Search
  • Follow NativePlanet
Share
» »ಕೇರಳದ ಪ್ರವೇಶ ದ್ವಾರ ಪಾಲಕ್ಕಾಡ್ ಭೇಟಿ

ಕೇರಳದ ಪ್ರವೇಶ ದ್ವಾರ ಪಾಲಕ್ಕಾಡ್ ಭೇಟಿ

By Vijay

ವಿಶಾಲವಾಗಿ ಹರಡಿರುವ ಭೂಮಿ, ಗ್ರಾಮೀಣ ಪರಿಸರ, ಎಲ್ಲೆಲ್ಲೂ ಸಾಲುಸಾಲಾಗಿ ಶಿಸ್ತಿನಿಂದ ತಲೆ ಎತ್ತಿ ನಿಂತಿರುವ ತೆಂಗಿನ ಮರಗಳು, ವಿಸ್ತಾರವಾಗಿ ವ್ಯಾಪಿಸಿಕೊಂಡಿರುವ ಹೊಲ ಗದ್ದೆಗಳು, ಇಂತಹ ಸ್ಥಳಕ್ಕೊಮ್ಮೆಯಾದರೂ ಭೇಟಿ ನೀಡಲೇಬೇಕು ಎಂಬನಿಸಿಕೆ ಉಂಟಾಗದೆ ಇರಲಾರದು. ಹೀಗೆ ಒಮ್ಮೆಯಾದರೂ ಪ್ರವಾಸ ಮಾಡ ಬೇಕಿದ್ದರೆ ಕೇರಳದ ಪಾಲಕ್ಕಾಡ್ ಗೆ ಒಮ್ಮೆ ಭೇಟಿ ನೀಡಿ.

ವಿಶೇಷ ಲೇಖನ : ಕೇರಳದ ಅದ್ಭುತ ಕಾಡುಗಳು

ಪಾಲಕ್ಕಾಡ್ ಎಂಬುದು ಕೇರಳ ರಾಜ್ಯದಲ್ಲಿರುವ ಒಂದು ಜಿಲ್ಲೆಯಾಗಿದೆ. ಆಂಗ್ಲ ಭಾಷೆಯಲ್ಲಿ ಪಾಲ್ಗಾಟ್ ಎಂದು ಕರೆಯಲ್ಪಡುವ ಈ ಜಿಲ್ಲೆಯು ಅಂಕು ಡೊಂಕಾಗಿ ಹರಡಿಕೊಂಡಿರುವ ಪಶ್ಚಿಮ ಘಟ್ಟ ಶ್ರೇಣಿಯ ಗುಂಟ ನೆಲೆಸಿರುವ ಪ್ರದೇಶವಾಗಿದೆ. ಸಿರು ಹೊದ್ದ ಭೂಭಾಗಗಳು, ದಟ್ಟವಾದ ಉಷ್ಣವಲಯದ ಕಾಡುಗಳು ಮತ್ತು ಕಲುಷಿತವಲ್ಲದ ಬೆಟ್ಟಗಾಡು ಪ್ರದೇಶಗಳೆಲ್ಲವು ಕೂಡಿ ಪಾಲಕ್ಕಾಡನ್ನು ನೋಡುಗರಿಗೆ ದೃಶ್ಯವೈಭವವನ್ನೆ ಕಣ್ಮುಂದೆ ತರುತ್ತವೆ.

ಪಾಲಕ್ಕಾಡ್ ನಲ್ಲಿರುವ ಹೋಟೆಲುಗಳು

ಪಾಲಕ್ಕಾಡ್ ನಲ್ಲಿರುವ ನೆಲ್ಲಿಯಂಪತಿ ಗಿರಿಧಾಮ, ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಮತ್ತು ಪರಂಬಿಕ್ಕುಲಂ ವನ್ಯಧಾಮಗಳು ಪರಿಸರ ಪ್ರಿಯರಿಗೆ ಮತ್ತು ವನ್ಯಜೀವಿ ಆಸಕ್ತರಿಗೆ ರಜಾ ದಿನಗಳನ್ನು ಕಳೆಯಲು ಹೇಳಿ ಮಾಡಿಸಿದ ತಾಣಗಳಾಗಿವೆ. ಕಂಜಿರಪುಳ, ಧೋನಿ ಜಲಪಾತ, ಒಟ್ಟಪಲಂ, ಕೊಲ್ಲೆಂಗೋಡ್ ಅರಮನೆ ಮತ್ತು ತೆಂಕುರುಸ್ಸಿಗಳೆಲ್ಲವು ಇಲ್ಲಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಕೇರಳ ರಾಜ್ಯದ ಒಟ್ಟಾರೆ ಭತ್ತದ ಉತ್ಪಾದನೆಯಲ್ಲಿ ಗಣನೀಯವಾಗಿ ಕೊಡುಗೆ ಸಲ್ಲಿಸುತ್ತಿರುವ ಪಾಲಕ್ಕಾಡ್ ನಿಸ್ಸಂದೇಹವಾಗಿ ಎರಡು ಬಿರುದುಗಳನ್ನು ತನ್ನದಾಗಿಸಿಕೊಂಡಿದೆ. ಅದರಲ್ಲಿ ಒಂದು "ಕೇರಳದ ಭತ್ತದ ಕಣಜ" ಎಂದಾದರೆ ಇನ್ನೊಂದು "ಕೇರಳದ ಧಾನ್ಯದ ಉಗ್ರಾಣ".

ಚಿತ್ರಕೃಪೆ: Dhruvaraj S

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪಾಲ್ಘಾಟ್ ಗ್ಯಾಪ್ ಎಂದು ಕರೆಯಲ್ಪಡುವ ಪಾಲಕ್ಕಾಡ್ ಪ್ರಾಂತ್ಯವು ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಒಂದು ಸ್ವಾಭಾವಿಕ ರಹದಾರಿಯಾಗಿದ್ದು, ಕೇರಳವನ್ನು ನೆರೆಯ ತಮಿಳುನಾಡಿನೊಂದಿಗೆ ಸಂಪರ್ಕಿಸುವ ಪ್ರವೇಶ ದ್ವಾರವಾಗಿದೆ.

ಚಿತ್ರಕೃಪೆ: Vysagh

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಕೇರಳದ ಇನ್ನಿತರ ಪ್ರದೇಶಗಳಂತಲ್ಲದೆ ಪಾಲಕ್ಕಾಡ್ ತಮಿಳು ಭಾಷಿಕರ ಜನಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಹೊಂದಿದೆ. ಹೀಗಾಗಿ ಇಲ್ಲಿ ಒಂದು ಮಿಶ್ರ ಸಂಸ್ಕೃತಿಯ ಏಳಿಗೆಯು ಸಹಜವಾಗಿ ಆಗಿದೆ.

ಚಿತ್ರಕೃಪೆ: OXLAEY.com

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ತಮಿಳು ನಾಡಿನ ಸಾಮೀಪ್ಯವು ಇಲ್ಲಿ ಕೇವಲ ಸಂಸ್ಕೃತಿಯ ಮೇಲಷ್ಟೇ ಅಲ್ಲದೆ ಇಲ್ಲಿನ ಆಹಾರ ಶೈಲಿಯ ಮೇಲು ಪ್ರಭಾವವನ್ನು ಬೀರಿದೆ. ಹಾಗಾಗಿ ಇಲ್ಲಿ ವಿಭಿನ್ನವಾದ ಕೇರಳ ಮತ್ತು ತಮಿಳು ನಾಡಿನ ರುಚಿಗಳ ಸಂಯೋಜನೆ ಹೊಂದಿರುವ ಆಹಾರಶೈಲಿಯನ್ನು ನಾವು ಕಂಡು ಸವಿಯಬಹುದು. ಪಾಲಕ್ಕಾಡ್ ನ ಜನಪ್ರೀಯ ಕಡಲೈ ಕರಿ ಹಾಗೂ ಪುಟ್ಟು.

ಚಿತ್ರಕೃಪೆ: Subhashish Panigrahi

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್‍ನಲ್ಲಿನ ಅನುಪಮವಾದ ಸಾಂಸ್ಕೃತಿಕ ಇತಿಹಾಸದ ಎರಡು ಪ್ರಮುಖ ಅಂಶಗಳೆಂದರೆ, ಒಂದು ಇಲ್ಲಿನ ದೇವಾಲಯಗಳಲ್ಲಿ ನಡೆಯುವ ಉತ್ಸವಗಳು ಮತ್ತು ಎರಡನೆಯದು ಶುದ್ಧವಾದ ಕರ್ನಾಟಕ ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ಇಲ್ಲಿ ಉಳಿಸಿಕೊಂಡು ಬರಲಾಗಿದೆ.

ಚಿತ್ರಕೃಪೆ: Muhammed Rias A

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಹಲವಾರು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ. ಕೋಟೆಗಳು, ದೇವಾಲಯಗಳು, ಜಲಾಶಯಗಳು, ವನ್ಯಜೀವಿಧಾಮಗಳು, ಜಲಪಾತಗಳು, ಉದ್ಯಾನವನಗಳು ಮತ್ತು ನಯನ ಮನೋಹರ ಭೂಭಾಗಗಳನ್ನು ಹೊಂದಿರುವ ಪಾಲಕ್ಕಾಡ್ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.

ಚಿತ್ರಕೃಪೆ: Dinuraj K

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಕೋಟೆ ಮತ್ತು ಜೈನ ದೇವಾಲಯಗಳು ಇತಿಹಾಸ ಆಸಕ್ತರನ್ನು ಮತ್ತು ಪ್ರವಾಸಿಗರನ್ನು ತನ್ನತ್ತ ವರ್ಷಪೂರ್ತಿ ಸೆಳೆಯುತ್ತಿರುತ್ತವೆ. ಪಾಲಕ್ಕಾಡ್ ಕೋಟೆ ಅಥವಾ ಟಿಪ್ಪುವಿನ ಕೋಟೆಯೆಂದೆ ಖ್ಯಾತಿ ಪಡೆದಿರುವ ಈ ಕೋಟೆಯು ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಪಾರಂಪರಿಕ ಕಟ್ಟಡವಾಗಿದೆ. ಈ ಕೋಟೆಯು 1766ರಲ್ಲಿ ಮೈಸೂರಿನ ಪ್ರಸಿದ್ಧ ದೊರೆಯಾದ ಹೈದರಾಲಿಯಿಂದ ನಿರ್ಮಿಸಲ್ಪಟ್ಟಿತು.

ಚಿತ್ರಕೃಪೆ: Pankajakshan Pangunni

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಈ ಕೋಟೆಯನ್ನು ಮೈಸೂರಿನ ಅರಸರು ಪ್ರಮುಖವಾಗಿ ಸೈನಿಕ ಕಾರ್ಯಾಚಟುವಟಿಕೆಗಳಿಗಾಗಿ ಬಳಸುತ್ತಿದ್ದರು. ಈ ಕೋಟೆಗೆ ಸಮೀಪದಲ್ಲಿ ಸ್ಥಳೀಯವಾಗಿ ಕೋಟ್ಟ ಮೈದಾನಂ ಅಥವಾ ಕೋಟೆ ಮೈದಾನ ಎಂದು ಕರೆಯಲ್ಪಡುವ ವಿಶಾಲವಾದ ಮೈದಾನವಿದೆ. ಇತಿಹಾಸದ ಪ್ರಕಾರ ಈ ಮೈದಾನವನ್ನು ಹಿಂದಿನ ಕಾಲದಲ್ಲಿ ಟಿಪ್ಪುವಿನ ಸೈನ್ಯದ ಕುದುರೆ ಲಾಯವನ್ನಾಗಿ ಬಳಸಲಾಗುತ್ತಿತ್ತಂತೆ.

ಚಿತ್ರಕೃಪೆ: Raj

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಈ ಕೋಟೆಯನ್ನು ಭಾರತದ ಪ್ರಾಚ್ಯಶಾಸ್ತ್ರ ಇಲಾಖೆಯು ನಿರ್ವಹಣೆ ಮಾಡುತ್ತಿದ್ದು ಪ್ರವೇಶ ಸಮಯ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ (ಎಲ್ಲಾ ದಿನಗಳು). ಪ್ರವೇಶ ಶುಲ್ಕ : ಏನೂ ಇಲ್ಲ.ಇನ್ನಿತರ ಶುಲ್ಕಗಳು : 20 ರೂಪಾಯಿ (ಸ್ಥಿರ ಛಾಯಾಗ್ರಹಣ), 50 ರೂಪಾಯಿ (ವೀಡಿಯೋ ಕ್ಯಾಮೆರಾ).

ಚಿತ್ರಕೃಪೆ: Edukeralam

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಮಲಂಪುಳಾ ಜಲಾಶಯ : ಪಾಲಕ್ಕಾಡ್ ಪಟ್ಟಣದಿಂದ ಕೇವಲ ಆರು ಕಿ.ಮೀ ಗಳಷ್ಟು ದೂರದಲ್ಲಿ ಮಲಂಪುಳಾ ಜಲಾಶಯವಿದೆ. ಭರತಪುಳಾ ನದಿಗೆ ಅಡ್ಡಲಾಗಿ ಈ ಜಲಾಶಯವನ್ನು ನಿರ್ಮಿಸಲಾಗಿದ್ದು, ಇದೊಂದು ಉತ್ತಮ ಪಿಕ್ನಿಕ್ ತಾಣವಾಗಿ ಪ್ರವಾಸಿಗರನ್ನು ಸೆಳೆಯುತ್ತದೆ.

ಚಿತ್ರಕೃಪೆ: Ranjithsiji

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಮಲಂಪುಳಾ ಆಣೆಕಟ್ಟು ಭರ್ತಿಯಾಗಿದ್ದಾಗ....ನಾಲ್ಕು ಕ್ರೆಸ್ಟ್ ಗೇಟುಗಳನ್ನು ಹೊಂದಿರುವ ಈ ಆಣಕಟ್ಟನ್ನು ಪ್ರಮುಖವಾಗಿ ನೀರಾವರಿ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ.

ಚಿತ್ರಕೃಪೆ: Zuhairali

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಹಸಿರಿನ ಛಾಯೆಯ ನಡುವೆ ಕಂಗೊಳಿಸುವ ಮಲಂಪುಳಾ ಜಲಾಶಯ ನೀರು.

ಚಿತ್ರಕೃಪೆ: Manojk

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಜಲಾಶಯಕ್ಕೆ ಹೊಂದಿಕೊಂಡಂತೆ ಉದ್ಯಾನವೊಂದನ್ನು ನಿರ್ಮಿಸಲಾಗಿದ್ದು, ಇದು ಜಲಾಶಯದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಚಿತ್ರಕೃಪೆ: Manojk

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈ ಉದ್ಯಾನವು ಒಂದು ಆದರ್ಶಮಯ ಪಿಕ್ನಿಕ್ ತಾಣವಾಗಿದ್ದು ಕುಟುಂಬ ಸಮೇತವಾಗಿ ಭೇಟಿ ನೀಡಲು ಅನುಕೂಲಕರವಾಗಿದೆ.

ಚಿತ್ರಕೃಪೆ: കാക്കര

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಮಲಂಪುಳಾ ಉದ್ಯಾನದಲ್ಲಿ ದೋಣಿ ವಿಹಾರದ ಸೌಲಭ್ಯವೂ ಸಹ ಇದ್ದು ಅದ್ಭುತವಾಗಿ ಸಮಯವನ್ನು ಕಳೆಯಬಹುದಾಗಿದೆ.

ಚಿತ್ರಕೃಪೆ: Ranjithsiji

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪರಂಬಿಕುಲಂ ವನ್ಯಜೀವಿಧಾಮವು ಪಶ್ಚಿಮ ಘಟ್ಟದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವ ಸಂಗಮ್ ಪರ್ವತ ಶ್ರೇಣಿಗಳಿಗೆ ಅಡ್ಡಲಾಗಿ ನೆಲೆಸಿದ್ದು, ಪಾಲಕ್ಕಾಡಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Manojk

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪರಂಬಿಕುಲಂ ರಾಷ್ಟ್ರೀಯ ಉದ್ಯಾನದಲ್ಲಿರುವ ಚಿಂಕಾರಿ ಅಮ್ಮನ ದೇವಾಲಯ.

ಚಿತ್ರಕೃಪೆ: നിരക്ഷരൻ

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಈ ಮನಮೋಹಕ ವನ್ಯಧಾಮವು ತನ್ನೊಳಗೆ ಅನೇಕ ವಿಸ್ಮಯಕಾರಿ ಪ್ರಾಣಿ ಮತ್ತು ಪಕ್ಷಿ ಪ್ರಬೇಧಗಳಿಗೆ ಆಶ್ರಯವನ್ನು ಕಲ್ಪಿಸಿಕೊಟ್ಟಿದೆ. ಅಲ್ಲದೆ ಇದು ಪರಿಸರ ಪ್ರಿಯರಿಂದ ಹಿಡಿದು, ವನ್ಯಜೀವಿ ಆಸಕ್ತರು, ಪ್ರೇಮಿಗಳು ಮತ್ತು ಚಾರಣಿಗರಿಗೆ ಹೇಳಿ ಮಾಡಿಸಿದ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ.

ಚಿತ್ರಕೃಪೆ: PP Yoonus

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಈ ವನ್ಯಧಾಮದ ಪ್ರದೇಶವನ್ನು ಮೂರು ಭಾಗಗಳಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ ಕೋರ್ ವಲಯ, ಬಫ್ಫರ್ ವಲಯ ಮತ್ತು ಪ್ರವಾಸಿ ವಲಯ. ಪ್ರವಾಸಿಗರು ಇಲ್ಲಿ ಅಪರೂಪದ ಜೀವ ಪ್ರಬೇಧಗಳನ್ನು ನೋಡಬಹುದು. ಅವುಗಳಲ್ಲಿ ಹುಲಿ, ಚಿರತೆ, ಏಶಿಯಾದ ಆನೆ, ಕಡವೆ, ನಾಗರಹಾವು, ನೀಲಗಿರಿ ಲಂಗೂರ್, ನೀಲಗಿರಿ ತಹರ್, ಸಂಬಾರ್,ಬೊನ್ನೆಟ್, ಮಕಾಕೆಗಳು, ಚುಕ್ಕೆ ಜಿಂಕೆ, ಭಾರತದ ಕಾಡು ನಾಯಿ ಮತ್ತು ಆಮೆಗಳು ಪ್ರಮುಖವಾದುದಾಗಿವೆ.

ಚಿತ್ರಕೃಪೆ: Augustus Binu

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪಕ್ಷಿ ವೀಕ್ಷಕರು ಇಲ್ಲಿನ ಸಲೀಂ ಅಲಿ ಪಕ್ಷಿ ವಿಶ್ಲೇಷಣಾ ಕೇಂದ್ರ ಮತ್ತು ಸಲೀಂ ಅಲಿ ಗ್ಯಾಲರಿಯಿಂದ ಮಹತ್ವದ ಪ್ರಯೋಜನಗಳನ್ನು ಪಡೆಯಬಹುದು. ಈ ವನ್ಯಧಾಮವು ಆಕರ್ಷಕವಾದ ಚಾರಣದ ಹಾದಿಗಳನ್ನು ಒಳಗೊಂಡಿದ್ದು, ಪ್ರವಾಸಿಗರು ಇಲ್ಲಿನ ಅಧಿಕೃತ ಪ್ರಾಧಿಕಾರದಿಂದ ಅನುಮತಿ ಪಡೆದೆ ಸುತ್ತಾಡಬೇಕು. ಅಲ್ಲದೆ ಜಂಗಲ್ ಕ್ಯಾಂಪ್‍ಗಳು, ರಾತ್ರಿ ವಸತಿ ಸೌಲಭ್ಯಗಳು, ಪರಿಸರ ಶಿಕ್ಷಣ ಪ್ಯಾಕೇಜ್‍ಗಳು, ನೌಕಾ ವಿಹಾರಗಳು ಮತ್ತು ವೃಕ್ಷ ಕುಟೀರಗಳು ಇಲ್ಲಿ ಲಭ್ಯವಿದ್ದು, ಪ್ರವಾಸಿಗರಿಗೆ ಪ್ರಕೃತಿಯ ಕಾಣದ ಮುಖವನ್ನು ಪರಿಚಯಿಸುವ ಕೆಲಸಗಳನ್ನು ಮಾಡುತ್ತವೆ.

ಚಿತ್ರಕೃಪೆ: PP Yoonus

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪರಂಬಿಕುಲಂ ವನ್ಯಧಾಮದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ "ಕಣ್ಣಿಮರಂ" ಎಂಬ ತೇಗದ ವೃಕ್ಷ. ಇದು ಜಗತ್ತಿನಲ್ಲೆ ಅತಿ ದೊಡ್ಡದಾದ ತೇಗದ ಮರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರ ಕಾಂಡದ ವ್ಯಾಸ 6.57 ಮೀ ಹಾಗೂ ಇದರ ಎತ್ತರ 48.05 ಮೀ ಗಳು. 1994-95 ರಲ್ಲಿ ಭಾರತ ಸರ್ಕಾರವು ಇದಕ್ಕೆ "ಮಹಾ ವೃಕ್ಷ" ಎಂಬ ಪುರಸ್ಕಾರ ನೀಡಿ ಸನ್ಮಾನಿಸಿದೆ.

ಚಿತ್ರಕೃಪೆ: Satheesan.vn

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಒಟ್ಟಪಲಂ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಒಂದು ಪ್ರಮುಖ ಪಟ್ಟಣವಾಗಿದೆ. ಇದು ಭರತಪುಳ ನದಿ ದಂಡೆಯಲ್ಲಿದೆ. ಈ ಪಟ್ಟಣವು ವಿಭಿನ್ನವಾದ ಸಂಸ್ಕೃತಿಗೆ ಮನೆಮಾತಾಗಿದ್ದು, ತನ್ನ ಪುರಾತನ ಪಾರಂಪರಿಕತೆಯಿಂದಾಗಿಯು ಪಾಲಕ್ಕಾಡ್ ಜಿಲ್ಲೆಯಲ್ಲಿಯೆ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಂಡಿದೆ. ಒಟ್ಟಪಲಂ ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ಕಿಲ್ಲಿಕ್ಕುರುಸ್ಸಿಮಂಗಲಂ ಎಂಬ ಸ್ಥಳವು ಈ ಪ್ರಾಂತ್ಯದಲ್ಲಿಯೆ ಪ್ರಮುಖ ಆಕರ್ಷಣೆಯಾಗಿದೆ. ಕಿಲ್ಲಿಕ್ಕುರುಸ್ಸಿಮಂಗಲಂ ಕುಂಜನ್ ನಾಯರ್ ಎಂಬ ಕೇರಳದ ಅತ್ಯಂತ ಪ್ರಸಿದ್ಧ ಕವಿಯ ತವರೂರು.

ಚಿತ್ರಕೃಪೆ: Sreekanthv

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಕಂಜಿರಪುಳ ಎನ್ನುವುದು ಪಾಲಕ್ಕಾಡಿನಿಂದ 40 ಕಿ.ಮೀ ದೂರದಲ್ಲಿರುವ ಒಂದು ಸುಂದರ ಪಟ್ಟಣವಾಗಿದೆ. ಈ ಪಟ್ಟಣದ ಪ್ರಮುಖ ಆಕರ್ಷಣೆಯೆಂದರೆ ಪಶ್ಚಿಮ ಘಟ್ಟದ ಭವ್ಯ ಹಿನ್ನಲೆಯಲ್ಲಿ ಎದ್ದು ನಿಂತಿರುವ ಸುಂದರವಾದ ಜಲಾಶಯ. ಈ ಜಲಾಶಯವನ್ನು ಸಿರುವನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಪ್ರಾಂತ್ಯದ ಸೌಂದರ್ಯವು ಪ್ರವಾಸಿಗರನ್ನು ತನ್ನತ್ತ ಹೆಚ್ಚಾಗಿ ಆಕರ್ಷಿಸುತ್ತದೆ.

ಚಿತ್ರಕೃಪೆ: Lallji

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡಿನಲ್ಲಿರುವ ಜೈನ್ ದೇವಾಲಯವು ಒಂದು ಐತಿಹಾಸಿಕ ಸ್ಮಾರಕವಾಗಿದೆ. ಇದು ಈ ಊರಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಸ್ಪಷ್ಟವಾಗಿ ಅಭಿವ್ಯಕ್ತಪಡಿಸುತ್ತದೆಂದರೂ ತಪ್ಪಾಗಲಾರದು. ಇದು ಪಾಲಕ್ಕಾಡ್ ಬಳಿಯಿ ರುವ ಜೈನ್‍ಮೇಡು ಎಂಬ ಸುಂದರ ಸ್ಥಳದಲ್ಲಿ ನೆಲೆಗೊಂಡಿದೆ. ಚಂದ್ರನಾಥ ದೇವಾಲಯ ಎಂದು ಸಹ ಕರೆಯಲ್ಪಡುವ ಇದು ಗತಕಾಲದ ಭವ್ಯ ಇತಿಹಾಸದಿಂದಾಗಿ ಗಮನಸೆಳೆಯುತ್ತಿರುವ ದೇಶದ ಕೆಲವೆ ಕೆಲವು ಜೈನದೇವಾಲಯಗಳ ಸಾಲಿಗೆ ಸೇರುತ್ತದೆ.

ಚಿತ್ರಕೃಪೆ: Shijualex

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪಟ್ಟಣದಿಂದ 60 ಕಿ.ಮೀ ದೂರದಲ್ಲಿರುವ ಒಂದು ಪುಟ್ಟ ಗಿರಿಧಾಮ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತದೆ. ಅದೆ ನೆಲ್ಲಿಯಾಂಪತಿ. ಹಾಗೂ ಹೀಗೂ ಸ್ವಲ್ಪ ಸಮಯ ಹೊಂದಿಸಿಕೊಂಡು ಇದಕ್ಕೆ ಭೇಟಿ ನೀಡಿದರೆ ಮೋಸ ಹೋಗುವ ಮಾತೆ ಇಲ್ಲ. ಇದನ್ನು ಕೇರಳದ ಊಟಿ ಎಂದೆ ಪ್ರೀತಿಯಿಂದ ಕರೆಯುತ್ತಾರೆ. ಸುಂದರವಾದ ಪ್ರಕೃತಿ ಸೊಬಗಿನಿಂದ ಈ ಗಿರಿಧಾಮವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಚಿತ್ರಕೃಪೆ: Rajesh.clp

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ನೆಲ್ಲಿಯಾಂಪತಿ ಗಿರಿಧಾಮದ ಒಂದು ಚಿತ್ರ.

ಚಿತ್ರಕೃಪೆ: Dilshad Roshan

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ತಂಪುತಂಪಾದ ನೆಲ್ಲಿಯಾಂಪತಿಯಲ್ಲಿರುವ ಪರ್ವತ ಧಾರೆಯ ವಸುಂಧರೆಯ ಮೇಲೆ ಪಯಣ.

ಚಿತ್ರಕೃಪೆ: Kjrajesh

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಅಟ್ಟಪ್ಪಾಡಿ, ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಘಾಟ್ ತಾಲೂಕಿನಲ್ಲಿರುವ ಒಂದು ರಕ್ಷಿತ ಅರಣ್ಯ ಪ್ರದೇಶವಾಗಿದೆ. ಇಲ್ಲಿರುವ ಮಲ್ಲೇಶ್ವರನ್ ಗಿರಿ ಶಿಖರವು ಆಕರ್ಷಕ ನೋಟದ ಬೆಟ್ಟ ಶ್ರೇಣಿಯಾಗಿದೆ.

ಚಿತ್ರಕೃಪೆ: Prasanth P Jose

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪೊತುಂಡು ಆಣೆಕಟ್ಟು, ಪಾಲಕ್ಕಾಡ್ ಜಿಲ್ಲೆಯ ಒಂದು ಹಳ್ಳಿಯಲ್ಲಿರುವ ಈ ಆಣೆಕಟ್ಟಿಗೆ ತಂತ್ರಜ್ಞಾನ ಪ್ರಿಯ ಪ್ರವಾಸಿಗರು ಭೇಟಿ ನೀಡಲೇಬೇಕು. 19 ನೆಯ ಶತಮಾನದಲ್ಲಿ ಈ ಆಣೆಕಟ್ಟಿನ ನಿರ್ಮಾಣವಾಗಿದ್ದು, ಸಾಂಪ್ರದಾಯಿಕ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ವಿಶೇಷತೆಯೆಂದರೆ ಸಾಮಾನ್ಯವಾಗಿ ಆಣಕಟ್ಟೆಗಳಲ್ಲಿ ಪ್ರಮುಖವಾಗಿ ಬಳಸಲ್ಪಡುವ ಸಿಮೆಂಟ್ ಕಾಂಕ್ರೀಟ್ ಬಳಸದೆ ಇದನ್ನು ಬೆಲ್ಲ ಹಾಗೂ ಕ್ವಿಕ್ ಲೈಮ್ ಗಳ ಮಿಶ್ರಣದಿಂದ ನಿರ್ಮಿಸಲಾಗಿದೆ.

ಚಿತ್ರಕೃಪೆ: LIC Habeeb

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ವಾಳಯಾರ್ ಆಣೆಕಟ್ಟು, ಪಾಲಕ್ಕಾಡ್ ಬಳಿಯಿರುವ ಒಂದು ಪ್ರಶಾಂತ ಸ್ಥಳವಾಗಿದೆ. ನಿಮ್ಮ ಸಂಗಾತಿಯೊಡನೆ ಏಕಾಂತದಲ್ಲಿ ಹಾಯಾಗಿ ಸಮಯ ಕಳೆಬೇಕಿದ್ದರೆ, ಈ ಆಣೆಕಟ್ಟು ತಾಣವು ನೀವು ಭೇಟಿ ನೀಡಬೇಕಾದ ಸ್ಥಳ.

ಚಿತ್ರಕೃಪೆ: Bijesh

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ನಿಂದ 25 ಕಿ.ಮೀ ದೂರದಲ್ಲಿರುವ ಮೀನವಲ್ಲಂ ಜಲಪಾತವು ಒಂದು ಅದ್ಭುತವಾದ ಪ್ರವಾಸಿ ಆಕರ್ಷಣೆಯಾಗಿದೆ. ಒಟ್ಟು ಹತ್ತು ಸ್ತರಗಳಲ್ಲಿ ಸುಮಾರು 20 ರಿಂದ 25 ಅಡಿಗಳಷ್ಟು ಎತ್ತರದಿಂದ ಈ ಜಲಪಾತವು ಧರೆಗೆ ಧುಮುಕುತ್ತದೆ.

ಚಿತ್ರಕೃಪೆ: Raj

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ಪ್ರವಾಸ:

ಪಾಲಕ್ಕಾಡ್ ನಗರವು ರಸ್ತೆ ಮೂಲಕ ಅತ್ಯುತ್ತಮ ಸಂಪರ್ಕವನ್ನು ಹೊಂದಿದ್ದು, ನೆರೆಯ ತಮಿಳು ನಾಡಿನ ಹಲವು ಜಿಲ್ಲೆಗಳಿಂದ ಹಲವಾರು ಬಸ್ಸುಗಳು ಪಾಲಕ್ಕಾಡಿಗೆ ಲಭ್ಯವಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ಸುಗಳು ಕೊಯಮತ್ತೂರ್, ಕೊಚ್ಚಿ, ಕ್ಯಾಲಿಕಟ್ ಮತ್ತು ತ್ರಿಶ್ಶೂರ್ ನಗರಗಳಿಂದ ಪಾಲಕ್ಕಾಡಿಗೆ ಬಂದು ದೊರೆಯುತ್ತವೆ. ತಿರುವನಂತಪುರಂ , ಬೆಂಗಳೂರು ಮತ್ತು ಚೆನ್ನೈನಂತಹ ನಗರಗಳಿಂದ ವೊಲ್ವೋ ಬಸ್ಸುಗಳು ಪಾಲಕ್ಕಾಡಿಗೆ ಲಭ್ಯವಿದೆ. ಪಾಲಕ್ಕಾಡ್ ಬೆಂಗಳೂರಿನಿಂದ ಸುಮಾರು 400 ಕಿ.ಮೀ ಗಳಷ್ಟು ಅಂತರದಲ್ಲಿದೆ.

ಚಿತ್ರಕೃಪೆ: Dhruvaraj S

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X