Search
  • Follow NativePlanet
Share
» »ಹೆದರಬೇಡಿ... ಧೈರ್ಯದಿಂದ ಹೋಗಿ...

ಹೆದರಬೇಡಿ... ಧೈರ್ಯದಿಂದ ಹೋಗಿ...

ಶಿವಮೊಗ್ಗದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ತ್ಯಾವರೆಕೊಪ್ಪದ ಸಿಂಹ ಮತ್ತು ಹುಲಿ ಸಫಾರಿಯೂ ಒಂದು. ನಿಸರ್ಗ ಪ್ರಿಯರಿಗೆ ಹಾಗೂ ಮಕ್ಕಳಿಗೆ ಈ ತಾಣ ಹೆಚ್ಚು ಮೆಚ್ಚುಗೆಯಾಗುವಂತದ್ದು.

By Divya

ಶಿವಮೊಗ್ಗದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ತ್ಯಾವರೆಕೊಪ್ಪದ ಸಿಂಹ ಮತ್ತು ಹುಲಿ ಸಫಾರಿಯೂ ಒಂದು. ನಿಸರ್ಗ ಪ್ರಿಯರಿಗೆ ಹಾಗೂ ಮಕ್ಕಳಿಗೆ ಈ ತಾಣ ಹೆಚ್ಚು ಮೆಚ್ಚುಗೆಯಾಗುವಂತದ್ದು. ಎಲ್ಲೆಲ್ಲೂ ಹಸಿರು ವನಗಳು, ಆಗಾಗ ಕೇಳುವ ಪ್ರಾಣಿಗಳ ಗರ್ಜನೆ, ಹಕ್ಕಿಗಳ ಕಲರವ ಎಲ್ಲವೂ ಹೊಸತನದ ಅನುಭವ ನೀಡುತ್ತವೆ. ಬೇಸಿಗೆಯ ಬಿಡುವಿನ ರಜೆಯಲ್ಲಿ ಮಕ್ಕಳಿಗಾಗಿ ಕೈಗೊಳ್ಳಯವ ಪ್ರವಾಸಕ್ಕೆ ಇದು ಸೂಕ್ತ ತಾಣ.

ತ್ಯಾವರೆಕೊಪ್ಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದಲ್ಲಿರುವ ವನ್ಯ ಜೀವಿಧಾಮಗಳಲ್ಲಿ ತ್ಯಾವರೆಕೊಪ್ಪ ವನ್ಯ ಜೀವಿಧಾಮವೂ ಒಂದು. ಹುಲಿ ಮತ್ತು ಸಿಂಹಗಳ ಈ ವನ್ಯಧಾಮ 250 ಹೆಕ್ಟೇರ್ ಪ್ರದೇಶಗಳನ್ನು ಒಳಗೊಂಡಿದೆ. ಶಿವಮೊಗ್ಗ ನಗರ ಭಾಗದಿಂದ 10 ಕಿ.ಮೀ., ಶಿವಮೊಗ್ಗ-ಸಾಗರ ರಸ್ತೆ ಮಾರ್ಗದಲ್ಲಿ ಹೋದರೆ ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ 280 ಕಿ.ಮೀ. ವ್ಯಾಪ್ತಿಯಲ್ಲಿದ್ದು, ಐದು ತಾಸುಗಳ ಪ್ರಯಾಣ ಮಾಡಬೇಕು.

ವನ್ಯ ಧಾಮದ ಉದಯ

ವನ್ಯ ಧಾಮದ ಉದಯ

1988ರಲ್ಲಿ ಆರಂಭವಾದ ಈ ವನ್ಯ ಧಾಮ 620 ಎಕರೆ ಪ್ರದೇಶದಲ್ಲಿದೆ. ಮೊದಲು ಹುಲಿ ಸಿಂಹಗಳಿಗೆ ಮೀಸಲಾದ ಈ ಧಾಮ ನಿಧಾನವಾಗಿ ಕರಡಿ, ಮಂಗ, ಜಿಂಕೆ, ಚಿರತೆ ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳಿಗೂ ಆಶ್ರಯ ಧಾಮವಾಯಿತು.
PC: wikipedia.org

ಹುಲಿ ಮತ್ತು ಸಿಂಹ ಧಾಮ

ಹುಲಿ ಮತ್ತು ಸಿಂಹ ಧಾಮ

ಇಲ್ಲಿ ಹುಲಿಗಳಿಗಾಗಿ 35 ಹೆಕ್ಟೇರ್ ಹಾಗೂ ಸಿಂಹಗಳಿಗಾಗಿ 35 ಹೆಕ್ಟೇರ್ ಪ್ರದೇಶವನ್ನು ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ಇತ್ತೀಚೆಗೆ ಇವುಗಳ ಸಂಖ್ಯೆ ಕ್ಷೀಣಿಸುತ್ತಿವೆ.
PC: wikipedia.org

ಇತರ ಪ್ರಾಣಿಗಳು

ಇತರ ಪ್ರಾಣಿಗಳು

ಹುಲಿ ಮತ್ತು ಸಿಂಹಗಳ ವನ್ಯಧಾಮ ಎಂದು ಹೇಳಿದರೂ ಇಲ್ಲಿ ಬೇರೆ ಬೇರೆ ಪ್ರಾಣಿಗಳು ಇರುವುದನ್ನು ಕಾಣಬಹುದು. ಒಟ್ಟು 305 ಪ್ರಾಣಿ ಪಕ್ಷಿಗಳಿವೆ ಎಂದು ಹೇಳಲಾಗುತ್ತದೆ.
PC: wikimedia.org

ಇಲ್ಲಿರುವ ಪಕ್ಷಿಗಳು

ಇಲ್ಲಿರುವ ಪಕ್ಷಿಗಳು

ಇಲ್ಲಿ ಹನ್ನೊಂದು ಬಗೆಯ ವಿವಿಧ ಪಕ್ಷಿ ಸಂಕುಲಗಳಿವೆ. ಪ್ರತಿಯೊಂದು ಪಕ್ಷಿಗೂ ಪ್ರತ್ಯೇಕ ಪಂಜರಗಳನ್ನು ಮಾಡಲಾಗಿದೆ. ನವಿಲು, ಸಿಲ್ವರ್ ಫೀಸೆಂಟ್, ರೆಡ್ ಜಂಗಲ್ ಬೌಲ್ ಸೇರಿದಂತೆ ವಿವಿಧ ಪಕ್ಷಿಗಳನ್ನು ನೋಡಬಹುದು.
PC: wikipedia.org

ಹೀಗೂ ಮಾಡಬಹುದು

ಹೀಗೂ ಮಾಡಬಹುದು

ಇಲ್ಲಿ ಕೇವಲ ಪಂಜರಗಳಲ್ಲಿಟ್ಟಿರುವ ಪ್ರಾಣಿಗಳನ್ನಷ್ಟೇ ನೋಡಬೇಕೆಂದೇನೂ ಇಲ್ಲ. ಅರಣ್ಯ ಇಲಾಖೆ ವನ್ಯಧಾಮದೊಳಗೆ ಸಫಾರಿಗೆ ಹೋಗಲು ಅವಕಾಶ ಕಲ್ಪಿಸಿಕೊಟ್ಟಿದೆ. ಇಲ್ಲಿ ಸುಂದರವಾದ ಪ್ರಕೃತಿ ದೃಶ್ಯ ಹಾಗೂ ಪ್ರಾಣಿಗಳ ಚಿತ್ರವನ್ನು ಸೆರೆಹಿಡಿಯಬಹುದು.
PC: wikipedia.org

ಮಕ್ಕಳಿಗಾಗಿ

ಮಕ್ಕಳಿಗಾಗಿ

ಮಕ್ಕಳಿಗೆ ಇಷ್ಟವಾಗುವಂತಹ ಈ ತಾಣದಲ್ಲಿ ಮಕ್ಕಳಿಗಾಗಿಯೇ ವಿಶೇಷ ಉದ್ಯಾನವಿದೆ. ಉತ್ತಮವಾದ ನಿರ್ವಹಣೆ ಇರುವುದರಿಂದ ಹೆಚ್ಚು ಸ್ವಚ್ಛವಾಗಿ ಇಡಲಾಗಿದೆ.
PC: wikimedia.org

ಇತರ ಮಾಹಿತಿ

ಇತರ ಮಾಹಿತಿ

ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿಗೆ ಬರಬಹುದು. ಮಂಗಳವಾರ ವಾರದ ರಜೆ. ಉಳಿದ ದಿನಗಳಲ್ಲಿ ಬೆಳಗ್ಗೆ 10 ರಿಂದ 1 ಗಂಟೆಯವರೆಗೆ, ಮಧ್ಯಾಹ್ನ 2.15 ರಿಂದ ಸಂಜೆ 5ರ ವರೆಗೆ ತೆರೆದಿರುತ್ತದೆ. ಇಲ್ಲಿ ಪ್ರಯಾಣಿಕರು ಒಮ್ಮೆ ಪ್ರವೇಶ ಪಡೆದ ಮೇಲೆ 4 ರಿಂದ 5 ತಾಸುಗಳು ಮಾತ್ರ ಇರಬಹುದು.
PC: wikipedia.org

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X