Search
  • Follow NativePlanet
Share
» »ಮೋದಿ ಉದ್ಘಾಟಿಸಿರುವ ಈ ಯುದ್ಧ ಸ್ಮಾರಕದಲ್ಲಿ ಏನೇನೆಲ್ಲಾ ಇದೆ ಗೊತ್ತಾ?

ಮೋದಿ ಉದ್ಘಾಟಿಸಿರುವ ಈ ಯುದ್ಧ ಸ್ಮಾರಕದಲ್ಲಿ ಏನೇನೆಲ್ಲಾ ಇದೆ ಗೊತ್ತಾ?

ವೀರ ಮರಣವನ್ನಪ್ಪಿದ ಸೈನಿಕರ ನೆನಪಿಗಾಗಿ ದೆಹಲಿಯ ಇಂಡಿಯಾ ಗೇಟ್‌ನ ಸಮೀಪದಲ್ಲಿ ನಿರ್ಮಿಸಲಾಗಿರುವ ನ್ಯಾಷನಲ್ ವಾರ್ ಮೆಮೋರಿಯಲ್‌ ಸೋಮವಾರ ಉದ್ಘಾಟನೆ ಗೊಂಡಿದೆ.

ನಿನ್ನೆಯಷ್ಟೇ ಪ್ರಧಾನಿ ಮೋದಿ ದೆಹಲಿಯ ಇಂಡಿಯಾ ಗೇಟ್ ಸಂಕೀರ್ಣದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಉದ್ಘಾಟಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ. 40 ಎಕರೆ ಪ್ರದೇಶದಲ್ಲಿ ಹರಡಿರುವ ಸ್ಮಾರಕವು ರಾಜ್ಯಕ್ಕೆ 176 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹಾಗಾದರೆ ಈ ಯುದ್ಧ ಸ್ಮಾರಕದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಎಲ್ಲಿದೆ ಈ ಸ್ಮಾರಕ

ಎಲ್ಲಿದೆ ಈ ಸ್ಮಾರಕ

PC: youtube
ವೀರ ಮರಣವನ್ನಪ್ಪಿದ ಸೈನಿಕರ ನೆನಪಿಗಾಗಿ ದೆಹಲಿಯ ಇಂಡಿಯಾ ಗೇಟ್‌ನ ಸಮೀಪದಲ್ಲಿ ನಿರ್ಮಿಸಲಾಗಿರುವ ನ್ಯಾಷನಲ್ ವಾರ್ ಮೆಮೋರಿಯಲ್‌ ಸೋಮವಾರ ಉದ್ಘಾಟನೆ ಗೊಂಡಿದೆ. ಈ ಯುದ್ಧ ಸ್ಮಾರಕದಲ್ಲಿ ಸ್ವಾತಂತ್ರ್ಯ ನಂತರ ಅನೇಕ ಯುದ್ಧಗಳಲ್ಲಿ ಹೋರಾಡಿ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿರುವಂತಹ ಸುಮಾರು 22,600 ಸೈನಿಕರಿಗೆ ಸಮ್ಮಾನಿಸಲಾಗಿದೆ.

 ಇನ್ನೂ ಕನ್ಯೆಯಾಗಿಯೇ ಉಳಿದಿರುವ ಈ ಕುಮಾರಿ ಅಮ್ಮನ್ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು ಇನ್ನೂ ಕನ್ಯೆಯಾಗಿಯೇ ಉಳಿದಿರುವ ಈ ಕುಮಾರಿ ಅಮ್ಮನ್ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು

40ಎಕರೆ ಪ್ರದೇಶದಲ್ಲಿದೆ ಈ ಸ್ಮಾರಕ

40ಎಕರೆ ಪ್ರದೇಶದಲ್ಲಿದೆ ಈ ಸ್ಮಾರಕ

PC:राष्ट्रीय समर स्मारक / National War Memorial FB
40ಎಕರೆ ಪ್ರದೇಶದಲ್ಲಿ ಆವರಿಸಿರುವ ಈ ಸ್ಮಾರಕವನ್ನು 176ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.ಇಂಡಿಯಾ ಗೇಟ್‌ದ ಮಾದರಿಯಲ್ಲಿ ನಿರ್ಮಿಸಲಾಗಿರುವ ಈ ಸ್ಮಾರಕದಲ್ಲಿ 15ಮೀಟರ್ ಎತ್ತರದ ಸ್ಮಾರಕ ಕಂಬವಿದೆ. ಇದರ ಕೆಳಗೆ ಅಖಂಡ ಜ್ಯೋತಿ ಉರಿಯುತ್ತಿರುತ್ತದೆ. ಈ ಸ್ಮಾರಕದಲ್ಲಿ ಭಿತ್ತಿ ಚಿತ್ರಗಳು, ಗ್ರಾಫೀಕ್ ಪೇನಾಲ್, ಯುದ್ಧದಲ್ಲಿ ಮಡಿದವರ ಹೆಸರು ಹಾಗೂ 21 ಪರಮವೀರ ಚಕ್ರ ವಿಜೇತರ ಮೂರ್ತಿಗಳನ್ನು ಅಳವಡಿಸಲಾಗಿದೆ.

ನಾಲ್ಕು ಚಕ್ರಗಳಲ್ಲಿ ಇರಿಸಲಾಗಿದೆ

ನಾಲ್ಕು ಚಕ್ರಗಳಲ್ಲಿ ಇರಿಸಲಾಗಿದೆ

PC: youtube
ಈ ಸ್ಮಾರಕವನ್ನು ನಾಲ್ಕು ಚಕ್ರಗಳಲ್ಲಿ ಇರಿಸಲಾಗಿದೆ. ಅವುಗಳನ್ನು ಅಮರ ಚಕ್ರ, ವೀರತಾ ಚಕ್ರ, ತ್ಯಾಗ ಚಕ್ರ, ರಕ್ಷಕ ಚಕ್ರ ಎಂಬ ಹೆಸರನ್ನು ನೀಡಲಾಗಿದೆ. ಅವುಗಳಲ್ಲಿ ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಯಲ್ಲಿ ವೀರ ಮರಣ ಹೊಂದಿರುವ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಗಿದೆ.

ನಂಜನಗೂಡಿನ ಸುತ್ತಮುತ್ತ ಇರುವ ಈ ತಾಣಗಳ ಬಗ್ಗೆ ಗೊತ್ತಾ?ನಂಜನಗೂಡಿನ ಸುತ್ತಮುತ್ತ ಇರುವ ಈ ತಾಣಗಳ ಬಗ್ಗೆ ಗೊತ್ತಾ?

ಸೈನಿಕರ ಶೌರ್ಯವನ್ನು ಪ್ರದರ್ಶೀಸುವ ಗ್ಯಾಲರಿ ಇದೆ

ಸೈನಿಕರ ಶೌರ್ಯವನ್ನು ಪ್ರದರ್ಶೀಸುವ ಗ್ಯಾಲರಿ ಇದೆ

PC:राष्ट्रीय समर स्मारक / National War Memorial FB
ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವ ಯೋಧರ ಹೆಸರನ್ನು ಗ್ರೈನೆಟ್ ಮೇಲೆ ಗಾಢವಾಗಿ ಮುದ್ರಿಸಲಾಗಿದೆ. ಸ್ಮಾರಕದ ಕೆಳಗಿನ ಭಾಗವನ್ನು ಅಮರ್‌ ಜವಾನ್‌ನಂತೆ ಇಡಲಾಗಿದೆ. ಸ್ಮಾರಕದ ಚಿತ್ರದಲ್ಲಿ ಯೋಧರ ಜನ್ಮದಿಂದ ಹಿಡಿದು ಮರಣ ಹೊಂದಿರುವವರೆಗಿನ ಮಾಹಿತಿಯನ್ನು ನೀಡಲಾಗಿದೆ. ಸೈನಿಕರ ವೀರತೆಯನ್ನು ಪ್ರದರ್ಶೀಸುವ ಗ್ಯಾಲರಿ ಕೂಡಾ ಇದೆ.

ಪ್ರತೀ ದಿನ ತೆರೆದಿರುತ್ತದೆ, ಜೊತೆಗೆ ಉಚಿತ ಪ್ರವೇಶ

ಪ್ರತೀ ದಿನ ತೆರೆದಿರುತ್ತದೆ, ಜೊತೆಗೆ ಉಚಿತ ಪ್ರವೇಶ

PC: youtube
ರಾಷ್ಟ್ರೀಯ ಯುದ್ಧ ಸ್ಮಾರಕವು ಸಾಮಾನ್ಯ ಜನರ ವೀಕ್ಷಣೇಗಾಗಿ ಪ್ರತಿದಿನವೂ ತೆರೆದಿರುತ್ತದೆ. ಅಲ್ಲದೆ ಉಚಿತ ಪ್ರವೇಶವನ್ನು ಒದಗಿಸುತ್ತಿದೆ, ನವಂಬರ್‌ನಿಂದ ಮಾರ್ಚ್‌ ವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ತೆರೆದಿರುತ್ತದೆ. ಎಪ್ರಿಲ್‌ನಿಂದ ಅಕ್ಟೋಬರ್ ವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 7.30 ರವರೆಗೆ ತೆರೆದಿರುತ್ತದೆ. ಪ್ರತೀ ದಿನ ಸೂರ್ಯಾಸ್ತಕ್ಕೂ ಮೊದಲು ರಿಟ್ರಿಟ್ ಸಮಾರಂಭ ಇರುತ್ತದೆ. ರವಿವಾರ ಬೆಳಗ್ಗೆ 9.50 ರಿಂದ ಚೇಂಜ್ ಆಫ್‌ ಗಾರ್ಡ್ ಸಮಾರಂಭ ಇರುತ್ತದೆ.

ಈ ದೇವಿಯ ಹೊಕ್ಕುಳವರೆಗೆ ನೀರು ಬಂದರೆ ಇಡೀ ನಗರವೇ ನಾಶವಾಗುತ್ತಂತೆ ಈ ದೇವಿಯ ಹೊಕ್ಕುಳವರೆಗೆ ನೀರು ಬಂದರೆ ಇಡೀ ನಗರವೇ ನಾಶವಾಗುತ್ತಂತೆ

ಯೋಧರ ಹೆಸರನ್ನು ಗ್ರಾನೈಟ್ ಕಲ್ಲಿನಲ್ಲಿ ಮುದ್ರಿಸಲಾಗಿದೆ.

ಯೋಧರ ಹೆಸರನ್ನು ಗ್ರಾನೈಟ್ ಕಲ್ಲಿನಲ್ಲಿ ಮುದ್ರಿಸಲಾಗಿದೆ.

PC:राष्ट्रीय समर स्मारक / National War Memorial FB
ಇದರ 16 ಗೋಡೆಗಳಲ್ಲಿ 25942 ಯೋಧರ ಹೆಸರನ್ನು ಗ್ರಾನೈಟ್ ಕಲ್ಲಿನಲ್ಲಿ ಮುದ್ರಿಸಲಾಗಿದೆ. ಜೊತೆಗೆ ರಿಜಿಮೆಂಟ್ ಹಾಗೂ ರಾಂಕ್‌ನ್ನೂ ಉಲ್ಲೇಖಿಸಲಾಗಿದೆ. 1962ರ ಭಾರತ-ಚೀನಾ ಯುದ್ಧ, 1947, 1965,1965, 1971 ಹಾಗೂ 1999ರ ಭಾರತ ಪಾಕಿಸ್ತಾನ ಯುದ್ಧ, ಶ್ರೀಲಂಕಾದ ಜೊತೆ ಶಾಂತಿ ಸ್ಥಾಪನೆಯ ಸಮಯದಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ಉಲ್ಲೇಖವನ್ನೂ ಮಾಡಲಾಗಿದೆ.

2015ರಲ್ಲಿ ಮೋದಿ ಸರ್ಕಾರ ಅನುಮತಿ ನೀಡಿತ್ತು

2015ರಲ್ಲಿ ಮೋದಿ ಸರ್ಕಾರ ಅನುಮತಿ ನೀಡಿತ್ತು

PC:राष्ट्रीय समर स्मारक / National War Memorial FB
ಪ್ರಥಮ ವಿಶ್ವ ಯುದ್ಧದ ಸಂದರ್ಭ ಸುಮಾರು 84ಸಾವಿರ ಯೋಧರು ಹುತಾತ್ಮರಾಗಿದ್ದರು. ಅವರ ನೆನಪಿನಲ್ಲಿ ಬ್ರಿಟಿಷರು ಇಂಡಿಯಾ ಗೇಟ್‌ನ್ನು ನಿರ್ಮಿಸಿದರು. ಆ ನಂತರ 1971ರಲ್ಲಿ ಅಮರ್‌ ಜವಾನ್‌ ಜ್ಯೋತಿಯ ನಿರ್ಮಾಣವಾಯಿತು. ಅಮರ್‌ ಜವಾನ್‌ ಜ್ಯೋತಿಯನ್ನು 1971ರಲ್ಲಿ ಭಾರತ ಪಾಕ್‌ ಯುದ್ಧದಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯಕ್ಕಾಗಿ ಮಡಿದ 3843 ಯೋಧರಿಗಾಗಿ ಅರ್ಪಿಸಲಾಗಿದೆ. 2015ರಲ್ಲಿ ಮೋದಿ ಸರ್ಕಾರವು ಇಂತಹದ್ದೊಂದು ರಾಷ್ಟ್ರೀಯ ಯುದ್ದ ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡಿತ್ತು, ಈಗ ಅದು ಸಂಪೂರ್ಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X