Search
  • Follow NativePlanet
Share
» »ವೇಲ್ನೇಶ್ವರ : ಅವಿತು ಕುಳಿತಿರುವ ಸುಂದರ ಕಡಲ ತೀರ

ವೇಲ್ನೇಶ್ವರ : ಅವಿತು ಕುಳಿತಿರುವ ಸುಂದರ ಕಡಲ ತೀರ

By Vijay

ರತ್ನಾಗಿರಿ ಮಹಾರಾಷ್ಟ್ರದ ಕೊಂಕಣ ಭಾಗದ ಒಂದು ಜಿಲ್ಲೆ. ಕಡಲ ತೀರದ ಈ ಜಿಲ್ಲೆಯಲ್ಲಿ ಹಲವು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದ್ದು, ಅವುಗಳಲ್ಲಿ ಒಂದಾಗಿದೆ ವೇಲ್ನೇಶ್ವರ. ಶಿವನಿಗೆ ಮುಡಿಪಾದ ದೇವಾಲಯದಿಂದಾಗಿ ಇದಕ್ಕೆ ವೇಲ್ನೇಶ್ವರ ಎಂಬ ಹೆಸರು ಬಂದಿದೆ.

ನೇರವಾಗಿ ಹೇಳಬೇಕೆಂದರೆ ಈ ಸಮುದ್ರ ತೀರ ಪಟ್ಟಣದಲ್ಲಿ ಅಂತಹ ವಿಶೇಷ ಆಕರ್ಷಣೆಗಳೇನು ಕಾಣದಾದರೂ ಹಿತ ನೀಡುವ, ಮನಸ್ಸಿಗೆ ನೆಮ್ಮದಿ ದೊರೆಯುವ, ವಿರಾಮ ಸಮಯವನ್ನು ಅರ್ಥಪೂರ್ಣವಾಗಿ ಕಳೆಯಬಹುದಾದ ಪರಿಸರ ಇದು ಕರುಣಿಸುತ್ತದೆ.

ವೇಲ್ನೇಶ್ವರ:

ವೇಲ್ನೇಶ್ವರ:

ವೇಲ್ನೇಶ್ವರ ಪಟ್ಟಣದಲ್ಲಿರುವ ಶಿವನಿಗೆ ಮುಡಿಪಾದ ದೇವಾಲಯ.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ವಿಶೇಷವೆಂದರೆ ಇಲ್ಲಿನ ಸಮುದ್ರ ತೀರದಲ್ಲಿ ಅಪಾರ ಸಂಖ್ಯೆಯಲ್ಲಿ ಕಲ್ಲು ಬಂಡೆಗಳು ಕಾಣುವುದೆ ಇಲ್ಲ. ಆದ್ದರಿಂದ ಈಜಲು, ನೀರಿನಲ್ಲಿ ಆಟವಾಡಲು ಇದು ಯೋಗ್ಯವಾದ ಸ್ಥಳವಾಗಿದೆ.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ವೇಲ್ನೇಶ್ವರ ಒಂದು ಚಿಕ್ಕ ಹಳ್ಳಿಯಾಗಿರುವುದರಿಂದ ವಿರಾಮ ಅಥವಾ ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದಹಾಗಿದೆ.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯು ಇಲ್ಲಿನ ಬೆಟ್ಟವೊಂದರ ಮೇಲೆ ರಿಸಾರ್ಟನ್ನು ಸ್ಥಾಪಿಸಿದೆ. ಇದು ತಂಗಲು ಯೋಗ್ಯವಾಗಿದ್ದು, ಸಮುದ್ರದ ಪಾಕ್ಷಿಕ ನೋಟವನ್ನು ಆಸ್ವಾದಿಸಲು ಪ್ರಶಸ್ತವಾಗಿದೆ. ಅಲ್ಲದೆ ಇತರೆ ಬೇರೆ ಹೋಟೆಲುಗಳನ್ನೂ ಸಹ ಇಲ್ಲಿ ಕಾಣಬಹುದು.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ಕೊಂಕಣ ಭಾಗದ ಮತ್ತೊಂದು ವೈಶಿಷ್ಟ್ಯವೆಂದರೆ ಕೊಂಕಣಿ ಶೈಲಿಯ ಊಟ. ಇದು ಬಹುವಾಗಿ ಸಮುದ್ರ ಖಾದ್ಯಗಳನ್ನೊಳಗೊಂಡಿರುತ್ತದೆ. ಆದ್ದರಿಂದ ಈ ಕಡಲ ಪಟ್ಟಣದಲ್ಲೂ ಬಾಯಲ್ಲಿ ನೀರೂರುವಂತಹ ರುಚಿ ರುಚಿಯಾದ ಸಮುದ್ರ ಖಾದ್ಯಗಳನ್ನು ಆಸ್ವಾದಿಸಬಹುದು.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ವೇಲ್ನೇಶ್ವರ ಮುಂಬೈ ನಗರದಿಂದ 335 ಕಿ.ಮೀ ಗಳಷ್ಟು ದೂರದಲ್ಲಿದೆ. ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಚಿಪ್ಲುನ್. ಕೊಂಕಣ ರೈಲಿನ ಮೂಲಕ ಮುಂಬೈ ನಿಂದ ಚಿಪ್ಲುನ್ ಗೆ ರೈಲು ಲಭ್ಯವಿದೆ. ಚಿಪ್ಲುನ್ ವೇಲ್ನೇಶ್ವರದಿಂದ ಸುಮಾರು 60 ಕಿ.ಮೀ ಗಳಷ್ಟು ಅಂತರದಲ್ಲಿದೆ.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ಇನ್ನು ವೇಲ್ನೇಶ್ವರಕ್ಕೆ ರಸ್ತೆ ಮೂಲಕ ತೆರಳಬೇಕೆಂದಿದ್ದರೆ, ಮುಂಬೈ, ಪುಣೆ, ಕೋಲ್ಹಾಪುರ ದಿಂದ ಗುಹಾಘರ್ ವರೆಗೂ ಬಸ್ಸುಗಳು ಲಭ್ಯವಿದೆ. ಗುಹಾಘರ್ ನಿಂದ ಬಾಡಿಗೆ ಆಟೊಗಳ ಮೂಲಕ 20 ಕಿ.ಮೀ ದೂರದಲ್ಲಿರುವ ವೇಲ್ನೇಶ್ವರಕ್ಕೆ ತಲುಪಬಹುದು.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ವೇಲ್ನೇಶ್ವರದ ಸಮುದ್ರ ತೀರದ ನೋಟ, ಕಲಿಸುವುದು ಜೀವನೋತ್ಸಾಹದ ಪಾಠ.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ವೇಲ್ನೇಶ್ವರದ ಸಮುದ್ರ ತೀರದ ನೋಟ, ಕಲಿಸುವುದು ಜೀವನೋತ್ಸಾಹದ ಪಾಠ.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ವೇಲ್ನೇಶ್ವರದ ಸಮುದ್ರ ತೀರದ ನೋಟ, ಕಲಿಸುವುದು ಜೀವನೋತ್ಸಾಹದ ಪಾಠ.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ವೇಲ್ನೇಶ್ವರದ ಸಮುದ್ರ ತೀರದ ನೋಟ, ಕಲಿಸುವುದು ಜೀವನೋತ್ಸಾಹದ ಪಾಠ.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ವೇಲ್ನೇಶ್ವರದ ಸಮುದ್ರ ತೀರದ ನೋಟ, ಕಲಿಸುವುದು ಜೀವನೋತ್ಸಾಹದ ಪಾಠ.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ವೇಲ್ನೇಶ್ವರದ ಸಮುದ್ರ ತೀರದ ನೋಟ, ಕಲಿಸುವುದು ಜೀವನೋತ್ಸಾಹದ ಪಾಠ.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ವೇಲ್ನೇಶ್ವರದ ಸಮುದ್ರ ತೀರದ ನೋಟ, ಕಲಿಸುವುದು ಜೀವನೋತ್ಸಾಹದ ಪಾಠ.

ಚಿತ್ರಕೃಪೆ: Ankur P

ವೇಲ್ನೇಶ್ವರ:

ವೇಲ್ನೇಶ್ವರ:

ವೇಲ್ನೇಶ್ವರದ ಸಮುದ್ರ ತೀರದ ನೋಟ, ಕಲಿಸುವುದು ಜೀವನೋತ್ಸಾಹದ ಪಾಠ.

ಚಿತ್ರಕೃಪೆ: Ankur P

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X