Search
  • Follow NativePlanet
Share
» »ಇತಿ ಮಿತಿಗಳಿಲ್ಲದೆ ಸದಾ ಸ್ಮೃತಿಯಲ್ಲಿ ನೆಲೆಸುವ ಸ್ಪಿತಿ ಕಣಿವೆ

ಇತಿ ಮಿತಿಗಳಿಲ್ಲದೆ ಸದಾ ಸ್ಮೃತಿಯಲ್ಲಿ ನೆಲೆಸುವ ಸ್ಪಿತಿ ಕಣಿವೆ

By Vijay

ಹಿಮಾಚಲ ಪ್ರದೇಶವು ಹಿಮಾಲಯ ಪರ್ವತಗಳ ಒಡಲಿನಲ್ಲಿ ನೆಲೆಸಿರುವ ರಾಜ್ಯವಾಗಿದ್ದು ಪ್ರವಾಸೋದ್ಯಮಕ್ಕೆ ಗಮನರ್ಹವಾದ ಕೊಡುಗೆ ನೀಡಿದೆ. ರಾಜ್ಯವು ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿ ನೆಲೆಸಿರುವುದರಿಂದ ಹಾಗೂ ಹಿಮಾಲಯದ ಬಳಿ ಸ್ಥಿತವಿರುವುದರಿಂದ ಸಾಕಷ್ಟು ತಂಪಾಗಿರುವುದು ಸಾಮಾನ್ಯ.

ವಿಶೇಷ ಲೇಖನ : ರುದ್ರಮಯ ನುಬ್ರಾ ಕಣಿವೆ

ಈ ರಾಜ್ಯದಲ್ಲಿ ಸಾಕಷ್ಟು ರೋಮಾಂಚನವನ್ನುಂಟು ಮಾಡುವಂತಹ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಪ್ರಸ್ತುತ ಲೇಖನದಲ್ಲಿ ಹಿಮಾಚಲದಲ್ಲಿ ಕಂಡು ಬರುವ ಸ್ಪಿತಿ ಎಂಬ ಕಣಿವೆ ಪಟ್ಟಣದ ಕುರಿತು ತಿಳಿಸಲಾಗಿದೆ. ರಾಜ್ಯದ ಈಶಾನ್ಯ ದಿಕ್ಕಿನಲ್ಲಿ ಬಹುದೂರದಲ್ಲಿರುವ ಹಿಮಾಲಯ ಕಣಿವೆ ಪ್ರದೇಶದಲ್ಲಿ ಸ್ಪಿತಿಯು ನೆಲೆಸಿದೆ.

ವಿಶೇಷ ಲೇಖನ : ನಮ್ಮ ಹೆಮ್ಮೆಯ ಕಾರ್ಗಿಲ್

ಸಾಮಾನ್ಯವಾಗಿ ಈ ಪ್ರದೇಶವು ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವುದರಿಂದ ಹವಾಮಾನದ ಸ್ಥಿತಿಗತಿಗಳು ವಿಪರೀತ ಎಂದೆ ಹೇಳಬಹುದು. ಆದ್ದರಿಂದ ಈ ಕಣಿವೆ ಪ್ರದೇಶಕ್ಕೆ ಸಾಕಷ್ಟು ಮುಂಜಾಗ್ರತೆಗಳನ್ನು ತೆಗೆದುಕೊಂಡು ಭೇಟಿ ನೀಡುವುದು ಉತ್ತಮ. ಆದರೆ ಒಂದೊಮ್ಮೆ ಸಾಹಸದಿಂದ, ಕಷ್ಟಪಟ್ಟು ಭೇಟಿ ನೀಡಿದರೆ ಸಾಕು....ಬಂದ ಸಾರ್ಥಕತೆ ಮನದಲ್ಲಿ ಗಟ್ಟಿಯಾಗಿ ಮೂಡಿಬರುತ್ತದೆ.

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಮುಂದಿನ ಸ್ಲೈಡುಗಳ ಮೂಲಕ ಸ್ಪಿತಿ ಕಣಿವೆಯ ಕುರಿತು ಸಂಕ್ಷೀಪ್ತ ವಿವರ ಹಾಗೂ ತೆರಳುವ ಬಗೆಯ ಕುರಿತು ತಿಳಿಯಿರಿ.

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಸ್ಥಳೀಯವಾಗಿ ಸ್ಪಿತಿ ಅಂದರೆ ಮಧ್ಯದ ಭೂಮಿ ಎಂಬರ್ಥ ಬರುತ್ತದೆ. ಅದಕ್ಕೆ ಪೂರಕವೆಂಬಂತೆ ಇದು ಭಾರತ ಹಾಗೂ ಟಿಬೆಟ್‌ ನಡುವೆ ಇರುವ ಪ್ರದೇಶ. ಅತಿ ಎತ್ತರವಾದ ಸ್ಥಳದಲ್ಲಿ ಈ ತಾಣವಿದೆ. ವೀಕ್ಷಣಾ ದೃಷ್ಟಿಯಿಂದ ಇದು ಅತ್ಯಂತ ಜನಪ್ರಿಯ ಪ್ರದೇಶವೂ ಕೂಡ ಆಗಿದೆ.

ಚಿತ್ರಕೃಪೆ: 4ocima

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಇಲ್ಲಿ ಬೌದ್ಧ ಧರ್ಮದ ಸಂಸ್ಕೃತಿಯನ್ನು ಬಹು ಹತ್ತಿರದಿಂದ ನೋಡಬಹುದಾಗಿದ್ದು ಸಾಕಷ್ಟು ಬೌದ್ಧ ಮಠಗಳು ಅಥವಾ ಆಶ್ರಮಗಳನ್ನು ಕಾಣಬಹುದಾಗಿದೆ. ಅತಿ ಕಡಿಮೆ ಜನಸಂಖ್ಯೆಯುಳ್ಳ ಭಾರತದ ಕೆಲವೇ ಕೆಲವು ಪ್ರದೇಶಗಳಲ್ಲಿ ಇದೂ ಸಹ ಒಂದಾಗಿದೆ. ಇಲ್ಲಿ ಸ್ಥಳೀಯವಗಿ ಬಳಸಲ್ಪಡುವ ಭಾಷೆ ಭೂತಿ.

ಚಿತ್ರಕೃಪೆ: Simon

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಕೀ ಎಂಬ ಬೌದ್ಧ ಆಶ್ರಮ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ದೇಶದ ಅತ್ಯಂತ ಪುರಾತನ ಆಶ್ರಮ ಎಂಬ ಹೆಗ್ಗಳಿಕೆಗೂ ಸಹ ಇದು ಪಾತ್ರವಾಗಿದೆ. ಇಲ್ಲಿ ಕೆಲ ಸಾಹಸ ಕ್ರೀಡೆಗಳಿಗೆ ಅವಕಾಶವಿದ್ದು ಬೆಟ್ಟದ ಮೇಲೆ ಬೈಕಿಂಗ್‌, ಯಾಕ್‌ ಸಫಾರಿ ಯಂತಹ ಚಟುವಟಿಕೆಗಳನ್ನು ಆಸ್ವಾದಿಸಬಹುದಾಗಿದೆ.

ಚಿತ್ರಕೃಪೆ: Ajith U

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿಯ ನೈಸರ್ಗಿಕ ಸೌಂದರ್ಯವು ಈ ಪ್ರದೇಶವನ್ನು ಇನ್ನಷ್ಟು ಅಪ್ಯಾಯಮಾನವಾಗಿಸಿದೆ. ಸಾಕಷ್ಟು ಬಾಲಿವುಡ್‌ ಚಿತ್ರಗಳು ಕೂಡ ಇಲ್ಲಿ ಚಿತ್ರೀಕರಣಗೊಂಡಿವೆ ಎಂಬುದು ತಿಳಿದಿರಬೇಕಾದ ವಿಚಾರ. ಅವುಗಳಲ್ಲಿ, ಹೈವೆ, ಪಾಪ್‌ ಹಾಗೂ ಮಿಲಾರೆಪ್ಪಾ ಮುಖ್ಯವಾದವುಗಳು.

ಚಿತ್ರಕೃಪೆ: Vikash Prasad

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಇಲ್ಲಿನ ಅತ್ಯಂತ ಪ್ರಮುಖ ಎರಡು ಪಟ್ಟಣಗಳೆಂದರೆ ಕಾಜಾ ಹಾಗೂ ಕೀಲಾಂಗ್‌. ಕೆಲವೊಂದು ಅಪರೂಪದ ಜೀವಿಗಳು, ಹೂವು ಹಾಗೂ ಸಸ್ಯಗಳನ್ನು ಈ ಪ್ರದೇಶದಲ್ಲಿ ಕಾಣಬಹುದಾಗಿದೆ. ಇವು ಪ್ರದೇಶದ ಸೌಂದರ್ಯವನ್ನು ಇನ್ನಷ್ಟು ವಿಶಿಷ್ಟವಾಗಿಸಿವೆ ಎಂದರೆ ತಪ್ಪಾಗಲಿಕ್ಕಿಲ್ಲ.

ಚಿತ್ರಕೃಪೆ: Richard Weil

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಮತ್ತೊಂದು ತಿಳಿಯಬೇಕಾದ ವಿಷಯವೆಂದರೆ ಮೊದಲಿಗೆ ಲಾಹೌಲ್ ಹಾಗೂ ಸ್ಪಿತಿ ನಗರಗಳು ಪ್ರತ್ಯೇಕವಾದ ಜಿಲ್ಲೆಗಳಾಗಿದ್ದವು. 1960 ರಲ್ಲಿ ಇವುಗಳ ಐಕ್ಯಗೊಳಿಸಿ ಲಾಹೌಲ್ -ಸ್ಪಿತಿ ಎಂಬ ಹೆಸರಿನ ಏಕ ಜಿಲ್ಲೆಯನ್ನು ರೂಪಿಸಲಾಯಿತು.

ಚಿತ್ರಕೃಪೆ: 4ocima

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಲಾಹೌಲಿನಿಂದ ಕುಂಜುಮ್ ಪಾಸ್ ಸ್ಪಿತಿ ಕಣಿವೆಗೆ ತಲುಪಲು ಹೆಬ್ಬಾಗಿಲಾಗಿದೆ. ಲಾಹೌಲ್ ರೊಹತಂಗ್ ಪಾಸ್ ಮೂಲಕ ಮನಾಲಿಯೊಂದಿಗೆ ಸಂಪರ್ಕ ಸಾಧಿಸುತ್ತದೆ. ಆದರೆ ಈ ಮಾರ್ಗವು ಬೇಸಿಗೆಯ ಸಂದರ್ಭದಲ್ಲಿ ಮಾತ್ರವೆ ಪ್ರಯಾಣಿಸಲು ಮುಕ್ತವಾಗಿರುತ್ತದೆ.

ಚಿತ್ರಕೃಪೆ: Balaji.B

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಪ್ರವಾಸಿ ದೃಷ್ಟಿಯಿಂದ ಸ್ಪಿತಿ ಕಣಿವೆ ಪ್ರದೇಶವು ಬೃಹತ್ ಗಾತ್ರದ ಹಿಮ ಪರ್ವತಗಳ ಅದ್ಭುತವಾದ ದೃಶ್ಯಾವಳಿಗಳನ್ನು ಪ್ರವಾಸಿಗರಿಗೆ ಕರುಣಿಸುತ್ತದೆ. ಅಲ್ಲದೆ ಇಲ್ಲಿ ಕಂಡು ಬರುವ ಬೌದ್ಧ ಆಶ್ರಮಗಳು ಐತಿಹಾಸಿಕ ದೃಷ್ಟಿಯಿಂದ ಬಹು ಮಹತ್ವವಾಗಿದ್ದು ಸಾಕಷ್ಟು ಪುರಾತನ ಅಥವಾ ಪ್ರಾಚೀನ ವಿಷಯಗಳನ್ನು ಹೇಳುತ್ತವೆ. ಈ ನಿಟ್ಟಿನಲ್ಲಿ ಈ ಆಶ್ರಮಗಳಿಗೆ ಭೇಟಿ ನೀಡುವುದು ಸಾರ್ಥಕವೆನಿಸುತ್ತದೆ.

ಚಿತ್ರಕೃಪೆ: Govindvmenon

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಕೀ, ಗುರುಘಂಟಾಲ್, ಏಕೈಕ ಬೌದ್ಧ ಭಿಕ್ಷುವಿನ ಮಮ್ಮಿ ರೂಪ (ಸುಮಾರು 550 ವರ್ಷಗಳಷ್ಟು ಪುರಾತನವಾದದ್ದು ಎನ್ನಲಾಗಿದೆ), ಶೆರ್ಖಾಂಗ್ ಗೊಂಪಾ (ಟಾಬೊ ಎಂಬ ಪುರಾತನ ಬೌದ್ಧ ಮಠಕ್ಕಿಂತಲೂ ಪುರಾತನವಾದದ್ದು ಎಂದು ನಂಬಲಾಗಿದೆ), ಚಂದ್ರತಾಲ್ ಸರೋವರ ಮುಂತಾದವುಗಳು ಇಲ್ಲಿ ನೋಡ ಬಹುದಾದ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.

ಚಿತ್ರಕೃಪೆ: nevil zaveri

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಗೋಧಿ, ಬಾರ್ಲಿ, ಪೇಸ್‌ ಮತ್ತಿತರವು ಇಲ್ಲಿ ಬೆಳೆಯುವ ಬೆಳೆಗಳು. ಸ್ಪಿತಿಗೆ ಸಮೀಪದ ವಿಮಾನ ನಿಲ್ದಾಣ ಭುಂತರ್‌. ಇದು ಶಿಮ್ಲಾ ಹಾಗೂ ದಿಲ್ಲಿ ಸೇರಿದಂತೆ ಹತ್ತು ಹಲವು ನಗರಗಳೊಂದಿಗೆ ಸಂಪರ್ಕ ಹೊಂದಿದೆ.
ಅಂತಾರಾಷ್ಟ್ರೀಯ ಪ್ರವಾಸಿಗರು ಇಲ್ಲಿ ಬರಬೇಕಾದರೆ ದಿಲ್ಲಿಯಿಂದ ಭುಂತರ್‌ಗೆ ಬಂದು ಬರಬಹುದು. ಉತ್ತಮ ಸಂಪರ್ಕ ಸೌಲಭ್ಯ ಇಲ್ಲಿಂದಿದೆ.

ಚಿತ್ರಕೃಪೆ: Sankara Subramanian

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿಗೆ ಸಮೀಪದ ರೈಲು ನಿಲ್ದಾಣ ಜೋಗಿಂದರನಗರ್‌. ಇದು ನ್ಯಾರೋಗೇಜ್‌ ರೈಲು ನಿಲ್ದಾಣವನ್ನು ಹೊಂದಿದೆ. ಇದಲ್ಲದೇ ಚಂಡಿಘಡ, ಶಿಮ್ಲಾವು ಸ್ಪಿತಿಗೆ ಹತ್ತಿರದಲ್ಲಿರುವ ಇನ್ನಿತರ ಪ್ರಮುಖ ರೈಲು ನಿಲ್ದಾಣಗಳು. ಇವು ದೇಶದ ಪ್ರಮುಖ ನಗರಗಳಿಂದ ಉತ್ತಮ ಸಂಚಾರ ಸಂಪರ್ಕ ಹೊಂದಿವೆ.

ಚಿತ್ರಕೃಪೆ: nevil zaveri

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ರೈಲು ನಿಲ್ದಾಣದಿಂದ ಸ್ಪಿತಿಗೆ ಬರಲು ಪ್ರವಾಸಿಗರಿಗೆ ಸಾಕಷ್ಟು ಕಾರು, ಕ್ಯಾಬ್‌ಗಳು ಸಿಗುತ್ತವೆ. ಇನ್ನು ರಸ್ತೆ ಮಾರ್ಗ ಗಮನಿಸಿದಾಗ, ರಾಷ್ಟ್ರೀಯ ಹೆದ್ದಾರಿ 21 ರ ಮೂಲಕ ಇಲ್ಲಿಗೆ ತಲುಪಬಹುದಾಗಿದೆ. ಮನಾಲಿಯಿಂದ ರೋಹತಂಗ್‌ ಪಾಸ್‌ ಹಾಗೂ ಕುಂಜಂ ಪಾಸ್‌ಗಳ ಮೂಲಕ ಸ್ಪಿತಿಗೆ ತೆರಳಬಹುದು. ಮನಾಲಿಯಿಂದ ಸ್ಪಿತಿ ಕಣಿವೆ ಸುಮಾರು 200 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: India Untravelled

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಇನ್ನು ತಿಳಿದುಕೊಳ್ಳಲೇಬೇಕಾದ ಅಂಶವೆಂದರೆ ಈ ಪ್ರದೇಶ ನವೆಂಬರ್‌ನಿಂದ ಜೂನ್‌ವರೆಗೆ ಮುಚ್ಚಿದ್ದು ಪ್ರವೇಶಿಸಲು ಮುಕ್ತವಾಗಿರುವುದಿಲ್ಲ. ಅತಿಯಾದ ಹಿಮಪಾತ ಆಗುವುದರಿಂದ ಪ್ರವೇಶ ನಿರ್ಬಂಧಿಸಲಾಗುತ್ತದೆ. ಸ್ಪಿತಿಗೆ ತಲುಪಲು ಕಿನ್ನೌರ್ ಮಾರ್ಗದಲ್ಲಿ ಬರುವುದು ಅತ್ಯಂತ ಪ್ರಶಸ್ತ. ಇದು ಸ್ಪಿತಿಯಿಂದ 412 ಕಿ.ಮೀ. ದೂರದಲ್ಲಿದೆ.

ಚಿತ್ರಕೃಪೆ: Balaji.B

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿ ಕಣಿವೆ ಪ್ರದೇಶ:

ಸ್ಪಿತಿಯ ಕೆಲ ಸುಂದರ, ರೋಮಾಂಚನಗೊಳಿಸುವ ಚಿತ್ರಗಳು.

ಚಿತ್ರಕೃಪೆ: Balaji.B

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X