Search
  • Follow NativePlanet
Share
» »ಅದ್ಭುತ ದಂತಕಥೆಯ ರಾಜಗೀರ್ ಬೆಟ್ಟಗಳು

ಅದ್ಭುತ ದಂತಕಥೆಯ ರಾಜಗೀರ್ ಬೆಟ್ಟಗಳು

By Vijay

ನಮ್ಮಲ್ಲಿ ಧರ್ಮಕ್ಕೆ ಸಂಬಂಧಿಸಿದಂತೆ ಹಲವಾರು ರೋಚಕ ಹಿನ್ನಿಲೆಯುಳ್ಳ ಸಾಕಷ್ಟು ಸ್ಥಳಗಳನ್ನು ಎಲ್ಲೆಡೆ ಕಾಣಬಹುದು. ಇಂತಹ ಸ್ಥಳಗಳು ವೈವಿಧ್ಯಮಯ ದಂತ ಕಥೆಗಳನ್ನು ತಮ್ಮ ಜೊತೆ ತಳುಕಿ ಹಾಕಿಕೊಂಡಿರುವುದನ್ನು ನಾವು ಇಂದು ಲಭ್ಯವಿರುವ ಹಲವಾರು ಪುರಾಣ, ಪುಣ್ಯ ಕಥೆಗಳ ಪುಸ್ತಕಗಳು ಹಾಗೂ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿರುವುದನ್ನು ಗಮನಿಸಬಹುದು.

ಬೇಸಿಗೆ ವಿಶೇಷ : ಥಾಮಸ್ ಕುಕ್ ನಿಂದ ರಜೆಗೆಂದು ಮಾಡುವ ಬುಕ್ಕಿಂಗ್ ಮೇಲೆ ರೂ. 3000 ಕಡಿತ

ಹೀಗೆ ಈ ರೀತಿಯ ಸ್ಥಳಗಳು ತಮ್ಮಲ್ಲಿ ನಡೆದ ಘಟನಾವಳಿಗಳಿಂದ ಅಥವಾ ವಿವಿಧ ಪ್ರಸಂಗಗಳಿಗೆ ಆತಿಥ್ಯವಹಿಸಿರುವುದರಿಂದ ಇಂದು ಧಾರ್ಮಿಕ ಪ್ರವಾಸಿಗರಲ್ಲಿ ಅದರಲ್ಲೂ ವಿಶೇಷವಾಗಿ ಭಕ್ತರಲ್ಲಿ ವಿಶಿಷ್ಟವಾದ ಸ್ಥಾನಗಳಿಸಿರುತ್ತವೆ. ಈ ಸ್ಥಳಗಳಿಗೆ ಭೇಟಿ ನೀಡಿ ಭಗವಂತನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದೆ ಸಾಕಷ್ಟು ಜನ ಬಯಸುತ್ತಿರುತ್ತಾರೆ.

ವಿಶೇಷ ಲೇಖನ : ಪ್ರಳಯ ಸೂಚಕ ಹರಿಶ್ಚಂದ್ರಗಡ್

ಇನ್ನುಳಿದಂತೆ ಸ್ಥಳಗಳ ಕುರಿತು ಅದಕ್ಕಿರುವ ಹಿನ್ನಿಲೆ, ಕಥೆ ಮುಂತಾದ ಆಯಾಮಗಳನ್ನು ತಿಳಿದುಕೊಳ್ಳುವ ಆಸಕ್ತಿಕರವ ಪ್ರವಾಸಿಗನಿಗೆ ಇಂತಹ ಸ್ಥಳಗಳು ಎಲ್ಲಿಲ್ಲದ ಸಂತಸ ಉಂಟು ಮಾಡುತ್ತವೆ ಹಾಗೂ ಕುತೂಹಲ ಕೆರಳಿಸುತ್ತ ಭೇಟಿ ನೀಡಲು ಪ್ರೇರೆಪಿಸುತ್ತವೆ. ಇಂದಿನ ಈ ಲೇಖನದಲ್ಲಿ ಅಂತಹ ಒಂದು ಕೌತುಕಮಯ ಸ್ಥಳದ ಕುರಿತು ತಿಳಿಯಿರಿ. ಅದೇ ರಾಜಗೀರ್ ಬೆಟ್ಟಗಳು.

ವಿಶೇಷ ಲೇಖನ : 3 ಲಕ್ಷ ವರ್ಷ ಪುರಾತನ ಭೀಮ್ ಬೆಟ್ಕಾ ಗುಹೆಗಳು

ಹಿಂದೂ, ಜೈನ ಹಾಗೂ ಬೌದ್ಧ ಧರ್ಮದವರ ಪಾಲಿಗೆ ಪವಿತ್ರವಾಗಿರುವ ಈ ಬೆಟ್ಟ ತಾಣ ಈ ಭಾಗದಲ್ಲಿ ಒಂದು ಜನಪ್ರೀಯ ಧರ್ಮ ಕ್ಷೇತ್ರ ಅಥವಾ ತೀರ್ಥ ಕ್ಷೇತ್ರವೂ ಸಹ ಆಗಿದೆ. ಧರ್ಮ ಭೇದವಿಲ್ಲದೆ ಸಹಸ್ರಾರು ಜನ ಭಕ್ತಾದಿಗಳು, ಪ್ರವಾಸಿಗರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಮತ್ತೊಂದು ವಿಶೇಷವೆಂದರೆ 1986 ರಿಂದ ಬಿಹಾರ ಸರ್ಕಾರವು ರಾಜಗೀರ್ ಮಹೋತ್ಸವವನ್ನು ಆಚರಿಸುತ್ತ ಬಂದಿದೆ. ಮೂಲತಃ ಇದು ಮೂರು ದಿನಗಳ ನೃತ್ಯೋತ್ಸವವಾಗಿದ್ದು, ಹಿಂದಿನ ಉತ್ಸವವು 17 ದಿನಗಳ ಕಾಲ ಅಂದರೆ 28 ಡಿಸೆಂಬರ್ 2014 ರಿಂದ 13 ಜನವರಿ 2015 ರ ವರೆಗೆ ಅದ್ದೂರಿಯಾಗಿ ಜರುಗಿದೆ.

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ರಜಹಾರಾ ಅಥವಾ ರಾಜಗೀರ್ ಪಹಾಡ್ ಎಂತಲೂ ಸಹ ಕರೆಯಲ್ಪಡುವ ಈ ಬೆಟ್ಟಗಳ ತಾಣವು ಬಿಹಾರ್ ರಾಜ್ಯದ ರಾಜಗೀರ್ ನಗರದಲ್ಲಿ ನೆಲೆಸಿದೆ. ಹಿಂದೂ, ಬೌದ್ಧ ಹಾಗೂ ಜನ ಧರ್ಮಿಯರಿಗೆ ಇದು ಪವಿತ್ರವಾದ ತೀರ್ಥ ಕ್ಷೇತ್ರವಾಗಿದೆ.

ಚಿತ್ರಕೃಪೆ: Aryan paswan

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ಮೂಲತಃ ಇಲ್ಲಿ ಎರಡು ಬೆಟ್ಟಗಳು ಒಂದಕ್ಕೊಂದು ಸಮಾನಾಂತರವಾಗಿ, ಉದ್ದವಾಗಿ ಚಾಚಿರುವುದನ್ನು ಕಾಣಬಹುದು. ಏನೀಲ್ಲವೆಂದರೂ ಈ ಬೆಟ್ಟಗಳ ಉದ್ದವೂ ಸುಮಾರು 65 ಕಿ.ಮೀ ಗಳಷ್ಟಿದೆ. ಬಹುತೇಕವಾಗಿ ಬೆಟ್ಟವು ಸುಮಾರು 300 ಮೀ ಗಳಷ್ಟು ಎತ್ತರ ಹೊಂದಿದ್ದು ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಇದರ ಎತ್ತರ 388 ಮೀ ಗಳಷ್ಟಿದೆ.

ಚಿತ್ರಕೃಪೆ: Photo Dharma

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ಈ ಎರಡೂ ಬೆಟ್ಟಗಳ ಮಧ್ಯ ಭಾಗದಲ್ಲಿ ಸಾಕಷ್ಟು ಧಾರ್ಮಿಕ, ಐತಿಹಾಸಿಕ ಹಾಗೂ ಪುರಾತತ್ವದ ಮಹತ್ವವುಳ್ಳ ಸಾಕಷ್ಟು ಸ್ಥಳಗಳು ನೆಲೆಸಿರುವುದನ್ನು ಗಮನಿಸಬಹುದು. ಈ ಸ್ಥಳಗಳು ರಾಮಾಯಣ, ಮಾಹಾಭಾರತದ ಕಾಲದಿಂದ ಹಿಡಿದು ಗುಪ್ತರ ಕಾಲದವರೆಗೆ ಸಾಕಷ್ಟು ಹಿನ್ನಿಲೆಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Photo Dharma

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ಬೌದ್ಧ ಧರ್ಮದ ಸಂಸ್ಥಾಪಕನಾದ ಬುದ್ಧ ಹಾಗೂ ಜೈನ ಧರ್ಮದ ಸಂಸ್ಥಾಪಕ ಮಹಾವೀರ, ಇವರಿಬ್ಬರ ನಂಟು ಈ ಸ್ಥಳದೊಂದಿಗೆ ಬೆಸೆದಿದ್ದರಿಂದ ಈ ಸ್ಥಳವು ಬೌದ್ಧ ಹಾಗೂ ಜೈನರಿಗೂ ಸಹ ಹಿಂದೂಗಳಷ್ಟೆ ಪವಿತ್ರವಾಗಿದೆ.

ಚಿತ್ರಕೃಪೆ: Prince Roy

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ಐತಿಹಾಸಿಕವಾಗಿ ಹೇಳಬೇಕೆಂದರೆ, ಹಿಂದೆ ಮಗಧ ಸಾಮ್ರಾಜ್ಯದ ದೊರೆ ಹಾಗೂ ಬಿಂಬಿಸಾರನ ಪುತ್ರನಾಗಿದ್ದ ಅಜಾತಶತ್ರು, ಈ ಬೆಟ್ಟಗಳ ಮಧ್ಯದ ಪ್ರದೇಶವನ್ನು ಮಗಧ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ಏಕೆಂದರೆ ಇದು ತನ್ನ ಎರಡೂ ಬದಿಗಳಲ್ಲಿ ಬೆಟ್ಟವನ್ನು ಹೊಂದಿದ್ದರಿಂದ ಭದ್ರತೆ ಒದಗಿಸುತ್ತಿತ್ತು.

ಚಿತ್ರಕೃಪೆ: Photo Dharma

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ಬೆಟ್ಟದ ತುದಿಯಲ್ಲಿ ಶಾಂತಿ ಸ್ತೂಪವಿದ್ದು, ಇಂದು ಪ್ರವಾಸಿಗರನ್ನು ಆ ಸ್ತೂಪಕ್ಕೆ ಕರೆದೊಯ್ಯಲು ಕೇಬಲ್ ಕಾರುಗಳನ್ನು ಬಳಸಲಾಗುತ್ತದೆ. ಈ ಸ್ಥಳದಲ್ಲಿ ಗೌತಮ ಬುದ್ಧನು ಕಮಲ ಸೂತ್ರವನ್ನು ಭೋದಿಸಿದನೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Oliver gedin

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ನಂತರ ಇಲ್ಲಿಂದ ಇಳಿಯುವಾಗ ಗ್ರಿದ್ಧ್ರ ಕೂಟ ಎಂಬ ಬೆಟ್ಟವನ್ನು ಪ್ರವಾಸಿಗರು ಕಾಣಬಹುದು. ಇದು ಬುದ್ಧನು ಶಾಂತಿ ಸ್ತೂಪದಲ್ಲಿ ದಿನದ ಪ್ರವಚನ/ಉಪದೇಶ ನೀಡಿದ ನಂತರ ವಿಶ್ರಮಿಸುತ್ತಿದ್ದ ಸ್ಥಳವಾಗಿತ್ತು.

ಚಿತ್ರಕೃಪೆ: Tonii

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ಗ್ರಿದ್ಧ್ರ ಕೂಟವನ್ನು ಗ್ರಿದ್ಧರಾಜ ಪಹಾಡ್ ಅಥವಾ ಆಂಗ್ಲದಲ್ಲಿ "ವಲ್ಚರ'ಸ್ ಪೀಕ್" (ಹದ್ದುಗಳ ಶೃಂಗ) ಎಂದೂ ಸಹ ಕರೆಯುತ್ತಾರೆ. ಸ್ಕಂದ ಪುರಾಣದಲ್ಲಿ ಇದನ್ನು ಗೃದ್ಧಾಂಚಲ ಪರ್ವತ ಎಂದು ಕರೆಯಲಾಗಿದ್ದು ಹಿಂದೂ ಧರ್ಮದಲ್ಲಿ ಪಾವಿತ್ರ್ಯತೆಯನ್ನು ಪಡೆದಿದೆ.

ಚಿತ್ರಕೃಪೆ: Photo Dharma

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ರಾಮಾಯಣದಲ್ಲಿ ಉಲ್ಲೇಖಿಸಲ್ಪಟ್ಟ ಜಟಾಯುವಿನ ಸಹೋದರನಾದ ಸಂಪಾತಿಯ ಜನ್ಮ ಸ್ಥಳ ಇದಾಗಿದೆ ಎಂದು ನಂಬಲಾಗಿದೆ. ಅಚ್ಚರಿ ಎಂದರೆ ಇಂದಿಗೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹದ್ದುಗಳು ವಾಸಿಸುವುದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Fountain Posters

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ಅಷ್ಟೆ ಅಲ್ಲ, ಕವಿರತ್ನ ಕಾಳಿದಾಸನು ತನ್ನ ಗೃದ್ಧರಾಜ ಮಹಾತ್ಮ್ಯ ಕೃತಿಯಲ್ಲಿ ಇದರ ಕುರಿತು ಉಲ್ಲೇಖಿಸಿದ್ದು, ಇಲ್ಲಿಂದ ರೂಪಗೊಳ್ಳುವ ಮಾನಸಿ ಗಂಗಾ ಎಂಬ ನದಿಯಲ್ಲಿ ಸ್ನಾನ ಮಾಡಿದರೆ ಮನುಷ್ಯನ ಎಲ್ಲ ಪಾಪ ಕರ್ಮಗಳು ತೊಲಗುವುದೆಂದು ಹೇಳಿದ್ದಾನೆ.

ಚಿತ್ರಕೃಪೆ: Photo Dharma

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ಅಲ್ಲದೆ, ಬೌದ್ಧರ ಅನೇಕ ಸೂತ್ರಗಳಲ್ಲಿ ಇದರ ಕುರಿತು ಉಲ್ಲೇಖಿಸಲಾಗಿದೆ. ಬುದ್ಧ ಹಾಗೂ ಅವನ ಶಿಷ್ಯರು ಯಾವಾಗಲೂ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು ಎಂದು ಹೇಳಲಾಗಿದೆ. ಇಲ್ಲಿ ಇತರೆ ಕೆಲವು ಗುಹೆಗಳನ್ನೂ ಸಹ ಕಾಣಬಹುದು.

ಚಿತ್ರಕೃಪೆ: Photo Dharma

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ರಾಜಗೀರ್ ತಜ್ಞರ ಪ್ರಕಾರ 3000 ವರ್ಷಗಳಷ್ಟು ಪುರಾತನವಾದುದೆಂದು ಅಂದಾಜಿಸಲಾಗಿದೆ ಹಾಗೂ ಇಂದು ರಾಜಗೀರ್ ಭಾರತದ ಚಳಿಗಾಲದಲ್ಲಿ ಭೇಟಿ ನೀಡಬಹುದಾದ ಹಾಗೂ ಅರೋಗ್ಯದ ದೃಷ್ಟಿಯಿಂದ ಭೇಟಿ ಮಾಡಬಹುದಾದ ಪ್ರಮುಖ ಸ್ಥಳಗಳ ಪೈಕಿ ಒಂದಾಗಿದೆ. ಏಕೆಂದರೆ ಇಲ್ಲಿ ಹಿತಕರವಾದ ವಾತಾವರಣವಿದೆ ಹಾಗೂ ನೈಸರ್ಗಿಕ ಬಿಸಿ ನೀರಿನ ಬುಗ್ಗೆಗಳೂ ಸಹ ಇವೆ. ಇವು ಆರೋಗ್ಯ ವೃದ್ಧಿಸುವ ಔಷಧೀಯ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: carol mitchell

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ರಾಜಗೀರ್ ಬಿಹಾರದ ಪಾಟ್ನಾ (110 ಕಿ.ಮೀ), ನಾಳಂದಾ (15 ಕಿ.ಮೀ) ಹಾಗೂ ಗಯಾ (78 ಕಿ.ಮೀ) ಪಟ್ಟಣಗಳಿಂದ ಉತ್ತಮವಾದ ರಸ್ತೆ ಸಂಪರ್ಕ ಹೊಂದಿದೆ. ಇನ್ನೂ ಪಾಟ್ನಾ ಒಂದು ಪ್ರಮುಖ ನಗರವಾಗಿದ್ದು ಭಾರತದ ಇತರೆ ಮಹಾನಗರಗಳೊಂದಿಗೆ ರೈಲು ಹಾಗೂ ವಿಮಾನದ ಮೂಲಕ ಉತ್ತಮ ಸಂಪರ್ಕ ಹೊಂದಿದೆ.

ಚಿತ್ರಕೃಪೆ: LRBurdak

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ಶಾಂತಿಸ್ತೂಪಕ್ಕೆ ಕರೆದೊಯ್ಯುವ ಕೇಬಲ್ ಕಾರುಗಳು.

ಚಿತ್ರಕೃಪೆ: Anandajoti

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ಬುದ್ಧ ವಿಶ್ರಮಿಸುತ್ತಿದ್ದ ಸ್ಥಳ ಗೃದ್ಧ್ರ ಕೂಟದಲ್ಲಿ ಮಂತ್ರ ಜಪಿಸುತ್ತಿರುವ ಬೌದ್ಧ ಭಿಕ್ಷುಗಳು.

ಚಿತ್ರಕೃಪೆ: Anandajoti

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟಗಳಲ್ಲಿ ಕಂಡು ಬರುವ ಬೋರ್ ಗುಹೆ. ಇದೊಂದು ಪವಿತ್ರ ಸ್ಥಾನವಾಗಿದ್ದು ಇಲ್ಲಿ ದೀಪ ಬೆಳೆಗಲಾಗುತ್ತದೆ ಹಾಗೂ ಧ್ಯಾನಕ್ಕೆ ಇದು ಪ್ರಶಸ್ತವಾಗಿದೆ.

ಚಿತ್ರಕೃಪೆ: Anandajoti

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ಬೌದ್ಧ ಧರ್ಮಿಯರು ಬೋರ್ ಗುಹೆಯ ಮುಂದೆ ಕುಳಿತು ಮಂತ್ರಗಳನ್ನು ಜಪಿಸುತ್ತಾರೆ.

ಚಿತ್ರಕೃಪೆ: Anandajoti

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟದಲ್ಲಿರುವ ಶಿವಲಿಂಗ.

ಚಿತ್ರಕೃಪೆ: Anandajoti

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟದಲ್ಲಿರುವ ಒಂದು ಜೈನ ದೇವಾಲಯ.

ಚಿತ್ರಕೃಪೆ: Anandajoti

ರಾಜಗೀರ್ ಬೆಟ್ಟಗಳು:

ರಾಜಗೀರ್ ಬೆಟ್ಟಗಳು:

ರಾಜಗೀರ್ ನ ಒಮ್ದು ಸುಂದರ ಸೂರ್ಯಾಸ್ತ.

ಚಿತ್ರಕೃಪೆ: Anandajoti

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X