Search
  • Follow NativePlanet
Share
» »ಶೂಲಿನಿ ದೇವಿಯ ಸೋಲನ್ಗೊಂದು ಸಲಾಂ ಹೊಡೆಯಿರಿ

ಶೂಲಿನಿ ದೇವಿಯ ಸೋಲನ್ಗೊಂದು ಸಲಾಂ ಹೊಡೆಯಿರಿ

By Vijay

"ದೂರದ ಬೆಟ್ಟ ಕಣ್ಣಿಗೆ ನುಣ್ಣು" ಎಂಬ ಕನ್ನಡದ ನಾಣ್ಣುಡಿಯನ್ನು ಬಹುತೇಕ ನೀವೆಲ್ಲರೂ ಕೇಳೇ ಕೇಳಿರುತ್ತೀರಿ. ಅಂದರೆ ವಸ್ತುವಿನ ಲೋಪ ದೋಷ ಅದರ ಹತ್ತಿರ ಹೋದಾಗ ತಿಳಿಯುವುದೆ ಹೊರತು ದೂರದಿಂದಲ್ಲ. ದೂರದಿಂದ ಅದು ತುಂಬಾ ಚೆನ್ನಾಗಿಯೆ ಕಾಣಿಸಬಹುದು. ಆದರೆ ಈ ನಾಣ್ಣುಡಿಯು ನೈಜವಾಗಿದ್ದರೂ ಸಹ ಕೆಲವು ವಿಷಯಗಳಿಗೆ ಅಪವಾದವೆಂಬಂತಿದೆ.

ನಿಮಗಿಷ್ಟವಾಗಬಹುದಾದ : ಸದಾ ನಲಿವಿನಿಂದ ಕೂಡಿರುವ ಮನಾಲಿ ನೋಡಿದ್ದೀರಾ?

ಹೌದು, ದೂರದ ಹಿಮಾಚಲ ರಾಜ್ಯವನ್ನು ನಾವು ಕಂಡಾಗ, ಅಬ್ಬಾ ಎಷ್ಟು ಸೊಗಸಾಗಿದೆ ಎಂದು ಮನದಲ್ಲಿ ಅಂದುಕೊಳ್ಳಬಹುದು. ಅದರಂತೆ ಆ ರಾಜ್ಯಕ್ಕೆ ಭೇಟಿ ನೀಡಿದರೆ ನೀವು ಅಂದುಕೊಂಡಿದ್ದಕ್ಕಿಂತಲೂ ತುಸು ಹೆಚ್ಚೆ ಸೌಂದರ್ಯದಿಂದ ಈ ರಾಜ್ಯ ಕೂಡಿರುವುದು ನಿಮಗೆ ಕಂಡುಬಂದರೆ ಅಚ್ಚರಿ ಪಡಬೇಕಾಗಿಲ್ಲ. ಸೋಲನ್ ಹಿಮಾಚಲ ಪ್ರದೇಶ ರಾಜ್ಯದ ಒಂದು ತಾಣ.

ನಿಮಗಿಷ್ಟವಾಗಬಹುದಾದ : ನಯನಗಳಿಗೆ ತಂಪೆರೆವ ಗಿರಿಧಾಮ ನೈನಿತಾಲ್

ಕೇವಲ ಅಮೇರಿಕಾ, ಯುರೋಪ ದೇಶಗಳ ಹಿಮ ಪರ್ವತಗಳಷ್ಟೆ ಅಲ್ಲ ನಮ್ಮ ಭಾರತದಲ್ಲೂ ಸಹ ಇಂತಹ ಸುಂದರ ಪ್ರದೇಶಗಳಿರುವುದು ನಮಗೆಲ್ಲ ಒಂದು ರೀತಿಯ ಹೆಮ್ಮೆಯ ವಿಷಯವೆ ಸರಿ. ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಹಿಮಾಚಲ ಪ್ರದೇಶದ ಒಂದು ಸುಂದರ ತಾಣ ಸೋಲನ್ ಕುರಿತು ಈ ಲೇಖನದ ಮೂಲಕ ತಿಳಿಯಿರಿ.

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಸೋಲನ್, ಸೋಲನ್ ಜಿಲ್ಲೆಯ ಜಿಲ್ಲಾಕೇಂದ್ರವಾಗಿದ್ದು ಪ್ರಖ್ಯಾತ ಪ್ರವಾಸಿ ತಾಣವಾದ ಶಿಮ್ಲಾದಿಂದ ಕೇವಲ 46 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Bhanu Sharma Solan

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಪ್ರಮುಖವಾಗಿ ಹೇಳಬೇಕೆಂದರೆ ಸೋಲನ್, ಶಿಮ್ಲಾ ಹಾಗೂ ಪಂಜಾಬ್ ಮತ್ತು ಹರಿಯಾಣಗಳ ಜಂಟಿ ರಾಜಧಾನಿ ನಗರ ಚಂಡೀಗಢ್ ಗಳ ಮಧ್ಯೆ ನೆಲೆಸಿದ್ದು ಕಲ್ಕಾ-ಶಿಮ್ಲಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-22 ಸೋಲನ್ ಮೂಲಕ ಹಾದು ಹೋಗಿದೆ. ಹೀಗಾಗಿ ಸೋಲನ್ ಅನ್ನು ಸುಲಭವಾಗಿ ರಸ್ತೆಯ ಮೂಲಕ ತಲುಪಬಹುದಾಗಿದೆ.

ಚಿತ್ರಕೃಪೆ: Bhanu Sharma Solan

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಸೋಲನ್ ಗೆ ಎರಡು ಹಿರಿಮೆಗಳಿದ್ದು ಇದನ್ನು "ಭಾರತದ ಅಣಬೆ ರಾಜಧಾನಿ" ಹಾಗೂ "ಕೆಂಪು ಬಂಗಾರದ ನಗರ (ಸಿಟಿ ಆಫ್ ರೆಡ್ ಗೋಲ್ಡ್)" ಎಂದು ಕರೆಯಲಾಗಿದೆ.

ಚಿತ್ರಕೃಪೆ: Bhanu Sharma Solan

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಇಲ್ಲಿ ಹೆಚ್ಚಿನ ಮಟ್ಟದ ಅಣಬೆ ಕೃಷಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಟೊಮ್ಯಾಟೊಗಳನ್ನು ಬೆಳೆಯಲಾಗುವುದರಿಂದ ಈ ರೀತಿಯ ಹೆಸರುಗಳು ಬಂದಿವೆ.

ಚಿತ್ರಕೃಪೆ: Andrew Gray

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಅಲ್ಲದೆ ಸೋಲನ್ ಸಮುದ್ರ ಮಟ್ಟದಿಂದ 5000 ಕ್ಕೂ ಅಧಿಕ ಅಡಿಗಳಷ್ಟು ಎತ್ತರದಲ್ಲಿರುವುದರಿಂದ ಸದಾ ತಂಪಾದ ವಾತಾವರಣವನ್ನು ಹೊಂದಿರುತ್ತದೆ. ಸುಡು ಬೇಸಿಗೆಯ ಸಮಯದಲ್ಲೂ ಹೆಚ್ಚಿನ ಬಿಸಿ ಇಲ್ಲದಿರುವುದು ಈ ತಾಣಕ್ಕೆ ಭೇಟಿ ನೀಡಲು ಒಂದು ಮುಖ್ಯ ಕಾರಣ.

ಚಿತ್ರಕೃಪೆ: Garconlevis

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಸೋಲನ್ ಒಳ್ಳೆಯ ಹೆಸರುಗಳಿಸಿದೆ. ಚಂಡೀಗಡ್, ಶಿಮ್ಲಾಗಳಿಂದ ಸುಲಭವಾಗಿ ತಲುಬಹುದಾಗಿರುವುದರಿಂದ ಸಾಕಷ್ಟು ಪ್ರವಾಸಿಗರು ಸೋಲನ್ ಗೂ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Bhanu Sharma Solan

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಅಲ್ಲದೆ ಬ್ರಿಟೀಷ್ ಸಮಯದಲ್ಲಿ ಪ್ರಾರಂಭಿಸಲಾಗಿದ್ದ ನ್ಯಾರೋ ಗೇಜಿನ ಪಾರಂಪರಿಕ ರೈಲು ಪ್ರಯಾಣ ಸೋಲನ್ ನಲ್ಲಿ ಇಂದಿಗೂ ಲಭ್ಯವಿದ್ದು ಇದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Andrew Gray

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ದಂತ ಕಥೆಯ ಪ್ರಕಾರ, ದುರ್ಗಾ ದೇವಿಯ ಅವತಾರವಾದ ಶೂಲಿನಿ ದೇವಿಯಿಂದಾಗಿ ಈ ಪ್ರದೇಶಕ್ಕೆ ಸೋಲನ್ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಚಿತ್ರಕೃಪೆ: Narender Sharma

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಅಲ್ಲದೆ ಹಿಂದೆ ಪಾಂಡವರು ವನವಾಸ ಅನುಭವಿಸುತ್ತಿದ್ದಾಗ ಸೋಲನ್ ನಲ್ಲಿಯೂ ತಂಗಿದ್ದರೆಂದು ಸ್ಥಳ ಪುರಾಣ ಹೇಳುತ್ತದೆ.

ಚಿತ್ರಕೃಪೆ: Garconlevis

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಗುರ್ಖಾಗಳ ಆಡಳಿತ ಸಮಯದಲ್ಲಿ ಸೋಲನ್ ಬಾಘಾಟ್ ರಾಜ್ಯದ ರಾಜಧಾನಿಯಾಗಿತ್ತು. ಬ್ರಿಟೀಷರು ಇದನ್ನು ನಂತರ ವಶಪಡಿಸಿಕೊಂಡರು. ಇಂದಿಗೂ ಸೋಲನ್ ನಗರದ ಬಳಿಯಿರುವ ಬೆಟ್ಟವೊಂದರ ಮೇಲೆ ಗುರ್ಖಾ ಕೋಟೆಯನ್ನು ನೋಡಬಹುದು. ಅದು ಈಗ ಪ್ರಸಿದ್ಧ ಐತಿಹಾಸಿಕ ಪ್ರವಾಸಿ ಆಕರ್ಷಣೆ ಆಗಿದೆ.

ಚಿತ್ರಕೃಪೆ: Garconlevis

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಸೋಲನ್ ನಲ್ಲಿ ಪಾರಂಪರಿಕ ಶ್ರೀಮಂತಿಕೆ ಬಿಂಬಿಸುವ ಅನೇಕ ನೋಡುವ ಸ್ಥಳಗಳಿವೆ. ಸೋಲನ್ ಹಿಮಾಚಲಿಗರು ಆದರಾತಿಥ್ಯಕ್ಕೆ ಹೆಸರುವಾಸಿಯಾಗಿದ್ದು ಪ್ರವಾಸಿಗರನ್ನು ಸದಾ ನಗು ಮೊಗದಿಂದ ಸ್ವಾಗತಿಸುತ್ತಾರೆ.

ಚಿತ್ರಕೃಪೆ: Garconlevis

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಪಹಾಡಿ ಗಿದ್ಧಾ ಹಾಗು ಥೋಡೊ ಸೋಲನ್ ನ ಪಾರಂಪರಿಕ ನೃತ್ಯ ಪ್ರಕಾರಗಳಾಗಿದ್ದು ಇದನ್ನು ಸ್ಥಳೀಯರು ಮಾಡುವಾಗ ನೋಡುವುದೆ ಒಂದು ಚೆಂದದ ಅನುಭವ.

ಚಿತ್ರಕೃಪೆ: Garconlevis

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ರೋಟಿ, ಸಬ್ಜಿ, ಅನ್ನ ಸಾಮಾನ್ಯವಾಗಿ ಉತ್ತರ ಭಾರತದಂತೆ ಇಲ್ಲಿಯೂ ತೆಗೆದುಕೊಳ್ಳುವ ಊಟವಾದರೂ, ಪಚೋಲೆ ಎಂಬುದು ಸೋಲನ್ ಪ್ರದೇಶದ ವಿಶೇಷ ತಿಂಡಿ. ಸಿಹಿ ಮೆಕ್ಕೆಜೋಳವನ್ನು ಹದ ಮಾಡಿ, ಮಸಾಲೆಗಳಿಂದ ಬೇಯಿಸಿದ ವಿಶೇಷ ಖಾದ್ಯ ಇದಾಗಿದೆ.

ಚಿತ್ರಕೃಪೆ: Garconlevis

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಪ್ರತಿ ವರ್ಷ ಶೂಲಿನಿ ದೇವಿಯ ಗೌರವ ಹಾಗೂ ಪ್ರಾರ್ಥನೆಗಾಗಿ ಸೋಲನ್ ನಲ್ಲಿ ಶೂಲಿನಿ ಉತ್ಸವ ಜರುಗುತ್ತದೆ. ಅಂತಹ ಒಂದು ಉತ್ಸವದ ಸಮ್ದರ್ಭದಲ್ಲಿ.

ಚಿತ್ರಕೃಪೆ: Bhanu Sharma Solan

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಸೋಲನ್ ನಲ್ಲಿರುವ ಹಿಮಾಚಲ ಪ್ರದೇಶ ಲೋಕೋಪಯೋಗಿ ಇಲಾಖೆಯ ಅತಿಥಿ ವಿಶ್ರಾಂತಿ ಗೃಹದ ಒಂದು ನೋಟ.

ಚಿತ್ರಕೃಪೆ: Garconlevis

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಹಿಮಪಾತದ ಸಂದರ್ಭದಲ್ಲಿ ಸೋಲನ್ ಪಟ್ಟಣ.

ಚಿತ್ರಕೃಪೆ: Garconlevis

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಸೋಲನ್ ನಲ್ಲಿರುವ ಪ್ರಮುಖ ಆಕರ್ಷಣೆಯ ಶರ್ವಿಲ್ಲಾ ಹೆಲ್ತ್ ರಿಸಾರ್ಟ್ಸ್.

ಚಿತ್ರಕೃಪೆ: Garconlevis

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಸೋಲನ್ ಪಟ್ಟಣದಲ್ಲಿ ಹಿಮಪಾತ ಆಗುವ ಸಂದರ್ಭ.

ಚಿತ್ರಕೃಪೆ: Garconlevis

ಮನ ಸೋಲಿಸುವ ಸೋಲನ್:

ಮನ ಸೋಲಿಸುವ ಸೋಲನ್:

ಸೋಲನ್ ನಲ್ಲಿರುವ ಮೋಹನ ಶಕ್ತಿ ರಾಷ್ಟ್ರೀಯ ಪಾರಂಪರಿಕ ಉದ್ಯಾನ. ಪುರಾತನ ಭಾರತದ ಸಂಸ್ಕೃತಿ ಹಾಗೂ ವೇದಗಲಿಗೆ ಸಂಬಂಧಿಸಿದ ಅನೇಕ ವಿಷಯ ವಸ್ತುಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Rupika08

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X