Search
  • Follow NativePlanet
Share
» »ರತ್ನದಂತಹ ಆಕರ್ಷಣೆಗಳ ರತ್ನಾಗಿರಿ

ರತ್ನದಂತಹ ಆಕರ್ಷಣೆಗಳ ರತ್ನಾಗಿರಿ

By Vijay

ಮಹಾರಾಷ್ಟ್ರ ರಾಜ್ಯದ ನೈರುತ್ಯ ಭಾಗದಲ್ಲಿರುವ ರತ್ನಾಗಿರಿ ಜಿಲ್ಲೆಯು ಒಂದು ಸುಂದರ, ಮನೋಹರವಾದ ಕಡಲ ತೀರದ ಕರಾವಳಿ ಜಿಲ್ಲೆಯಾಗಿದೆ. ರಾಜ್ಯದ ಕೊಂಕಣ ಭಾಗದಲ್ಲಿ ಬರುವ ಈ ಜಿಲ್ಲೆಯು ಸಹ್ಯಾದ್ರಿ ಪರ್ವತಗಳ ಮಡಿಲಲ್ಲಿ ನೆಲೆಸಿದ್ದು ಅದ್ಭುತವಾದ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತ ಸದಾ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಜಿಲ್ಲೆಯ ಪೂರ್ವ ಭಾಗವು ಸಹ್ಯಾದ್ರಿ ಪರ್ವತ ಶ್ರೇಣಿಗಳಿಂದ ಸುತ್ತುವರಿಯಲ್ಪಟ್ಟಿದ್ದರೆ, ಪಶ್ಚಿಮ ಭಾಗವು ಅರಬ್ಬಿ ಸಮುದ್ರವನ್ನು ಹೊಂದಿದೆ. ಪ್ರದೇಶವು ಮೆಳಗಾಲದ ಸಂದರ್ಭದಲ್ಲಿ ಅಪಾರವಾದ ಮಳೆಯನ್ನು ಪಡೆಯುತ್ತದೆ. ಆದ್ದರಿಂದ ಹಸಿರು, ಹಸಿರಾದ, ನದಿ, ಕೆರೆ, ತೊರೆಗಳ ಸುಂದರ ಭೂದೃಶ್ಯಾವಳಿಗಳನ್ನು ಈ ಸಂದರ್ಭದಲ್ಲಿ ಇಲ್ಲಿ ಕಾಣಬಹುದಾಗಿದೆ.

ವಿಹಂಗಮವಾದ ಕಡಲ ತೀರಗಳೊಂದಿಗೆ ಸಾಕಷ್ಟು ಜನಾಕರ್ಷಣೆಗಳನ್ನು ಹೊತ್ತಿರುವ ರತ್ನಾಗಿರಿಯು ರಸ್ತೆ ಹಾಗೂ ರೈಲಿನ ಮೂಲಕ ಭಾರತದ ಇತರೆ ನಗರಗಳೊಂದಿಗೆ ಉತ್ತಮವಾದ ಸಂಪರ್ಕ ಸಾಧಿಸುತ್ತದೆ. ಕರ್ನಾಟಕದ, ಮಂಗಳೂರು, ಕಾರವಾರ, ಬೆಳಗಾವಿ ಹಾಗೂ ಗೋವಾ ಮತ್ತು ಮುಂಬೈಗಳಿಂದ ಸರ್ಕಾರಿ ಬಸ್ಸುಗಳು ಇಲ್ಲಿಗೆ ಲಭ್ಯವಿದೆ. ಅಲ್ಲದೆ ಕೊಂಕಣ ರೈಲಿನ ಮಾರ್ಗದಲ್ಲಿ ಪ್ರಮುಖ ನಿಲ್ದಾಣಗಳ ಪೈಕಿ ಒಂದಾಗಿದ್ದು ಈ ಮೂಲಕ ದೆಹಲಿ, ಜೈಪುರಗಳಂತಹ ನಗರಗಳಿಂದಿಗೂ ಸಂಪರ್ಕ ಸಾಧಿಸುತ್ತದೆ. ಮುಂಬೈ ಹಾಗೂ ಪುಣೆ ನಗರಗಳಿಂದ ರತ್ನಾಗಿರಿ ಕ್ರಮವಾಗಿ 336 ಹಾಗೂ 300 ಕಿ.ಮೀ ಗಳಷ್ಟು ದೂರವಿದೆ.

ರತ್ನಾಗಿರಿ:

ರತ್ನಾಗಿರಿ:

ರತ್ನಾಗಿರಿ ಮಹಾರಾಷ್ಟ್ರದ ಕೊಂಕಣ ಭಾಗದ ಒಮ್ದಿ ಜಿಲ್ಲೆಯಾಗಿದ್ದು ಪ್ರವಾಸೋದ್ಯಮದ ದೃಷ್ಟಿಯಿಂದ ಬಹು ಮಹತ್ವವಾದ ಪ್ರದೇಶವಾಗಿದೆ. ಹಲವು ಕಡಲ ತೀರಗಳಂತಹ ಜನಾಕರ್ಷಣೆಯ ತಾಣಗಳು ಪಟ್ಟಣದಲ್ಲಿದ್ದರೆ ಕೆಲವು ಕೋಟೆ ಕೊತ್ತಲೆಗಳಂತಹ ರಮಣೀಯ ಬೆಟ್ಟ ಗುಡ್ಡ ಪ್ರದೇಶಗಳು ಈ ಒಂದು ಜಿಲ್ಲೆಯಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: faisalns

ರತ್ನಾಗಿರಿ:

ರತ್ನಾಗಿರಿ:

ಸಾಕಷ್ಟು ಕಡಲ ತೀರಗಳು ರತ್ನಾಗಿರಿ ಪಟ್ಟಣದಲ್ಲಿದ್ದು ಅವುಗಳಲ್ಲಿ ಮಾಂಡ್ವಿ ಎಂಬ ಕಡಲ ತೀರವು ಬಹು ಪ್ರಖ್ಯಾತಿ ಪಡೆದ ಕಡಲ ತೀರವಾಗಿದೆ. ಈ ತೀರದ ಪಶ್ಚಿಮಕ್ಕೆ ರತ್ನದುರ್ಗ ಎಂಬ ಹೆಸರಿನ ಭವ್ಯವಾದ ಪುರಾತನ ಕೋಟೆಯನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: Kristina D.C. Hoeppner

ರತ್ನಾಗಿರಿ:

ರತ್ನಾಗಿರಿ:

ಅಲ್ಲದೆ ಇದರ ವಿರುದ್ಧ ದಿಕ್ಕಿನಲ್ಲಿ ಕೇವಲ 20 ಕಿ.ಮೀ ಗಳಷ್ಟು ದೂರದಲ್ಲಿರುವ ಪಾವಸ್ ಹಾಗೂ ಪಣಪತಿಪುಳೆ ಎಂಬ ಕಡಲ ತೀರಗಳು ಜನರನ್ನು ಆಕರ್ಷಿಸುವ ಸುಂದರ ಹಾಗೂ ಪ್ರಶಾಂತಮಯ ಕಡಲ ತೀರಗಳಾಗಿವೆ. ಚಿತ್ರದಲ್ಲಿರುವುದು ರತ್ನದುರ್ಗ ಕೋಟೆ.

ಚಿತ್ರಕೃಪೆ: Kristina D.C. Hoeppner

ರತ್ನಾಗಿರಿ:

ರತ್ನಾಗಿರಿ:

ಈ ಜಿಲ್ಲೆಯಲ್ಲಿ ಭೇಟಿ ನೀಡಬಹುದಾದ ಕೆಲವು ಪ್ರಮುಖ ಪ್ರವಾಸಿ ತಾಣಗಳೆಂದರೆ ಚಿಪ್ಲುನ್, ಗುಹಾಗರ್, ಸಂಗಮೇಶ್ವರ, ಗಣಪತಿಪುಳೆ ಹಾಗೂ ವೇಲ್ನೇಶ್ವರ. ಈ ಎಲ್ಲ ಆಕರ್ಷಣೆಗಳು ತಮ್ಮೊಳಗೆ 100 ರಿಂದ 150 ಕಿ.ಮೀ ಗಳಷ್ಟು ದೂರದಲ್ಲೆ ನೆಲೆಸಿವೆ.

ಚಿತ್ರಕೃಪೆ: Yogendra Joshi

ರತ್ನಾಗಿರಿ:

ರತ್ನಾಗಿರಿ:

ಗುಹಾಗರ್ ರತ್ನಾಗಿರಿ ಜಿಲ್ಲೆಯಲ್ಲಿರುವ ಒಂದು ಚಿಕ್ಕ ಹಾಗೂ ಚೊಕ್ಕದಾದ ತಾಲೂಕು ಪ್ರವಾಸಿ ಆಕರ್ಷಣೆಯಾಗಿದೆ. ಭಾರತದಲ್ಲಿ ದಾಖಲಾಗುವ ಅತಿ ಕಡಿಮೆ ಅಪರಾಧ ಚಟುವಟಿಕೆಗಳ ಪ್ರದೇಶಗಳ ಪೈಕಿ ಇದೂ ಸಹ ಒಂದು. ಶಾಂತಮಯ ಕಡಲ ಪರಿಸರ ಒತ್ತಡದಿಂದ ಬಳಲಿ ಬೆಂಡಾದ ಮನಕೆ ಉತ್ತಮವಾದ ವಿಶ್ರಾಂತಿಯನ್ನು ಕರುಣಿಸುತ್ತದೆ.

ಚಿತ್ರಕೃಪೆ: Ankur P

ರತ್ನಾಗಿರಿ:

ರತ್ನಾಗಿರಿ:

ಗುಹಾಗರ್ ನ ಪ್ರಶಾಂತಮಯ ಕಡಲ ತೀರದಲ್ಲಿ ದೇಶದ ಅತಿ ನೆಚ್ಚಿನ ಕ್ರೀಡೆಯಾದ ಕ್ರಿಕೆಟ್ ಆಡುತ್ತಿರುವ ಸ್ಥಳೀಯ ಮಕ್ಕಳು.

ಚಿತ್ರಕೃಪೆ: Ankur P

ರತ್ನಾಗಿರಿ:

ರತ್ನಾಗಿರಿ:

ಗುಹಾಗರ್ ನ ಸುಂದರ ಕಡಲ ತೀರದಲ್ಲಿರುವ ಬಾಮಂಘಳ ದೇವಾಲಯ.

ಚಿತ್ರಕೃಪೆ: Ankur P

ರತ್ನಾಗಿರಿ:

ರತ್ನಾಗಿರಿ:

ಸುಂದರ ಗುಹಾಗರ್ ಚೊಪಾಟಿ ಕಡಲ ತೀರ.

ಚಿತ್ರಕೃಪೆ: Ankur P

ರತ್ನಾಗಿರಿ:

ರತ್ನಾಗಿರಿ:

ಮೈಮನ ಪುಳಕಿತಗೊಳಿಸುವ ಗುಹಾಗರ್ ನ ಅಗಾಧ ಹಾಗೂ ಸುಂದರಮಯ ಕಡಲ ತೀರ.

ಚಿತ್ರಕೃಪೆ: Ankur P

ರತ್ನಾಗಿರಿ:

ರತ್ನಾಗಿರಿ:

ಗುಹಾಗರ್ ನಲ್ಲಿರುವ ಹೋಟೆಲ್ ಅನ್ನಪೂರ್ಣದಲ್ಲಿ ದೊರೆಯುವ ಕೊಂಕಣ ಶೈಲಿಯ ಬಾಯಲ್ಲಿ ನೀರೂರಿಸುವಂತಹ ಪ್ರದೇಶದ ಪ್ರಸಿದ್ಧವಾದ ಮೀನು ಖಾದ್ಯ.

ಚಿತ್ರಕೃಪೆ: Ankur P

ರತ್ನಾಗಿರಿ:

ರತ್ನಾಗಿರಿ:

ಗುಹಾಗರ್ ಕಡಲ ತೀರದ ಒಂದು ಸುಂದರ ಸಂಜೆ.

ಚಿತ್ರಕೃಪೆ: Ankur P

ರತ್ನಾಗಿರಿ:

ರತ್ನಾಗಿರಿ:

ರತ್ನಾಗಿರಿ ಜಿಲ್ಲೆಯಲ್ಲಿರುವ ಮತ್ತೊಂದು ಸುಂದರ ಪ್ರವಾಸಿ ಪಟ್ಟಣ ಚಿಪ್ಲೂನ್. ರಾಷ್ಟ್ರೀಯ ಹೆದ್ದಾರಿ 17 ದೊಂದಿಗೆ ನೇರವಾದ ಸಂಪರ್ಕ ಹೊಂದಿರುವುದರಿಂದ ಚಿಪ್ಲೂನ್ ಕೊಂಕಣ ಮಹಾರಾಷ್ಟ್ರದಲ್ಲೆ ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದೆ. ಚಿತ್ರದಲ್ಲಿರುವುದು ವಸಿಷ್ಠತಿ ನದಿ.

ಚಿತ್ರಕೃಪೆ: Ankur P

ರತ್ನಾಗಿರಿ:

ರತ್ನಾಗಿರಿ:

ಸಹ್ಯಾದ್ರಿ ಬೆಟ್ಟಗಳ ಸುಂದರ ಪ್ರಕೃತಿ ಸೌಂದರ್ಯದಲ್ಲಿ ನೆಲೆಸಿರುವ ಚಿಕ್ಕ ಪಟ್ಟಣ ಚಿಪ್ಲೂನ್ ನಲ್ಲಿರುವ ಮನೋಹರವಾದ ಒಂದು ರಿಸಾರ್ಟಿನ ಚಿತ್ರ.

ಚಿತ್ರಕೃಪೆ: Ankur P

ರತ್ನಾಗಿರಿ:

ರತ್ನಾಗಿರಿ:

ಸ್ವಚ್ಛ ಹಾಗೂ ಸುಂದರ ಪರಿಸರ ಹೊತ್ತ, ವಸಿಷ್ಠತಿ ನದಿ ದಂಡೆಯ ಮೇಲೆ ನೆಲೆಸಿರುವ ಮನೋಹರಮಯ ಶಾಂತ ಪ್ರವಾಸಿ ತಾಣ ಚಿಪ್ಲೂನ್.

ಚಿತ್ರಕೃಪೆ: Ankur P

ರತ್ನಾಗಿರಿ:

ರತ್ನಾಗಿರಿ:

ರತ್ನಾಗಿರಿ ಪಟ್ಟಣದಿಂದ ಸುಮಾರು 160 ಕಿ.ಮೀ ದೂರದಲ್ಲಿದೆ ಒಂದು ಧಾರ್ಮಿಕ ಹಾಗೂ ಪ್ರವಾಸಿ ತಾಣ. ಅದೇ ವೇಲ್ನೇಶ್ವರ. [ವೇಲ್ನೇಶ್ವರ ಕುರಿತು ತಿಳಿಯಿರಿ] ಇಲ್ಲಿರುವ ಶಿವನ ದೇವಾಲಯವು ಪ್ರಖ್ಯಾತಿ ಪಡೆದಿದ್ದು ಸಾಕಷ್ಟು ಭಕ್ತಾದಿಗಳು ಈ ಕಡಲ ತಡಿಯ ತಾಣಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Ankur P

ರತ್ನಾಗಿರಿ:

ರತ್ನಾಗಿರಿ:

ವೇಲ್ನೇಶ್ವರ ಗ್ರಾಮದಲ್ಲಿರುವ ಕಡಲ ತೀರದ ಒಂದು ಸುಂದರ ನೋಟ.

ಚಿತ್ರಕೃಪೆ: Ankur P

ರತ್ನಾಗಿರಿ:

ರತ್ನಾಗಿರಿ:

ರತ್ನಾಗಿರಿ ಪಟ್ಟಣದಿಂದ ಸುಮಾರು 60 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿರುವ ಧಾರ್ಮಿಕ ಆಕರ್ಷಣೆ ಮಾರ್ಲೇಶ್ವರವು ಶಿವನ ಗುಹಾ ದೇವಾಲಯಕ್ಕೆ ಪ್ರಸಿದ್ಧವಾಗಿದೆ. ಪ್ರತಿ ವರ್ಷವು ಸಾಕಷ್ಟು ಭಕ್ತಾದಿಗಳು ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ರೋಚಕದ ಸಂಗತಿಯೆಂದರೆ ಭಕ್ತರು ಇಲ್ಲಿ ವಿಷಪೂರಿತ ಹಾವುಗಳನ್ನು ಪೂಜಿಸುತ್ತಾರೆ ಹಾಗೂ ಹತ್ತಿರದ ಬಾವ್ ನದಿಯಲ್ಲಿ ಶುದ್ಧಿಕರಣ ಕ್ರಿಯೆ ನಡೆಸುತ್ತಾರೆ.

ಚಿತ್ರಕೃಪೆ: Pranav

ರತ್ನಾಗಿರಿ:

ರತ್ನಾಗಿರಿ:

ನಂತರ ಇದೆ ಬಾವ್ ನದಿಯು ಮುಂದೆ ಸಾಗಿ ಧಾರೇಶ್ವರ ಎಂಬ ಜಲಪಾತವನ್ನು ಸೃಷ್ಟಿಸುತ್ತದೆ. ಇದು ಕೂಡ ಪ್ರವಾಸಿ ದೃಷ್ಟಿಯಿಂದ ಹೆಸರುವಾಸಿಯಾಗಿದೆ. ಚಿತ್ರದಲ್ಲಿರುವುದು ಧಾರೇಶ್ವರ ಜಲಪಾತ.

ಚಿತ್ರಕೃಪೆ: Prabodh

ರತ್ನಾಗಿರಿ:

ರತ್ನಾಗಿರಿ:

ರತ್ನಾಗಿರಿ ಪಟ್ಟಣದಿಂದ ಕೇವಲ 25 ಕಿ.ಮೀ ದೂರದಲ್ಲಿರುವ ಗಣಪತಿಪುಳೆ ಎಂಬ ಕಡಲ ತಡಿಯ ಗ್ರಾಮವು ಒಂದು ಆಕರ್ಷಕ ಹಾಗೂ ಮಹತ್ವ ಪಡೆದ ಪುಣ್ಯ ಕ್ಷೇತ್ರವಾಗಿದೆ. ಹೆಸರೆ ಸೂಚಿಸುವಂತೆ ಈ ಗ್ರಾಮವು ಸಮುದ್ರ ತೀರದಲ್ಲೆ ಇರುವ ಗಣೇಶನ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Kprateek88

ರತ್ನಾಗಿರಿ:

ರತ್ನಾಗಿರಿ:

ದಂತಕಥೆಯ ಪ್ರಕಾರ, ಹಿಂದೆ ಗಣೇಶನು ಇಲ್ಲಿ ಗುಳೆ ಎಂಬ ಸ್ಥಳದಲ್ಲಿ ನೆಲೆಸಿದ್ದನು. ಸ್ಥಳೀಯ ಮಹಿಳೆಯೊಬ್ಬಳ ಟೀಕೆಯಿಂದ ಮುನಿಸಿಕೊಂಡು ಸ್ವಲ್ಪ ದೂರ ಮುಂದೆ ಅಂದರೆ ಪುಳೆ ಹೋಗಿ ನೆಲೆಸಿದನು. ನಂತರ ಈ ಸ್ಥಳಕ್ಕೆ ಗಣಪತಿಪುಳೆ ಎಂಬ ಹೆಸರು ಬಂದಿತು.

ಚಿತ್ರಕೃಪೆ: myriad ways

ರತ್ನಾಗಿರಿ:

ರತ್ನಾಗಿರಿ:

ಗಣಪತಿಪುಳೆಯ ಕಡಲ ತೀರ. ಸ್ವಚ್ಛ ಹಾಗು ಸುಂದರ.

ಚಿತ್ರಕೃಪೆ: Kristina D.C. Hoeppner

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X