Search
  • Follow NativePlanet
Share
» »ವಿಕ್ರಮಶಿಲಾ ಎಂಬ ತಂತ್ರಶಾಸ್ತ್ರದ ವಿದ್ಯಾಲಯ

ವಿಕ್ರಮಶಿಲಾ ಎಂಬ ತಂತ್ರಶಾಸ್ತ್ರದ ವಿದ್ಯಾಲಯ

By Vijay

ಸುಮಾರು 8 ಹಾಗೂ 9 ನೆಯ ಶತಮಾನದ ಸಂದರ್ಭದಲ್ಲಿ ಮಗಧ ಹಾಗೂ ಸುತ್ತಮುತ್ತಲಿನ ಕ್ಷೇತ್ರಗಳು ಪಾಲ ವಂಶಸ್ಥರಿಂದ ಆಳಲ್ಪಟ್ಟಿದ್ದವು. ಪಾಲ ವಂಶದ ದೊರೆಯಾದ ಧರ್ಮಪಾಲನೆಂಬಾತನು ವಿಕ್ರಮಶಿಲಾ ವಿಶ್ವ ವಿದ್ಯಾಲಯದ ರೂವಾರಿ.

ವಿಶೇಷ ಲೇಖನ : ಮನಸೆಳೆವ ರಾಜಗೀರ್ ಬೆಟ್ಟಗಳು

ಟಿಬೆಟಿಯನ್ ಮೂಲಗಳ ಪ್ರಕಾರ, 8 ಹಾಗೂ 9 ನೆಯ ಶತಮಾನದ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೌದ್ಧ ಮಠಗಳು ಮಗಧ ಹಾಗೂ ಬಂಗಾಳ ಭಾಗಗಳಲ್ಲಿ ಪ್ರವರ್ಧಮಾನಕ್ಕೆ ಬಂದವು. ಬೌದ್ಧ ಮತದಲ್ಲಿ ಇವುಗಳನ್ನು ಅವರು ಮಹವಿಹಾರಗಳೆಂದು ಕರೆಯುತ್ತಾರೆ. ಮೂಲಗಳ ಪ್ರಕಾರ ಅಂದಿನ ಐದು ಪ್ರಮುಖ ಮಹಾವಿಹಾರಗಳೆಂದರೆ ವಿಕ್ರಮಶಿಲಾ, ನಾಳಂದಾ,ಸೋಮಪುರ, ಒದಂಟಪುರ ಹಾಗೂ ಜಗದ್ದಾಲ.

ವಿಶೇಷ ಲೇಖನ : ಭೀಮ್ ಬೆಟ್ಕಾ ಎಂಬ ಅದ್ಭುತ ಪುರಾತನ ಗುಹೆ

ಈ ಎಲ್ಲ ಮಹಾವಿಹಾರಗಳು ಮುಖ್ಯ ಆಡಳಿತದ ಅಡಿಯಲ್ಲಿದ್ದವು ಹಾಗೂ ಉತ್ತಮವಾಗಿ ಉಪ ವಿಭಾಗಗಳಿಂದ ನಿರ್ವಹಿಸಲ್ಪಡುತ್ತಿದ್ದವು. ವಿಕ್ರಮಶಿಲಾ ವಿಹಾರವನ್ನು ಪಾಲ ದೊರೆಯಾದ ಧರ್ಮಪಾಲನು 8 ಇಲ್ಲವೆ 9 ನೆಯ ಶತಮಾನದಲ್ಲಿ ನಿರ್ಮಿಸಿದನೆನ್ನಲಾಗಿದೆ.

ವಿಶೇಷ ಲೇಖನ : ಪ್ರಾಕೃತಿಕ ವಿಸ್ಮಯಗಳು

ಪ್ರಸ್ತುತ ಲೇಖನವು ಭಾರತದ ಅದ್ಭುತ ಪುರಾತನ ವಿದ್ಯಾಲಯಗಳಲ್ಲೊಂದಾದ ವಿಕ್ರಮಶಿಲಾದ ಕುರಿತು ತಿಳಿಸುತ್ತದೆ. ನಮ್ಮ ಭವ್ಯ ಭಾರತದ ಅದ್ಭುತ ಶೈಕ್ಷಣಿಕ ಚರಿತ್ರೆಯ ಕುರಿತು ಇದರ ಮೂಲಕ ತಾಳ್ಮೆಯಿಂದ ಓದಿ ತಿಳಿದುಕೊಳ್ಳಿ ಹಾಗೂ ಸಮಯ ಮತ್ತು ಅವಕಾಶ ದೊರೆತರೆ ಇಲ್ಲಿಗೆ ಭೇಟಿ ನೀಡಲು ಮರೆಯದಿರಿ ಎಂದು ನೇಟಿವ್ ಪ್ಲಾನೆಟ್ ಕನ್ನಡ ತನ್ನ ಪ್ರೀಯ ಓದುಗರಲ್ಲಿ ಕಳ ಕಳಿಯಿಂದ ವಿನಂತಿಸುತ್ತದೆ.

ವಿಕ್ರಮಶಿಲಾ:

ವಿಕ್ರಮಶಿಲಾ:

ಪಾಲ ವಂಶಸ್ಥರ ಕಾಲದಲ್ಲಿ ಪುರಾತನ ಭಾರತದಲ್ಲಿದ್ದಂತಹ ಎರಡು ಮುಖ್ಯ ಬೌದ್ಧ ಕಲಿಕಾ ಕೇಂದ್ರಗಳಲ್ಲಿ ವಿಕ್ರಮ್ ಶಿಲಾ ವಿಶ್ವವಿದ್ಯಾಲಯವೂ ಒಂದು. ಬೌದ್ಧ ವಿದ್ವತ್ತಿನ ವಿಷಯದಲ್ಲಿ ಇದು ಕೂಡ ನಳಂದ ವಿಶ್ವವಿದ್ಯಾಲಯದ ಸ್ಥಾನದಲ್ಲೇ ಇತ್ತು.

ಚಿತ್ರಕೃಪೆ: Prataparya

ವಿಕ್ರಮಶಿಲಾ:

ವಿಕ್ರಮಶಿಲಾ:

ನಳಂದದಲ್ಲಿ ಕಲಿಕೆಯ ಗುಣಮಟ್ಟ ಇಳಿಮುಖವಾಗಿದೆ ಎಂದು ಅನಿಸಿದಾಗ ರಾಜ ಧರ್ಮಪಾಲರು ಸ್ಥಾಪಿಸಿದ ಕೇಂದ್ರವೇ ವಿಕ್ರಮಶಿಲ. ಈ ಪುರಾತನ ವಿಶ್ವವಿದ್ಯಾಲಯವು ಇಂದು ಭಗ್ನಾವಶೇಷಗಳನ್ನು ಒಳಗೊಂಡಿದ್ದರೂ ಸಹ ಇದರ ಚುಂಬಕದಂತಹ ಆಕರ್ಷಣೆಗೇನೂ ಕಡಿಮೆ ಆಗಿಲ್ಲ. ಇದು ಒಂದು ದೊಡ್ಡ ಚೌಕಾಕಾರದ ಮಠವಾಗಿದ್ದು ಇದರ ಮಧ್ಯದಲ್ಲೊಂದು ಸ್ತೂಪವಿದೆ.

ಚಿತ್ರಕೃಪೆ: Tonandada

ವಿಕ್ರಮಶಿಲಾ:

ವಿಕ್ರಮಶಿಲಾ:

ಒಂದು ವಾಚನಾಲಯ ಹಾಗೂ ಹಲವಾರು ಸ್ತೂಪ ಸಮೂಹಗಳನ್ನು ಒಳಗೊಂಡಿರುವ ಈ ವಿದ್ಯಾಲಯ ತಾಣದಲ್ಲಿ ಭಾರತೀಯ ಪುರಾತತ್ವ ಪ್ರಾಧಿಕಾರವು ಉತ್ಖನನ ನಡೆಸಿದಾಗ ಟಿಬೆಟ್ಟಿಯನ್ನರಿಗೆ ಹಾಗೂ ಹಿಂದೂ ಧರ್ಮಕ್ಕೆ ಸಮರ್ಪಿತವಾದ ಒಂದೊಂದು ದೇವಾಲಯಗಳು ಪತ್ತೆಯಾಗಿವೆ.

ಚಿತ್ರಕೃಪೆ: Rakesh Ranjan

ವಿಕ್ರಮಶಿಲಾ:

ವಿಕ್ರಮಶಿಲಾ:

ನಾಳಂದಾ ವಿದ್ಯಾಲಯದ ವೈಭವ ಕ್ಷಿಣಿಸಿದ ನಂತರ ಬೌದ್ಧ ವಿದ್ಯಾಲಯಗಳ ಪೈಕಿ ವಿಕ್ರಮಶಿಲಾ ಬಹು ದೊಡ್ಡದಾಗಿತ್ತು. ನೂರಕ್ಕೂ ಹೆಚ್ಚು ಭೋದಕರು ಹಾಗೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಚಿತ್ರಕೃಪೆ: Rakesh Ranjan

ವಿಕ್ರಮಶಿಲಾ:

ವಿಕ್ರಮಶಿಲಾ:

ಈ ವಿದ್ಯಾಲಯವು ಸಾಕಷ್ಟು ಸಂಖ್ಯೆಯಲ್ಲಿ ಅತ್ಯುತ್ತಮ ಪಂಡಿತ, ವಿದ್ವಾಂಸರನ್ನು ಸಮಾಜಕ್ಕೆ ಅರ್ಪಿಸಿದ ಕೀರ್ತಿ ಹೊಂದಿದೆ. ಅಷ್ಟೆ ಅಲ್ಲ ಈ ವಿದ್ವಾಂಸರು ತಮ್ಮ ಪಾಂಡಿತ್ಯಕ್ಕಾಗಿ ವಿದೇಶಗಳಿಂದಲೂ ಆಹ್ವಾನಿಸಲ್ಪಟ್ಟಿದ್ದಿದ್ದುದರ ಉದಾಹರಣೆಗಳಿವೆ.

ಚಿತ್ರಕೃಪೆ: Prataparya

ವಿಕ್ರಮಶಿಲಾ:

ವಿಕ್ರಮಶಿಲಾ:

ವಿಕ್ರಮಶಿಲಾ ವಿದ್ಯಾಲಯ ಕರುಣಿಸಿದ ಪಂಡಿತರಲ್ಲಿ ಅತೀಶ ದೀಪಾಂಕರ ಎಂಬುವವರು ಮಂಚೂಣಿಯಲ್ಲಿ ನಿಲ್ಲುತ್ತಾರೆ. ಟಿಬೆಟ್ ಬೌದ್ಧ ಧರ್ಮದ ಸರ್ಮಾ ಮನೆತನದ ರೂವಾರಿಯೂ ಸಹ ಇವರೆ. ಈ ವಿದ್ಯಾಲಯದಲ್ಲಿ ಆಧ್ಯಾತ್ಮಿಕತೆ, ವ್ಯಾಕರಣ, ತತ್ವಶಾಸ್ತ್ರ, ಭಾರತೀಯ ತರ್ಕಶಸ್ತ್ರ ಮುಂತಾದ ವಿಷಯಗಳನ್ನು ಭೋದಿಸಲಾಗುತ್ತಿದ್ದರೂ ಬಲು ಪ್ರಮುಖವಾಗಿ ತಂತ್ರಶಾಸ್ತ್ರವನ್ನು ಭೋದಿಸಲಾಗುತ್ತಿತ್ತು.

ವಿಕ್ರಮಶಿಲಾ:

ವಿಕ್ರಮಶಿಲಾ:

ಇಂತಹ ಅದ್ಭುತ ಶೈಕ್ಷಣಿಕ ಹಿನ್ನಿಲೆಯುಳ್ಳ ಈ ಭವ್ಯ ಪುರಾತನ ವಿದ್ಯಾಲಯವಿರುವುದು ಬಿಹಾರ್ ರಾಜ್ಯದ ಭಾಗಲ್ಪುರ ಜಿಲ್ಲೆಯಲ್ಲಿ. ಅದರಲ್ಲೂ ವಿಶೇಷವಾಗಿ ಅಂತಿಚಕ್ ಎಂಬ ಗ್ರಾಮದಲ್ಲಿ ಉತ್ಖನನ ಮಾಡಿದಾಗ ಈ ವಿದ್ಯಾಲಯದ ಮಹತ್ವದ ಭಾಗಗಳು ದೊರೆತಿವೆ ಹಾಗೂ ಉತ್ಖನನ ಪ್ರಕ್ರಿಯೆಯು ಇನ್ನೂ ಚಾಲ್ತಿಯಲ್ಲಿದೆ. ಇಂದು ವಿಕ್ರಮಶಿಲಾದಲ್ಲಿರುವ ಭವ್ಯ ಹಾಗೂ ಸುಸಜ್ಜಿತ ಸಭಾಂಗಣ.

ಚಿತ್ರಕೃಪೆ: Ambuj Saxena

ವಿಕ್ರಮಶಿಲಾ:

ವಿಕ್ರಮಶಿಲಾ:

ಉತ್ಖನನದ ನಂತರ ಕೆಲ ವರ್ಷಗಳ ಕಾಲ ಈ ತಾಣವನ್ನು ನಿರ್ಲಕ್ಷಿಸಲಾಯಿತಾದರೂ ನಂತರ ಇದರ ಮಹತ್ವವನ್ನರಿತ ರಾಜ್ಯ ಸರ್ಕಾರವು ಅದರ ಸಂರಕ್ಷಣೆಗಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಇಂದು ಸಂರಕ್ಷಿಸಲ್ಪಟ್ಟ ತಾಣವಾಗಿದ್ದು ಒಂದು ಐತಿಹಾಸಿಕ ಪ್ರಸಿದ್ಧ ಪ್ರವಾಸಿ ಕ್ಷೇತ್ರವೂ ಸಹ ಆಗಿದೆ. ಕೇವಲ ದೇಶದಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಸಹ ಸಾಕಷ್ಟು ವಿದೇಶಿ ಪ್ರವಾಸಿಗರು ಇದರ ಹಿನ್ನಿಲೆ ತಿಳಿದು ಕುತೂಹಲ ಹುಟ್ಟಿಸಿಕೊಂಡು ಇಲ್ಲಿಗೆ ಬರುತ್ತಾರೆ. ವಿಕ್ರಮಶಿಲಾ ಆವರಣದಲ್ಲಿರುವ ಲಘು ತಿನಿಸು ಕೇಂದ್ರ.

ಚಿತ್ರಕೃಪೆ: Ambuj Saxena

ವಿಕ್ರಮಶಿಲಾ:

ವಿಕ್ರಮಶಿಲಾ:

ಅದರಂತೆ ಈ ತಾಣದ ಮಹತ್ವನ್ನು ಎಲ್ಲೆಡೆ ಪಸರಿಸುವ ಉದ್ದೇಶದಿಂದ, ಬಿಹಾರ್ ರಾಜ್ಯ ಸರ್ಕಾರದ ಪ್ರವಾಸಿ ಇಲಾಖೆಯಿಂದ ಪ್ರತಿ ವರ್ಷ ಫೆಬ್ರುವರಿ ತಿಂಗಳಿನಲ್ಲಿ ವಿಕ್ರಮಶಿಲಾ ಮಹೋತ್ಸವವನ್ನು ಬಲು ಸಡಗರದಿಂದ ಆಯೋಜಿಸಲಾಗುತ್ತದೆ. ಆವರಣದಲ್ಲಿ ನಿರ್ಮಿಸಲಾಗಿರುವ ನವೀನ ಕಟ್ಟಡ ಸಂಕೀರ್ಣ.

ಚಿತ್ರಕೃಪೆ: Ambuj Saxena

ವಿಕ್ರಮಶಿಲಾ:

ವಿಕ್ರಮಶಿಲಾ:

ಈ ತಾಣವು ಭಾಗಲ್ಪುರ ಪಟ್ಟಣದಿಂದ 50 ಕಿ.ಮೀ ದೂರದಲ್ಲಿದ್ದು, ಇದಕ್ಕೆ ಹತ್ತಿರದ ರೈಲು ನಿಲ್ದಾಣವು ಕಹಲ್ಗಾಂವ್ ಎಂಬಲ್ಲಿದೆ (13 ಕಿ.ಮೀ). ಅಲ್ಲದೆ ದೆಹಲಿಯಿಂದ ಭಾಗಲ್ಪುರಕ್ಕೆ ವಿಕ್ರಮಶಿಲಾ ಎಕ್ಸ್ ಪ್ರೆಸ್ ರೈಲೂ ಸಹ ಇದೆ.

ಚಿತ್ರಕೃಪೆ: Deepak Kumar Sharma

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X