Search
  • Follow NativePlanet
Share
» »ಜಮ್ಮು ಕಾಶ್ಮೀರದ ಸುಂದರ ತಾಣ ಚಾಟ್ಪಾಲ್‌

ಜಮ್ಮು ಕಾಶ್ಮೀರದ ಸುಂದರ ತಾಣ ಚಾಟ್ಪಾಲ್‌

ಜಮ್ಮು ಮತ್ತು ಕಾಶ್ಮೀರದ ಉತ್ತರ ಭಾರತದ ಬಹುತೇಕ ರಾಜ್ಯವು ನೈಸರ್ಗಿಕ ಸೌಂದರ್ಯದ ಭವ್ಯವಾದ ಭೂಮಿಯಾಗಿದೆ. ಮಂಜಿನ ಪರ್ವತಗಳಿಂದ ಕರಗುವ ಹಿಮನದಿಗಳವರೆಗೆ ಎಲ್ಲವೂ ಜಮ್ಮು ಮತ್ತು ಕಾಶ್ಮೀರ ತುಂಬಿದೆ. ಇದರ ಅದ್ಭುತ ದೃಶ್ಯವು ಪ್ರತಿವರ್ಷ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಾಟ್ಪಾಲ್‌

ಚಾಟ್ಪಾಲ್‌

PC:taNvir kohli

ಹಸಿರಿನಿಂದ , ಹಿಮದಿಂದ ತುಂಬಿದ ಭೂದೃಶ್ಯಗಳು ವಿವಿಧ ಚಟುವಟಿಕೆಗಳಿಗೆ ಉತ್ತಮ ಸ್ಥಳವನ್ನು ನೀಡುತ್ತವೆ. ಲಡಾಖ್ ನಲ್ಲಿ ಮಾಡಬಹುದಾದ ಸಾಹಸಗಳ ಬಗ್ಗೆ ನಮಗೆ ತಿಳಿದಿದೆ. ಆದರೆ ಚಾಟ್ಪಾಲ್‌ನ ಕಡಿಮೆ ಅನ್ವೇಷಿತ ಪಟ್ಟಣದ ಬಗ್ಗೆ ನಮಗೆ ಎಷ್ಟು ತಿಳಿದಿದೆ?

ಗಂಗಾವತಿಯಲ್ಲಿರುವ ಆನೆಗುಂಡಿಯೇ ರಾಮಾಯಣದ ಕಿಷ್ಕಿಂದ ಅನ್ನೋದು ಗೊತ್ತಾ?ಗಂಗಾವತಿಯಲ್ಲಿರುವ ಆನೆಗುಂಡಿಯೇ ರಾಮಾಯಣದ ಕಿಷ್ಕಿಂದ ಅನ್ನೋದು ಗೊತ್ತಾ?

ಶ್ರೀನಗರದಿಂದ 90 ಕಿ.ಮೀ ದೂರದಲ್ಲಿದೆ

ಶ್ರೀನಗರದಿಂದ 90 ಕಿ.ಮೀ ದೂರದಲ್ಲಿದೆ

PC:Mike Prince

ದಕ್ಷಿಣ ಕಾಶ್ಮೀರದ ರಾಜಧಾನಿಯಾದ ಶ್ರೀನಗರದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಚಾಟ್ಪಾಲ್ ನಗರವು ಸುಂದರವಾದ ಒಂದು ಪಟ್ಟಣವಾಗಿದ್ದು, ಅದನ್ನು ವಿವರಿಸಲು ಪದಗಳೇ ಸಾಲದು. ಹಳದಿ ಮತ್ತು ಬಿಳಿ ಕಾಡುಹೂವುಗಳು, ಪೈನ್ ಮರಗಳ ಪರಿಮಳ, ಸ್ಪಷ್ಟವಾದ ನೀಲಿ ಆಕಾಶ ಮತ್ತು ಭವ್ಯವಾದ ಪರ್ವತಗಳ ಒಂದು ಅದ್ಭುತವಾದ ವಿಹಂಗಮ ನೋಟವನ್ನು ಹೊಂದಿದೆ.

ಗುಲ್ಮಾರ್ಗ್

ಗುಲ್ಮಾರ್ಗ್

PC: Isriya Paireepairit

ಗುಲ್ಮಾರ್ಗ್ ಮತ್ತು ಶ್ರೀನಗರ ಮುಂತಾದ ಜನಪ್ರಿಯ ಸ್ಥಳಗಳು ಎಲ್ಲಾ ಪ್ರವಾಸಿ ಆಕರ್ಷಣೆಯನ್ನು ಹೊಂದಿದೆ. ಹಾಗಾಗಿ ಈ ಕಡಿಮೆ ಅನ್ವೇಷಿತ ತಾಣವಾದ ಚಾಟ್ಪಾಲ್ ತನ್ನ ನೈಸರ್ಗಿಕ ಸೌಂದರ್ಯವನ್ನು ಉಳಿಸಿಕೊಂಡಿದೆ. ಇದು ಸಂಪೂರ್ಣವಾಗಿ ಪ್ರತ್ಯೇಕವಾದ ಸ್ಥಳವಾಗಿದೆ, ಅದು ಇತ್ತೀಚೆಗೆ ಸರ್ಕಾರದಿಂದ ಒಂದು ಸಂಭಾವ್ಯ ಪ್ರವಾಸಿ ತಾಣವಾಗಿ ಪತ್ತೆಯಾಗಿದೆ.

ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?

ಪ್ರವಾಸಿ ತಾಣಗಳಿಲ್ಲ

ಪ್ರವಾಸಿ ತಾಣಗಳಿಲ್ಲ

PC: Radhika Mamidi

ಆದ್ದರಿಂದ ಕಣಿವೆಯ ಮೂಲ ಸೌಂದರ್ಯದಿಂದ ಹೊರತುಪಡಿಸಿ, ಚಾಟ್ಪಾಲ್‌ನಲ್ಲಿ ಭೇಟಿ ನೀಡಲು ಹಲವಾರು ಪ್ರವಾಸಿ ಸ್ಥಳಗಳು ಇರುವುದಿಲ್ಲ. ಆದರೆ ನಿಮಗೆ ಬೇಕಾಗಿರುವುದು ಶೂನ್ಯ ಹಸ್ತಕ್ಷೇಪದೊಂದಿಗೆ ಪ್ರಕೃತಿಯ ಅನುಭವಪಡೆಯಬೇಕೆಂದಿದ್ದರೆ ನಿಮಗೆ ಸೂಕ್ತವಾದ ತಾಣ ಇದಾಗಿದೆ.

ಚಾಟ್ಪಾಲ್‌ಗೆ ಭೇಟಿ ನೀಡಲು ಸೂಕ್ತ ಸಮಯ

ಚಾಟ್ಪಾಲ್‌ಗೆ ಭೇಟಿ ನೀಡಲು ಸೂಕ್ತ ಸಮಯ

PC: Radhika Mamidi

ಏಪ್ರಿಲ್ ನಿಂದ ಜೂನ್ ತಿಂಗಳಿನ ಬೇಸಿಗೆ ಕಾಲ ಚಾಟ್ಪಾಲ್‌ಗರ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಏಕೆಂದರೆ ಇದು ಆಹ್ಲಾದಕರ ವಾತಾವರಣವನ್ನು ಹೊಂದಿರುತ್ತದೆ. ಇಲ್ಲಿ ತಾಪಮಾನವು 11 ರಿಂದ 25 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಚಳಿಗಾಲದಲ್ಲಿ ಬಹಳ ಚಳಿ ಇರುತ್ತದೆ. ಆದರೆ ನೀವು ಹಿಮಪಾತವನ್ನು ನೋಡಬೇಕೆಂದಿದ್ದರೆ ಚಳಿಗಾಲದಲ್ಲಿ ಭೇಟಿ ನೀಡುವುದು ಸೂಕ್ತವಾಗಿದೆ.

ಇಲ್ಲಿಗೆ ಹೋದ್ರೆ ಈ ಮೂರು ನಕ್ಷತ್ರದವರು ಕೋಟ್ಯಾಧೀಶರಾಗ್ತಾರಂತೆಇಲ್ಲಿಗೆ ಹೋದ್ರೆ ಈ ಮೂರು ನಕ್ಷತ್ರದವರು ಕೋಟ್ಯಾಧೀಶರಾಗ್ತಾರಂತೆ

ಕಾಶ್ಮೀರಿ ಚಹಾ

ಕಾಶ್ಮೀರಿ ಚಹಾ

ಈ ಸುಂದರ ತಾಣದಲ್ಲಿ ನಿಮ್ಮ ಅನುಭವವನ್ನು ಹೆಚ್ಚಿಸಲು ಸ್ಥಳೀಯ ಅಂಗಡಿಯಲ್ಲಿ ಸ್ಥಳೀಯ ಕಾಶ್ಮೀರಿ ಚಹಾ ಕುಡಿಯಿರಿ. ಸ್ಥಳೀಯರನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡಿ. ಅವರಲ್ಲಿ ಬೇರೂರಿರುವ ಜೀವನಶೈಲಿ, ಸಂಪ್ರದಾಯಗಳನ್ನು ಅರಿಯಿರಿ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ವಿಮಾನದ ಮೂಲಕ : ಶ್ರೀನಗರ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಚಂಡೀಗಢ, ಜಮ್ಮು, ಮುಂಬೈ, ನವದೆಹಲಿ ಮೊದಲಾದ ಭಾರತದ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ 90 ಕಿ.ಮೀ ಪ್ರಯಾಣ ಮಾಡಲು ಟ್ಯಾಕ್ಸಿಗಳನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು. .
ರೈಲು ಮಾರ್ಗ: ಚಾಟ್ಪಾಲ್‌ನಿಂದ 222 ಕಿ.ಮೀ ದೂರದಲ್ಲಿರುವ ಜಮ್ಮು ತಾವಿ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ. ಇಂದೋರ್, ಅಹಮದಾಬಾದ್, ವಾರಣಾಸಿ, ಕೊಲ್ಕತ್ತಾ ಮುಂತಾದ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ರಸ್ತೆಯ ಮೂಲಕ: ಮೊದಲನೆಯದು, ಅನಂತನಾಗ್-ಚಿತರ್ಗುಲ್ ರೋಡ್ಅನ್ನು ಅಘಾಬಲ್ ವರೆಗೆ ತೆಗೆದುಕೊಳ್ಳಿ. ಅಘಾಬಲ್‌ನಿಂದ ಸ್ಥಳೀಯ ಜೀಪ್ ಮೂಲಕ ಚೈಟರ್ಗುಲ್ ತಲುಪ ಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X