Search
  • Follow NativePlanet
Share
» »ಶೃಂಗೇರಿ ಹಾಗೂ ಸುತ್ತಮುತ್ತಲು

ಶೃಂಗೇರಿ ಹಾಗೂ ಸುತ್ತಮುತ್ತಲು

By Vijay

ಶೃಂಗೇರಿಯು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೆಲೆಸಿರುವ ಒಂದು ದಿವ್ಯ ಕ್ಷೇತ್ರ. ಸುಮಾರು 8 ನೇಯ ಶತಮಾನದಲ್ಲಿ ಜೀವಿಸಿದ್ದ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಗುರು ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದನ್ನು ಹೊಂದಿರುವ ಶ್ರೀಕ್ಷೇತ್ರವೆ ಶೃಂಗೇರಿ. ಇದಲ್ಲದೆ ಆದಿ ಶಂಕರರು ಸ್ಥಾಪಿಸಿದ ಇತರೆ ಮೂರು ಮಠಗಳನ್ನು ಬದರಿನಾಥ, ಪುರಿ ಮತ್ತು ದ್ವಾರಕೆಗಳಲ್ಲಿ ಕಾಣಬಹುದಾಗಿದೆ. ತುಂಗಾ ನದಿ ತಟದಲ್ಲಿರುವ ಶೃಂಗೇರಿ ಪಟ್ಟಣವು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ತಾಲೂಕುಗಳಲ್ಲಿ ಒಂದಾಗಿದೆ.

ದಂತ ಕಥೆಯ ಪ್ರಕಾರ, ಶೃಂಗೇರಿ ಎಂಬ ಹೆಸರು ಋಷ್ಯಶೃಂಗಗಿರಿ ಎಂಬ ಇಲ್ಲಿರುವ ಬೆಟ್ಟದ ಹೆಸರಿನಿಂದ ಬಂದಿದೆ. ಸ್ಥಳ ಪುರಾಣದ ಪ್ರಕಾರ, ಈ ಬೆಟ್ಟದಲ್ಲೇ ವಿಭಾಂಡಕ ಎಂಬ ಋಷಿ ಮತ್ತು ಅವನ ಮಗನಾದ ಋಷ್ಯಶೃಂಗರು ವಾಸಿಸಿದ್ದರು. ಋಷ್ಯಶೃಂಗನ ಕುರಿತು ರಾಮಾಯಣದ ಬಾಲಕಾಂಡದಲ್ಲಿ ಉಲ್ಲೇಖಿಸಲಾಗಿದೆ. ವಸಿಷ್ಠರು ಹೇಳುವ ಉಪಕಥೆಗಳಲ್ಲಿ ಋಷ್ಯಶೃಂಗನು ರೋಮಪಾದ ರಾಜ್ಯದಲ್ಲಿ ಮಳೆ ತರಿಸಿದ ಕಥೆಯಿರುವ ಪ್ರಸಂಗವಿದೆ.

ಶೃಂಗೇರಿಯ ಇತಿಹಾಸಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. ಋಷ್ಯಶೃಂಗನ ತಂದೆಯಾದ, ವಿಭಾಂಡಕ ಮಹರ್ಷಿಗಳು, ತಾವು ನಿತ್ಯ ಪೂಜಿಸುತ್ತಿದ್ದ ಶಿವಲಿಂಗದಲ್ಲಿ ಕೊನೆಗೆ, ಐಕ್ಯರಾದರೆಂಬ ಪ್ರತೀತಿ ಇದೆ. ಈ ಸ್ಥಳವು ಶೃಂಗೇರಿ ಹತ್ತಿರದ ಒಂದು ಬೆಟ್ಟದ ಮೇಲಿದೆ. ಇದನ್ನು ಮಲಹಾನಿಕರೇಶ್ವರ ಎಂದು ಕರೆಯಲಾಗಿದ್ದು, ಈ ಸ್ಥಳದಲ್ಲಿ ಒಂದು ದೇವಾಲಯವನ್ನು ನಿರ್ಮಿಸಲಾಗಿದೆ.

ಶೃಂಗೇರಿಯು ಧಾರ್ಮಿಕ ದೃಷ್ಟಿಯಿಂದ ಭವ್ಯವಾದ ಪ್ರವಾಸಿ ಪಟ್ಟಣವಾಗಿದ್ದು, ಇದರ ಸುತ್ತಮುತ್ತಲು ಹಲವು ಇತರೆ ಧಾರ್ಮಿಕ ಪ್ರವಾಸಿ ಕ್ಷೇತ್ರಗಳನ್ನೂ ಸಹ ಕಾಣಬಹುದಾಗಿದೆ. ಬೆಂಗಳೂರಿನಿಂದ ಶೃಂಗೇರಿಯು 332 ಕಿ.ಮೀ ಗಳಷ್ಟು ಅಂತರದಲ್ಲಿ ನೆಲೆಸಿದ್ದು ಇಲ್ಲಿಗೆ ತೆರಳಲು ಬೆಂಗಳೂರಿನಿಂದ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳೆರಡೂ ದೊರೆಯುತ್ತವೆ. ಅಲ್ಲದೆ ಇದಕ್ಕೆ ಹತ್ತಿರದಲ್ಲಿರುವ ರೈಲು ಹಾಗೂ ವಿಮಾನ ನಿಲ್ದಾಣವೆಂದರೆ ಮಂಗಳೂರು. ಮಂಗಳೂರು ಶೃಂಗೇರಿಯಿಂದ ಸುಮಾರು 120 ಕಿ.ಮೀ ಗಳಷ್ಟು ದೂರದಲ್ಲಿದೆ.

ಶೃಂಗೇರಿ:

ಶೃಂಗೇರಿ:

ಶೃಂಗೇರಿಯಲ್ಲಿ ಹಲವಾರು ದೇವಸ್ಥಾನಗಳನ್ನು ಕಾಣಬಹುದಾಗಿದ್ದು ಅವುಗಳಲ್ಲಿ ಪ್ರಮುಖವಾದುದು ವಿದ್ಯಾಶಂಕರ ದೇವಸ್ಥಾನ. ಈ ದೇವಾಲಯವನ್ನು 14 ನೇಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರೆನ್ನಲಾಗುವ ಹಕ್ಕ-ಬುಕ್ಕರ ಗುರುಗಳಾಗಿದ್ದ ಮಹರ್ಷಿ ವಿದ್ಯಾರಣ್ಯರು ಕಟ್ಟಿಸಿದ್ದಾರೆ. ವಿದ್ಯಾಶಂಕರ ದೇವಾಲಯದಲ್ಲಿ ರಾಶಿ ಸೂಚಕ ಕಂಬಗಳಿರುವುದನ್ನು ಕಾಣಬಹುದು. ಈ ರಾಶಿ ಕಂಬಗಳ ವೈಶಿಷ್ಟ್ಯವೆಂದರೆ ಸೂರ್ಯ ಯಾವ ರಾಶಿಯಲ್ಲಿರುತ್ತಾನೊ ಆ ನಿರ್ದಿಷ್ಟ ರಾಶಿ ಸೂಚಕ ಕಂಬದ ಮೇಲೆ ಸೂರ್ಯನ ಮೊದಲ ಕಿರಣಗಳು ಬೀಳುತ್ತವೆ.

ಚಿತ್ರಕೃಪೆ: Calvinkrishy

ಶೃಂಗೇರಿ:

ಶೃಂಗೇರಿ:

ವಿದ್ಯಾಶಂಕರ ದೇವಸ್ಥಾನವಲ್ಲದೆ ಆವರಣದಲ್ಲಿರುವ ಮತ್ತೊಂದು ಪ್ರಮುಖ ದೇವಾಲಯ ಶಾರದಾಂಬೆಯ ಪೀಠ. ಆದಿ ಶಂಕರರು ಸ್ಥಾಪಿಸಿದ ನಾಲ್ಕು ಮಹಾ ಪೀಠಗಳಲ್ಲಿ ಶೃಂಗೇರಿ ಶಾರದಾಂಬೆಯ ಪೀಠವು ಮೊದಲನೇಯದಾಗಿದೆ.

ಶೃಂಗೇರಿ:

ಶೃಂಗೇರಿ:

ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ತುಂಗಾ ಸೇತುವೆ. ವಿದ್ಯಾಶಂಕರ ದೇವಸ್ಥಾನದಿಂದ ಶೃಂಗೇರಿ ಶ್ರೀಗಳು ತಂಗಿರುವ ತಾಣಕ್ಕೆ ತೆರಳಲು ಈ ಸೇತುವೆಯ ಮುಖಾಂತರ ಹೋಗಬೇಕು.

ಶೃಂಗೇರಿ:

ಶೃಂಗೇರಿ:

ತುಂಗಾ ನದಿಯಲ್ಲಿರುವ ಅಗಾಧ ಪ್ರಮಾಣದ ಮೀನುಗಳು. ಇಲ್ಲಿ ಯಾರೂ ಮೀನುಗಳನ್ನು ಹಿಡಿಯುವುದನ್ನಾಗಲಿ ಕೊಲ್ಲುವುದನ್ನಾಗಲಿ ಮಾಡುವಂತಿಲ್ಲ.

ಚಿತ್ರಕೃಪೆ: Philanthropist 1

ಶೃಂಗೇರಿ:

ಶೃಂಗೇರಿ:

ಭಕ್ತಾದಿಗಳು ನೀಡುವ ಆಹಾರವನ್ನು ಸವಿಯಲು ಬರುವ ಮೀನುಗಳು.

ಚಿತ್ರಕೃಪೆ: Dineshkannambadi

ಶೃಂಗೇರಿ:

ಶೃಂಗೇರಿ:

ವಿದ್ಯಾಶಂಕರ ದೇವಸ್ಥಾನವಿರುವ ದೇವಾಲಯದ ಆವರಣ.

ಶೃಂಗೇರಿ:

ಶೃಂಗೇರಿ:

ಕಪ್ಪೆ ಹಾಗೂ ಹಾವಿನ ಕಥೆಯನ್ನು ಹೇಳುವ ಪ್ರತಿಮೆಗಳು. ದಂತಕಥೆಯ ಪ್ರಕಾರ, ಒಂದೊಮ್ಮೆ ಶಂಕರಾಚಾರ್ಯರು ಇಲ್ಲಿನ ತುಂಗಾ ನದಿ ತಟದಲ್ಲಿ ಸಾಗಿ ಹೋಗುತ್ತಿರುವಾಗ ಆಕಸ್ಮಿಕವಾಗಿ ಅವರ ಲಕ್ಷ್ಯವು ಒಂದು ಹೆಡೆ ಎತ್ತಿ ನಿಂತಿರುವ ಹಾವಿನೆಡೆ ಹೋಯಿತು. ಆ ಹಾವು ಮರಿಗಳನ್ನು ಹೇರುತ್ತಿರುವ ಒಂದು ಕಪ್ಪೆಗೆ ಸುಡು ಬಿಸಿಲಿನಿಂದ ರಕ್ಷಣೆ ಒದಗಿಸಲು ಆ ರೀತಿಯಾಗಿ ಹೆಡೆ ಎತ್ತಿ ನಿಂತಿರುವುದು ನಂತರ ಇವರ ಅರಿವಿಗೆ ಬಂದಿತು. ಸ್ವಾಭಾವಿಕ ವೈರಿಗಳೂ ಕೂಡ ನಿರ್ದಿಷ್ಟ ಸಂದರ್ಭಗಳಲ್ಲಿ ಈ ರೀತಿಯಾಗಿ ಸಾಮರಸ್ಯ ತೋರ್ಪಡಿಸುತ್ತಿರುವುದನ್ನು ಕಂಡು ಆ ಸ್ಥಳದಿಂದ ಪ್ರಭಾವಿತರಾಗಿ ನಂತರ ಶಂಕರರು ಮುಂದಿನ ಹನ್ನೆರಡು ವರ್ಷಗಳ ಕಾಲ ಇಲ್ಲಿ ವಾಸಿಸಿದರು.

ಚಿತ್ರಕೃಪೆ: Sarvagnya

ಶೃಂಗೇರಿ:

ಶೃಂಗೇರಿ:

ತುಂಗಾ ನದಿ ತೀರದಲ್ಲಿರುವ ಶಾರದಾಂಬೆಯ ಶ್ರೀ ಮಠದಿಂದ ಪ್ರಖ್ಯಾತವಾಗಿರುವ ಹರಿಹರಪುರವು ಶೃಂಗೇರಿಯಿಂದ ಕೇವಲ20 ಕಿ.ಮೀ ದೂರದಲ್ಲಿದೆ. ಚಿತ್ರದಲ್ಲಿ ಕಾಣುತ್ತಿರುವುದು ಶ್ರೀ ಸೋಮೇಶ್ವರ ದೇವಸ್ಥಾನ.

ಶೃಂಗೇರಿ:

ಶೃಂಗೇರಿ:

ಹರಿಹರಪುರದಲ್ಲಿರುವ ಶಾರದಾಂಬೆಯ ಶ್ರೀ ಮಠ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಮಠಕ್ಕೆ ಭೇಟಿ ನೀಡುತ್ತಿರುತ್ತಾರೆ.

ಶೃಂಗೇರಿ:

ಶೃಂಗೇರಿ:

ಶೃಂಗೇರಿಯಿಂದ 10 ಕಿ. ಮೀ. ದೂರದಲ್ಲಿ ಕಿಗ್ಗ ಅಥವಾ ಋಶ್ಯಶೃಂಗಪುರವೆಂಬ ಊರಿದೆ. ಈ ಸ್ಥಳದಲ್ಲಿಯೆ ಋಶ್ಯಶೃಂಗರ ಆತ್ಮವು ಅವರು ನಿತ್ಯ ಆರಾಧಿಸುತ್ತಿದ್ದ ಶಿವಲಿಂಗದಲ್ಲಿ ಐಕ್ಯವಾಯಿತೆಂಬ ಪ್ರತೀತಿ ಇದೆ. ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ಶೃಂಗೇರಿ:

ಶೃಂಗೇರಿ:

ಶೃಂಗೇರಿಯಿಂದ ಸುಮಾರು 72 ಕಿ.ಮೀ ಗಳಷ್ಟು ದೂರ ಕ್ರಮಿಸಿದಾಗ ಸಿಗುವ ಮತ್ತೊಂದು ಪುಣ್ಯ ಕ್ಷೇತ್ರ ಕಳಸ. ಭದ್ರಾ ನದಿ ತಟದಲ್ಲಿ ನೆಲೆಸಿರುವ ಈ ಕ್ಷೇತ್ರದಲ್ಲಿ ಹಲವು ದೇವಸ್ಥಾನಗಳನ್ನು ಕಾಣಬಹುದಾಗಿದೆ. ಅವುಗಳೆಂದರೆ ಕಳಸೇಶ್ವರ ದೇವಾಲಯ, ಗಿರಿಜಾಂಬಾ ದೇವಾಲಯ, ಹನುಮಾನ್ ದೇವಾಲಯ, ವೆಂಕಟರಮಣ, ರಂಜಲ್ ಮಹಾಲಕ್ಷ್ಮಿ, ವಸಿಷ್ಠ ಆಶ್ರಮ ಹಾಗೂ ಶ್ರೀ ಚಂದ್ರನಾಥ ಸ್ವಾಮಿ ದೇವಾಲಯಗಳು.

ಚಿತ್ರಕೃಪೆ: Wind4wings

ಶೃಂಗೇರಿ:

ಶೃಂಗೇರಿ:

ಕಳಸಕ್ಕೆ ಅತಿ ಹತ್ತಿರದಲ್ಲಿರುವ ಹಾಗೂ ಶೃಂಗೇರಿಗೆ ಹೋದಾಗ ಭೇಟಿ ನೀಡಬಹುದಾದ ಮತ್ತೊಂದು ಕ್ಷೇತ್ರ ಅನ್ನಪೂರ್ಣೇಶ್ವರಿ ದೇವಿ ನೆಲೆಸಿರುವ ಶ್ರೀ ಕ್ಷೇತ್ರ ಹೊರನಾಡು.

ಚಿತ್ರಕೃಪೆ: Gnanapiti

ಶೃಂಗೇರಿ:

ಶೃಂಗೇರಿ:

ರಂಭಾಪುರಿ ಮಠವಿರುವ ಬಾಳೆಹೊನ್ನೂರು ಶೃಂಗೇರಿಯಿಂದ ಸುಮಾರು 35 ಕಿ.ಮೀ ಗಳಷ್ಟು ದೂರದಲ್ಲಿದೆ. ಇಲ್ಲಿ ನಿರ್ಮಿಸಲಾಗಿರುವ ಬಾಳೆಹೊನ್ನೂರು ಸೇತುವೆಯು ಮೇಸನ್ರಿಯಿಂದ ನಿರ್ಮಿತವಾದ ಮೊದಲ ಸೇತುವೆಯಾಗಿದೆ.

ಚಿತ್ರಕೃಪೆ: murli

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X