Search
  • Follow NativePlanet
Share
» »ಆಗ್ರಾದ ಷಾ ಜಹಾನ್ ಪಾರ್ಕ್‌ ಕಂಡಿದ್ದೀರಾ?

ಆಗ್ರಾದ ಷಾ ಜಹಾನ್ ಪಾರ್ಕ್‌ ಕಂಡಿದ್ದೀರಾ?

ಆಗ್ರಾದ ಷಾ ಜಹಾನ್ ಪಾರ್ಕ್ ಸುಂದರವಾದ ಮೊಘಲ್ ಉದ್ಯಾನವಾಗಿದೆ. ಇದು ಪಶ್ಚಿಮ ದಿಕ್ಕಿನಲ್ಲಿ ತಾಜ್ ಮಹಲ್ ಕಡೆಗೆ ವ್ಯಾಪಿಸಿದೆ.

ಪ್ರೇಮದ ಸಂಕೇತವಾಗಿರುವ ತಾಜ್ ಮಹಲ್ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎನ್ನುವುದು ನಿಜಕ್ಕೂ ಹೆಮ್ಮೆಪಡುವಂತಹದ್ದು. ಆಗ್ರಾಕ್ಕೆ ಹೋಗಿ ತಾಜ್ ಮಹಲ್‌ನ್ನು ನೋಡಿಲ್ಲ ಅಂದ್ರೆ ಆಗ್ರಾ ಪ್ರವಾಸನೇ ವ್ಯರ್ಥ ಎಂದೆನಿಸೋದು ಸಹಜ. ತಾಜ್‌ಮಹಲ್‌ನ್ನು ನಿರ್ಮಿಸಿದ ಷಾ ಜಹಾನ್‌ಗೆ ಸೇರಿದ ಪಾರ್ಕ್‌ ಕೂಡಾ ಆಗ್ರಾದಲ್ಲಿದೆ.

ಷಾ ಜಹಾನ್ ಪಾರ್ಕ್

ಷಾ ಜಹಾನ್ ಪಾರ್ಕ್

PC: youtube
ಇನ್ನೂ ಆಗ್ರಾದಲ್ಲಿರುವ ಆಗ್ರಾ ಕೋಟೆಯ ಸೌಂದರ್ಯವನ್ನೂ ಮಿಸ್‌ ಮಾಡಿಕೊಳ್ಳಬಾರದು. ಹಿಂದಿನ ದಿನಗಳಲ್ಲಿ ವಾಸ್ತುಶಿಲ್ಪದ ವೈಭವವು ಅವರ ಐತಿಹಾಸಿಕತೆಗಳ ಬಗ್ಗೆ ಕಲಿಯುವ ಸ್ಥಳಗಳಾಗಿದ್ದರೆ, ಆಗ್ರಾದಲ್ಲಿ ಕೆಲವು ಉದ್ಯಾನವನಗಳು ವಿಶ್ರಾಂತಿ ಮತ್ತು ಸಂತೋಷಕರ ಕ್ಷಣಗಳನ್ನು ನೀಡುತ್ತವೆ. ವಿಶಾಲವಾದ ಸೌಂದರ್ಯ ಮತ್ತು ಮೋಡಿಮಾಡುವ ಪರಿಸರವನ್ನು ಹೊಂದಿರುವ ಉದ್ಯಾನವನವೆಂದರೆ ಅದು ಆಗ್ರಾದಲ್ಲಿರುವ ಷಾ ಜಹಾನ್ ಪಾರ್ಕ್.

ಮೊಘಲ್ ಸಾಮ್ರಾಜ್ಯದ ಆಳ್ವಿಕೆ

ಆಗ್ರಾದ ಷಾ ಜಹಾನ್ ಪಾರ್ಕ್ ಸುಂದರವಾದ ಮೊಘಲ್ ಉದ್ಯಾನವಾಗಿದೆ. ಇದು ಪಶ್ಚಿಮ ದಿಕ್ಕಿನಲ್ಲಿ ತಾಜ್ ಮಹಲ್ ಕಡೆಗೆ ವ್ಯಾಪಿಸಿದೆ. ಮೊಘಲ್ ಸಾಮ್ರಾಜ್ಯದ ಆಳ್ವಿಕೆಯಲ್ಲಿಆಗ್ರಾದ ಷಾ ಜಹಾನ್ ಪಾರ್ಕ್ ಅನ್ನು ಸ್ಥಾಪಿಸಲಾಯಿತು. ಈ ಉದ್ಯಾನವನಕ್ಕೆ ಮೊಘಲ್ ಅವಧಿಯ ಶಹಜಹಾನ್ ಎಂಬ ಅತ್ಯಂತ ಶಕ್ತಿಯುತ ಮತ್ತು ಪ್ರಸಿದ್ಧ ಚಕ್ರವರ್ತಿಯ ಹೆಸರನ್ನಿಡಲಾಗಿದೆ.

ಆಗ್ರಾ ಕೋಟೆ

ಆಗ್ರಾ ಕೋಟೆ

PC: youtube
ಶಹಜಹಾನ್‌ರ ಆಳ್ವಿಕೆಯ ಸಮಯದಲ್ಲಿ ಭವ್ಯವಾದ ಮತ್ತು ಪ್ರಶಂಸನೀಯವಾದ ವಾಸ್ತುಶಿಲ್ಪವನ್ನು ರಚಿಸಲಾಯಿತು. ಅದರಲ್ಲಿ ತಾಜ್ ಮಹಲ್ ಶಹಜಹಾನ್‌ರ ಪ್ರೀತಿಯ ಪತ್ನಿ ಮುಮ್ತಾಜ್ ನೆನಪಿಗಾಗಿ ನಿರ್ಮಿಸಲ್ಪಟ್ಟಿತು. ಇನ್ನು 1658 ರಲ್ಲಿ ಅವರ ಪುತ್ರ ಔರಂಗಜೇಬ್ ಸಿಂಹಾಸನದಿಂದ ಪದಚ್ಯುತಗೊಂಡಾಗ ಆಗ್ರಾ ಕೋಟೆಯಲ್ಲಿ ಬಂಧಿಸಲಾಗಿತ್ತು.

ಸುಂದರವಾದ ಉದ್ಯಾನವನ

ಸುಂದರವಾದ ಉದ್ಯಾನವನ

PC: youtube
ಆಗ್ರಾದ ಷಾ ಜಹಾನ್ ಪಾರ್ಕ್ ಭಾರತದ ಅತ್ಯಂತ ಆಕರ್ಷಕ ಮೊಘಲ್ ಉದ್ಯಾನಗಳಲ್ಲಿ ಒಂದಾಗಿದೆ. ಇದರ ಸೊಂಪಾದ ಹಸಿರು ವಿಸ್ತಾರ ಮತ್ತು ಪಚ್ಚೆ ಬಣ್ಣದ ಮಹಡಿಗಳು ಈ ಸೈಟ್‌ಗೆ ಭೇಟಿ ನೀಡುವ ನೋಡುಗರ ಮನಸ್ಸಿನಲ್ಲಿಅಳಿಸಲಾಗದ ಪ್ರಭಾವ ಬೀರುತ್ತವೆ. ಸುಂದರವಾದ ಉದ್ಯಾನವನವು ವಿಶ್ರಾಂತಿ ಪಡೆಯಲು ಮತ್ತು ತಾಜಾ ಗಾಳಿಯನ್ನು ಸೇವಿಸಲು ಸೂಕ್ತ ಸ್ಥಳವಾಗಿದೆ.

ಇದರ ವಿಶೇಷತೆ

ಈ ಉದ್ಯಾನವನವು ಸಮೃದ್ಧ ಸಸ್ಯವರ್ಗ ಮತ್ತು ಹೂಬಿಡುವ ಸಸ್ಯಗಳನ್ನು ಹೊಂದಿದೆ. ಬೋಟಿಂಗ್ ಸೇವೆಗೆ ಹಿಂದೆ ಅನುಮತಿಸಲಾದ ಉದ್ಯಾನದ ಒಳಗೆ ಒಂದು ಸರೋವರವಿದೆ. ಭವಿಷ್ಯದಲ್ಲಿ ಬೋಟಿಂಗ್ ಸೇವೆಯನ್ನು ಪ್ರಾರಂಭಿಸುವ ಯೋಜನೆಗಳಿವೆ. ಉದ್ಯಾನವನದೊಳಗೆ ಛಾಯಾಗ್ರಹಣ ಮತ್ತು ಜಾಗಿಂಗ್‌ಗಳನ್ನು ಆನಂದಿಸಬಹುದು. ಈ ಉದ್ಯಾನದಿಂದ ತಾಜ್ ಮಹಲ್‌ನ ಉತ್ತಮ ನೋಟವನ್ನು ನೀವು ಪಡೆಯಬಹುದು.

ಯಾವಾಗ ಭೇಟಿ ಸೂಕ್ತ

ಉದ್ಯಾನವನಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಚಳಿಗಾಲದಲ್ಲಿ ಮುಂಜಾನೆ. ಈ ಸಮಯದಲ್ಲಿ ಸಸ್ಯವರ್ಗವು ಸೊಂಪಾದ ಮತ್ತು ತಾಜಾ ಆಗಿರುತ್ತದೆ. ಬೆಳಗಿನ ಸಮಯದಲ್ಲಿ, ನೀವು ಜಾಗ್ಗರ್ ಮತ್ತು ಛಾಯಾಗ್ರಾಹಕರನ್ನು ಇಲ್ಲಿ ಕಾಣಬಹುದು. ಸಂಜೆ ಸಮಯದಲ್ಲಿ, ನೀವು ದಂಪತಿಗಳು ಇಲ್ಲಿ ಕಾಣಬಹುದು. ಈ ಉದ್ಯಾನವು ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ವಾರ ಪೂರ್ತಿ ತೆರೆದಿರುತ್ತದೆ.

ಎಲ್ಲಿದೆ ಷಾ ಜಹಾನ್ ಪಾರ್ಕ್

ಪಾರ್ಕ್ ತಾಜ್ ಮಹಲ್‌ನ ಪಶ್ಚಿಮ ಭಾಗದಲ್ಲಿದೆ ಹಾಗೂ ಮೋತಿಲಾಲ್ ನೆಹರೂ ಪಾರ್ಕ್ ಮತ್ತು ಗಾಲ್ಫ್ ಕೋರ್ಸ್‌ಗಳಿಗೆ ಸಮೀಪದಲ್ಲಿದೆ. ಸಾರ್ವಜನಿಕ ಬಸ್ಸುಗಳು ಉದ್ಯಾನವನಕ್ಕೆ ಬಹಳ ಹತ್ತಿರದಲ್ಲಿಯೇ ನಿಲ್ಲುತ್ತವೆ. ನಗರದ ಯಾವುದೇ ಭಾಗದಿಂದ ಪಾರ್ಕ್ ಅನ್ನು ತಲುಪಲು ನೀವು ಆಟೋ ಅಥವಾ ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ನೀವು ತಾಜ್ ಮಹಲ್‌ಗೆ ಭೇಟಿ ನೀಡಿದರೆ, ಷಾ ಜಹಾನ್ ಪಾರ್ಕ್‌ಗೆ ಭೇಟಿ ನೀಡೋದನ್ನು ಮರೆಯಬೇಡಿ.

ತಲುಪುವುದು ಹೇಗೆ?

ಆಗ್ರಾವು ಖೇರಿಯಾ ಎಂಬ ಏಕೈಕ ವಿಮಾನ ನಿಲ್ದಾಣವನ್ನು ಹೊಂದಿದೆ. ಏರ್ ಇಂಡಿಯಾ ಮತ್ತು ಸೀಮಿತ ವಿಮಾನಗಳು ಮಾತ್ರ ಕಾರ್ಯ ನಿರ್ವಹಿಸುತ್ತವೆ. ದೆಹಲಿಯಿಂದ ಆಗ್ರಾಗೆ ವಿಮಾನದ ಮೂಲಕ ಒಂದು ಗಂಟೆಗಿಂತಲೂ ಕಡಿಮೆ ಅವಧಿಯ ಪ್ರಯಾಣ. ಖೇರಿಯಾ ವಿಮಾನ ನಿಲ್ದಾಣವು ಆಗ್ರಾ ನಗರದ ಪ್ರಮುಖ ನಗರದಿಂದ ಸುಮಾರು 13 ಕಿಲೋಮೀಟರ್ ದೂರದಲ್ಲಿದೆ. ನಿಮ್ಮ ಗಮ್ಯಸ್ಥಾನವನ್ನು 10 ರಿಂದ 15 ನಿಮಿಷಗಳಲ್ಲಿ ತಲುಪಲು ನೀವು ಕ್ಯಾಬ್ ಅಥವಾ ಟ್ಯಾಕ್ಸಿ ಬಾಡಿಗೆಗೆ ಪಡೆದುಕೊಳ್ಳಬಹುದು.

ಆಗ್ರಾ ಮೂಲಕ ಚಲಿಸುವ ಪ್ರಮುಖ ರೈಲು ಜಾಲಗಳು ಈ ನಗರವನ್ನು ದೆಹಲಿ ಮತ್ತು ಚೆನ್ನೈಗಳಂತಹ ನಗರಗಳಿಂದ ಸುಲಭವಾಗಿ ತಲುಪುತ್ತವೆ. ಇದು ರೈಲ್ವೆ ಜಂಕ್ಷನ್ ಆಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಸುಮಾರು 40 ರೈಲುಗಳು ಮತ್ತು ಐಷಾರಾಮಿ ರೈಲು ಆಗ್ರಾಗೆ ಸಂಪರ್ಕ ಕಲ್ಪಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X