Search
  • Follow NativePlanet
Share
» »ಚಾರ್ ಧಾಮ್ ಯಾತ್ರೆ ಎಂದರೇನು?

ಚಾರ್ ಧಾಮ್ ಯಾತ್ರೆ ಎಂದರೇನು?

By Vijay

ಹಿಂದಿ ಭಾಷೆಯಲ್ಲಿ "ಚಾರ್" ಎಂದರೆ ನಾಲ್ಕು ಹಾಗೂ "ಧಾಮ್" ಎಂದರೆ ನೆಲೆ, ಧಾಮ ಎಂಬರ್ಥವಿದೆ. ಅದೇ ರೀತಿ ಚಾರ್ ಧಾಮ್ ಯಾತ್ರಾ ಎಂದರೆ ನಾಲ್ಕು ಪುಣ್ಯಸ್ಥಳಗಳ ದರ್ಶನ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ನಾವು ಬಹುವಾಗಿ ಚಾರ್ ಧಾಮ್ ಯಾತ್ರೆಯ ಕುರಿತು ಈಗಾಗಲೆ ಕೇಳಿದ್ದೇವೆ. ಅಂದರೆ ಈ ನಾಲ್ಕು ಪುಣ್ಯ ಕ್ಷೇತ್ರಗಳು ಯಾವುವು ಎಂಬ ಕುತೂಹಲ ನಮ್ಮಲ್ಲಿ ಮೂಡುವುದು ಸಹಜ.

ಅಲ್ಲದೆ, ಈ ನಾಲ್ಕು ಪುಣ್ಯ ಕ್ಷೇತ್ರಗಳ ಹೊರತಾಗಿ "ಚೋಟಾ ಚಾರ್ ಧಾಮ್" ಎಂಬ ಇತರೆ ನಾಲ್ಕು ಪುಣ್ಯ ಸ್ಥಳಗಳೂ ಚಾಲ್ತಿಯಲ್ಲಿರುವುದು ನಮ್ಮನ್ನು ಮತ್ತಷ್ಟು ಗೊಂದಲಕ್ಕೆ ಈಡುಮಾಡುತ್ತದೆ. ಪ್ರಸ್ತುತ ಲೇಖನವು ನಾಲ್ಕು ಪುಣ್ಯ ಕ್ಷೇತ್ರಗಳು ಹಾಗೂ ಚೋಟಾ (ಚಿಕ್ಕ ಎಂದರ್ಥ) ಚಾರ್ ಧಾಮ್ ಗಳು ಯಾವುವು ಎಂಬುದರ ಕುರಿತು ತಿಳಿಯಪಡಿಸುತ್ತದೆ.

ಮೂಲತಃ ಚಾರ್ ಧಾಮ್ ಅಂದರೆ ನಾಲ್ಕು ಪುಣ್ಯ ಕ್ಷೇತ್ರಗಳು ಹಿಂದೂಗಳು ಅತಿ ಶೃದ್ಧೆ ಹಾಗೂ ಭಕ್ತಿಯಿಂದ ನಡೆದುಕೊಳ್ಳುವ ಸ್ಥಳಗಳು. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ನಾಲ್ಕು ಕ್ಷೇತ್ರಗಳ ದರುಶನ ಮಾಡಿದರೆ ಖಂಡಿತವಾಗಿ ಮಾಡಿದ ಎಲ್ಲ ಪಾಪ ಕರ್ಮಗಳು ತೊಳೆದು ಭಗವಂತನ ಕೃಪೆಗೆ ಪಾತ್ರನಾಗುತ್ತಾನೆ ಎಂಬ ಅಚಲವಾದ ನಂಬಿಕೆ ಹಿಂದೂ ಧರ್ಮದಲ್ಲಿದೆ.

ಭಾರತದ ಪ್ರಮುಖ ನಾಲ್ಕು ಧಾಮಗಳು : ರಾಮೇಶ್ವರಂ, ದ್ವಾರಕಾ, ಬದರಿನಾಥ ಹಾಗೂ ಪುರಿ ಜಗನ್ನಾಥ.

ಚೋಟಾ ಚಾರ್ ಧಾಮಗಳು : ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದರಿನಾಥ.

ಇನ್ನೊಂದು ಮಹತ್ವದ ಸೂಚನೆ ಎಂದರೆ ಕಳೆದ ವರ್ಷ ಭಯಂಕರವಾದ ಜಲ ಪ್ರಳಯಕ್ಕೆ ಈಡಾಗಿ ಮುಚ್ಚಲಾಗಿದ್ದ ಬದರಿನಾಥ ದೇವಾಲಯದ ದರ್ಶನವು ಪುನರಾರಂಭಗೊಂಡಿದೆ.

ರಾಮೇಶ್ವರಂ:

ರಾಮೇಶ್ವರಂ:

ನಾಲ್ಕು ಪವಿತ್ರ ಧಾಮಗಳ ಪೈಕಿ ಒಂದಾಗಿರುವ ರಾಮೇಶ್ವರಂ ತಮಿಳುನಾಡಿನಲ್ಲಿದೆ. ಪವಿತ್ರ ಹನ್ನೆರಡು ಜ್ಯೋತಿರ್ಲಿಂಗ ತಾಣಗಳ ಪೈಕಿಯೂ ಒಂದಾಗಿರುವ ರಾಮೇಶ್ವರಂ ರಾಮನಾಥ ಸ್ವಾಮಿ ದೇವಾಲಯದಿಂದಾಗಿ ಪ್ರಸಿದ್ಧಿಪಡೆದಿದೆ. ಶಿವನಿಗೆ ಸಮರ್ಪಿತವಾದ ಈ ದೇವಾಲಯ ತಾಣದಲ್ಲಿಯೆ ಹಿಂದೆ ರಾಮನು ಶಿವನನ್ನು ಕುರಿತು ಪ್ರಾರ್ಥಿಸಿದ್ದ ಹಾಗು ಇಲ್ಲಿಂದಲೆ ರಾಮ ಸೇತುವನ್ನು ನಿರ್ಮಾಣ ಮಾಡಿದ್ದ ಎನ್ನಲಾಗಿದೆ.

ಚಿತ್ರಕೃಪೆ: himanisdas

ರಾಮೇಶ್ವರಂ:

ರಾಮೇಶ್ವರಂ:

ರಾಮೇಶ್ವರಂನಲ್ಲಿ ಪವಿತ್ರವಾದ 64 ತೀರ್ಥಕುಂಡಗಳನ್ನು ಕಾಣಬಹುದಾಗಿದ್ದು, ಸ್ಕಂದ ಪುರಾಣದ ಪ್ರಕಾರ, ಅವುಗಳಲ್ಲಿ 24 ಅತಿ ಮಹತ್ವವಾದ ತೀರ್ಥ ಕೊಳಗಳಾಗಿವೆ. ಚಿತ್ರದಲ್ಲಿ ಕಾಣುತ್ತಿರುವುದು ಸುಗ್ರೀವ ತೀರ್ಥ.

ಚಿತ್ರಕೃಪೆ: Mathanagopal

ರಾಮೇಶ್ವರಂ:

ರಾಮೇಶ್ವರಂ:

ರಾಮೇಶ್ವರಂನ ದಕ್ಷಿಣ ತುತ್ತುದಿಯ ದ್ವೀಪದಲ್ಲಿ ಧನುಷ್ಕೋಡಿ ಪಟ್ಟಣವನ್ನು ಕಾಣಬಹುದು. 1964 ರಲ್ಲುಂಟಾದ ಚಂಡಮಾರುತದಲ್ಲಿ ಈ ಪ್ರದೇಶವು ಸಂಪೂರ್ಣವಾಗಿ ನಶಿಸಿದ್ದರೂ ಇಲ್ಲಿರುವ ರಾಮೇಶ್ವರಂನ ಮತ್ತೊಂದು ಪ್ರಮುಖ ಧಾರ್ಮಿಕ ದೇವಾಲಯವಾದ ಕೊದಂಡರಾಮನ ದೇವಸ್ಥಾನವು ಸ್ವಲ್ಪವೂ ಹಾನಿಗೊಳಗಾಗದೆ ಹಾಗೆಯೆ ಇತ್ತು.

ಚಿತ್ರಕೃಪೆ: Nsmohan

ರಾಮೇಶ್ವರಂ:

ರಾಮೇಶ್ವರಂ:

ಸ್ಥಳ ಪುರಾಣದ ಪ್ರಕಾರ, ಈ ಒಂದು ಸ್ಥಳದಲ್ಲಿಯೆ ಲಂಕೆಯ ಅಸುರ ರಾಜ ರಾವಣನ ತಮ್ಮನಾಗಿದ್ದ ವಿಭೀಷಣನು ರಾಮನಲ್ಲಿ ಶರಣಾಗತನಾದನು.

ಚಿತ್ರಕೃಪೆ: Nataraja

ದ್ವಾರಕಾ:

ದ್ವಾರಕಾ:

ಭಾರತದ ಪಶ್ಚಿಮ ರಾಜ್ಯವಾದ ಗುಜರಾತ್ ನಲ್ಲಿರುವ ದ್ವಾರಕೆಯು ನಾಲ್ಕು ಪವಿತ್ರ ಧಾಮಗಳ ಪೈಕಿ ಒಂದಾಗಿದೆ. ಕನ್ನಡದಲ್ಲಿ ಬಾಗಿಲು ಎಂಬರ್ಥ ಕೊಡುವ ಸಂಸ್ಕೃತದ ದ್ವಾರ ಎಂಬ ಪದದಿಂದ ಈ ಕ್ಷೇತ್ರದ ಹೆಸರು ವ್ಯುತ್ಪತ್ತಿಯಾಗಿದೆ. ಶ್ರೀ ಕೃಷ್ಣನ ಸಾಮ್ರಾಜ್ಯವಿದ್ದ ದ್ವಾರಕೆಯು ಕೃಷ್ಣನಿಗೆ ಸಮರ್ಪಿತವಾದ ದ್ವಾರಕಾಧೀಶನ ದೇವಾಲಯದಿಂದಾಗಿ ಪ್ರಸಿದ್ಧಿಪಡೆದಿದೆ.

ಚಿತ್ರಕೃಪೆ: Emmanuel DYAN

ದ್ವಾರಕಾ:

ದ್ವಾರಕಾ:

ಕಡಲ ಕಿನಾರೆಯಲ್ಲಿ ನೆಲೆಸಿರುವ ದ್ವಾರಕೆಯಲ್ಲಿರುವ ರುಕ್ಮಿಣಿ ದೇವಿ ದೇವಾಲಯದ ಒಮ್ದು ನೋಟ.

ಚಿತ್ರಕೃಪೆ: nevil zaveri

ಪುರಿ ಜಗನ್ನಾಥ:

ಪುರಿ ಜಗನ್ನಾಥ:

ಜಗನ್ನಾಥ ಪುರಿಯು ಒಡಿಶಾ ರಾಜ್ಯದಲ್ಲಿ ನೆಲೆಸಿರುವ ನಾಲ್ಕು ಪವಿತ್ರ ಧಾಮಗಳ ಪೈಕಿ ಒಂದಾಗಿರುವ ಪುಣ್ಯ ಕ್ಷೇತ್ರವಾಗಿದೆ. ಬಂಗಾಳ ಕೊಲ್ಲಿ ಸಮುದ್ರದ ಅಂಚಿನಲ್ಲಿ ನೆಲೆಸಿರುವ ಪುರಿಯು ಪೂರ್ವ ಭಾರತದ ಪ್ರಾಚೀನ ನಗರಗಳ ಪೈಕಿ ಒಂದಾಗಿದೆ. ಪುರಿಯಲ್ಲಿರುವ ಜಗನ್ನಾಥನ ಮುಖ್ಯ ದೇವಾಲಯವು ಸುಮಾರಿ ಸಾವಿರ ವರ್ಷಗಳಷ್ಟು ಪುರಾತನವಾಗಿದ್ದು, ಆದಿ ಗುರು ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಿದೆ. ಪ್ರತಿ ವರ್ಷವೂ ಅತಿ ವಿಜೃಂಭಣೆ ಹಾಗೂ ಸಡಗರದಿಂದ ರಥೋತ್ಸವವನ್ನು ಇಲ್ಲಿ ಆಚರಿಸಲಾಗುತ್ತದೆ.

ಚಿತ್ರಕೃಪೆ: Os Rúpias

ಬದರಿನಾಥ:

ಬದರಿನಾಥ:

ಭಾರತದ ಉತ್ತರಾಖಂಡ್ ರಾಜ್ಯದಲ್ಲಿರುವ ಬದರಿನಾಥವು ನಾಲ್ಕು ಪವಿತ್ರ ಧಾಮಗಳ ಪೈಕಿ ಅತಿ ಪ್ರಮುಖವಾದ ಧಾಮವಾಗಿದೆ. ಬದರಿ ನಾರಾಯಣ ಎಂತಲೂ ಕರೆಯಲ್ಪಡುವ ಬದರಿನಾಥ ದೇವಾಲಯವು ವಿಷ್ಣು ಭಗವಾನನಿಗೆ ಮುಡಿಪಾದ ದೇವಾಲಯವಾಗಿದೆ. ಹಲವು ಪವಿತ್ರವಾದ ಧಾರ್ಮಿಕ ಆಕರ್ಷಣೆಗಳನ್ನು ಇದರ ಸುತ್ತಮುತ್ತಲು ನೋಡಬಹುದಾಗಿದೆ.

ಚಿತ್ರಕೃಪೆ: Vspriya33

ಬದರಿನಾಥ:

ಬದರಿನಾಥ:

ಅತಿ ಪ್ರಮುಖ ಪುಣ್ಯ ಕ್ಷೇತ್ರ ಬದರಿನಾಥಿನ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Aurobindo Ogra

ಬದರಿನಾಥ:

ಬದರಿನಾಥ:

ಅತಿ ಪ್ರಮುಖ ಪುಣ್ಯ ಕ್ಷೇತ್ರ ಬದರಿನಾಥಿನ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Subarno Banerjee

ಬದರಿನಾಥ:

ಬದರಿನಾಥ:

ಬದರಿನಾಥ ದೇವಾಲಯದ ಪಕ್ಕದಲ್ಲಿರುವ ತಪ್ತಕುಂಡ ಹೆಸರಿನ ನೈಸರ್ಗಿಕವಾದ ಬಿಸಿ ನೀರಿನ ಬುಗ್ಗೆ / ಚಿಲುಮೆ.

ಚಿತ್ರಕೃಪೆ: Priyanath

ಬದರಿನಾಥ:

ಬದರಿನಾಥ:

ಅತಿ ಪ್ರಮುಖ ಪುಣ್ಯ ಕ್ಷೇತ್ರ ಬದರಿನಾಥಿನ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Prasadv

ಬದರಿನಾಥ:

ಬದರಿನಾಥ:

ಅತಿ ಪ್ರಮುಖ ಪುಣ್ಯ ಕ್ಷೇತ್ರ ಬದರಿನಾಥಿನ ಕೆಲವು ಸುಂದರ ಚಿತ್ರಗಳು. ಚಿತ್ರದಲ್ಲಿ ಕಾಣುತ್ತಿರುವುದು ಬ್ರಹ್ಮ ಕಬಲ ಎಂಬ ಸ್ಮಾರಕ.

ಚಿತ್ರಕೃಪೆ: Prasadv

ಬದರಿನಾಥ:

ಬದರಿನಾಥ:

ಅತಿ ಪ್ರಮುಖ ಪುಣ್ಯ ಕ್ಷೇತ್ರ ಬದರಿನಾಥಿನ ಕೆಲವು ಸುಂದರ ಚಿತ್ರಗಳು. ಚಿತ್ರದಲ್ಲಿ ಕಾಣುತ್ತಿರುವುದು ಶೀಷ್ ತಾಲ್ ಎಂಬ ಹೆಸರಿನ ಕೆರೆ.

ಚಿತ್ರಕೃಪೆ: Aurobindo Ogra

ಬದರಿನಾಥ:

ಬದರಿನಾಥ:

ಅತಿ ಪ್ರಮುಖ ಪುಣ್ಯ ಕ್ಷೇತ್ರ ಬದರಿನಾಥಿನ ಕೆಲವು ಸುಂದರ ಚಿತ್ರಗಳು. ಚಿತ್ರದಲ್ಲಿ ಕಾಣುತ್ತಿರುವುದು ಬದರಿನಾಥ ಮೂಲ ವಿಗ್ರಹ.

ಚಿತ್ರಕೃಪೆ: Sksumathy

ಚೋಟಾ ಚಾರ್ ಧಾಮ್:

ಚೋಟಾ ಚಾರ್ ಧಾಮ್:

ಚಿಕ್ಕ ನಾಲ್ಕು ಪುಣ್ಯ ಕ್ಷೇತ್ರಗಳು ಉತ್ತರಾಖಂಡ್ ರಾಜ್ಯದಲ್ಲೆ ನೆಲೆಸಿವೆ. ಅವುಗಳೆಂದರೆ ಬದರಿನಾಥ, ಕೇದಾರನಾಥ, ಯಮುನೋತ್ರಿ ಹಾಗೂ ಗಂಗೋತ್ರಿ.

ಚಿತ್ರಕೃಪೆ: Mkeranat

ಕೇದಾರನಾಥ:

ಕೇದಾರನಾಥ:

ಕಳೆದ ವರ್ಷ (2013 ರಲ್ಲಿ) ಸಂಭವಿಸಿದ ತೀವ್ರವಾದ ಜಲ ಪ್ರಳಯದಿಂದಾಗಿ ಕೇದಾರನಾಥ ಪ್ರದೇಶವು ಸಾಕಷ್ಟು ಹಾನಿಗೊಳಗಾಗಿತ್ತು. ಪ್ರಸ್ತುತ ಅಭಿವೃದ್ಧಿ ಕಾರ್ಯವು ಕ್ಷೀಪ್ರವಾಗಿ ಸಾಗಿ ಮತ್ತೆ ಭಕ್ತರಿಗೊಸ್ಕರ ಮುಕ್ತವಾಗಿದೆ. ಪಾಂಡವರಿಂದ ನಿರ್ಮಿಸಿದರೆನ್ನಲಾದ ಈ ದೇವಾಲಯವು ಆದಿ ಗುರು ಶಂಕರರಿಂದ ವಿಮರ್ಷಿಸಲ್ಪಟ್ಟಿದೆ.

ಕೇದಾರನಾಥ:

ಕೇದಾರನಾಥ:

ಉತ್ತರಾಖಂಡದ ಹಿಮಾಲಯ ಪರ್ವತ ಶ್ರೇಣಿಯ ಗಡ್ವಾಲ್ ಪ್ರದೇಶದಲ್ಲಿರುವ ಕೇದಾರನಾಥ ದೇವಾಲಯವು ಶಿವನಿಗೆ ಮುಡಿಪಾದ ದೇವಾಲಯವಾಗಿದ್ದು, ಮಂದಾಕಿನಿ ನದಿ ಬಳಿಯಲ್ಲಿ ಸ್ಥಿತವಿದೆ. 1880 ರಲ್ಲಿ ಕೇದಾರನಾಥಿನ ದೇವಾಲಯವು ಕಾಣುತ್ತಿದ್ದ ರೀತಿ.

ಕೇದಾರನಾಥ:

ಕೇದಾರನಾಥ:

ಪಂಚ ಕೇದಾರಗಳಲ್ಲಿ ಒಂದಾಗಿರುವ ಕೇದಾರನಾಥ ಬಳಿಯಲ್ಲಿರುವ ಕ್ಷೇತ್ರವೆ ತುಂಗನಾಥ. ಪಂಚ ಕೇದಾರ ಎಂದರೆ ಶಿವನಿಗೆ ಮುಡಿಪಾದ ಐದು ಪವಿತ್ರ ದೇವಾಲಯಗಳು. ಪಂಚ ಕೇದಾರಗಳ ದರ್ಶನವು ಪಾಪ ಕರ್ಮಗಳನ್ನು ತೊಳೆಯುತ್ತದೆ ಎಂದು ಹೇಳಲಾಗಿದೆ ಹಾಗೂ ಇದೂ ಕೂಡ ಹಿಂದೂಗಳಲ್ಲಿ ಒಂದು ಪ್ರಸಿದ್ಧ ಧಾರ್ಮಿಕ ಯಾತ್ರೆಯಾಗಿದೆ. ತುಂಗನಾಥ ದೇವಾಲಯವು ಭೂ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ದೇವಾಲಯವಾಗಿದೆ.

ಚಿತ್ರಕೃಪೆ: Varun Shiv Kapur

ಕೇದಾರನಾಥ:

ಕೇದಾರನಾಥ:

ಪಂಚ ಕೇದಾರಗಳಲ್ಲೊಂದಾದ ರುದ್ರನಾಥವು ಕೇದಾರನಾಥ ಬಳಿಯಿದ್ದು, ಸಮುದ್ರ ಮಟ್ಟದಿಂದ 11,800 ಅಡಿಗಳಷ್ಟು ಎತ್ತರದಲ್ಲಿದೆ.

ಚಿತ್ರಕೃಪೆ: Redtigerxyz

ಕೇದಾರನಾಥ:

ಕೇದಾರನಾಥ:

ಪಂಚ ಕೇದಾರಗಳಲ್ಲೊಂದಾದ ಮಧ್ಯಮಹೇಶ್ವರ ಕೇದಾರನಾಥ ಬಳಿಯಿದ್ದು, ಸಮುದ್ರ ಮಟ್ಟದಿಂದ 11,473.1 ಅಡಿಗಳಷ್ಟು ಎತ್ತರದಲ್ಲಿದೆ.

ಚಿತ್ರಕೃಪೆ: FlickreviewR

ಕೇದಾರನಾಥ:

ಕೇದಾರನಾಥ:

ಪಂಚ ಕೇದಾರಗಳಲ್ಲೊಂದಾದ ಕಲ್ಪೇಶ್ವರ ಕೇದಾರನಾಥ ಬಳಿಯಿದ್ದು, ಸಮುದ್ರ ಮಟ್ಟದಿಂದ 7,217.8 ಅಡಿಗಳಷ್ಟು ಎತ್ತರದಲ್ಲಿದೆ.

ಚಿತ್ರಕೃಪೆ: Str4nd

ಗಂಗೋತ್ರಿ:

ಗಂಗೋತ್ರಿ:

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಗಂಗೋತ್ರಿಯು ಚಿಕ್ಕ ನಾಲ್ಕು ಧಾಮಗಳ ಪೈಕಿ ಒಂದಾಗಿದೆ. ದೇಶದ ಮಹಾ ನದಿ ಗಂಗೆಯ ಉಗಮಸ್ಥಾನವಾಗಿರುವ ಈ ಕ್ಷೇತ್ರವು ಒಂದು ಧಾರ್ಮಿಕ ಕೇಂದ್ರವಾಗಿದ್ದು ಭಗೀರತಿ ನದಿ ತಟದಲ್ಲಿ ನೆಲೆಸಿದೆ. ಗಂಗೋತ್ರಿ ದೇವಾಲಯ.

ಚಿತ್ರಕೃಪೆ: Atarax42

ಯಮುನೋತ್ರಿ:

ಯಮುನೋತ್ರಿ:

ಚಿಕ್ಕ ನಾಲ್ಕು ಧಾಮಗಳ ಪೈಕಿ ಒಂದಾಗಿರುವ ಯಮುನೋತ್ರಿಯೂ ಸಹ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ದೇವಾಲಯವು ಯಮುನಾ ದೇವಿಗೆ ಸಮರ್ಪಿತವಾಗಿದ್ದು ದೇವಿಯ ಕಪ್ಪು ಶಿಲೆಯ ವಿಗ್ರಹವನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Atarax42

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X