದಕ್ಕೆ ಹಣ ನೀಡಬೇಕು.

ಆಗುಂಬೆ ಪ್ರಸಿದ್ಧವಾಗಿದೆ

ಆಗುಂಬೆ ಹವಾಮಾನ

ಉತ್ತಮ ಸಮಯ ಆಗುಂಬೆ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಆಗುಂಬೆ

  • ರಸ್ತೆಯ ಮೂಲಕ
    ಬೆಂಗಳೂರಿನಿಂದ ಹಲವು ಕರಾರಸಾಸಂ ( ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ ಗಳು ಆಗುಂಬೆಗೆ ಹೋಗುತ್ತವೆ. ಪ್ರವಾಸಿಗಳು ಶಿವಮೊಗ್ಗ, ಉಡುಪಿ ಮತ್ತು ಮಂಗಳೂರಿನಿಂದ ಸ್ಥಳೀಯ ಬಸ್ ಗಳ ಮೂಲಕ 40 ನಿಮಿಷಗಳ ಪ್ರಯಾಣಾವಧಿಯಲ್ಲಿ ಆಗುಂಬೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಆಗುಂಬೆಗೆ ಹತ್ತಿರದ ರೈಲು ನಿಲ್ದಾಣ ಉಡುಪಿಯಲ್ಲಿದ್ದು, ಇದು ಆಗುಂಬೆಯಿಂದ 63 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಅಲ್ಲಿಂದ ಸ್ಥಳೀಯ ಬಸ್ ಅಥವಾ ಬಾಡಿಗೆ ವಾಹನದ ಮೂಲಕ ಆಗುಂಬೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಆಗುಂಬೆಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರಿನ ಬಜ್ಪೆ ವಿಮಾನನಿಲ್ದಾಣ. ಇದು ಆಗುಂಬೆಯಿಂದ 106 ಕಿ.ಮೀ ದೂರದಲ್ಲಿದೆ.ಕೆಲವು ಮಧ್ಯ ಪ್ರಾಚ್ಯ ರಾಷ್ಟ್ರಗಳು ಮತ್ತು ಭಾರತದ ಕೆಲವು ನಗರಗಳಿಂದ ಇಲ್ಲಿಗೆ ವಿಮಾನ ಸೌಕರ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri