Search
  • Follow NativePlanet
Share
» »ತಮಿಳುನಾಡಿನ ಯಳಗಿರಿಯಲ್ಲಿರುವ ಈ ಅದ್ಭುತ ತಾಣಗಳನ್ನು ನೋಡಲೇ ಬೇಕು

ತಮಿಳುನಾಡಿನ ಯಳಗಿರಿಯಲ್ಲಿರುವ ಈ ಅದ್ಭುತ ತಾಣಗಳನ್ನು ನೋಡಲೇ ಬೇಕು

ಪ್ರಶಾಂತತೆಯಿಂದ ಕೂಡಿರುವ ಯಳಗಿರಿ ವಾರಾಂತ್ಯವನ್ನು ಕಳೆಯಲು ಸೂಕ್ತವಾದ ತಾಣವಾಗಿದೆ. ಈ ತಾಣವು ಊಟಿ ಹಾಗೂ ಕೊಡೈಕೆನಾಲ್‌ನಷ್ಟು ಪ್ರಸಿದ್ಧಿ ಹೊಂದಿಲ್ಲದಿದ್ದರೂ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.

ಯಳಗಿರಿಯು ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿರುವ ಕೃಷ್ಣಗಿರಿ ಪಟ್ಟಣದಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ದಕ್ಷಿಣ ಭಾರತದ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಗರದ ಗದ್ದಲದಿಂದ ದೂರದಲ್ಲಿರುವ ಗಿರಿಧಾಮಗಳಿಂದ ಕೂಡಿರುವ ಸಣ್ಣ ಹಳ್ಳಿಗಳ ಗುಂಪು ಇದಾಗಿದೆ. ತಮಿಳುನಾಡಿನ ಇತರ ಸ್ಥಳಗಳಿಗೆ ಹೋಲಿಸಿದರೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಬಹಳ ಕಡಿಮೆ. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ನಗರದ ಜಂಜಾಟದಿಂದ ಸ್ವಲ್ಪ ದೂರವಿದ್ದು ಮನಸ್ಸಿಗೆ ಶಾಂತಿ ಬಯಸುವವರಿಗೆ ಇದು ಸೂಕ್ತವಾದ ಸ್ಥಳವಾಗಿದೆ.

 3000 ಅಡಿ ಎತ್ತರದಲ್ಲಿದೆ

3000 ಅಡಿ ಎತ್ತರದಲ್ಲಿದೆ

ಈ ಗಿರಿಧಾಮವು 3000 ಅಡಿ ಎತ್ತರದಲ್ಲಿದೆ ಮತ್ತು ವರ್ಷದುದ್ದಕ್ಕೂ ಹವಾಮಾನವು ಮನೋಹರವಾಗಿದೆ. ಈ ಸ್ಥಳದ ಪ್ರಮುಖ ಆಕರ್ಷಣೆಗಳೆಂದರೆ ಬೋಟಿಂಗ್ ಮತ್ತು ಸ್ವಾಮಿಮಲೈ ಬೆಟ್ಟಗಳು. 3 ಕಿಲೋಮೀಟರ್ ನಷ್ಟು ಎತ್ತರದಲ್ಲಿರುವ ಒಂದು ಸಣ್ಣ ದೇವಸ್ಥಾನಕ್ಕೆ ನಿಮ್ಮನ್ನು ಕರೆದೊಯ್ಯುವುದಲ್ಲದೆ ಅಲ್ಲಿ ಪರ್ವತಗಳ ವಿಹಂಗಮ ದೃಶ್ಯಗಳನ್ನು ನೀವು ಆನಂದಿಸಬಹುದು.

 ವಾರಾಂತ್ಯದ ತಾಣ

ವಾರಾಂತ್ಯದ ತಾಣ

PC: L.vivian.richard

ಯಳಗಿರಿ ಸಮೀಪದಲ್ಲಿ ಸಾಕಷ್ಟು ಸುಂದರ ಪ್ರವಾಸಿ ತಾಣಗಳಿವೆ. ಈ ಗಿರಿಧಾಮಗಳ ತಾಣದಲ್ಲಿ ನೀವು ಸರೋವರ, ದೇವಾಲಯಗಳನ್ನೂ ಕಾಣಬಹುದು. ಪ್ರಶಾಂತತೆಯಿಂದ ಕೂಡಿರುವ ಈ ತಾಣವು ವಾರಾಂತ್ಯವನ್ನು ಕಳೆಯಲು ಸೂಕ್ತವಾದ ತಾಣವಾಗಿದೆ. ಈ ತಾಣವು ಊಟಿ ಹಾಗೂ ಕೊಡೈಕೆನಾಲ್‌ನಷ್ಟು ಪ್ರಸಿದ್ಧಿ ಹೊಂದಿಲ್ಲದಿದ್ದರೂ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಚಾರಣಿಗರಿಗೆ ಇಷ್ಟವಾಗುವಂತಹ ತಾಣವಾಗಿದೆ.

ಬೇಸಿಗೆ ಉತ್ಸವ

ಬೇಸಿಗೆ ಉತ್ಸವ

PC: Coolsangamithiran

ಯಳಗಿರಿ ಬೇಸಿಗೆ ಉತ್ಸವವನ್ನು ಪ್ರತೀ ವರ್ಷ ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಇದನ್ನು ತಮಿಳುನಾಡು ಪ್ರವಾಸೋಧ್ಯಮ ಇಲಾಖೆಯು ಆಯೋಜಿಸುತ್ತದೆ. ಈ ಸಂದರ್ಭದಲ್ಲಿ ವಿವಿಧ ಮಳಿಗೆಗಳನ್ನು ಕಾಣಬಹುದು. ಹೂವಿನ ಶೋ, ಬೋಟಿಂಗ್, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಇಲ್ಲೊಂದು ಶ್ರೀ ಸತ್ಯ ಆಶ್ರಮವಿದೆ. ಇದರ ವಿಶೇಷತೆ ಎಂದರೆ ಇದು ಕೇವಲ ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಮಾತ್ರ ತೆರೆಯುತ್ತದೆ. ಪ್ರವಾಸಿಗರು ಇಲ್ಲಿಗೆ ನಡೆದುಕೊಂಡೇ ಹೋಗಬೇಕು.

ಪಂಗಾನೂರ್ ಸರೋವರ

ಪಂಗಾನೂರ್ ಸರೋವರ

PC:Ashwin Kumar

57 ಚದರ ಮೀಟರ್‌ನ ವ್ಯಾಪ್ತಿಯಲ್ಲಿರುವ ಪಂಗನೂರ್ ಸರೋವರವು ಮಾನವ ನಿರ್ಮಿತ ಸರೋವರವಾಗಿದ್ದು, ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸಲು ಕೃತಕವಾಗಿ ರಚಿಸಲಾಗಿದೆ. ಸರೋವರದ ಸುತ್ತಮುತ್ತಲು ಸುಂದರವಾದ ಹೂವಿನ ತೋಟವಿದೆ. ಸರೋವರದ ಸೌಂದರ್ಯವನ್ನು ಜನರು ಅಲ್ಲಿ ವಿಶ್ರಾಂತಿ ಪಡೆಯುವ ಮೂಲಕ ಆನಂದಿಸಬಹುದು.

ಜಲಗಂಡೀಶ್ವರ ದೇವಾಲಯ

ಜಲಗಂಡೀಶ್ವರ ದೇವಾಲಯ

ವೆಲ್ಲೂರ್ ಕೋಟೆಯ ಆವರಣದಲ್ಲಿಯೇ ಜಲಗಂಡೀಶ್ವರ ದೇವಾಲಯವು ಜಲಗಂಡೀಶ್ವರನಿಗೆ ಸಮರ್ಪಿತವಾಗಿದೆ. ಇದು ಮಹತ್ವಪೂರ್ಣವಾದ ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಶಿಲ್ಪಕಲಾಕೃತಿಗಳು ಕಲಾವಿದರ ಶಿಲ್ಪಕಲೆಗಳನ್ನು ಭಕ್ತರು ಪ್ರಾರ್ಥನೆ ಮತ್ತು ಪವಿತ್ರ ಆಚರಣೆಗಳನ್ನು ನಿರ್ವಹಿಸುವಂತಹ ದೈತ್ಯ ತೆರೆದ ಮೈದಾನದಲ್ಲಿ ಈ ದೇವಾಲಯವಿದೆ.

ವೇಲವಾನ್ ದೇವಾಲಯ

ವೇಲವಾನ್ ದೇವಾಲಯ

PC:Ashwin Kumar
ಯಳಗಿರಿಯ ಪರ್ವತಗಳ ಮೇಲಿರುವ ಮುರುಗನ್ ದೇವರ ನೆನಪಿಗಾಗಿ ನಿರ್ಮಿಸಲಾಗಿರುವ ವೇಲವಾನ್ ದೇವಾಲಯ ಯಳಗಿರಿಯಲ್ಲಿನ ಅತ್ಯಂತ ಧಾರ್ಮಿಕ ಸ್ಥಳವಾಗಿದೆ. ಈ ದೇವಾಲಯದ ವಾಸ್ತುಶಿಲ್ಪದ ಸೌಂದರ್ಯವು ಗಮನಾರ್ಹವಾಗಿದೆ. ದೇವಾಲಯದ ಸುತ್ತಮುತ್ತಲಿನ ಶಾಂತಿಯುತ ವಾತಾವರಣವು ಮನಸ್ಸಿನ ಶಾಂತಿಯನ್ನು ನೀಡುತ್ತದೆ. ತಮಿಳುನಾಡಿನಲ್ಲಿ ಆಚರಿಸಲಾಗುವ ಎಲ್ಲಾ ಉತ್ಸವಗಳನ್ನು ಇಲ್ಲಿ ಆಚರಿಸಲಾಗುತ್ತದೆ. ಇಲ್ಲಿ ವೇಲವಾನ್ ದೇವಾಲಯದಲ್ಲಿ
ಜುಲೈ ಮತ್ತು ಆಗಸ್ಟ್ ನಡುವೆ ಉತ್ಸವಗಳನ್ನು ಆಚರಿಸಲಾಗುತ್ತದೆ.

 ಸ್ವಾಮಿಮಲೈ ಬೆಟ್ಟಗಳು

ಸ್ವಾಮಿಮಲೈ ಬೆಟ್ಟಗಳು

PC: L.vivian.richard

ಕೆಳಭಾಗದಲ್ಲಿ ಬಲವಾದ ನೆಲೆಯನ್ನು ಹೊಂದಿರುವ ಕೇಕ್‌ನ ರೂಪದಲ್ಲಿ ನಿರ್ಮಿಸಲಾದ ಸ್ವಾಮಿಮಲೈ ಬೆಟ್ಟಗಳು 4338 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಗುಡ್ಡದ ಎತ್ತರದಲ್ಲಿ ಏರುವುದನ್ನು ಇಷ್ಟಪಡುತ್ತಾರೆ. ನೆರೆಹೊರೆಯಲ್ಲಿರುವ ಜಾವಾಡಿ ಹಿಲ್ಸ್, ಪಲ್ಲಮತಿ ಬೆಟ್ಟಗಳು ಮತ್ತು ಇನ್ನಿತರ ನೆರೆಹೊರೆಯಲ್ಲಿ ಹಲವಾರು ಸಣ್ಣ ಶಿಖರಗಳು ಇವೆ. ಅವುಗಳು ಏರಲು ಸುಲಭವಾಗಿದ್ದು, ಪ್ರಕೃತಿಯ ಸೌಂದರ್ಯವನ್ನು ನೀವು ದೂರದ ಸ್ಥಳದಿಂದ ಆನಂದಿಸಬಹುದು.

ಜಲಗಂಪರೈ ಜಲಪಾತ

ಜಲಗಂಪರೈ ಜಲಪಾತ

PC: Ashwin Kumar

ಜಲಗಂಪರೈ ಜಲಪಾತವು ಯಳಗಿರಿಯಿಂದ ಸ್ವಲ್ಪ ದೂರದಲ್ಲಿದೆ. ಜಲಗಂಪರೈ ಜಲಪಾತ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯ ಯಳಗಿರಿ ಬೆಟ್ಟದಲ್ಲಿರುವ ಸುಂದರವಾದ ಸ್ಥಳವಾಗಿದೆ. ಜಲಗಂಪರೈ ಜಲಪಾತವು 15 ಮೀಟರ್ ಎತ್ತರದಲ್ಲಿದೆ ಮತ್ತು ಹನಿಮೂನ್‌ಗೆ ಬರುವವರಿಗೆ ಮತ್ತು ನವವಿವಾಹಿತರಿಗೆ ಇದೊಂದು ಹಾಟ್‌ ಸ್ಪಾಟ್‌ ಆಗಿದೆ. 1 ಗಂಟೆ ಪ್ರಯಾಣದ ನಂತರ ಈ ಜಲಪಾತವನ್ನು ತಲುಪಬಹುದು. ಜಲಗಂಪರೈ ಜಲಪಾತದ ಪಕ್ಕದಲ್ಲಿ, ಒಂದು ಲಿಂಗದ ಆಕಾರದಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿ ಒಂದು ಪ್ರಸಿದ್ಧ ಮುರುಗನ್ ದೇವಸ್ಥಾನವಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: PJeganathan

ಹತ್ತಿರದ ರೈಲು ನಿಲ್ದಾಣ ಜೋಲಾರ್ಪೇಟೈಯಲ್ಲಿದೆ. ಇದು ಯಳಗಿರಿಯಿಂದ 21 ಕಿ.ಮೀ ದೂರದಲ್ಲಿದೆ. ಇದು ಮುಖ್ಯ ರೈಲ್ವೆ ಜಂಕ್ಷನ್ ಮತ್ತು ಭಾರತದ ಇತರ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ಬೆಂಗಳೂರು, ಚೆನ್ನೈ, ಸೇಲಂ, ಕಟ್ಪಾಡಿ ಮತ್ತು ಜೋಲಾರ್ಪೇಟೈ ಸಂಪರ್ಕ ಹೊಂದಿದೆ.

ವಿಮಾನ ನಿಲ್ದಾಣ

ಯಳಗಿರಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಂಗಳೂರು ವಿಮಾನ ನಿಲ್ದಾಣ. ಇದು ಯಳಗಿರಿಯಿಂದ ಸುಮಾರು 156 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರು ವಿಮಾನ ನಿಲ್ದಾಣವು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಪ್ರಮುಖ ವಿಮಾನ ನಿಲ್ದಾಣಗಳೊಂದಿಗೆ ಸಂಪರ್ಕ ಹೊಂದಿದೆ. ಬೆಂಗಳೂರು ಮತ್ತು ಯಳಗಿರಿ ನಡುವೆ ಸಾಕಷ್ಟು ಟ್ಯಾಕ್ಸಿ ಕ್ಯಾಬ್‌ಗಳು ಚಲಿಸುತ್ತವೆ.

ರಸ್ತೆ ಮೂಲಕ

ರಸ್ತೆ ಮೂಲಕ

PC: Ashwin Kumar
ರಾಷ್ಟ್ರೀಯ ಹೆದ್ದಾರಿ 7 ಬೆಂಗಳೂರಿಗೆ ಯೆಳಗಿರಿಯನ್ನು ಸಂಪರ್ಕಿಸುತ್ತದೆ. ಬೆಂಗಳೂರಿನಿಂದ ಭೀಮೇಶ್ವರಿಗೆ ರಸ್ತೆಯ ಮೂಲಕ ಪ್ರಯಾಣಿಸಲು 2 ಗಂಟೆ 48 ನಿಮಿಷಗಳು ತೆಗೆದುಕೊಳ್ಳುತ್ತದೆ. ಯಳಗಿರಿಯನ್ನು ಬೆಂಗಳೂರಿಗೆ ತಿರುವೊಥೂರ್ ಮೂಲಕ ಸಂಪರ್ಕಿಸುವ ನಿಯಮಿತ ಬಸ್ ಸೇವೆಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X