Search
  • Follow NativePlanet
Share
» »ಒತ್ತಡ ಕಡಿ, ಭೇಟಿ ನೀಡು ಪೊನ್ಮುಡಿ, ಉತ್ಸಾಹ ಪಡಿ

ಒತ್ತಡ ಕಡಿ, ಭೇಟಿ ನೀಡು ಪೊನ್ಮುಡಿ, ಉತ್ಸಾಹ ಪಡಿ

By Vijay

ಸಮುದ್ರ ಮಟ್ಟದಿಂದ ಅಮೋಘ 1100 ಮೀ ಎತ್ತರದಲ್ಲಿದ್ದು, ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಆವರಿಸಿ, ನಿಸರ್ಗ ರಸಿಕರನ್ನು ತನ್ನದೆ ಆದ ಧಾಟಿಯಲ್ಲಿ ಕೈಬಿಸಿ ಕರೆಯುತ್ತದೆ ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯಲ್ಲಿರುವ ಪೊನ್ಮುಡಿ ಎಂಬ ಚೊಕ್ಕಾದ ಸುಂದರ ಗಿರಿಧಾಮ.

ಮಲಯಾಳಂ ಭಾಷೆಯಲ್ಲಿ ಪೊನ್ ಎಂದರೆ ಬಂಗಾರ ಎಂತಲೂ ಮುಡಿ ಎಂದರೆ ಶಿಖರ ಅಥವಾ ಶೃಂಗ ಎಂತಲೂ ಅರ್ಥ ಬರುತ್ತದೆ. ಆದ್ದರಿಂದ ಈ ಸ್ಥಳದ ಹೆಸರು ಬಂಗಾರದ ಶಿಖರ ಎಂಬ ಅರ್ಥವನ್ನು ಹೊಂದಿದೆ. ಸ್ಥಳದ ಹೆಸರೆ ಬಂಗಾರ ಎಂದಿರುವಾಗ ಇಲ್ಲಿನ ನಿಸರ್ಗ ಸೌಂದರ್ಯವೂ ಹೇಗೆ ಬಂಗಾರಮಯವಾಗಿರಬಹುದೆಂದು ನೀವೆ ಊಹಿಸಬಹುದು.

ಟ್ರೆಕ್ ಚಟುವಟಿಕೆಗೂ ಸಹ ಅತಿ ಯೋಗ್ಯಮಯವಾಗಿರುವ ಪೊನ್ಮುಡಿಗೆ ತೆರಳಲು ತಿರುವನಂತಪುರದ ತಂಪನೂರು ಬಸ್ಸು ನಿಲ್ದಾಣ ಹಾಗೂ ನೆಡುಮಂಗಡ ಮತ್ತು ವಿತುರಾ ಪಟ್ಟಣಗಳಿಂದ ನಿಯಮಿತವಾಗಿ ಬಸ್ಸುಗಳು ದೊರೆಯುತ್ತವೆ. ಇದಕ್ಕೆ ಹತ್ತಿರದಲ್ಲಿರುವ ರೈಲು ಹಾಗೂ ವಿಮಾನ ನಿಲ್ದಾಣಗಳು ತಿರುವನಂತಪುರಂ.

ಪೊನ್ಮುಡಿ:

ಪೊನ್ಮುಡಿ:

ವರ್ಷಪೂರ್ತಿ ಪೊನ್ಮುಡಿಯು ಹಿತಕರವಾದ ಹವಾಮಾನದಿಂದ ಕೂಡಿರುತ್ತದೆ. ಟ್ರೆಕ್ಕಿಂಗ್ ತೆರಳಲು ತಿರುವನಂತಪುರಂ ಬೇಸ್ ಕ್ಯಾಂಪ್ ಅಥವಾ ಮೂಲ ಸ್ಥಳವಾಗಿ ಕಾರ್ಯ ನಿರ್ವಹಿಸುತ್ತದೆ.

ಚಿತ್ರಕೃಪೆ: vishwaant avk

ಪೊನ್ಮುಡಿ:

ಪೊನ್ಮುಡಿ:

ತಿರುವನಂತಪುರಂ ನಿಂದ ಪೊನ್ಮುಡಿಗೆ ಕಡಿಮೆ ಅಗಲದ ರಸ್ತೆಯಿದ್ದು ಅದು ಸುಮಾರು 22 ಮೊನಚಾದ ತಿರುವುಗಳಿಂದ ಕೂಡಿದೆ. ಈ ರಸ್ತೆಯ ಮೇಲೆ ಸಂಚರಿಸುವಾಗ ಪ್ರದೇಶದ ಕಣ್ಮನಗಳನ್ನು ಸೆಳೆಯುವಂತಹ ದೃಶ್ಯಾವಳಿಗಳನ್ನು ಆಸ್ವಾದಿಸಬಹುದು.

ಚಿತ್ರಕೃಪೆ: Girish...

ಪೊನ್ಮುಡಿ:

ಪೊನ್ಮುಡಿ:

ಪೊನ್ಮುಡಿಯ ಸುತ್ತಮುತ್ತಲೂ ಹಲವಾರು ಕೆರೆ ತೊರೆಗಳು, ಸುಂದರ ಭೂದೃಶ್ಯಾವಳಿಗಳು ಹಾಗೂ ಸ್ವಚ್ಛಂದವಾಗಿ ಹರಡಿರುವ ಸುಂದರ ಚಹಾ ತೋಟಗಳನ್ನು ಕಾಣಬಹುದು.

ಚಿತ್ರಕೃಪೆ: Girish...

ಪೊನ್ಮುಡಿ:

ಪೊನ್ಮುಡಿ:

ಪ್ರದೇಶದ ಒಂದು ಗುರುತರ ಆಕರ್ಷಣೆಯಾದ ಗೋಲ್ಡನ್ ವ್ಯಾಲಿ ಅಥವಾ ಬಂಗಾರದ ಕಣಿವೆ ಉತ್ಕೃಷ್ಟ ಮಟ್ಟದ ಸುಂದರ ದೃಶ್ಯಾವಳಿಗಳನ್ನು ನೋಡುಗರಿಗೆ ಒದಗಿಸುತ್ತದೆ. ನೀವು ಛಾಯಾಗ್ರಾಹಕ ಪ್ರಿಯರಾಗಿದ್ದಲ್ಲಿ ಇಲ್ಲಿ ನಿಮಗೆ ಸಾಕಷ್ಟು ಅವಕಾಶಗಳು ದೊರೆಯುತ್ತವೆ.

ಚಿತ್ರಕೃಪೆ: Girish...

ಪೊನ್ಮುಡಿ:

ಪೊನ್ಮುಡಿ:

ಮತ್ತೊಂದು ಆಕರ್ಷಣೆಯಾದ ಕಲ್ಲಾರ್ ನದಿಯು ತನ್ನ ತಂಪು ಹಾಗೂ ಹರಿಯುವ ಶುದ್ಧ ನೀರಿನ ಜೊತೆಗೆ ಎರಡು ಬದಿಗಳಲ್ಲಿ ಹಸಿರು ಸಂಪತ್ತಿನಿಂದ ತುಂಬಿ ತುಳುಕುತ್ತಿರುವ ಗಿಡ ಮರಗಳ ಒಂದು ಸುಂದರ ಅನುಭೂತಿಯನ್ನು ನಿಮಗೆ ಕರುಣಿಸುತ್ತದೆ.

ಚಿತ್ರಕೃಪೆ: Thejas Panarkandy

ಪೊನ್ಮುಡಿ:

ಪೊನ್ಮುಡಿ:

ಪೆಪ್ಪರಾ ವನ್ಯಧಾಮ, ಇಕೋ ಪಾಯಿಂಟ್ ಹಾಗೂ ವಿವಿಧ ಟ್ರೆಕ್ಕಿಂಗ್ ಮಾರ್ಗಗಳು ಪೊನ್ಮುಡಿಯಲ್ಲಿ ಕಂಡುಬರುವ ಕೆಲ ಇತರೆ ಪ್ರವಾಸಿ ಆಕರ್ಷಣೆಗಳಾಗಿವೆ. ಅದರಲ್ಲೂ ಗೋಲ್ಡನ್ ವ್ಯಾಲಿ ತನ್ನ ಮಂಜುಮಯ ಪರಿಸರದಿಂದ ಸಾಕಷ್ಟು ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತದೆ.

ಚಿತ್ರಕೃಪೆ: Easa Shamih

ಪೊನ್ಮುಡಿ:

ಪೊನ್ಮುಡಿ:

ತಿರುವನಂತಪುರಂನಿಂದ ಬೈಕುಗಳಲ್ಲಿ ಪ್ರಯಾಣ ಮಾಡಿದರಂತೂ ಪೊನ್ಮುಡಿಯ ಕಣ ಕಣದಲ್ಲು ಇರುವ ನೈಜ ಸೌಂದರ್ಯವನ್ನು ಸವಿಯುತ್ತಾ ಸಾಗಬಹುದು.

ಚಿತ್ರಕೃಪೆ: Thejas Panarkandy

ಪೊನ್ಮುಡಿ:

ಪೊನ್ಮುಡಿ:

ಪೊನ್ಮುಡಿ ಗಿರಿಧಾಮದಿಂದ ಕೇವಲ 1.5 ಕಿ.ಮೀ ದೂರದಲ್ಲಿ ಪೊನ್ಮುಡಿ ಜಲಪಾತವನ್ನು ಕಾಣಬಹುದು. ಪೊನ್ಮುಡಿ ರಿಸಾರ್ಟಿನಿಂದ ಕೇವಲ ಮೂರು ಕಿ.ಮೀ ದೂರದಲ್ಲಿ ಜಿಂಕೆ ಉದ್ಯಾನವನ್ನು ಕಾಣಬಹುದು.

ಚಿತ್ರಕೃಪೆ: Thejas Panarkandy

ಪೊನ್ಮುಡಿ:

ಪೊನ್ಮುಡಿ:

ಪ್ರದೇಶದ ಕಲ್ಲಾರ್ ಮುಖ್ಯ ರಸ್ತೆಯಿಂದ ಮೂರು ಕಿ.ಮೀ ಸಗಿದಾಗ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾದ ಮೀನ್ಮುಟ್ಟಿ ಜಲಪಾತ ಕೇಂದ್ರವನ್ನು ತಲುಪಬಹುದು.

ಚಿತ್ರಕೃಪೆ: Girish...

ಪೊನ್ಮುಡಿ:

ಪೊನ್ಮುಡಿ:

ಪೊನ್ಮುಡಿಯ ಹೊರವಲಯದಲ್ಲಿ ಸ್ಥಿತವಿರುವ ಪೆಪ್ಪರಾ ವನ್ಯಧಾಮವು ಏಷಿಯಾ ಆನೆಗಳು, ಮಲಬಾರ್ ಗ್ರೆ ಹಾರ್ನ್ ಬಿಲ್, ಸೀಹ ಬಾಲದ ಕೋತಿಗಳು, ಚಿರತೆ ಹಾಗೂ ಸಾಂಬಾರದಂತಹ ಹಲವು ವನ್ಯಜೀವಿ ಸಂಪತ್ತಿನಿಂದ ಕಂಗೊಳಿಸುತ್ತದೆ.

ಚಿತ್ರಕೃಪೆ: Easa Shamih

ಪೊನ್ಮುಡಿ:

ಪೊನ್ಮುಡಿ:

ಪೊನ್ಮುಡಿಯ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆಯೆಂದರೆ ಆಗಸ್ತಿಯಾರ್‍ಕೂಡಂ. ಇದು ಪಶ್ಚಿಮಘಟ್ಟದ ಎತ್ತರ ಪರ್ವತ ಶ್ರೇಣಿಗಳ ಪೈಕಿ ಒಂದಾಗಿದ್ದು ಅದ್ಭುತವಾದ ವನ್ಯಜೀವಿ ಸಂಪತ್ತಿಗೆ ಹೆಸರುವಾಸಿಯಾಗಿದೆ. ಆದರೆ ಈ ಪ್ರದೇಶದಲ್ಲಿ ಟ್ರೆಕ್ ಮಾಡಬೇಕೆಂದರೆ ಮುಂಚಿತವಾಗಿ ಅರಣ್ಯ ಇಲಾಖೆಯಿಂದ ಅನುಮತಿ ತೆಗೆದುಕೊಳ್ಳುವುದು ಕಡ್ಡಾಯ.

ಚಿತ್ರಕೃಪೆ: vishwaant avk

ಪೊನ್ಮುಡಿ:

ಪೊನ್ಮುಡಿ:

ಪೊನ್ಮುಡಿ ಪ್ರದೇಶದ ವಿಶೇಷತೆ ಎಂದರೆ ಇದು ಹಲವು ಬೆಟ್ಟ ಗುಡ್ಡಗಳು, ಕಣಿವೆಗಳು, ನದಿ, ಕೆರೆ ತೊರೆಗಳಿಂದ ಕೂಡಿದ್ದು ಪ್ರದೇಶದ ಜೈವಿಕ ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖವಾಗಿದೆ. ಅದರಂತೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನಿಗೂ ಒಂದು ವಿನೂತನವಾದ ಅನುಭವವನ್ನು ನೀಡುತ್ತದೆ.

ಚಿತ್ರಕೃಪೆ: Satish Somasundaram

ಪೊನ್ಮುಡಿ:

ಪೊನ್ಮುಡಿ:

ಪೊನ್ಮುಡಿಯಲ್ಲಿ 283 ಬಗೆಯ ವೈವಿಧ್ಯಮಯ ಪಕ್ಷಿಗಳನ್ನು ಕಾಣಬಹುದಾಗಿದ್ದು ಅವುಗಳಲ್ಲಿ ಹಲವು ಪ್ರಬೆಧದ ಪಕ್ಷಿಗಳು ಅಳಿವಿನಂಚಿನಲ್ಲಿವೆ. ಆದ್ದರಿಂದ ಈ ಒಂದು ತಾಣವು ಅಂಥ ಪಕ್ಷಿಗಳ ಸಂರಕ್ಷಣೆಯ ದೃಷ್ಟಿಯಿಂದ ಪ್ರಮುಖ ಪಾತ್ರವಹಿಸುತ್ತಿದೆ.

ಚಿತ್ರಕೃಪೆ: Thejas Panarkandy

ಪೊನ್ಮುಡಿ:

ಪೊನ್ಮುಡಿ:

ಕೇರಳ ರಾಜ್ಯದಲ್ಲೆ ಕಂಡುಬರುವ 483 ಬಗೆಯ ಪಕ್ಷಿಗಳಲ್ಲಿ ಸುಮಾರು 59 ಪ್ರತಿಶತದಷ್ಟು ಪಕ್ಷಿಗಳು ಪೊನ್ಮೂಡಿಯೊಂದರಲ್ಲೆ ಕಂಡುಬರುತ್ತದೆ. ಪಶ್ಚಿಮ ಘಟ್ಟದಲ್ಲೆ ಕಂಡುಬರುವ 332 ಬಗೆಯ ಚಿಟ್ಟೆಗಳಲ್ಲಿ 195 ಬಗೆಯ ಚಿಟ್ಟೆಗಳು ಪೊನ್ಮುಡಿಯೊಂದರಲ್ಲೆ ಕಂಡುಬರುತ್ತವೆ.

ಚಿತ್ರಕೃಪೆ: Thejas Panarkandy

ಪೊನ್ಮುಡಿ:

ಪೊನ್ಮುಡಿ:

ಇವುಗಳಲ್ಲದೆ ಪೊನ್ಮುಡಿಯು ಹಲವಾರು ಸರೀಸೃಪಗಳು ಹಾಗೂ ಉಭಯವಾಸಿಗಳಿಗೂ ಸಹ ಆಶ್ರಯ ಒದಗಿಸಿದೆ. ಇವುಗಳಲ್ಲಿ ಅತ್ಯಂತ ಅಪಾಯದ ಅಂಚಿನಲ್ಲಿರುವ ಟ್ರಾವನ್ಕೋರ್ ಆಮೆ, ಮಲಬಾರ್ ಹಾರುವ ಹಾಗೂ ಮರದ ಕಪ್ಪೆಗಳೂ ಸೇರಿವೆ.

ಚಿತ್ರಕೃಪೆ: Thejas Panarkandy

ಪೊನ್ಮುಡಿ:

ಪೊನ್ಮುಡಿ:

ಮನವನ್ನು ಚುಂಬಕದಂತೆ ಸೆಳೆಯುವ, ಪ್ರಕೃತಿ ಸಂಪತ್ತು ಹಾಗೂ ಜೀವ ಸಂಪತ್ತಿನಿಂದ ಶ್ರೀಮಂತವಾಗಿರುವ ಪೊನ್ಮುಡಿ.

ಚಿತ್ರಕೃಪೆ: Jebin Daniel Varghese

ಪೊನ್ಮುಡಿ:

ಪೊನ್ಮುಡಿ:

ಮನವನ್ನು ಚುಂಬಕದಂತೆ ಸೆಳೆಯುವ, ಪ್ರಕೃತಿ ಸಂಪತ್ತು ಹಾಗೂ ಜೀವ ಸಂಪತ್ತಿನಿಂದ ಶ್ರೀಮಂತವಾಗಿರುವ ಪೊನ್ಮುಡಿ.

ಚಿತ್ರಕೃಪೆ: Satish Somasundaram

ಪೊನ್ಮುಡಿ:

ಪೊನ್ಮುಡಿ:

ಮನವನ್ನು ಚುಂಬಕದಂತೆ ಸೆಳೆಯುವ, ಪ್ರಕೃತಿ ಸಂಪತ್ತು ಹಾಗೂ ಜೀವ ಸಂಪತ್ತಿನಿಂದ ಶ್ರೀಮಂತವಾಗಿರುವ ಪೊನ್ಮುಡಿ.

ಚಿತ್ರಕೃಪೆ: Kerala Tourism

ಚಿತ್ರಕೃಪೆ: Ajith

ಚಿತ್ರಕೃಪೆ: Pillai.mech

ಪೊನ್ಮುಡಿ:

ಪೊನ್ಮುಡಿ:

ಮನವನ್ನು ಚುಂಬಕದಂತೆ ಸೆಳೆಯುವ, ಪ್ರಕೃತಿ ಸಂಪತ್ತು ಹಾಗೂ ಜೀವ ಸಂಪತ್ತಿನಿಂದ ಶ್ರೀಮಂತವಾಗಿರುವ ಪೊನ್ಮುಡಿ.

ಚಿತ್ರಕೃಪೆ: Rodney Jose

ಚಿತ್ರಕೃಪೆ: Arunelectra

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X