Search
  • Follow NativePlanet
Share
» »ರಂಗು ರಂಗಾದ ರಂಗನತಿಟ್ಟು ಚಿಲಿಪಿಲಿ ಜುಟ್ಟು

ರಂಗು ರಂಗಾದ ರಂಗನತಿಟ್ಟು ಚಿಲಿಪಿಲಿ ಜುಟ್ಟು

By Vijay

"ಕರ್ನಾಟಕದ ಪಕ್ಷಿಕಾಶಿ" ಎಂದೆ ಹೆಸರುವಾಸಿಯಾದ ರಂಗನತಿಟ್ಟು ರಾಜ್ಯದ ಪ್ರಖ್ಯಾತ ಪಕ್ಷಿ ಧಾಮ. ಪಕ್ಷಿ ಪ್ರಿಯ ಛಾಯಾಗ್ರಾಹಕಲ ಪಾಲಿಗಂತೂ ಇದೆ ಸ್ವರ್ಗವೆ ಹೌದು. ಮಂಡ್ಯ ಜಿಲ್ಲೆಯಲ್ಲಿರುವ ಈ ಅದ್ಭುತ ಪಕ್ಷಿ ಧಾಮವು ಕಾವೇರಿ ನದಿಯಲ್ಲಿ ರೂಪಿತವಾದ ಚಿಕ್ಕ ಪುಟ್ಟ ನಡುಗಡ್ಡೆಗಳಿಮ್ದ ಕೂಡಿದ್ದು, ಸುಮಾರು 40 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಸ್ವಚ್ಛಂದವಾಗಿ ಹರಡಿದೆ.

ತಾಂತ್ರಿಕವಾಗಿ ಮಂಡ್ಯ ಜಿಲ್ಲೆಯಲ್ಲಿದ್ದರೂ ಸಹ ಈ ಪಕ್ಷಿ ಧಾಮವು ಭೌತಿಕವಾಗಿ ಮೈಸೂರು ಜಿಲ್ಲೆಯ ಮೈಸೂರು ನಗರಕ್ಕೆ ಅತಿ ಸನೀಹದಲ್ಲಿದೆ. ಅಂದರೆ ಕೇವಲ 16 ಕಿ.ಮೀ ಗಳಷ್ಟು ದೂರದಲ್ಲಿದೆ. ಅಲ್ಲದೆ ಮಂಡ್ಯ್ ಜಿಲ್ಲೆಯ ಶ್ರೀರಂಗಪಟ್ಟಣದಿಂದ ಕೇವಲ ಮೂರ್ನಾಲ್ಕು ಕಿ.ಮೀ ಗಳಷ್ಟೆ ದೂರದಲ್ಲಿದೆ. ಈ ಪಕ್ಷಿ ಧಾಮಕ್ಕೆ ತೆರಳುವುದು ತುಂಬ ಸುಲಭವಾಗಿದೆ. ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ನಿರಂತರವಾಗಿ ಸರ್ಕಾರಿ ಹಾಗು ಖಾಸಗಿ ಬಸ್ಸುಗಳು ಹೊರಡುತ್ತಿರುತ್ತವೆ.

ಅಲ್ಲದೆ ಬೆಂಗಳೂರಿನಿಂದ ಮೈಸೂರಿಗೆ ರೈಲು ಹಾಗು ರಸ್ತೆಯ ಮುಖಾಂತರ ಉತ್ತಮ ಸಂಪರ್ಕವಿದೆ. ಹಾಗಾಗಿ ಬೆಂಗಳೂರು ಹಾಗು ಮೈಸೂರಿನಿಂದ ಈ ಪಕ್ಷಿಧಾಮಕ್ಕೆ ನಿರಾಯಾಸವಗಿ ತಲುಪಬಹುದು. ಇಷ್ಟವಿದ್ದಲ್ಲಿ ಖಾಸಗಿ ಟ್ಯಾಕ್ಸಿಗಳನ್ನು ಕೂಡ ಬಾಡಿಗೆಗೆ ಪಡೆದು ಕುಟುಂಬ ಸಮೇತ ಈ ಪಕ್ಷಿಧಾಮದ ಪ್ರವಾಸ ಯೋಜನೆ ಹಾಕಿಕೊಳ್ಳಬಹುದು. ಜೂನ್ ನಿಂದ ಡಿಸೆಂಬರ್ ಸಮಯ ಈ ಸ್ಥಳಕ್ಕೆ ಭೇಟಿ ನೀಡಲು ಯೋಗ್ಯವಾಗಿದೆ.

ರಂಗನತಿಟ್ಟು:

ರಂಗನತಿಟ್ಟು:

ಬೆಳಿಗ್ಗೆ 9 ಘಂಟೆಯಿಂದ ಸಂಜೆ 6 ಘಂಟೆಯವರೆಗೆ ತೆರೆದಿರುವ ಈ ಪಕ್ಷಿ ಧಾಮಕ್ಕೆ ಪ್ರವೇಶಿಸಲು ಪ್ರವೇಶ ಶುಲ್ಕ ಪಾವತಿಸಬೇಕಾಗುತ್ತದೆ. ಕಾವೇರಿ ನದಿಯ ಸೊಬಗಿನಲ್ಲಿ ಈ ಧಾಮವಿರುವುದರಿಂದ ಬೋಟಿಂಗ್ ಸೌಲಭ್ಯವೂ ಸಹ ನಿಗದಿತ ಶುಲ್ಕಕ್ಕೆ ದೊರೆಯುತ್ತದೆ.

ಚಿತ್ರಕೃಪೆ: Gopal Venkatesan

ರಂಗನತಿಟ್ಟು:

ರಂಗನತಿಟ್ಟು:

ಈ ನದಿ ಪ್ರದೇಶವು ಅಲ್ಲಲ್ಲಿ ಚಿಕ್ಕ ಪುಟ್ಟ ನಡುಗಡ್ಡೆಗಳನ್ನು ಒಳಗೊಂಡಿದೆ. ಅಲ್ಲದೆ ನೀರಿನಲ್ಲಿ ಅಲ್ಲಲ್ಲಿ ಬಂಡೆಗಳನ್ನೂ ಸಹ ಕಾಣಬಹುದು. ದೋಣಿ ವಿಹಾರ ಮಾಡುವಾಗ ಈ ಬಂಡೆ ಸಂದುಗಳಲ್ಲಿ ಮೊಸಳೆಗಳು ಕಾಣ ಸಿಕ್ಕರೆ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ ಈ ನದಿಯಲ್ಲಿ ಸಾಕಷ್ಟು ಮೊಸಳೆಗಳೂ ಸಹ ಇವೆ.

ಚಿತ್ರಕೃಪೆ: David Brossard

ರಂಗನತಿಟ್ಟು:

ರಂಗನತಿಟ್ಟು:

ಮೊಸಳೆಗಳನ್ನಾಗಲಿ, ವೈವಿಧ್ಯಮಯ ಪಕ್ಷಿಗಳನ್ನಾಗಲಿ ಅವುಗಳ ನೈಜ ಚಟುವಟಿಕೆಗಳಲ್ಲಿ ಚಿತ್ರಗಳನ್ನು ಸೆರೆ ಹಿಡಿಯಲು ದೋಣಿ ವಿಹಾರ ಉತ್ತಮವಾಗಿದೆ. ಆದರೆ ಸಂಯಮ ಇರಬೇಕಾಗಿರುವುದು ಅವಶ್ಯಕ.

ಚಿತ್ರಕೃಪೆ: David Brossard

ರಂಗನತಿಟ್ಟು:

ರಂಗನತಿಟ್ಟು:

ಇನ್ನು ರಂಗನತಿಟ್ಟುವಿನಲ್ಲಿ ಚಿಕ್ಕ ಕಾಫಿ ಕೇಂದ್ರವೊಂದಿದ್ದು, ಕಾಫಿ, ಚಹಾ ಇತರೆ ತಿಂಡಿಗಳು ಮಾತ್ರವೆ ಇಲ್ಲಿ ದೊರೆಯುತ್ತದೆ. ಹೊಟ್ಟೆ ತುಂಬ ಊಟ ಬೇಕಿದ್ದರೆ ರಂಗನತಿಟ್ಟುವಿನ ಹೊರಗಡೆ, ಇಲ್ಲವೆ ಶ್ರೀರಂಗಪಟ್ಟಣ ಅಥವಾ ಮೈಸೂರಿಗೆ ತೆರಳುವುದು ಉತ್ತಮ ಆಯ್ಕೆಯಾಗಿರುತ್ತದೆ.

ಚಿತ್ರಕೃಪೆ: Senthil Kumar

ರಂಗನತಿಟ್ಟು:

ರಂಗನತಿಟ್ಟು:

1648 ರಲ್ಲಿ ಅಂದಿನ ಮೈಸೂರಿನ ಮಹಾರಾಜರಾದ ಕಂಠೀರವ ನರಸಿಂಹರಾಜರ್ ಒಡೇಯರ್ ಅವರು ಕಾವೇರಿ ನದಿಗೆ ನಿರ್ಮಿಸಿದ್ದರೆನ್ನಲಾದ ಒಡ್ಡಿನಿಂದ ಇಂದು ಇಲ್ಲಿ ಕಿರು ದ್ವೀಪಗಳನ್ನು ಕಾಣಬಹುದು.

ಚಿತ್ರಕೃಪೆ: Senthil Kumar

ರಂಗನತಿಟ್ಟು:

ರಂಗನತಿಟ್ಟು:

ನಂತರ ಭಾರತದ ಹೆಮ್ಮೆಯ ಪಕ್ಷಿ ವಿಜ್ಞಾನಿ ಡಾ. ಸಲೀಂ ಅಲಿಯವರು ಈ ಕಿರುದ್ವೀಪಗಳು ಪಕ್ಷಿಗಳ ವಂಶಾಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತಿರುವುದನ್ನು ಮನಗಂಡು 1940 ರಲ್ಲಿ ಮೈಸೂರಿನ ಮಹಾರಾಜರನ್ನು ಕುರಿತು ಈ ತಾಣವನ್ನು ಪಕ್ಷಿಧಾಮವನ್ನಾಗಿ ಘೋಷಿಸಬೇಕೆಂದು ಮನವೊಲಿಸಿದರು.

ಚಿತ್ರಕೃಪೆ: Senthil Kumar

ರಂಗನತಿಟ್ಟು:

ರಂಗನತಿಟ್ಟು:

ಈ ಧಾಮವು ತನ್ನ ಸುತ್ತ ಮುತ್ತಲೂ ಹಲವು ಬಗೆಯ ಮರಗಳು, ಶಾಂತ ಪರಿಸರ, ತಾಜಾತನದ ಅನುಭವಗಳನ್ನು ಹೊಂದಿದ್ದು, ವಿಹರಿಸುತ್ತಿರುವಾಗ ಮನಸ್ಸಿಗೆ ಮುದ ನೀಡುತ್ತದೆ. ಚಳಿಗಾಲ, ಇಲ್ಲಿ ಪಕ್ಷಿಗಳಿಗೆ ಮೀಸಲಾದ ಕಾಲ. ಸುಮಾರು 40,000 ದ ವರೆಗೂ ಪಕ್ಷಿಗಳು ಈ ಸಂದರ್ಭದಲ್ಲಿ ಇಲ್ಲಿ ಜಮಾಯಿಸುತ್ತವೆ.

ಚಿತ್ರಕೃಪೆ: Koshy Koshy

ರಂಗನತಿಟ್ಟು:

ರಂಗನತಿಟ್ಟು:

ನಿಮ್ಮೊಳಗಿನ ಇನ್ನೂ ಅನಾವರಣಗೊಳ್ಳದ ಛಾಯಾಗ್ರಾಹಕ ಪ್ರತಿಭೆಯನ್ನು ಹೊರ ಚಿಮ್ಮಿಸಲು ಇಲ್ಲಿನ ಪ್ರವಾಸ ಸುವರ್ಣ ಅವಕಾಶ. ವಿಶೀಷ್ಟ ಭಂಗಿಗಳಲ್ಲಿ ಪಕ್ಷಿಗಳನ್ನು ಚಿತ್ರಗಳಲ್ಲಿ ಸೆರೆ ಹಿಡಿದು ಸಂತೃಪ್ತಿಯ ಭಾವನೆಯನ್ನು ನಿಮ್ಮದಾಗಿಸಿಕೊಳ್ಳಿ. ನಿಜವಾಗಿಯು ಇದು ನಿಮಗೊಂದು ಅಭೂತಪೂರ್ವ ಅನುಭೂತಿಯನ್ನು ನೀಡುವುದಲ್ಲದೆ, ಮನಸ್ಸಿನ ದುಗುಡು ದುಮ್ಮಾನುಗಳನ್ನು ಹೊಡೆದೋಡಿಸುತ್ತದೆ.

ಚಿತ್ರಕೃಪೆ: Arul Jegadish

ರಂಗನತಿಟ್ಟು:

ರಂಗನತಿಟ್ಟು:

ಮಾರ್ಗದರ್ಶಕರುಳ್ಳ ದೋಣಿ ಪ್ರಯಾಣವು ದಿನದ ಸಮಯದಲ್ಲಿ ಇಲ್ಲಿ ಲಭ್ಯವಿರುತ್ತದೆ. ಕೇವಲ ಪಕ್ಷಿಗಳು ಮಾತ್ರವಲ್ಲದೆ ಈ ಪರಿಸರದಲ್ಲಿ ಕಂಡು ಬರುವ ಇತರೆ ಜೀವಿಗಳಾದ ಮೊಸಳೆ, ಬಾನೆಟ್ ಮಂಗ, ಹಾರುವ ನರಿ (ಫ್ಲೈಯಿಂಗ್ ಫಾಕ್ಸ್), ಭಾರತೀಯ ಬೂಧು ಬಣ್ಣದ ಮುಂಗುಸಿ, ಮಾನಿಟರ್ ಲಿಜಾರ್ಡ್ ನಂತಹ ಹತ್ತು ಹಲವು ಜೀವಿಗಳನ್ನು ನೋಡುತ್ತ ಆನಂದಿಸುತ್ತ ಕಾಲ ಕಳೆಯಬಹುದು.

ಚಿತ್ರಕೃಪೆ: _paVan_

ರಂಗನತಿಟ್ಟು:

ರಂಗನತಿಟ್ಟು:

ನೈಜ ಪರಿಸರದಲ್ಲಿ ಜೀವಿಗಳ ಚಲನ ವಲನ ಕುರಿತು ಪುಸ್ತಕದ ಬದನೆಕಾಯಿಗಿಂತಲೂ ನೈಜವಾಗಿ ತಿಳಿದುಕೊಳ್ಳಲು ಮಕ್ಕಳಿಗೆ ಇದೊಂದು ಜ್ಞಾನಯುಕ್ತ ಮನರಂಜನೆಯಾಗಿದೆ. ಅಷ್ಟೆ ಅಲ್ಲ, ಆಧುನಿಕ ಜೀವನ ಶೈಲಿಯಲ್ಲಿ ಕಳೆದು ಹೋಗಿರುವ ನಮಗೆ ಪ್ರಕೃತಿಯೊಡನಿರುವ ಅವಿನಾಭಾವ ಸಂಬಂಧವನ್ನು ಪುನರ್ ವಿಮರ್ಶಿಸುವುದಕ್ಕೆ ಈ ತರಹದ ಪ್ರವಾಸ ಅತ್ಯಂತ ಸಹಕಾರಿಯಾಗುತ್ತದೆ.

ಚಿತ್ರಕೃಪೆ: Pradeep Kumbhashi

ರಂಗನತಿಟ್ಟು:

ರಂಗನತಿಟ್ಟು:

ಪ್ರವಾಸದ ಆದರ್ಶ ಸಮಯದಲ್ಲಿ ಅಂದರೆ ಚಳಿಗಾಲದಲ್ಲಿ ಇಲ್ಲಿ ಕಂಡು ಬರುವ ಪಕ್ಷಿಗಳೆಂದರೆ, ಪೈಂಟೆಡ್ ಸ್ಟಾರ್ಕ್, ಏಷಿಯನ್ ಒಪನ್ ಬಿಲ್ ಸ್ಟಾರ್ಕ್, ಸ್ಪೂನ್ ಬಿಲ್, ವೂಲ್ಲಿ ನೆಕ್ಡ್ ಸ್ಟಾರ್ಕ್, ವ್ಹಿಸ್ಟ್ಲಿಂಗ್ ಡಕ್, ಇಮ್ಡಿಯನ್ ಶ್ಯಾಗ್, ಸ್ಟಾರ್ಕ್ ಬಿಲ್ಡ್ ಕಿಂಗ್ ಫಿಶರ್.

ಚಿತ್ರಕೃಪೆ: David Brossard

ರಂಗನತಿಟ್ಟು:

ರಂಗನತಿಟ್ಟು:

ಇವುಗಳಲ್ಲದೆ ಸಾಮಾನ್ಯವಾಗಿ ಎಲ್ಲಾ ಋತುವಿನಲ್ಲೂ ಕಂಡುಬರುವ ಪಕ್ಷಿಗಳೆಂದರೆ ಎಗ್ರೆಟ್ಸ್, ಕೊರ್ಮೊರಾಂಟ್ಸ್, ಒರಿಯಂಟಲ್ ಡಾರ್ಟರ್ ಮತ್ತು ಹೆರಾನ್‍ಗಳು. ಗ್ರೇಟ್ ಸ್ಟೋನ್ ಪ್ಲೊವರ್ ಮತ್ತು ರಿವರ್ ಟರ್ನ್‍ಗಳು ಕೂಡ ಇಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Koshy Koshy

ರಂಗನತಿಟ್ಟು:

ರಂಗನತಿಟ್ಟು:

ರಂಗನತಿಟ್ಟುವಿನ ಅನನ್ಯ ಪರಿಸರದಲ್ಲಿ ವೈವಿಧ್ಯಮಯ ಹಕ್ಕಿಗಳ ಚಿಲಿಪಿಲಿ.....

ಚಿತ್ರಕೃಪೆ: Ramesh Meda

ರಂಗನತಿಟ್ಟು:

ರಂಗನತಿಟ್ಟು:

ರಂಗನತಿಟ್ಟುವಿನ ಅನನ್ಯ ಪರಿಸರದಲ್ಲಿ ವೈವಿಧ್ಯಮಯ ಹಕ್ಕಿಗಳ ಚಿಲಿಪಿಲಿ.....

ಚಿತ್ರಕೃಪೆ: Nagesh Kamath

ರಂಗನತಿಟ್ಟು:

ರಂಗನತಿಟ್ಟು:

ರಂಗನತಿಟ್ಟುವಿನ ಅನನ್ಯ ಪರಿಸರದಲ್ಲಿ ವೈವಿಧ್ಯಮಯ ಹಕ್ಕಿಗಳ ಚಿಲಿಪಿಲಿ.....

ಚಿತ್ರಕೃಪೆ: David Brossard

ರಂಗನತಿಟ್ಟು:

ರಂಗನತಿಟ್ಟು:

ರಂಗನತಿಟ್ಟುವಿನ ಅನನ್ಯ ಪರಿಸರದಲ್ಲಿ ವೈವಿಧ್ಯಮಯ ಹಕ್ಕಿಗಳ ಚಿಲಿಪಿಲಿ.....

ಚಿತ್ರಕೃಪೆ: Jan Arendtsz

ಚಿತ್ರಕೃಪೆ: Hari Prasad Nadig

ರಂಗನತಿಟ್ಟು:

ರಂಗನತಿಟ್ಟು:

ರಂಗನತಿಟ್ಟುವಿನ ಅನನ್ಯ ಪರಿಸರದಲ್ಲಿ ವೈವಿಧ್ಯಮಯ ಹಕ್ಕಿಗಳ ಚಿಲಿಪಿಲಿ.....

ಚಿತ್ರಕೃಪೆ: Ritesh Nayak

ರಂಗನತಿಟ್ಟು:

ರಂಗನತಿಟ್ಟು:

ರಂಗನತಿಟ್ಟುವಿನ ಅನನ್ಯ ಪರಿಸರದಲ್ಲಿ ವೈವಿಧ್ಯಮಯ ಹಕ್ಕಿಗಳ ಚಿಲಿಪಿಲಿ.....

ಚಿತ್ರಕೃಪೆ: _paVan_

ರಂಗನತಿಟ್ಟು:

ರಂಗನತಿಟ್ಟು:

ರಂಗನತಿಟ್ಟುವಿನ ಅನನ್ಯ ಪರಿಸರದಲ್ಲಿ ವೈವಿಧ್ಯಮಯ ಹಕ್ಕಿಗಳ ಚಿಲಿಪಿಲಿ.....

ಚಿತ್ರಕೃಪೆ: Jan Arendtsz

ರಂಗನತಿಟ್ಟು:

ರಂಗನತಿಟ್ಟು:

ರಂಗನತಿಟ್ಟುವಿನ ಅನನ್ಯ ಪರಿಸರದಲ್ಲಿ ವೈವಿಧ್ಯಮಯ ಹಕ್ಕಿಗಳ ಚಿಲಿಪಿಲಿ.....

ಚಿತ್ರಕೃಪೆ: Dhruvaraj S

ಚಿತ್ರಕೃಪೆ: Sissssou2

ರಂಗನತಿಟ್ಟು:

ರಂಗನತಿಟ್ಟು:

ರಂಗನತಿಟ್ಟುವಿನ ಅನನ್ಯ ಪರಿಸರದಲ್ಲಿ ವೈವಿಧ್ಯಮಯ ಹಕ್ಕಿಗಳ ಚಿಲಿಪಿಲಿ.....

ಚಿತ್ರಕೃಪೆ: Subharnab Majumdar

ರಂಗನತಿಟ್ಟು:

ರಂಗನತಿಟ್ಟು:

ರಂಗನತಿಟ್ಟುವಿನ ಅನನ್ಯ ಪರಿಸರದಲ್ಲಿ ವೈವಿಧ್ಯಮಯ ಹಕ್ಕಿಗಳ ಚಿಲಿಪಿಲಿ.....

ಚಿತ್ರಕೃಪೆ: mdemon

ಚಿತ್ರಕೃಪೆ: Sharada Prasad CS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X