Search
  • Follow NativePlanet
Share
» »ಇದು ತಿರುನೆಲ್ವೇಲಿಯ ಪಾಪನಾಸಂ

ಇದು ತಿರುನೆಲ್ವೇಲಿಯ ಪಾಪನಾಸಂ

By Vijay

ಪಾಪನಾಸಂ ಎಂಬ ಹೆಸರಿನ ಎರಡು ಪ್ರಸಿದ್ಧ ಪುಣ್ಯ ಕ್ಷೇತ್ರಗಳು ತಮಿಳುನಾಡು ರಾಜ್ಯದಲ್ಲೆ ನೆಲೆಸಿರುವುದು ವಿಶೇಷ. ಪಾಪನಾಸಂ (ಪಾಪನಾಶಂ) ಎಂದರೆ ಎಲ್ಲ ಪಾಪಗಳು ನಾಶ ಹೊಂದುವುದು ಎಂದಾಗುತ್ತದೆ. ಒಂದು ಪಾಪನಾಸಂ ತಂಜಾವೂರು ಜಿಲ್ಲೆಯಲ್ಲಿದ್ದರೆ, ಈ ಲೇಖನದಲ್ಲಿ ವಿವರಿಸಲಾದ ಪಾಪನಾಸಂ ತಿರುನೆಲ್ವೇಲಿ ಜಿಲ್ಲೆಯಲ್ಲಿದೆ.

ತಿರುನೆಲ್ವೇಲಿಯ ಪಾಪನಾಸಂ ಧಾರ್ಮಿಕವಾಗಿ ಪ್ರಸಿದ್ಧವಾಗಿರುವುದರ ಜೊತೆಗೆ ಮನರಂಜನೆಯ ದೃಷ್ಟಿಯಿಂದ ಪ್ರಖ್ಯಾತ ಪ್ರವಾಸಿ ತಾಣವಾಗಿಯೂ ಹೆಸರುವಾಸಿಯಾಗಿದೆ. ಪಾಪನಾಸಂ ಅಂಬಸಮುದ್ರ ತಾಲೂಕಿನಲ್ಲಿದ್ದು, ತಿರುನೆಲ್ವೇಲಿ ಪಟ್ಟಣದಿಂದ ಸುಮಾರು 60 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ಪಾಪನಾಸಂ ಅನೇಕ ಆಕರ್ಷಣೀಯ ಸ್ಥಳಗಳನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ತಾಮಿರಬರಣಿ ನದಿಯಾಗಿರಬಹುದು, ಅಗಸ್ತಿಯಾರ್ ಜಲಪಾತವಾಗಿರಬಹುದು, ಪಾನಾಸಂನ ಪ್ರಸಿದ್ಧ ಶಿವನ ದೇಗುಲವಾಗಿರಬಹುದು ಅಥವಾ ಪಾಪನಾಸಂ ಆಣೆಕಟ್ಟು/ಜಲಾಶಯ ಆಗಿರಬಹುದು ಹೀಗೆ ಅನೇಕ ಮನೋಹರವಾದ, ಮನಕ್ಕೆ ಹಿತ ಕರುಣಿಸುವ ಅನೇಕ ಸ್ಥಳಗಳನ್ನು ಇಲ್ಲಿ ಆಸ್ವಾದಿಸಬಹುದು.

ಪಾಪನಾಸಂ:

ಪಾಪನಾಸಂ:

ಚಿತ್ರದಲ್ಲಿರುವುದು ಪಾಪನಾಸಂ ಬಳಿಯಿರುವ ಅಗಸ್ತಿಯಾರ್ ಜಲಪಾತ. ಇದು ಪಾಪನಾಸಂ ಶಿವನ ದೇವಾಲಯದಿಂದ ಸುಮಾರು ನಾಲ್ಕು ಕಿ.ಮೀ ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: Sankara Subramanian

ಪಾಪನಾಸಂ:

ಪಾಪನಾಸಂ:

ಪಾಪನಾಸಂ ಶಿವನ ದೇವಾಲಯ ಹೆಸರುವಾಸಿಯಾದ ದೇವಾಲಯವಾಗಿದೆ. ಇಲ್ಲಿನ ಶಿವನನ್ನು ಭಕ್ತಿಯಿಂದ ಪೂಜಿಸಿದಾಗ ಸಕಲ ಪಾಪಗಳು ನಾಶ ಹೊಂದುತ್ತವೆ ಎಂದು ನಂಬಲಾಗಿದೆ.

ಚಿತ್ರಕೃಪೆ: MaRISELVAM

ಪಾಪನಾಸಂ:

ಪಾಪನಾಸಂ:

ತಾಮಿರಬರಣಿ ಪಾಪನಾಸಂನಲ್ಲಿ ಹರಿದಿರುವ ಒಂದು ನದಿಯಾಗಿದೆ. ಈ ನದಿಯಲ್ಲಿ ತಾಮ್ರದ ಅಂಶವು ಅಧಿಕವಾಗಿರುವುದರಿಂದ ಇದನ್ನು ತಾಮಿರಬರಣಿ ಎಂದು ಕರೆಯಲಾಗುತ್ತದೆ. ತಮಿಳಿನಲ್ಲಿ ತಾಮಿರಂ ಎಂದರೆ ತಾಮ್ರ.

ಚಿತ್ರಕೃಪೆ: Karthikeyan.pandian

ಪಾಪನಾಸಂ:

ಪಾಪನಾಸಂ:

ಮಣಿಮುತ್ತಾರ ಜಲಪಾತ, ಪಾಪನಾಸಂ ಬಳಿಯಿರುವ ಮತ್ತೊಂದು ಆಕರ್ಷಕ ಜಲಪಾತ. ಅದೆ ಹೆಸರಿನ ನದಿಯಿಂದ ಈ ಜಲಪಾತ ರೂಪಗೊಂಡಿದೆ.

ಚಿತ್ರಕೃಪೆ: K.I. Aroon Joshva Rusewelt

ಪಾಪನಾಸಂ:

ಪಾಪನಾಸಂ:

ಮಣಿಮುತ್ತಾರ ಜಲಾಶಯವೂ ಕೂಡ ಜನಪ್ರಿಯವಾದ ಪ್ರವಾಸಿ ಸ್ಥಳವಾಗಿದೆ. ಮಣಿಮುತ್ತಾರ ನದಿಗೆ ಅಡ್ಡಲಾಗಿ ಈ ಜಲಾಶಯದ ನಿರ್ಮಾಣ ಮಾಡಲಾಗಿದೆ.

ಪಾಪನಾಸಂ:

ಪಾಪನಾಸಂ:

ವಾನತೀರ್ಥಂ (ಪಾನತೀರ್ಥಂ) ಜಲಪಾತ ಪಾಪನಾಸಂ ಬಳಿಯಿರುವ ಆಕರ್ಷಕ ಜಲಪಾತವಾಗಿದೆ. ತಾಮಿರಬರಣಿ ನದಿಯಿಂದ ರೂಪಗೊಂಡ ಈ ಜಲಪಾತವು ಆಕರ್ಷಕ ಪ್ರವಾಸಿ ತಾಣವಾಗಿದೆ.

ಚಿತ್ರಕೃಪೆ: Bastintonyroy

ಪಾಪನಾಸಂ:

ಪಾಪನಾಸಂ:

ತಲಯಾನೈ ಅಣೆಕಟ್ಟು ಪಾಪನಾಸಂ ಬಳಿಯಿರುವ ಜನಪ್ರಿಯ ಪ್ರವಾಸಿ ತಾಣ.

ಚಿತ್ರಕೃಪೆ: Stalin T

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X