Search
  • Follow NativePlanet
Share
» »ಸಕಲ ಪಾಪಗಳನ್ನು ತೊಳೆಯುವ ಪಾಪನಾಶಂ

ಸಕಲ ಪಾಪಗಳನ್ನು ತೊಳೆಯುವ ಪಾಪನಾಶಂ

By Vijay

ಹೌದು, ಹೆಸರೆ ಹೇಳುವಂತೆ ಅಥವಾ ಇಲ್ಲಿಗೆ ಭೆಟಿ ನೀಡುವ ಭಕ್ತರು ನಂಬುವಂತೆ ಈ ದೇವಾಲಯದ ಭಗವಂತನು ಭಕ್ತಿಯಿಂದ ನೆನೆಯುವವರ ಒಳ್ಳೆಯ ರೀತಿಯಲ್ಲಿ ಬದಲಾವಣೆ ಬಯಸುವವರ ಸರ್ವ ಪಾಪಗಳನ್ನು ತೊಳೆದು ಹಾಕಿ ಅವರು ಮತ್ತೆ ಹೊಸ ಜೀವನ ಕಟ್ಟಿಕೊಳ್ಳುವಂತೆ ಹರಸುತ್ತಾನೆ.

ನಿಮಗಿಷ್ಟವಾಗಬಹುದಾದ : ಚೆನ್ನೈ ಹಾಗೂ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು

ಈ ದೇವಾಲಯವು ತಮಿಳು ನಾಡಿನ ಪ್ರಖ್ಯಾತ ಧಾರ್ಮಿಕ ಹಾಗೂ ಕೌಟುಂಬಿಕ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಇದನ್ನು ತಮಿಳಿನಲ್ಲಿ ಪಾಪನಾಸಂ ಎಂಬ ಹೆಸರಿನಿಂದಲೆ ಕರೆಯುತ್ತಾರೆ ಹಾಗೂ ಇಲ್ಲಿ ನೆಲೆಸಿರುವ ಶಿವನು ಪಾಪನಾಸನಾಥರ್ ನಾಗಿ ಜನರನ್ನು ಹರಸುತ್ತಿದ್ದಾನೆ.

ಪ್ರಸ್ತುತ ಲೇಖನದ ಮೂಲಕ ಪ್ರಸಿದ್ಧ ಪಿಕ್ನಿಕ್ ತಾಣವಾಗಿ ಗಮನ ಸೆಳೆಯುತ್ತಿರುವ ಪಾಪನಾಸಂ ಹಾಗೂ ಅಲ್ಲಿರುವ ಕೆಲವು ಪ್ರವಾಸಿ ಆಕರ್ಷಣೆಗಳ ಕುರಿತು ತಿಳಿಯಿರಿ.

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪನಾಶಂ ಒಂದು ಧಾರ್ಮಿಕ ಹಾಗೂ ಕೌಟುಂಬಿಕ ಯಾತ್ರಾ ಕೇಂದ್ರವಾಗಿದ್ದು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಅಂಬಸಮುದ್ರಂ ತಾಲೂಕಿನಲ್ಲಿದೆ.

ಚಿತ್ರಕೃಪೆ: Prakashಚಿತ್ರಕೃಪೆ: Prakash

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ತಾಮ್ರದ ಅಂಶ ಅಧಿಕವಾಗಿರುವ ತಾಮಿರಭರಣಿ ನದಿಯ ತಟದ ಮೇಲೆ ನೆಲೆಸಿರುವ ಪಾಪನಾಶಂ ಶಿವನ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ. ಹಾಗಾಗಿ ಇಲ್ಲಿ ನೆಲೆಸಿರುವ ಶಿವನನ್ನು ಪಾಪನಾಶನಾಥರ್ ಅಂದರೆ ಪಾಪಗಳನ್ನು ನಾಶ ಮಾಡುವ ದೇವರನ್ನಾಗಿ ಆರಾಧಿಸಲಾಗುತ್ತದೆ ಹಾಗೂ ದೇವತೆಯಾಗಿ ಲೋಕನಾಯಕಿ (ಉಳಗಂಬಿಗೈ) ಯನ್ನು ಆರಾಧಿಸಲಾಗುತ್ತದೆ.

ಚಿತ್ರಕೃಪೆ: MaRISELVAM

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಈ ಒಂದು ಸ್ಥಳದಲ್ಲಿ ಅಗಸ್ತ್ಯ ಮುನಿಗೆ ವೃಷಭ ವಾಹನ ಮೇಲೆ ಲೋಕನಾಯಕಿಯೊಡನೆ ದಂಪತಿ ಸಮೇತರಾಗಿ ಕುಳಿತ ಶಿವನ ಕಲ್ಯಾಣ ದರ್ಶನವಾಗಿತ್ತೆನ್ನಲಾಗಿದೆ. ಅಲ್ಲದೆ ಇಲ್ಲಿನ ನೀರಿನಲ್ಲಿ ತಾಮ್ರದ ಗುಣ ಇರುವುದರಿಂದ ಸಾಕಷ್ಟು ರೋಗಗಳು ಭಕ್ತಿ ಇಟ್ಟು ಬೇಡಿ ಕೊಳ್ಳುವವರಿಗೆ ಕಡಿಮೆಯಾಗುತ್ತದೆ ಎನ್ನಲಾಗಿದೆ.

ಚಿತ್ರಕೃಪೆ: Muthuraman99

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪನಾಶಂ ಸುತ್ತಮುತ್ತ ಸಾಕಷ್ಟು ಆನಂದ ಕರುಣಿಸುವ ಆಕರ್ಷಣೆಗಳಿವೆ. ಅದರಲ್ಲೊಂದಾಗಿದೆ ಅಗಸ್ತಿಯಾರ್/ಅಗಸ್ತ್ಯಾರ್ ಜಲಪಾತ ತಾಣ. ಈ ಜಲಪಾತ ಕೇಂದ್ರವು ನೋಡಲು ನಯನಮನೋಹರವಾಗಿದ್ದು ಉತ್ಸಾಹ ಹೊಂದುವಂತೆ ಮಾಡುತ್ತದೆ.

ಚಿತ್ರಕೃಪೆ: Prakash

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಮಂಜೋಲೈ ಬೆಟ್ಟಗಳು ಪಾಪನಾಶಂ ಸುತ್ತಮುತ್ತ ಹರಡಿದ್ದು ರಮಣೀಯ ನೋಟಗಳನ್ನು ಒದಗಿಸುತ್ತದೆ. ಕೆಲವರು ಹೇಳುವಂತೆ ಈ ಪರ್ವತ ಶ್ರೇಣಿಗಳಲ್ಲಿ ಜಗತ್ತಿನ ಇನ್ನ್ಯಾವ ಮೂಲೆಗಳಲ್ಲೂ ದೊರಕದ ಬಲು ಅಪರೂಪದ ಔಷಧಿ ಗುಣವುಳ್ಳ ಸಸ್ಯಗಳು ದೊರಕುತ್ತವಂತೆ.

ಚಿತ್ರಕೃಪೆ: Muthuraman99

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ವನತೀರ್ಥಂ ಪಾಪನಾಶಂನಲ್ಲಿ ನೋಡಬಹುದಾದ ಮತ್ತೊಂದು ಸುಂದರ ಜಲಪಾತವಾಗಿದೆ.

ಚಿತ್ರಕೃಪೆ: Bastintonyroy

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪನಾಶಂ ಆಣೆಕಟ್ಟು : ಇದೊಂದು ವಿವಿಧೋದ್ದೇಶದ ಆಣೆಕಟ್ಟಾಗಿದ್ದು ಜಲವಿದ್ಯುತ್ ಉತ್ಪಾದನೆಯ ಜಲಾಶಯವಾಗಿದೆ. ತೂತುಕುಡಿ ಹಾಗೂ ತಿರುನೆಲ್ವೇಲಿ ಜಿಲ್ಲೆಯ ಸುಮಾರು 86,107 ಎಕರೆಗಳಷ್ಟು ಕೃಷಿ ಭೂಮಿಗೆ ನೀರಾವರಿ ಒದಗಿಸುತ್ತದೆ.

ಚಿತ್ರಕೃಪೆ: L.vivian.richard

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಮಣಿಮುತ್ತಾರ ಜಲಪಾತ ಪಾಪನಾಶಂನಲ್ಲಿರುವ ಇನ್ನೊಂದು ಸುಂದರ ಜಲಪಾತ ಕೇಂದ್ರವಾಗಿದೆ.

ಚಿತ್ರಕೃಪೆ: Socialhumanity

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ತಾಮಿರಭರಣಿ ನದಿಯು ಪಾಪನಾಶಂನ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರಕೃಪೆ: Karthikeyan.pandian

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಪಾಪಗಳನ್ನು ನಾಶಪಡಿಸುವ ಪಾಪನಾಶಂ:

ಅಂಬಸಮುದ್ರಂನಿಂದ ಕೇವಲ ಹತ್ತು ಕಿ.ಮೀ ದೂರದಲ್ಲಿರುವ ತಲಯಣೈ ಎಂಬ ಸುಂದರವಾದ ತಾಣವಿದ್ದು ಇತ್ತೀಚಿನ ದಿನಗಳಿಂದ ಪ್ರಸಿದ್ಧಿ ಪಡೆಯುತ್ತಿದೆ. ತಾಮಿರಭರಣಿಯ ನದಿಯನ್ನು ತಡೆಯಲು ಆಣೆಕಟ್ಟು ನಿರ್ಮಿಸಲಾಗಿದ್ದು ಮೆಟ್ಟಿಲಿನ ಆಕಾರದ ಅಗಲವಾದ ಜಲಪಾತವನ್ನು ಇಲ್ಲಿ ಕಾನಬಹುದು.

ಚಿತ್ರಕೃಪೆ: Sukumaran sundar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X