Search
  • Follow NativePlanet
Share
» »ಬೆಂಗಳೂರಿನ ಸುತ್ತಮುತ್ತಲಿರುವ 100 ಕಿ.ಮೀ ಅಂತರದೊಳಗಿರುವ ಟ್ರಕ್ಕಿಂಗ್ ತಾಣಗಳು

ಬೆಂಗಳೂರಿನ ಸುತ್ತಮುತ್ತಲಿರುವ 100 ಕಿ.ಮೀ ಅಂತರದೊಳಗಿರುವ ಟ್ರಕ್ಕಿಂಗ್ ತಾಣಗಳು

ಕುತೂಹಲಕಾರಿ ಹಾಗೂ ಉತ್ಸಾಹಭರಿತ ಟ್ರಕ್ಕಿಂಗ್ ತಾಣಗಳಿಗೆ ಈ ಋತುವಿನಲ್ಲಿ ಭೇಟಿ ನೀಡಬಯಸುವಿರಾ? ಹೌದು , ನೀವು ಎಲ್ಲಾ ಟ್ರಕ್ಕಿಂಗ್ ನ ಎಲ್ಲಾ ತರಹದ ಸವಾಲುಗಳನ್ನು ಸ್ವೀಕರಿಸುವ ಮನೋಭಾವದವರಾಗಿದ್ದಲ್ಲಿ, ಈ ಲೇಖನವು ನಿಮಗಾಗಿ ಉಪಯುಕ್ತವಾದುದಾಗಿದೆ.

ಈ ಕೆಳಗಿನ ಬೆಂಗಳೂರಿನ ಸುತ್ತಮುತ್ತಲಿರುವ ಹಾಗೂ ಬೆಂಗಳೂರಿನಿಂದ ಸುಮಾರು 100 ಕಿ.ಮೀ ಅಂತರದಲ್ಲಿ ಕೆಲವು ತಾಣಗಳ ಪಟ್ಟಿಯಿದ್ದು, ಇವು ಟ್ರಕ್ಕಿಂಗ್ ಸಾಹಸಿಗರ ಸ್ವರ್ಗವೆನ್ನಬಹುದಾಗಿದೆ. ಸ್ಥಳಗಳ ವಿವರಣೆಗಾಗಿ ಈ ಲೇಖನವನ್ನು ಓದಲು ಸ್ಕ್ರಾಲ್ ಮಾಡಿ ನಿಧಾನವಾಗಿ ನಿಮ್ಮ ಪ್ರವಾಸದ ಹಂಬಲವನ್ನು ಈ ಸ್ಥಳಗಳು ಮತ್ತು ಇಲ್ಲಿಯ ರೋಚಕ ಮಾರ್ಗಗಳು ನಿಮ್ಮನ್ನು ಭೇಟಿ ನೀಡುವಂತೆ ಪ್ರೇರೇಪಿಸುತ್ತದೆ.

ಸಾವಣದುರ್ಗ

ಸಾವಣದುರ್ಗ

ಬೆಂಗಳೂರಿನಿಂದ ಅಂತರ - 48 ಕಿ.ಮೀ

ಸಮುದ್ರ ಮಟ್ಟದಿಂದ ಸುಮಾರು 4022 ಅಡಿ ಎತ್ತರದಲ್ಲಿರುವ ಸಾವಣದುರ್ಗ ಏಷ್ಯಾದ ಅತಿದೊಡ್ಡ ಏಕ ಶಿಲಾ ಬೆಟ್ಟಗಳಲ್ಲಿ ಒಂದಾಗಿದೆ. ಮತ್ತು ಇದು ಹೈಕಿಂಗ್ ಮತ್ತು ಟ್ರಕ್ಕಿಂಗ್ ಗೆ ಅತ್ಯಂತ ಜನಪ್ರಿಯವಾಗಿದೆ. ರೋಮಾಂಚಕ ಹಾದಿಗಳನ್ನು ಒದಗಿಸುವ ಎತ್ತರದ ಬೆಟ್ಟಗಳಿದ್ದರೆ ಟ್ರಕ್ಕಿಂಗ್ ಮಾಡುವ ಸಾಹಸಿಗರಿಗೆ ಇನ್ನೇನು ಬೇಕು? ಹಾಗಿದ್ದಲ್ಲಿ, ಟ್ರಕ್ಕಿಂಗ್ ಮಾಡಲು ಹಾಗು ಸಾಹಸದಲ್ಲಿ ಭಾಗಿಯಾಗಲು ನೀವು ಬಯಸುತ್ತಿದ್ದಲ್ಲಿ ಸಾವಣದುರ್ಗ ನಿಮಗೆ ಸೂಕ್ತವಾದ ತಾಣವಾಗಿದೆ. ಆದ್ದರಿಂದ ಈ ಋತುವಿನಲ್ಲಿ ಇಲ್ಲಿಯ ಇನ್ನೂ ನೋಡದೇ ಇರುವ ಮಾರ್ಗಗಳಲ್ಲಿ ಚಾರಣ ಮಾಡಲು ತಯಾರಾಗಿ

ಶಿವಗಂಗೆ

ಶಿವಗಂಗೆ

ಬೆಂಗಳೂರಿನಿಂದ ಅಂತರ - 50 ಕಿ.ಮೀ

ಶಿವಗಂಗೆಯು ವರ್ಷದಾದ್ಯಂತ ಅತ್ಯಂತ ಹೆಚ್ಚಾಗಿ ಭೇಟಿ ಕೊಡಲ್ಪಡುವ ಸ್ಥಳಗಳಲ್ಲಿ ಒಂದಾಗಿದೆ. 2640 ಅಡಿ ಎತ್ತರದ ಶಿಖರವನ್ನು ಹೊಂದಿರುವ ಈ ಅದ್ಭುತವಾದ ಸ್ಥಳವು ಶ್ರೀಮಂತವಾದ ನೈಸರ್ಗಿಕ ಪರಿಸರವನ್ನು ಹೊಂದಿದ್ದು ಪ್ರತೀ ವರ್ಷ ತಮ್ಮ ಪ್ರಯಾಣದ ರೋಚಕ ಅನುಭವವನ್ನು ಅನುಭವಿಸ ಬಯಸುವ ಸಾವಿರಾರು ಚಾರುಣಿಗರನ್ನು ಆಕರ್ಷಿಸುತ್ತದೆ. ವರ್ಷವಿಡೀ ಭೇಟಿ ನೀಡಬಹುದಾದ ಸ್ಥಳವಾದುದರಿಂದ ಇದು ಶಿಬಿರಾರ್ಥಿಗಳಿಗೂ ಭೇಟಿ ನೀಡುವ ಸ್ಥಳವೆನಿಸಿದೆ. ಆದುದರಿಂದ ದಟ್ಟವಾದ ಹಸಿರು ಹಾಸಿರುವ ಶಿವಗಂಗೆಯ ತಪ್ಪಲಿಗೆ ಭೇಟಿ ಕೊಟ್ಟರೆ ಹೇಗಿರಬಹುದು?

ಬಿಳಿಕಲ್ ರಂಗಸ್ವಾಮಿ ಬೆಟ್ಟ

ಬಿಳಿಕಲ್ ರಂಗಸ್ವಾಮಿ ಬೆಟ್ಟ

ಬೆಂಗಳೂರಿನಿಂದ ಅಂತರ - 75 ಕಿ.ಮೀ

ಬೆಂಗಳೂರಿನ ಸುತ್ತಮುತ್ತಲಿರುವ ಅತಿ ಕಡಿಮೆ ಪ್ರಚಾರ ಹಾಗೂ ಕಡಿಮೆ ಜನಸಂದಣಿಯಿರುವ ಸ್ಥಳಗಳಲ್ಲಿ ಬಿಳಿಕಲ್ ರಂಗಸ್ವಾಮಿ ಬೆಟ್ಟವೂ ಒಂದು. ಈ ಸ್ಥಳವು ಇಲ್ಲಿಯ ಶಿಲಾ ದೇವಾಲಯಕ್ಕೆ ಹೆಸರುವಾಸಿಯಾಗಿದ್ದು ಇಲ್ಲಿ ರಂಗನಾಥ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಕಡಿದಾದ ಇಳಿಜಾರು ಮತ್ತು 3780 ಅಡಿ ಎತ್ತರದಿಂದಾಗಿ, ಇದು ಚಾರಣ ಮತ್ತು ಪಾದಯಾತ್ರೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಹಾಗಾದರೆ, ಬಿಳಿಕಲ್ ರಂಗಸ್ವಾಮಿ ಬೆಟ್ಟದ ಹಚ್ಚ ಹಸಿರಿನ ಮೂಲಕ ಹುರುಪಿನಿಂದ ನಡೆಯುವ ಬಗ್ಗೆ ಹೇಗೆ?

ಭೀಮೇಶ್ವರಿ

ಭೀಮೇಶ್ವರಿ

ಬೆಂಗಳೂರಿನಿಂದ ಅಂತರ - 103 ಕಿ.ಮೀ

ಭೀಮೇಶ್ವರಿ ಎಲ್ಲಾ ರೀತಿಯ ಸಾಹಸ ಅನ್ವೇಷಕರು ಮತ್ತು ಪ್ರಕೃತಿ ಪ್ರಿಯರಿಗಾಗಿ ಸಂಪೂರ್ಣ ಪ್ಯಾಕೇಜ್ ಆಗಿದೆ. ಬೆರಗುಗೊಳಿಸುವ ಸರೋವರಗಳಿಂದ ಹಿಡಿದು ಸೊಂಪಾದ ಬಯಲು ಪ್ರದೇಶಗಳು, ದೈತ್ಯಾಕಾರದ ಬೆಟ್ಟಗಳು, ದಟ್ಟ ಕಾಡುಗಳು ಮತ್ತು ಭೋರ್ಗರೆಯುವ ಜಲಪಾತಗಳು ಸುಂದರವಾದ ವನ್ಯಜೀವಿಗಳವರೆಗೆ, ಭೀಮೇಶ್ವರಿಯು ನೈಸರ್ಗಿಕ ಸೌಂದರ್ಯಗಳ ಅತ್ಯುತ್ತಮ ನೆಲೆಯಾಗಿದೆ. ಇದರ ಶ್ರೀಮಂತ ಚಾರಣ ಮಾರ್ಗಗಳು ಚಾರಣಿಗರಿಗೆ ವಾರಾಂತ್ಯದಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳವಾಗಿದೆ. ಹಾಗಾದರೆ, ಭೀಮೇಶ್ವರಿಯ ಶಾಂತಿಯ ಮಧ್ಯೆ ಸಾಹಸ ಚಟುವಟಿಕೆಗಳಲ್ಲಿ ಏಕೆ ತೊಡಗಬಾರದು?

ಮಾಕಳಿದುರ್ಗ

ಮಾಕಳಿದುರ್ಗ

ಬೆಂಗಳೂರಿನಿಂದ ಅಂತರ -61 ಕಿ.ಮೀ

ಈ ಸ್ಥಳವು ಚಾರುಣಿಗರಿಗೆ ಗುಪ್ತ ಸ್ಥಳವಾಗಿದ್ದು, ಮಾಕಳಿದುರ್ಗವು ಖಂಡಿತವಾಗಿಯೂ ಅನ್ವೇಷಣೆ ಮಾಡಬಹುದಾದಂತಹ ಸ್ಥಳವಾಗಿದೆ. ನಯನ ಮನೋಹರ ಬೆಟ್ಟಗಳು, ಬಯಲು ಪ್ರದೇಶಗಳು, ಸರೋವರಗಳು ಮತ್ತು ಕೊಳಗಳು ಇವೆಲ್ಲವುಗಳಿಂದ ಸುತ್ತುವರೆದಿರುವ ಈ ಅದ್ಬುತ ಸೌಂದರ್ಯತೆ ಇರುವ ಸ್ಥಳವು ಇಲ್ಲಿಗೆ ಭೇಟಿ ನೀಡುವವರಿಗೆ ಎಂದೆಂದಿಗೂ ಮರೆಯಲಾಗದ ಅನುಭವವನ್ನು ನೀಡುವಲ್ಲಿ ಸಂಶಯವೇ ಇಲ್ಲ. ಪ್ರಶಾಂತ ಸೆಳೆತವನ್ನು ಹೊಂದಿರುವ ಕಾರಣದಿಂದಾಗಿ, ಇದು ಆಫ್‌ಬೀಟ್ ಪ್ರಯಾಣಿಕರು ಮತ್ತು ಚಾರಣಿಗರಲ್ಲಿ ಅತ್ಯಂತ ಜನಪ್ರಿಯವಾಗಿದೆ. ಚಾರಣದ ಹೊರತಾಗಿ, ನೀವು ಈ ಅದ್ಭುತ ಸ್ಥಳದಲ್ಲಿ ಕ್ಯಾಂಪ್ ಮಾಡಬಹುದು ಮತ್ತು ನಿಮ್ಮ ಅತ್ಯುತ್ತಮ ರಜಾದಿನಗಳನ್ನು ಅನುಭವಿಸಬಹುದು.

ನಂದಿ ಬೆಟ್ಟ

ನಂದಿ ಬೆಟ್ಟ

ಬೆಂಗಳೂರಿನಿಂದ ಅಂತರ - 60 ಕಿ.ಮೀ

ಎಲ್ಲಾ ತರಹದ ಸಾಹಸಪ್ರಿಯರು ಇಷ್ಟ ಪಡುವಂತಹ ಜನಪ್ರಿಯವಾದ ಸ್ಥಳವೆಂದರೆ ಅದು ನಂದಿ ಬೆಟ್ಟ. ಹಿಂದಿನಿಂದಲೂ ಈ ಅದ್ಭುತವಾದ ಸ್ಥಳವು ಚಾರುಣಿಗರು, ಶಿಬಿರಾರ್ಥಿಗಳು, ಪಾದಾಚಾರಿಗಳು, ಛಾಯಗ್ರಾಹಕರು ಮತ್ತು ಪ್ರಕೃತಿ ಪ್ರೇಮಿಗಳಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ. ಹಾಗಾದರೆ, ಸ್ವರ್ಗದ ಅನುಭವವನ್ನು ಕೊಡುವ ಶಾಂತಿಯುತವಾದ ಆಕಾಶವನ್ನು ಸುತ್ತಲೂ ಹೊಂದಿರುವ ನಂದಿ ಬೆಟ್ಟಗಳ ತುದಿಯಲ್ಲಿರುವ ಅವಕಾಶವನ್ನು ಏಕೆ ಕಳೆದುಕೊಳ್ಳಬೇಕು?

ಸ್ಕಂದಗಿರಿ

ಸ್ಕಂದಗಿರಿ

ಬೆಂಗಳೂರಿನಿಂದ ಅಂತರ - 62 ಕಿ.ಮೀ

ಸ್ಕಂದಗಿರಿಯ ಕಡಿದಾದ ಇಳಿಜಾರು ಚಾರಣಿಗರು ಮತ್ತು ಬಂಡೆ ಹತ್ತುವವರಲ್ಲಿ ಅದರ ಜನಪ್ರಿಯತೆಯ ಹಿಂದಿನ ಪ್ರಮುಖ ಕಾರಣವಾಗಿದೆ. ಬೆಟ್ಟದ ಮೇಲಿರುವ ನಿಮ್ಮ ಗಮ್ಯಸ್ಥಾನಕ್ಕೆ ಹೋಗುವಾಗ ನಿಮ್ಮ ಶಕ್ತಿ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸುವುದರ ಹೊರತಾಗಿ, ನೀವು ಸ್ಕಂದಗಿರಿಯ ನೈಸರ್ಗಿಕ ಸುತ್ತಮುತ್ತಲಿನ ಪ್ರದೇಶಗಳನ್ನು ಸಹ ಆನಂದಿಸಬಹುದು, ಇದು ಖಂಡಿತವಾಗಿಯೂ ಈ ಸ್ಥಳದ ಅದ್ಭುತ ಸೌಂದರ್ಯಕ್ಕೆ ತನ್ನ ಕೊಡುಗೆ ನೀಡುತ್ತದೆ. ಹಾಗಾದರೆ, ನೈಸರ್ಗಿಕ ಅದ್ಭುತಗಳ ಮಾರ್ಗಗಳ ಮೂಲಕ ಇಲ್ಲಿ ಚಾರಣ ಮಾಡಿದರೆ ಹೇಗೆ?

ದೇವರಾಯನ ದುರ್ಗ

ದೇವರಾಯನ ದುರ್ಗ

ಬೆಂಗಳೂರಿನಿಂದ ಅಂತರ - 72 ಕಿ.ಮೀ

ಕಲ್ಲಿನ ಬೆಟ್ಟಗಳ ಮೇಲೆ ನೆಲೆಸಿರುವ ಹಿಂದೂ ಭಕ್ತರಲ್ಲಿ ಜನಪ್ರಿಯತೆಯನ್ನು ಗಳಿಸಿರುವ ದೇವಾಲಯದಿಂದಾಗಿ ದೇವರಾಯನದುರ್ಗಕ್ಕೆ ಪ್ರವಾಸ ಹೂಡುವುದು ಪ್ರಾರಂಭವಾಯಿತು. ಆದರೆ ಕೆಲವೇ ಸಮಯದಲ್ಲಿ ಈ ಮನಮೋಹಕ ಸ್ಥಳವು ಪ್ರಕೃತಿ ಪ್ರಿಯರು ಮತ್ತು ಸಾಹಸ ಅನ್ವೇಷಕರಿಗೂ ಭೇಟಿ ಕೊಡುವ ಸ್ಥಳವಾಗಿ ಮಾರ್ಪಟ್ಟಿತು. ಆದ್ದರಿಂದ ಇಂದು, ಇದು ಚಾರಣ ಮತ್ತು ಕ್ಯಾಂಪಿಂಗ್ ವೈಶಿಷ್ಟ್ಯಗಳಿಂದಾಗಿ ಪ್ರಯಾಣಿಕರಲ್ಲಿ ಹೆಸರುವಾಸಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X