Search
  • Follow NativePlanet
Share
» »ನಂಜನಗೂಡಿನ ನಂಜುಂಡೇಶ್ವರದ ಮಹಾತ್ಮೆ

ನಂಜನಗೂಡಿನ ನಂಜುಂಡೇಶ್ವರದ ಮಹಾತ್ಮೆ

By Vijay

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಪ್ರಸಿದ್ಧವಾಗಿರುವ ಜಿಲ್ಲೆ ಮೈಸೂರು. ಅದರಲ್ಲೂ ಮೈಸೂರು ಹಲವು ಪುಣ್ಯ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯೂ ಸಹ ಆಗಿದೆ. ಈ ಜಿಲ್ಲೆಯಲ್ಲಿರುವ ನಂಜನಗೂಡು ಎಂಬ ಕ್ಷೇತ್ರವೂ ಸಹ ಶ್ರೀಕಂಠೇಶ್ವರ / ನಂಜುಂಡೇಶ್ವರ ದೇವಸ್ಥಾನದಿಂದಾಗಿ ಪ್ರಸಿದ್ಧಿ ಪಡೆದಿರುವ ಪಟ್ಟಣ. ಕಪಿಲಾ (ಕಬಿನಿ) ನದಿ ತಟದಲ್ಲಿ ನೆಲೆಸಿರುವ ಈ ಕ್ಷೇತ್ರವು ಭಕ್ತವೃಂದದಲ್ಲಿ "ದಕ್ಷಿಣ ಕಾಶಿ" ಎಂದು ಕರೆಯಲ್ಪಟ್ಟಿದ್ದು ಅತಿ ಪುರಾತನವಾದಂತಹ ಶ್ರೀಕಂಠೇಶ್ವರ ದೇಗುಲದಿಂದಾಗಿ ಪ್ರಖ್ಯಾತವಾಗಿದೆ.

ನಂಜನಗೂಡು ಬೆಂಗಳೂರಿನಿಂದ 163 ಕಿ.ಮೀ ಗಳಷ್ಟು ದೂರವಿದ್ದು, ಮೈಸೂರಿನಿಂದ ಕೇವಲ 30 ಕಿ.ಮೀಗಳಷ್ಟು ಅಂತರದಲ್ಲಿದೆ. ನಂಜನಗೂಡು ತನ್ನದೆ ಆದ ರೈಲು ನಿಲ್ದಾಣ ಹೊಂದಿದ್ದು ಮೈಸೂರಿನಿಂದ ಇಲ್ಲಿಗೆ ರೈಲುಗಳು ದೊರೆಯುತ್ತವೆ. ಅಲ್ಲದೆ ಮೈಸೂರು ಒಂದು ಮಹಾನಗರವಾಗಿದ್ದು ಇಲ್ಲಿಗೆ ತಲುಪಲು ಭಾರತದ ಹಲವು ಪ್ರಮುಖ ನಗರಗಳಿಂದ ರೈಲುಗಳು ದೊರೆಯುತ್ತವೆ.

ನಂಜುಂಡೇಶ್ವರ:

ನಂಜುಂಡೇಶ್ವರ:

ಪುರಾಣದ ಪ್ರಕಾರ, ಸುರರು ಹಾಗೂ ಅಸುರರು ನಡೆಸುತ್ತಿದ್ದ ಸಮುದ್ರ ಮಂಥನದ ಸಂದರ್ಭದಲ್ಲಿ ಒಂದು ಸಲ ಅತ್ಯಂತ ಪ್ರಭಾವಶಾಲಿಯಾದ ಕಾರ್ಕೋಟಕ ವಿಷವು ಉತ್ಪನ್ನವಾಯಿತು. ಅದರ ಪ್ರಭಾವದಿಂದ ಇನ್ನೂ ಜಗತ್ತೆ ನಾಶ ಹೊಂದುವ ಸಂದರ್ಭ ಎದುರಾದಾಗ ಪರಮ ಶಿವನು ಈ ಅವಘಡವನ್ನು ತಡೆಯುವ ಉದ್ದೇಶದಿಂದ ತಾನೆ ಸ್ವತಃ ಆ ವಿಷವನ್ನು ನುಂಗಿಬಿಟ್ಟ. ನಂತರ ಪಾರ್ವತಿ ದೇವಿಯು ಆ ವಿಷವು ಶಿವನ ದೇಹದಲ್ಲಿ ಪಸರಿಸದಂತೆ ಕುತ್ತಿಗೆ ಹಿಡಿದು ಸರ್ಪವನ್ನು ಸುತ್ತಿದಳು. ಈ ರೀತಿಯಾಗಿ ಶಿವನಿಗೆ ನೀಲಕಂಠ, ನಂಜುಂಡೇಶ್ವರ ಎಂದು ಕರೆಯಲಾಯಿತು. ಶಿವನ ಈ ರೂಪವಿರುವ ದೇವಾಲಯವೆ ನಂಜುಂಡೇಶ್ವರ. ಕನ್ನಡದಲ್ಲಿ ನಂಜು ಎಂದರೆ ವಿಷ ಎಂಬ ಅರ್ಥವೂ ಸಹ ಇದೆ.

ಚಿತ್ರಕೃಪೆ: Dineshkannambadi

ನಂಜುಂಡೇಶ್ವರ:

ನಂಜುಂಡೇಶ್ವರ:

ನಂಜನಗೂಡಿನಲ್ಲಿರುವ ನಂಜುಂಡೇಶ್ವರ ದೇವಸ್ಥಾನವು ಅತಿ ಪುರಾತನವಾದ ದೇಗುಲವಾಗಿದ್ದು, ಆಕರ್ಷಕ ಕೆತ್ತನೆಗಳನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ. ವರ್ಷಕ್ಕೆ ಎರಡು ಬಾರಿ ದೊಡ್ಡ ಜಾತ್ರೆ ಹಾಗೂ ಚಿಕ್ಕ ಜಾತ್ರೆಗಳನ್ನು ಇಲ್ಲಿ ಆಯೊಜಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಸಾವಿರಾರು ಜನ ಇಲ್ಲಿ ನೆರೆಯುತ್ತಾರೆ.

ಚಿತ್ರಕೃಪೆ: Dineshkannambadi

ನಂಜುಂಡೇಶ್ವರ:

ನಂಜುಂಡೇಶ್ವರ:

ದೇವಾಲಯದ ಪ್ರಮುಖ ದೇವತೆಗಳಾದ ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರರ ವಿಗ್ರಹಗಳನ್ನು ಐದು ಪ್ರತ್ಯೇಕವಾದ ರಥಗಳಲ್ಲಿ ಪ್ರತಿಷ್ಠಾಪಿಸಿ ಪೂಜಾದಿ ಕೈಂಕರ್ಯಗಳನ್ನು ಕೈಗೊಳ್ಳುತ್ತಾರೆ. ನಂತರ ನೆರೆದಿರುವ ಅಸಂಖ್ಯಾತ ಭಕ್ತರು ತೇರನ್ನು ಎಳೆಯುತ್ತ ಪಟ್ಟಣದ ಹಾದಿ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ.

ಚಿತ್ರಕೃಪೆ: Sharanabasaveshwar

ನಂಜುಂಡೇಶ್ವರ:

ನಂಜುಂಡೇಶ್ವರ:

ನಂಜನಗೂಡು ಕೇವಲ ಪುಣ್ಯ ಕ್ಷೇತ್ರವಾಗಿರಲಾರದೆ ಹಲವಾರು ವಿಶೇಷತೆಗಳನ್ನೂ ಸಹ ಹೊಂದಿರುವ ತಾಣವಾಗಿದೆ. ಅಂತಹ ಕೆಲವು ವಿಶೇಷತೆಗಳನ್ನು ಮುಂದಿನ ಸ್ಲೈಡುಗಳಲ್ಲಿ ಒಂದೊಂದಾಗಿ ಓದಿರಿ. ಅಂದ ಹಾಗೆ ಈ ಪಟ್ಟಣವು ವಿವಿಧ ರೀತಿಯ ಬಾಳೆ ಹಣ್ಣುಗಳಿಗಾಗಿಯೂ ಹೆಸರು ಮಾಡಿದೆ. ನಂಜನಗೂಡಿನ ರಸಬಾಳೆ ಎಲ್ಲೆಡೆಯೂ ಲೋಕಪ್ರಿಯವಾಗಿದೆ.

ಚಿತ್ರಕೃಪೆ: Sarvagnya

ನಂಜುಂಡೇಶ್ವರ:

ನಂಜುಂಡೇಶ್ವರ:

ಸಮುದ್ರ ಮಂಥನದಲ್ಲಿ ಶಿವನು ಹಾಲಾಹಲ ವಿಷ ಸೇವಿಸಿದ ಪ್ರಸಂಗದ ನಂತರ ಲಕ್ಷ್ಮಿ ದೇವಿಯು ಉದ್ಭವವಾಗಿ, ವಿಷ್ಣುವನ್ನು ಕುರಿತು ವಿವಾಹವಾಗಲು ಬಯಸಿದಳು ಹಾಗೂ ತಂದೆಯ ಆದೇಶದಂತೆ ನಂಜನಗೂಡಿಗೆ ತೆರಳಿ ಶಿವನನ್ನು ಕುರಿತು ತಪಸ್ಸು ಆಚರಿಸಿದಳು. ಇದರಿಂದ ಪ್ರಸನ್ನನಾದ ಶಿವನು ವಿಷ್ಣು-ಲಕ್ಷ್ಮಿಯರ ಕಲ್ಯಾಣವನ್ನು ನೆರವೇರಿಸಿದನು.

ಚಿತ್ರಕೃಪೆ: Nayvik

ನಂಜುಂಡೇಶ್ವರ:

ನಂಜುಂಡೇಶ್ವರ:

ಮತ್ತೊಂದು ಕಥೆಯ ಪ್ರಕಾರ, ಕೇಸಿ ಎಂಬ ಅಸುರನು ಒಂದೊಮ್ಮೆ ಇಲ್ಲಿ ತನ್ನ ಅನಾಚಾರದಿಂದ ಭಯದ ವಾತಾವರಣ ಸೃಷ್ಟಿಸಿದ್ದ. ಒಂದೊಮ್ಮೆ ಶಿವನು ದೈತ್ಯನನ್ನು ಯಜ್ಞ ಕುಂಡದೆದೆ ತಂದು ಉರಿದು ಬೂದಿಯಾಗಿ ಮಾಡಿದ ನಂತರ ಆ ಬೂದಿಯನ್ನು ಶಿವನು ಸೇವಿಸಿದ. ಆ ಬೂದಿಯ ಪ್ರಭಾವ ಎಷ್ಟಿತ್ತೆಂದರೆ ಸ್ವತಃ ಶಿವನು ಕೆಲಕಾಲ ದೈಹಿಕವಾಗಿ ಬಳಲಿದ. ಆದ್ದರಿಂದ, ಇಂದಿಗೂ ಸಹ ದೇಹಬಾಧೆಯಿರುವ ಅನೇಕರು ಇಲ್ಲಿಗೆ ಬಂದು ಶಿವನನ್ನು ಕುರಿತು ದೇಹ ಸ್ಥಿತಿ ಸರಿಹೋಗುವಂತೆ ಪ್ರಾರ್ಥಿಸುತ್ತಾರೆ.

ಚಿತ್ರಕೃಪೆ: Pavithrah

ನಂಜುಂಡೇಶ್ವರ:

ನಂಜುಂಡೇಶ್ವರ:

ನಂಜನಗೂಡು ಪರಶುರಾಮ ಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದಿದೆ. ತಂದೆಯ ಆದೇಶದ ಮೆರೆಗೆ ತಾಯಿಯ ರುಂಡವನ್ನು ಕಡಿದ ಪಾಪ ಅನುಭವಿಸುತ್ತಿದ್ದ ಪರಶುರಾಮರು ಈ ಕ್ಷೇತ್ರದಲ್ಲಿರುವ ಕಪಿಲಾ ಹಾಗೂ ಕೌಂಡಿನ್ಯ ನದಿಗಳ ಸಂಗಮದಲ್ಲಿ ತಪಸ್ಸಾಚರಿಸಿ ಪಾಪ ಮುಕ್ತಿ ಪಡೆದರು. ಅಲ್ಲದೆ ಶಿವನು ಪರಶುರಾಮನ ತಪಸ್ಸಿಗೆ ಮೆಚ್ಚಿ ತನ್ನ ಕೃಪಾಕ್ಕಟಾಕ್ಷವನ್ನು ಚಾಚಿದ. ಆದ್ದರಿಂದ ಇಂದಿಗೂ ಸಹ ಭಕ್ತಾದಿಗಳು ನಂಜನಗೂಡಿಗೆ ಭೇಟಿ ನೀಡಿದಾಗ ತಪ್ಪದೆ ಪರಶುರಾಮ ಕ್ಷೇತ್ರ ದರ್ಶನ ಮಾಡಿ ಬರುತ್ತಾರೆ. ಇಲ್ಲದಿದ್ದರೆ ನಂಜನಗೂಡಿನ ಪ್ರವಾಸ ಅಪೂರ್ಣ ಎಂದೆ ಭಾವಿಸಲಾಗುತ್ತದೆ.

ಚಿತ್ರಕೃಪೆ: Pavithrah

ನಂಜುಂಡೇಶ್ವರ:

ನಂಜುಂಡೇಶ್ವರ:

ಮತ್ತೊಂದು ಘಟನೆಯ ಪ್ರಕಾರ ಟಿಪ್ಪು ಸುಲ್ತಾನನು ನಂಜುಂಡೇಶ್ವರನಿಗೆ ಬಹುವಾಗಿ ಮಾನ್ಯ ನೀಡುತ್ತಿದ್ದ. ಇದಕ್ಕೆ ಒಂದು ಕಾರಣವೂ ಇದೆ. ಅದೆನೆಂದರೆ ಒಮ್ಮೆ ಅವನಿಗೆ ಪ್ರಿಯವಾಗಿದ್ದ ಆನೆಯ ದೃಷ್ಟಿ ಶಕ್ತಿ ಹೋದಾಗ ಅನೇಕ ಪಂಡಿತ ವೈದ್ಯರುಗಳಿಂದ ಉಪಚಾರ ಮಾಡಿಸಿದ. ಆದರೂ ದೃಷ್ಟಿ ಸರಿ ಹೋಗಲಿಲ್ಲ. ಕೊನೆಗೆ ಆಸ್ಥಾನ ಪಂಡಿತರ ಸಲಹೆಯಂತೆ ಆನೆಯನ್ನು ನಂಜುಂಡೇಶ್ವರ ದೇವಾಲಯಕ್ಕೆ ಕಳಿಸಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿಸಿ ಪುರೋಹಿತರುಗಳಿಂದ ಯಜ್ಞ ಹವನಾದಿಗಳನ್ನು ಸುಮಾರು 48 ದಿನಗಳ ಕಾಲ ಮಾಡಿಸಿದ. ಆಶ್ಚರ್ಯವೆಂಬಂತೆ ಆನೆಯ ದೃಷ್ಟಿಯು ಮೊದಲಿನಂತಾಗಿ ಟಿಪ್ಪುವಿನ ಖುಷಿ ಪಾರವೆ ಇಲ್ಲದಂತಾಯಿತು. ನಂತರ ಟಿಪ್ಪು ಈ ದೇವಸ್ಥಾನಕ್ಕೆ ತನ್ನ ಸಂತೃಪ್ತಿಯ ಸಂಕೇತವಾಗಿ ರತ್ನದ ಲಿಂಗ ಪಚ್ಚೆಯ ಹಾರಗಳನ್ನು ಕಾಣಿಕೆಗಳಾಗಿ ಅರ್ಪಿಸಿದ. ಹಾಗೂ ನಂಜುಂಡೇಶ್ವರನನ್ನು ಹಕೀಮ್ ನಂಜುಂಡೇಶ್ವರನೆಂದು ಕರೆದ. ಹಕೀಮ್ ಎಂದರೆ ವೈದ್ಯ ಎಂದರ್ಥ. ಆದ್ದರಿಂದ ಒಮ್ಮೊಮ್ಮೆ ಇಲ್ಲಿನ ನಂಜಂಡೇಶ್ವರನನ್ನು ವೈದ್ಯ ನಂಜುಂಡೇಶ್ವರ ಎಂಬುದಾಗಿಯೂ ಸಂಭೋದಿಸಲಾಗುತ್ತದೆ.

ಚಿತ್ರಕೃಪೆ: Sekhar gunturu

ನಂಜುಂಡೇಶ್ವರ:

ನಂಜುಂಡೇಶ್ವರ:

ನಂಜನಗೂಡಿನಲ್ಲಿರುವ ಮತ್ತೊಂದು ಪ್ರಸಿದ್ಧವಾದ ತಾಣ ಶ್ರೀ ಗುರು ರಾಘವೇಂದ್ರ ಮಠ.

ಚಿತ್ರಕೃಪೆ: Raod07

ನಂಜುಂಡೇಶ್ವರ:

ನಂಜುಂಡೇಶ್ವರ:

ಅತ್ಯಂತ ಪುರಾತನ ಎನ್ನಲಾಗುವ ಕಪಿಲಾ ನದಿಗೆ ಕಟ್ಟಲಾಗಿರುವ ನಂಜನಗೂಡು ಸೇತುವೆ. ಇದೊಂದು ರಾಷ್ಟ್ರೀಯ ಸ್ಮಾರಕ ಎಂಬ ಮನ್ನಣೆಯನ್ನುಗಳಿಸಿದೆ.

ಚಿತ್ರಕೃಪೆ: Suraj T S

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X