Search
  • Follow NativePlanet
Share
» »ಬೆಂಗಳೂರಿನಾಚೆ ಒಂದು ವಿಶಿಷ್ಟ ಪ್ರವಾಸ

ಬೆಂಗಳೂರಿನಾಚೆ ಒಂದು ವಿಶಿಷ್ಟ ಪ್ರವಾಸ

By Vijay

ವಾರಾಂತ್ಯ ಅದರಲ್ಲೂ ವಿಶೇಷವಾಗಿ ದೀರ್ಘ ವಾರಾಂತ್ಯ ರಜೆಗಳು ಬಂತೆಂದರೆ ಸಾಕು ಕೇವಲ ಮಹಾನಗರಗಳೇಕೆ, ಇತರೆ ಮಧ್ಯಮ ನಗರಗಳ ನಿವಾಸಿಗಳೂ ಕೂಡ ಎಲ್ಲಿಗಾದರೂ ಹೊರಡಬೇಕೆಂದು ಬಯಸೆ ಬಯಸುತ್ತಾರೆ. ಈ ವಾಸ್ತವಾಂಶ ಬೆಂಗಳೂರಿಗರಿಗೇನೂ ಹೊರತಾಗಿಲ್ಲ.

ಬೆಂಗಳೂರು ಮೊದಲೆ ಮಾಹಿತಿ ತಂತ್ರಜ್ಞಾನ ನಗರಿ. ವಾರದ ಐದು ದಿನಗಳೂ ಸಹ ಮುಂಜಾನೆ, ಸಂಜೆ ಗೊತ್ತಿಲ್ಲದೆ ದುಡಿಯುವುದು. ವಾಹನಗಳಿಂದ ಕಿಕ್ಕಿರಿದು ತುಂಬಿರುವ ರಸ್ತೆಯ ಮೇಲೆ ಸಾಗುತ್ತ ಮನೆ ತಲುಪುವುದು. ಬಿ.ಎಂ.ಟಿ.ಸಿ ಬಸ್ಸುಗಳಲ್ಲಿ ಎಲ್ಲರೂ ನಮ್ಮ ಬಂಧುಗಳಂತೆಂದುಕೊಂಡು ಹಿಡಿಯುತ್ತ ಜೋತಾಡುತ್ತ ನೇತಾಡುತ್ತ ಮನೆಗೆ ತೆರಳುವುದು, ಹೀಗೆ ಈ ಪ್ರತಿ ಸಾಮಾನ್ಯ ಚಟುವಟಿಕೆಗಳು ಪ್ರತಿಯೊಬ್ಬನನ್ನು ಬಳಲಿ ಬೆಂಡಾಗಿಸಿ ಬಿಡುತ್ತದೆ.

ಈ ರೀತಿಯ ಐದು ದಿನಗಳ ಒತ್ತಡದ ಜೀವನ ನವ ಚೈತನ್ಯ ಪಡೆಯಬೇಕೆಂದರೆ ಮನಸ್ಸಿಗೆ ಹಿತಕರವಾದ, ಸಂತಸವಾದ ಯಾವುದೆ ಪ್ರಕ್ರಿಯೆ ಮಾಡಿದಾಗ ಮಾತ್ರ ಲಭಿಸುತ್ತದೆ. ಪ್ರವಾಸವೂ ಸಹ ಅಂತಹ ಒಂದು ಪ್ರಕ್ರಿಯೆಗಳಲ್ಲಿ ಪ್ರಮುಖವಾಗಿದೆ. ಆದರೆ ಒಂದೆರಡು ದಿನಗಳ ಬಿಡುವಿನಲ್ಲಿ ಅರ್ಥಪೂರ್ಣ ಪ್ರವಾಸ ಮಾಡುವುದೂ ಸಹ ಒಂದು ಸವಾಲೆ ಹೌದು. ಗೋವಾ ಕಡಲ ತೀರಗಳು ಸೊಗಸಾಗಿದೆ ಎಂದ ಮಾತ್ರಕ್ಕೆ ಎಲ್ಲರೂ ವಾರಾಂತ್ಯ ರಜೆಗೆ ಗೋವಾಗೆ ತೆರಳಲಾದಿತೆ?

ವಾಸವಿದ್ದ ಸ್ಥಳದ ಸುತ್ತಮುತ್ತಲು ಸೂಕ್ಷ್ಮವಾಗಿ ಅನ್ವೇಷಿಸುತ್ತಾ ಹೋದರೆ ಅದ್ಭುತವಾದ ಸ್ಥಳಗಳಿಗೆ ಭೇಟಿ ನೀಡಬಹುದು. ಹಾಗಾದರೆ ಬನ್ನಿ ಬೆಂಗಳೂರಿನಿಂದಾಚೆ ಒಂದು ಸಣ್ಣ ಪ್ರವಾಸ ಮಾಡುತ್ತ ಗಿರಿಧಾಮ, ಧಾರ್ಮಿಕ ಕ್ಷೇತ್ರ, ಐತಿಹಾಸಿಕ ಸ್ಥಳಗಳನ್ನು ಸುತ್ತಿ ಬರೋಣ. ಬೆಂಗಳೂರಿನಿಂದ ಈ ಪ್ರತಿಯೊಂದು ಸ್ಥಳಗಳಿಗೆ ಒಂದಾದರ ಮೇಲೊಂದಂತೆ ತೆರಳಿದರೂ ಸಹ ಒಟ್ಟಾರೆ ದೂರ 200 ಕಿ.ಮೀ ಒಳಗೆಯೆ ಇದೆ ಎಂಬುದು ವಿಶೇಷ. ಹಾಗಾದರೆ ಆ ಸ್ಥಳಗಳು ಯಾವುವು ಎಂಬುದರ ಕುರಿತು ಸ್ಲೈಡುಗಳ ಮೂಲಕ ತಿಳಿಯಿರಿ.

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಬೆಂಗಳೂರಿನಿಂದ ಕೇವಲ 70 ಕಿ.ಮೀ ದೂರ ಕ್ರಮಿಸಿದರೆ ಸಾಕು ನಿಮಗೊಂದು ಪುಟ್ಟ ಗಿರಿಧಾಮ ಪ್ರದೇಶ ಎದುರಾಗುತ್ತದೆ. ಸಮುದ್ರ ಮಟ್ಟದಿಂದ 3940 ಮೀ. ಎತ್ತರದಲ್ಲಿರುವ ಈ ಸ್ಥಳ ಧಾರ್ಮಿಕ ಕ್ಷೇತ್ರವಾಗಿಯೂ ಹೆಸರುವಾಸಿಯಾಗಿದೆ. ಈ ಸ್ಥಳದ ಹೆಸರು ದೇವರಾಯನದುರ್ಗ.

ಚಿತ್ರಕೃಪೆ: Subramanya Prasad

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ತುಮಕೂರು ಜಿಲ್ಲೆಯಲ್ಲಿರುವ ಈ ಗಿರಿಧಾಮವು ಯೋಗನರಸಿಂಹ ದೇವಸ್ಥಾನ, ಭೋಗನರಸಿಂಹ ದೇವಸ್ಥಾನ ಹಾಗೂ ನಾಮದಚಿಲುಮೆಗೆ ಜನಪ್ರಿಯವಾಗಿದೆ. ಮೊದಲಿಗೆ ಜಡಕನ ದುರ್ಗ ಎಂದು ಕರೆಯಲ್ಪಡುತ್ತಿದ್ದ ಈ ಸ್ಥಳವನ್ನು ಮೈಸೂರಿನ ದೊರೆ ಚಿಕ್ಕ ದೇವರಾಜ ಒಡಯರ್ ವಶಪಡಿಸಿಕೊಂಡ ನಂತರ ದೇವರಾಯನದುರ್ಗ ಎಂಬ ಹೆಸರನ್ನು ಪಡೆಯಿತು.

ಚಿತ್ರಕೃಪೆ: Hari Prasad Nadig

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ದೇವರಾಯನದುರ್ಗದಲ್ಲಿ ಎರಡು ದೇಗುಲಗಳನ್ನು ಕಾಣಬಹುದು. ಭೋಗ ನರಸಿಂಹ ದೇವಸ್ಥಾನವು ಬೆಟ್ಟದ ಬುಡದಲ್ಲಿದ್ದರೆ, ಯೋಗ ನರಸಿಂಹ ದೇವಸ್ಥಾನವು ಬೆಟ್ಟದ ಮೇಲೆ ನೆಲೆಸಿದೆ. ವಾರ್ಷಿಕವಾಗಿ ಫಾಲ್ಗುಣ ಮಾಸ ಶುದ್ಧ ಪೂರ್ಣಿಮೆಯ ದಿನದಂದು ರಥೋತ್ಸವವನ್ನು ಇಲ್ಲಿ ಬಲು ಅದ್ದೂರಿಯಿಂದ ಆಚರಿಸಲಾಗುತ್ತದೆ. ಅಂದರೆ ಈ ಉತ್ಸವವು ವರ್ಷದ ಮಾರ್ಚ್ ಅಥವಾ ಎಪ್ರಿಲ್ ಸಮಯದಲ್ಲಿ ಜರುಗುತ್ತದೆ.

ಚಿತ್ರಕೃಪೆ: Srinivasa83

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಅಲ್ಲದೆ ನರಸಿಂಹ ಜಯಂತಿ ಉತ್ಸವವನ್ನೂ ಸಹ ಇಲ್ಲಿ ಸಡಗರದಿಂದ ಆಚರಿಸಲಾಗುತ್ತದೆ. ಪೆಂಡಾಲುಗಳನ್ನು ನಿರ್ಮಿಸಿ ಪಾನಕ, ಮಜ್ಜಿಗೆ ಮುಂತಾದವುಗಳನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಗುತ್ತದೆ. ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆ ಹಾಗೂ ಬೆಂಗಳೂರಿನ ಎಲ್ಲೆಡೆಯಿಂದ ಸಾಕಷ್ಟು ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ.

ಚಿತ್ರಕೃಪೆ: sai sreekanth mulagaleti

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಇನ್ನು ದೇವಾರಾಯನದುರ್ಗದ ಬೆಟ್ಟದ ಬುಡದಲ್ಲಿರುವ ತುಮಕೂರಿನೆಡೆ ಸಾಗುವ ರಸ್ತೆಯಲ್ಲಿ ನಾಮದ ಚಿಲುಮೆ ಎಂಬ ಆಕರ್ಷಣೆಯನ್ನು ಕಾಣಬಹುದು. ಪ್ರಸಿದ್ಧ ಜನಪದ ಕಥೆಯೊಂದರ ಪ್ರಕಾರ, ಶ್ರೀ ರಾಮನು ಲಂಕೆಗೆ ಹೋಗುವಾಗ ಈ ಸ್ಥಳದಲ್ಲಿ ನೆಲೆನಿಂತನಂತೆ. ರಾಮನು ತನ್ನ ಹಣೆಗೆ 'ನಾಮ' ಇಡಲು ನೀರಿಗಾಗಿ ಹುಡುಕಾಡಿದನಂತೆ. ನೀರು ಎಲ್ಲಿ ಸಿಗದಿದ್ದಾಗ ತನ್ನ ಬಿಲ್ಲನ್ನು ತೆಗೆದು ಈ ಸ್ಥಳದಲ್ಲಿ ಬಾಣ ಬಿಟ್ಟಾಗ, ಇಲ್ಲಿನ ನೀರಿನ ಚಿಲುಮೆ ಹುಟ್ಟಿತಂತೆ. ಆದ್ದರಿಂದ ಇದನ್ನು ನಾಮದ ಚಿಲುಮೆ ಅಂದರೆ ರಾಮ ಚಿಲುಮೆ ಎಂದು ಕರೆಯುತ್ತಾರೆ.

ಚಿತ್ರಕೃಪೆ: Siddarth P Raj

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಮತ್ತೊಂದು ವಿಷಯವೆಂದರೆ, ನಾಮದ ಚಿಲುಮೆಯ ನಂತರ ಪ್ರಸ್ತುತವಿರುವ ಅತಿಥಿ ಗೃಹದ ಮುಂದೆ ಪಾಳು ಬಿದ್ದ ಹಳೆಯ 1931 ರಲ್ಲಿ ನಿರ್ಮಿಸಲಾಗಿದ್ದ ಅತಿಥಿ ಗೃಹವೊಂದನ್ನು ಕಾಣಬಹುದು. ಡಾ. ಸಲೀಂ ಅಲಿ ತಮ್ಮ ಅಧ್ಯಯನದ ಸಮಯದಲ್ಲಿ ಈ ಅತಿಥಿ ಗೃಹದಲ್ಲಿ ತಂಗಿದ್ದರು.

ಚಿತ್ರಕೃಪೆ: Gpitta

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ನಾಮದ ಚಿಲುಮೆಯ ಹತ್ತಿರದಲ್ಲೆ ಜಿಂಕೆ ಉದ್ಯಾನವನ್ನೂ ಸಹ ಕಾಣಬಹುದು.

ಚಿತ್ರಕೃಪೆ: Siddarth P Raj

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಇನ್ನು ದೇವರಾಯನದುರ್ಗದ ಈಶಾನ್ಯಕ್ಕೆ ಬ್ಯಾಚೇನಹಳ್ಳಿ, ಎ.ವೆಂಕಟಾಪುರದ ಮಾರ್ಗವಾಗಿ ಸುಮಾರು 26 ಕಿ.ಮೀ ಚಲಿಸಿದರೆ ಸಿಗುವ ಧಾರ್ಮಿಕ ಮಹತ್ವ ಪಡೆದಿರುವ ಕ್ಷೇತ್ರವೆ ಗೊರವನಹಳ್ಳಿ. ಮೂಲತಃ ಗೊರವನಹಳ್ಳಿಯು ಲಕ್ಷ್ಮಿ ದೇವಿಯ ದೇಗುಲದಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿನ ಲಕ್ಷ್ಮಿ ದೇವಿಯು ಐಶ್ವರ್ಯವಲ್ಲದೆ ಕಂಕಣ ಭಾಗ್ಯವನ್ನು ಕರುಣಿಸುತ್ತಾಳೆ ಎಂಬ ಮಾತು ಚಾಲ್ತಿಯಲ್ಲಿದೆ. ಹೀಗಾಗಿ ಮದುವೆ ಆಗ ಬಯಸುವ ಪುರುಷ ಹಾಗೂ ಮಹಿಳಾ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಿರುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Darwinius

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಗೊರವನಹಳ್ಳಿಯಿಂದ ಉತ್ತರಕ್ಕೆ ಕೊರಟಗೆರೆ ಮೂಲಕ ಸುಮಾರು 26 ಕಿ.ಮೀ ಕ್ರಮಿಸಿದರೆ ಸಾಕು ಮಧುಗಿರಿಯನ್ನು ತಲುಪಬಹುದು. ಮಧುಗಿರಿಯು ಏಕಶಿಲಾ ಬೆಟ್ಟ ಹಾಗೂ ಅಲ್ಲಿ ನಿರ್ಮಿಸಲಾಗಿರುವ ಕೋಟೆಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Saurabh Sharan

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಹೆಮ್ಮೆಯ ಸಂಗತಿ ಎಂದರೆ ಮಧುಗಿರಿ ಏಕಶಿಲಾ ಬೆಟ್ಟವು ಸಂಪೂರ್ಣ ಏಷಿಯಾ ಖಂಡದಲ್ಲೆ ಎರಡನೇಯ ಅತಿ ದೊಡ್ಡ ಬೆಟ್ಟವಾಗಿದೆ. ಇದೊಂದು ರಾಷ್ಟ್ರೀಯ ಮಹತ್ವ ಪಡೆದಿರುವ ಸ್ಮಾರಕವೂ ಹೌದು.

ಚಿತ್ರಕೃಪೆ: Vinay Siddapura

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಈ ಬೃಹತ್ ಬೆಟ್ಟದ ಮೊನಚಾದ ಭಾಗಗಳಲ್ಲಿ ಮಧಿಗಿರಿ ಕೋಟೆಯನ್ನು ಕಟ್ಟಲಾಗಿದೆ. ಅಂತರಾಳದ ಬಾಗಿಲು, ದಿಡ್ಡಿ ಬಾಗಿಲು ಹಾಗೂ ಮೈಸೂರು ದ್ವಾರ ಎಂಬ ಹೀಗೆ ಮೂರು ಪ್ರವೇಶ ದ್ವಾರಗಳನ್ನು ಈ ಕೋಟೆ ಹೊಂದಿದೆ. ಈ ಕೋಟೆಯು ವಿಜಯನಗರ ಸಾಮ್ರಾಜ್ಯದವರಿಂದ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: balu

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಮಧುಗಿರಿಯ ಕೋಟೆ ನೋಡಿಕೊಂಡು ದಕ್ಷಿಣಾಭಿಮುಖವಾಗಿ ದಾಬಸ್ ಪೇಟೆಯ ಮೂಲಕ ಶಿವಗಂಗೆ ಕ್ಷೇತ್ರಕ್ಕೆ ಭೇಟಿ ನೀಡಬಹುದು. (ಬೆಂಗಳೂರಿನಿಂದ ಮೊದಲು ಬರುವ ಶಿವಗಂಗೆಗೆ ಭೇಟಿ ನೀಡಿ ನಂತರ ಎಲ್ಲ ಸ್ಥಳಗಳಿಗೆ ತೆರಳುವುದೂ ಒಂದು ಉತ್ತಮವಾದ ಆಯ್ಕೆ).

ಚಿತ್ರಕೃಪೆ: Manjeshpv

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಶಿವಗಂಗೆ ಒಂದು ಶಿಖರ ಬೆಟ್ಟವಾಗಿದ್ದು, ದಾಬಸ್ ಪೇಟೆ ಬಳಿಯಿರುವ ಹಿಂದೂಗಳ ಪುಣ್ಯ ಕ್ಷೇತ್ರವಾಗಿದೆ. 1368 ಮೀ. ಎತ್ತರವಿರುವ ಈ ಪವಿತ್ರ ಶಿಖರವು ಲಿಂಗದ ರೂಪದಲ್ಲಿದ್ದು ಹತ್ತಿರದಲ್ಲಿ ನೈಸರ್ಗಿಕ ನೀರಿನ ಹರಿವಿರುವ ಕಾರಣ ಇದಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Manjeshpv

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ದಕ್ಷಿಣ ಕಾಶಿ ಎಂತಲೂ ಕರೆಯಲ್ಪಡುವ ಶಿವಗಂಗೆಯಲ್ಲಿ ಗಂಗಾಧರೇಶ್ವರ ದೇಗುಲ, ಒಳಕಲ್ ತೀರ್ಥ, ನಂದಿ ವಿಗ್ರಹ, ಪಾತಾಳಗಂಗೆ ಮುಂತಾದವುಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Manjeshpv

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಟ್ರೆಕ್ ಮಾಡಲು ಇದೊಂದು ಆದರ್ಶಮಯ ಬೆಟ್ಟವಾಗಿದ್ದು, ಹತ್ತಲು ಸಾಕಷ್ಟು ಅನುಕೂಲತೆಗಳು ಇಲ್ಲಿರುವುದನ್ನು ಗಮನಿಸಬಹುದು. ಹತ್ತುವಾಗ ಅಲ್ಲಲ್ಲಿ ಕೋತಿಗಳು ಇರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯ. ಏಕೆಂದರೆ ವಿಶೇಷವಾಗಿ ಒಬ್ಬಂಟಿಗರಿದ್ದಾಗ, ಅಥವಾ ಮಕ್ಕಳಿದ್ದಾಗ ಈ ಕೋತಿಗಳು ವಸ್ತುಗಳನ್ನು ಕಸಿದು ಕೊಳ್ಳಲು ಬರುತ್ತಿರುತ್ತವೆ.

ಚಿತ್ರಕೃಪೆ: Manjeshpv

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಶಿವಗಂಗೆ ಬೆಟ್ಟದಲ್ಲಿರುವ ಪವಿತ್ರ ಸನ್ನಿಧಿಗಳು. ವೀರಭದ್ರ ಸ್ವಾಮಿ.

ಚಿತ್ರಕೃಪೆ: Manjeshpv

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಶಿವಗಂಗೆ ಬೆಟ್ಟದಲ್ಲಿರುವ ಪವಿತ್ರ ಸನ್ನಿಧಿಗಳು.

ಚಿತ್ರಕೃಪೆ: Manjeshpv

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಶಿವಗಂಗೆ ಬೆಟ್ಟದಲ್ಲಿರುವ ಪವಿತ್ರ ಸನ್ನಿಧಿಗಳು.

ಚಿತ್ರಕೃಪೆ: Manjeshpv

ವಿಶಿಷ್ಟ ಪ್ರವಾಸ:

ವಿಶಿಷ್ಟ ಪ್ರವಾಸ:

ಶಿವಗಂಗೆ ಬೆಟ್ಟದಲ್ಲಿರುವ ಪವಿತ್ರ ಸನ್ನಿಧಿಗಳು.

ಚಿತ್ರಕೃಪೆ: Manjeshpv

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X