Search
  • Follow NativePlanet
Share
» »ಮೈಸೂರಿನಿಂದ ಹಾರ್ಸ್ಲೆ ಬೆಟ್ಟಗಳ ಕಡೆಗೆ ಹಾಗೂ ಬೆಟ್ಟಗಳ ಮಧ್ಯೆ ಒಂದು ನವಿರಾದ ಪ್ರಯಾಣ!

ಮೈಸೂರಿನಿಂದ ಹಾರ್ಸ್ಲೆ ಬೆಟ್ಟಗಳ ಕಡೆಗೆ ಹಾಗೂ ಬೆಟ್ಟಗಳ ಮಧ್ಯೆ ಒಂದು ನವಿರಾದ ಪ್ರಯಾಣ!

ಸುತ್ತಲೂ ದಟ್ಟವಾದ ಕಾಡುಗಳಿಂದ ಆವೃತವಾಗಿರುವ ಆಂಧ್ರಪ್ರದೇಶದಲ್ಲಿರುವ ಹಾರ್ಸ್ಲೆ ಬೆಟ್ಟಗಳು ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಹಲವಾರು ಗಿಡಮೂಲಿಕೆಯ ಮರಗಳನ್ನು ತನ್ನಲ್ಲಿ ಹೊಂದಿರುವ ಈ ಕಾಡುಗಳ ಸೌಂದರ್ಯವು ಇನ್ನಷ್ಟು ಹೆಚ್ಚಾಗಿದೆ. ಈ ಸ್ಥಳವು ಸ್ವಚ್ಚ ಪರಿಸರವನ್ನು ಹೊಂದಿದ್ದು,ಇಲ್ಲಿಗೆ ಭೇಟಿ ನೀಡುವವರಿಗೆ ಸಂತೋಷ ಹಾಗೂ ತೃಪ್ತಿಯನ್ನು ನೀಡುತ್ತದೆ.ಗುಲ್ಮೋಹರ್,ಬಾದಾಮಿ, ರೀಥಾ, ಆಮ್ಲಾ, ಬೀಡಿ ಎಲೆಗಳು, ನೀಲಿ ಗಮ್, ನೀಲಗಿರಿ ಮತ್ತು ಶ್ರೀಗಂಧ ಮುಂತಾದ ಮರಗಳನ್ನು ಈ ಕಾಡುಗಳಲ್ಲಿ ಕಾಣಬಹುದಾಗಿದೆ.

ಸುತ್ತಲೂ ಮರಗಳು ಮತ್ತು ಸಸ್ಯಗಳನ್ನು ಹೊಂದಿರುವ ಹಾರ್ಸ್ಲೆ ಬೆಟ್ಟಗಳ ಮಧ್ಯೆ ಪ್ರಯಾಣಿಸುವುದೆಂದರೆ ಅದು ಸ್ವರ್ಗವೇ ಸರಿ. ಅಲ್ಲದೆ ಈ ಸುಂದರವಾದ ಬೆಟ್ಟಗಳ ಸೌಂದರ್ಯತೆಯನ್ನು ಸವಿಯುವ ಅನುಭವವು ಹೇಳಲಸಾಧ್ಯವಾದುದು. ಈ ಪ್ರದೇಶದಲ್ಲಿಯ ಹವಾಮಾನವು ವರ್ಷವಿಡೀ ಆಹ್ಲಾದಕರವಾಗಿರುತ್ತದೆ. ಹಿಂದೆ ಕಲೆಕ್ಟರ್ ಆಗಿದ್ದ ಡಬ್ಲ್ಯೂಡಿ ಹಾರ್ಸ್ಲೆಯ ಹೆಸರಿನಿಂದ ಕರೆಯಲ್ಪಡುವ ಈ ಸುಂದರವಾದ ತಾಣವು ಸಮುದ್ರ ಮಟ್ಟದಿಂದ 1,265 ಮೀಟರ್ ಎತ್ತರದಲ್ಲಿ ಎತ್ತರದಲ್ಲಿದೆ. ಸಾಹಸಪ್ರಿಯರು ಇಲ್ಲಿಗೆ ಭೇಟಿ ಕೊಡಲೇಬೇಕು. ಏಕೆಂದರೆ ಭಾರತದಲ್ಲಿ ಕೆಲವೇ ಕೆಲವು ಕಡೆ ಕಾಣಸಿಗುವ ಜೋರ್ಬಿಂಗ್ ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುವುದರಿಂದ ಸಾಹಸಪ್ರಿಯರಿಗೆ ಸೂಕ್ತವಾದ ಸ್ಥಳವಾಗಿದೆ.ಇದಲ್ಲದೆ ಇಲ್ಲಿ ರಾಪೆಲ್ಲಿಂಗ್ ಮತ್ತು ಚಾರಣದಂತಹ ಇನ್ನಿತರ ಆಯ್ಕೆಗಳನ್ನೂ ಈ ಬೆಟ್ಟಗಳು ಹೊಂದಿವೆ.

ಈ ಕಾಡುಗಳು ಕರಡಿಗಳು, ಕಾಡು ನಾಯಿಗಳು, ಸಂಭಾರ್ ಗಳು ಮತ್ತು ಚಿರತೆಗಳಿಗೆ ಆಶ್ರಯ ನೀಡಿರುವುದನ್ನು ಕಾಣಬಹುದಾಗಿದೆ. ಹಾರ್ಸ್ಲೆ ಬೆಟ್ಟಗಳಿಗೆ ಬೆಂಗಳೂರು ಮತ್ತು ತಿರುಪತಿಯಿಂದ ತಲುಪುವುದು ಸಾಕಷ್ಟು ಉತ್ತಮವಾದ ಆಯ್ಕೆಯಾಗಿದೆ. ಹೀಗಾಗಿ, ಇದು ಪ್ರಕೃತಿ ಪ್ರಿಯರಿಗೆ ವಾರಾಂತ್ಯದ ಅತ್ಯುತ್ತಮ ಸ್ಥಳವಾಗಿದೆ.

ಹಾರ್ಸ್ಲೇ ಬೆಟ್ಟಗಳಿಗೆ ಭೇಟಿ ಕೊಡಲು ಉತ್ತಮವಾದ ಸಮಯ

ಹಾರ್ಸ್ಲೇ ಬೆಟ್ಟಗಳಿಗೆ ಭೇಟಿ ಕೊಡಲು ಉತ್ತಮವಾದ ಸಮಯ

ಈ ಮನಮೋಹಕ ಮತ್ತು ಆಕರ್ಷಕ ತಾಣವನ್ನು ಭೇಟಿ ಮಾಡಲು ನವೆಂಬರ್ ನಿಂದ ಮಾರ್ಚ್ ಅತ್ಯುತ್ತಮ ಸಮಯವಾಗಿದ್ದು, ಈ ಸಮಯದಲ್ಲಿ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ನಿಂದ 22 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಜೂನ್ ನಿಂದ ಸೆಪ್ಟೆಂಬರ್ ನಡುವೆ ಪಟ್ಟಣದಲ್ಲಿ ಮಧ್ಯಮ ಮಳೆಯಾಗುವುದರಿಂದ ಮುಂಗಾರು ಸಹ ಇಲ್ಲಿ ಪ್ರಕಾಶಮಾನ ಮತ್ತು ಹಗುರವಾಗಿರುತ್ತದೆ. ಬೇಸಿಗೆ ತುಲನಾತ್ಮಕವಾಗಿ ಬಿಸಿಯಾಗಿರುತ್ತದೆ ಮತ್ತು ಆದುದರಿಂದ ಪ್ರವಾಸಿಗರು ಈ ಸಮಯದಲ್ಲಿ ಭೇಟಿ ಕೊಡುವುದನ್ನು ತಪ್ಪಿಸುತ್ತಾರೆ.

ಹಾರ್ಸ್ಲೇ ಬೆಟ್ಟಗಳಿಗೆ ತಲುಪುವುದು ಹೇಗೆ?

ಹಾರ್ಸ್ಲೇ ಬೆಟ್ಟಗಳಿಗೆ ತಲುಪುವುದು ಹೇಗೆ?

ರಸ್ತೆಯ ಮೂಲಕ ಮೈಸೂರಿನಿಂದ ಹಾರ್ಸ್ಲೆ ಬೆಟ್ಟದವರೆಗಿನ ಮಾರ್ಗವು ಮಾರ್ಗ 1 ರ ಮೂಲಕ ಸುಮಾರು 307 ಕಿ.ಮೀ ಮತ್ತು ಮಾರ್ಗದ ಮೂಲಕ 327 ಕಿ.ಮೀ. 2 ಮಾರ್ಗಗಳ ವಿವರಣೆ ಈ ಕೆಳಗಿನಂತಿವೆ.

ಮಾರ್ಗ 1: ರಾ.ಹೆ 150 ಎ ಮೂಲಕ ಬೆಂಗಳೂರು ಮೈಸೂರು ರಸ್ತೆ -ರಾ.ಹೆ 48 -ರಾ.ಹೆ 44 - ಚಿಕ್ಕಬಳ್ಳಾಪುರ ರಸ್ತೆ - ಹೊಸಕೋಟೆ ಚಿಂತಾಮಣಿ ರಸ್ತೆ - ಕಡಪ ಬೆಂಗಳೂರು ಹೆದ್ದಾರಿ - ಗೌಣಿಪಲ್ಲಿ - ಮದನಪಲ್ಲಿ ರಸ್ತೆ - ಹಾರ್ಸ್ಲೆ ಬೆಟ್ಟಗಳು

ಮಾರ್ಗ 2: ಮೈಸೂರು -ರಾ.ಹೆ 275 ಮೂಲಕ ಬೆಂಗಳೂರು ಮೈಸೂರು ರಸ್ತೆ - ರಾ.ಹೆ 75 ಮೂಲಕ ಕುಣಿಗಲ್ ಮದ್ದೂರು ರಸ್ತೆ - ರಾ.ಹೆ 648 ಮೂಲಕ ಚಿಕ್ಕಬಳ್ಳಾಪುರ - ಮದನಪಲ್ಲಿ ರಸ್ತೆ - ಹಾರ್ಸ್ಲೆ ಬೆಟ್ಟಗಳ ಮಾರ್ಗವನ್ನು 6 ಗಂಟೆ 30 ನಿಮಿಷಗಳಲ್ಲಿ ತಲುಪಬಹುದಾಗಿದೆ. ಮಾರ್ಗ 2 ಸರಿಸುಮಾರು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ, ಮಾರ್ಗ 1, ವೇಗದ ಮಾರ್ಗವಾಗಿರುವುದರಿಂದ ಈ ಮಾರ್ಗದಿಂದ ಪ್ರಯಾಣಿಸುವುದು ಉತ್ತಮ.

ಮೈಸೂರಿನಿಂದ ಹಾರ್ಸ್ಲೇ ಬೆಟ್ಟಗಳ ಕಡೆಗೆ

ಮೈಸೂರಿನಿಂದ ಹಾರ್ಸ್ಲೇ ಬೆಟ್ಟಗಳ ಕಡೆಗೆ

ರಾಮನಗರ

ಮೈಸೂರಿನಿಂದ ಬೆಳಿಗ್ಗೆ ಬೇಗನೆ ಹೊರಟು, ವಿನಾಯಕ ಮೈಲಾರಿ ಹೋಟೇಲಿನ ಸಾಂಪ್ರದಾಯಿಕ ಉಪಹಾರವನ್ನು ಸೇವಿಸಿ. ಇದಾದ ನಂತರ ಮೈಸೂರಿನಿಂದ ಸುಮಾರು 98 ಕಿ.ಮೀ ದೂರದಲ್ಲಿ ನೀವು ರೇಷ್ಮೆ ನಗರವೆಂದು ಕರೆಯಲ್ಪಡುವ ರಾಮನಗರವನ್ನು ತಲುಪುವಿರಿ. ಈ ಸಣ್ಣ ಮತ್ತು ಅಪರೂಪದ ನಗರವು ಚಾರುಣಿಗರಿಂದ ಖಂಡಿತವಾಗಿಯೂ ಮೆಚ್ಚುಗೆಯನ್ನು ಪಡೆಯುತ್ತದೆ. ನಿಮಗೆ ಸಮಯದ ಕೊರತೆ ಇದ್ದಲ್ಲಿ ಹತ್ತಿರದಲ್ಲಿಯೇ ಇರುವ ರಾಮದೇವರ ಬೆಟ್ಟಕ್ಕೆ ಭೇಟಿ ಕೊಡಬಹುದು. ಇದು ಅರ್ಧ ದಿನದಲ್ಲಿ ಭೇಟಿ ಕೊಡಬಹುದಾದಂತಹ ಸ್ಥಳವಾಗಿದ್ದು ಚಾರಣಕ್ಕೆ ಉತ್ತಮವಾದ ಆಯ್ಕೆಯಾಗಿದೆ. ನಿಮ್ಮಲ್ಲಿ ಸಮಯಕ್ಕೆ ಕೊರತೆ ಇಲ್ಲವೆಂದಾದಲ್ಲಿ ಇಲ್ಲಿನ ಇನ್ನಿತರ ಆರು ಬೆಟ್ಟಗಳಲ್ಲಿ ಚಾರಣ ಮತ್ತು ಶಿಬಿರ ಹೂಡಬಹುದಾಗಿದೆ. ರಾಮದೇವರ ಬೆಟ್ಟದ ಪರಿಸರದಲ್ಲಿ ಕೆಲವು ಅಪರೂಪದ ಹಾಗೂ ಅಳಿವಂಚಿನಲ್ಲಿರುವ ಪಕ್ಷಿಗಳನ್ನು ಕಾಣಬಹುದಾಗಿದೆ. ಅಲ್ಲದೆ ಇಲ್ಲಿಯ ರಣಹದ್ದು ಅಭಯಾರಣ್ಯದಲ್ಲಿ ನಿಮ್ಮ ಸಮಯವನ್ನು ಕಳೆಯಬಹುದಾಗಿದೆ. ಸೆರಿಕಲ್ಚರ್ ಗೆ ಈ ಸುಂದರವಾದ ನಗರವು ಹೆಸರುವಾಸಿಯಾಗಿದ್ದು, ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ಸ್ಥಳದಲ್ಲಿ ಉತ್ಪತ್ತಿಯಾಗುವ ರೇಷ್ಮೆ ವಿಶ್ವಪ್ರಸಿದ್ಧ ಮೈಸೂರು ಸೀರೆಗಳಿಗೆ ಪ್ರಾಥಮಿಕ ಕಚ್ಚಾ ವಸ್ತುಗಳನ್ನು ಒದಗಿಸಿಕೊಡುತ್ತದೆ. ಈ ಪಟ್ಟಣದಲ್ಲಿ ಅರ್ಕೇಶ್ವರ ದೇವಸ್ಥಾನ, ಮಲ್ಲೇಶ್ವರ ದೇವಸ್ಥಾನ, ಬನ್ನಿ ಮಹಾಕಳಿ ದೇವಸ್ಥಾನ ಮತ್ತು ಚಾಮುಂಡೇಶ್ವರಿ ದೇವಾಲಯದಂತಹ ಕೆಲವು ಆಧ್ಯಾತ್ಮಿಕ ಸ್ಥಳಗಳ ನೆಲೆಯಾಗಿದ್ದು, ಅಲ್ಲಿ ನೀವು ಶಾಂತಿಯನ್ನು ಪಡೆಯಬಹುದು.

ದೇವನಹಳ್ಳಿ

ದೇವನಹಳ್ಳಿ

ಬೆಂಗಳೂರಿನಿಂದ ಒಂದು ಗಂಟೆಗಳು ಹಾಗೂ ರಾಮನಗರದಿಂದ ಕೇವಲ 92 ಕಿ.ಮೀ ದೂರದಲ್ಲಿರುವ ಸ್ಥಳವೆಂದರೆ ಆದು ಐತಿಹಾಸಿಕ ಸ್ಥಳ ದೇವನಹಳ್ಳಿ. ಈ ಸ್ಥಳವು ಟಿಪ್ಪು ಸುಲ್ತಾನನ ಜನ್ಮಸ್ಥಳವಾಗಿದೆ. 15ನೇ ಶತಮಾನದ ಕಾಲದಲ್ಲಿ ರಾಜವಂಶಸ್ಥರಿಂದ ಆಳಲ್ಪಟ್ಟ ಸುಂದರವಾದ ಕೋಟೆಗಳನ್ನು ದೇವನಹಳ್ಳಿಯು ಹೊಂದಿದೆ. ಕೋಟೆಯೊಳಗಿನ ಇತರ ದೇವಾಲಯಗಳ ಜೊತೆಗೆ ವೇಣುಗೋಪಾಲ ಸ್ವಾಮಿ ದೇವಾಲಯವು ಅತ್ಯಂತ ಪ್ರಾಚೀನವಾದ ದೇವಾಲಯವಾಗಿದ್ದು ಭೇಟಿಗೆ ಯೋಗ್ಯವಾದುದಾಗಿದೆ. ಈ ದೇವಾಲಯದ ಗೋಡೆಗಳು ರಾಮಾಯಣದ ಸನ್ನಿವೇಶಗಳ ಚಿತ್ರಗಳಿಂದ ಅಲಂಕಾರಗೊಂಡಿರುವುದನ್ನು ಕಾಣಬಹುದಾಗಿದೆ. ಟಿಪ್ಪು ಸುಲ್ತಾನ್ ಅವರ ಸ್ಮಾರಕ ಮತ್ತು ಅವರು ವಿಶ್ರಾಂತಿ ಪಡೆಯುತ್ತಿದ್ದ ಖಾಸಗಿ ಉದ್ಯಾನವನಕ್ಕೆ ಭೇಟಿ ನೀಡಿ

ಚಿಂತಾಮಣಿ

ಚಿಂತಾಮಣಿ

51 ಕಿ.ಮೀ ನ ಪ್ರಯಾಣದ ನಂತರ ಟೋಮಾಟೋ ಮತ್ತು ರೇಶ್ಮೇ ಉತ್ಪಾದಿಸುವ ನಗರವೆಂದು ಕರೆಯಲ್ಪಡುವ ಚಿಂತಾಮಣಿಗೆ ತಲುಪುವಿರಿ. ಶಾಂತಿಯುತವಾದ ಮತ್ತು ಧಾರ್ಮಿಕತೆಯಿಂದ ಕೂಡಿದ ಈ ನಗರಕ್ಕೆ ಮರಾಠಾ ಮುಖ್ಯಸ್ಥ ಚಿಂತಾಮಣಿ ರಾವ್ ಅವರ ಹೆಸರಿಡಲಾಗಿದೆ. ಚಿಂತಾಮಣಿ ದಾಟುವ ಮೊದಲು ನಿಮ್ಮ ಪಟ್ಟಿಯಲ್ಲಿ ಕೈಲಾಸಗಿರಿ ಮತ್ತು ಅಂಬಾಜಿ ದುರ್ಗಾ ಎಂಬ ಈ ಎರಡು ಗುಹೆ ದೇವಾಲಯಗಳನ್ನು ಸೇರಿಸಿಕೊಳ್ಳಿ ಮತ್ತು ಭೇಟಿ ಕೊಡಿ. ಇದಾದ ನಂತರ 75 ಕಿ.ಮೀ ಪ್ರಯಾಣಿಸಿದಲ್ಲಿ ನಿಮ್ಮ ಗಮ್ಯಸ್ಥಾನವಾದ ಇನ್ನೊಂದು ಸುಂದರ ರಾಜ್ಯವೆನಿಸಿರುವ ಆಂಧ್ರಪ್ರದೇಶವನ್ನು ತಲುಪಬಹುದು ಮತ್ತು ಇಲ್ಲಿಂದ ಹಾರ್ಸ್ಲೇ ಬೆಟ್ಟಗಳ ಕಡೆಗೆ ನಿಮ್ಮ ಪ್ರಯಾಣ!

ಹಾರ್ಸ್ಲೇ ಬೆಟ್ಟಕ್ಕೆ ತಲುಪಬಹುದಾದ ಸಾರಿಗೆಯ ಇತರ ವಿಧಗಳು.

ಹಾರ್ಸ್ಲೇ ಬೆಟ್ಟಕ್ಕೆ ತಲುಪಬಹುದಾದ ಸಾರಿಗೆಯ ಇತರ ವಿಧಗಳು.

ರೈಲು ಮೂಲಕ: ಮದನಪಲ್ಲಿ ರೈಲ್ವೆ ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ. ಹಾರ್ಸ್ಲೆ ಬೆಟ್ಟವು ಇಲ್ಲಿಂದ ಸುಮಾರು 26 ಕಿ.ಮೀ ದೂರದಲ್ಲಿದೆ. ಮದನಪಲ್ಲಿಗೆ ರೈಲು ಸಂಪರ್ಕವು ನವದೆಹಲಿ, ಬೆಂಗಳೂರು, ಮೈಸೂರು, ಲಕ್ನೋ, ಚೆನ್ನೈ, ಪಾಟ್ನಾ, ಕನ್ಯಾಕುಮಾರಿ ಮತ್ತು ಗಯಾ ನಗರಗಳಿಂದ ಉತ್ತಮವಾಗಿ ಇದೆ.

ಬಸ್ ಮೂಲಕ: ಹಾರ್ಸ್ಲೆ ಬೆಟ್ಟಗಳಿಗೆ ತಲುಪಲು ರಾಜ್ಯದ ಇತರ ಭಾಗಗಳೊಂದಿಗೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್ಆರ್ ಟಿ ಸಿ) ಯೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಪ್ರಯಾಣವು ಅಗ್ಗವಾಗಿದ್ದರೂ, ನೀವು ಸಾಮಾನುಗಳನ್ನು ಜಾಸ್ತಿ ಇದ್ದಲ್ಲಿ ಈ ಮೂಲಕ ಪ್ರಯಾಣಿಸುವುದನ್ನು ನಾವು ಶಿಫಾರಸು ಮಾಡುವುದಿಲ್ಲ. ನೇರ ಬಸ್ಸುಗಳು ಮದನಪಲ್ಲಿ ಮತ್ತು ಹಾರ್ಸ್ಲೆ ಬೆಟ್ಟಗಳ ನಡುವೆ ಆಗಾಗ್ಗೆ ಚಲಿಸುತ್ತವೆ.

ವಿಮಾನದ ಮೂಲಕ: ಬೆಂಗಳೂರಿನಲ್ಲಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹಾರ್ಸ್ಲೆ ಬೆಟ್ಟಗಳಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇವೆರಡರ ನಡುವಿನ ಅಂತರ ಸುಮಾರು 144 ಕಿ.ಮೀ.

ಹಾರ್ಸ್ಲೇ ಬೆಟ್ಟಗಳ ಸುತ್ತಮುತ್ತಲಿರುವ ಪ್ರಮುಖ ಆಕರ್ಷಣೆಗಳು

ಹಾರ್ಸ್ಲೇ ಬೆಟ್ಟಗಳ ಸುತ್ತಮುತ್ತಲಿರುವ ಪ್ರಮುಖ ಆಕರ್ಷಣೆಗಳು

ಗಂಗೋತ್ರಿ ಸರೋವರ ಮತ್ತು ಮಾನಸರೋವರ

ನೀಲಗಿರಿ ಮರಗಳಿಂದ ಸುತ್ತುವರೆದಿರುವ ಗಂಗೋತ್ರಿ ಸರೋವರವು ತನ್ನದೇ ಆದ ರೀತಿಯಲ್ಲಿ ಪ್ರಶಾಂತವಾಗಿದೆ. ನಿಮ್ಮ ಪ್ರೀತಿಪಾತ್ರರ ಜೊತೆ ಸ್ವಲ್ಪ ಸಮಯವನ್ನು ಕಳೆಯುವುದಕ್ಕೆ ಈ ಸ್ಥಳವು ಸಾಕಷ್ಟು ಸೂಕ್ತವಾಗಿದೆ. ಪ್ರಕೃತಿನ್ನು ಇಷ್ಟಪಡುವವರು ಈ ಪ್ರಕೃತಿ ಸೌಂದರ್ಯಕ್ಕೆ ಭೇಟಿ ಮಾಡುವುದನ್ನು ತಪ್ಪಿಸಬಾರದು. ಸರೋವರವು ಬೇಸಿಗೆಯಲ್ಲಿ ಒಣಗುತ್ತದೆ ಮತ್ತು ಮಳೆಗಾಲ ಸಮೀಪಿಸುತ್ತಿದ್ದಂತೆ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಗಾಲಿ ಬಂಡಾಲು

ಗಾಲಿ ಬಂಡಾಲು

ಈ ಸ್ಥಳವನ್ನು ತಲುಪುತ್ತಿದ್ದಂತೆ ನಿಮ್ಮ ಚರ್ಮಕ್ಕೆ ನವಿರಾದ ಗಾಳಿಯ ಸ್ಪರ್ಶವಾಗುವುದನ್ನು ಅನುಭವಿಸಿ. ಗಾಳಿ ಬಂಡೆ(ವಿಂಡೀ ರಾಕ್) ಎನ್ನುವ ಅಡ್ಡ ಹೆಸರಿರುವ ಈ ಇಡೀ ಬೆಟ್ಟವು ಕಣಿವೆಯ ವೀಕ್ಷಣೆಗಳೊಂದಿಗೆ ಆಕರ್ಷಿಸುತ್ತದೆ ಮತ್ತು ಇಲ್ಲಿಯ ಪರಿಸರವು ಪ್ರವಾಸಿಗರನ್ನು ಮೋಡಿಮಾಡುತ್ತದೆ. ನೈಸರ್ಗಿಕ ಪರಿಸರವನ್ನು ಹೊಂದಿರುವ ಗಾಳಿಬಂಡಾಲು ಸರೋವರಗಳು ಮತ್ತು ಉದ್ಯಾನವನಗಳಿಂದ ಆವೃತವಾಗಿದೆ. ಇಲ್ಲಿಯ ಭಾರೀ ಗಾಳಿಯು ಶಾಂತಿ ಪ್ರಿಯರನ್ನು ಯಾವಾಗಲೂ ಆಕರ್ಷಿಸುತ್ತದೆ.

ಮಲ್ಲಮ್ಮ ದೇವಾಲಯ

ಮಲ್ಲಮ್ಮ ದೇವಾಲಯ

ಮಲ್ಲಮ್ಮ ದೇವಿಗೆ ಅರ್ಪಿತವಾದ ಮಲ್ಲಮ್ಮ ದೇವಾಲಯವು ಹಾರ್ಸ್ಲೇ ಬೆಟ್ಟಗಳಲ್ಲಿಯ ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದಾಗಿದೆ. ಬೆಟ್ಟದ ಮೇಲೆ ನೆಲೆಸಿರುವ ಈ ದೇವಾಲಯವು ಅತ್ಯಂತ ಹೆಚ್ಚು ಭೇಟಿ ನೀಡಲ್ಪಡುವ ಹಾಗೂ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಕಥೆಗಳ ಪ್ರಕಾರ, ಮಲ್ಲಮ್ಮ ಎಂಬ ಸಣ್ಣ ಹುಡುಗಿ ಬುಡಕಟ್ಟು ಜನರ ರೋಗಗಳನ್ನು ಗುಣಪಡಿಸುತ್ತಿದ್ದಳು. ಆನೆಗಳು ಅವಳನ್ನು ನೋಡಿಕೊಳ್ಳುತ್ತಿದ್ದವು. ಒಂದು ದಿನ ಅವಳು ಇದ್ದಕ್ಕಿದ್ದಂತೆ ಕಣ್ಮರೆಯಾದಳು ನಂತರ ಸ್ಥಳೀಯರು ಮತ್ತು ಅವಳ ಭಕ್ತರು ಅವಳನ್ನು ದೇವತೆ ಎಂದು ನಂಬಲು ಪ್ರಾರಂಭಿಸಿದರು ಮತ್ತು ಅವರ ನೆನಪಿಗಾಗಿ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗುತ್ತದೆ.

ಹಾರ್ಸ್ಲೆ ಹಿಲ್ಸ್ ಮೃಗಾಲಯ

ಹಾರ್ಸ್ಲೆ ಹಿಲ್ಸ್ ಮೃಗಾಲಯ

ನೀವು ಹಾರ್ಸ್ಲೆ ಹಿಲ್ಸ್‌ನಲ್ಲಿ ಸುತ್ತಾಡಿ ಮುಗಿದ ನಂತರ ಈ ಮೃಗಾಲಯಕ್ಕೆ ಭೇಟಿ ನೀಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. ದಪ್ಪ ಸಸ್ಯವರ್ಗ ಮತ್ತು ಇಲ್ಲಿ ಮತ್ತು ಅಲ್ಲಿ ಕೆಲವು ಪ್ರಾಣಿಗಳೊಂದಿಗೆ, ಮೃಗಾಲಯವು ಕುಟುಂಬದೊಂದಿಗೆ ಕಾಲ ಕಳೆಯಲು ಒಂದು ದಿನಕ್ಕೆ ಸೂಕ್ತವಾದ ಆಯ್ಕೆಯಾಗಿದೆ. ಮೃಗಾಲಯದಲ್ಲಿ ಸುಂದರವಾದ ಪ್ರಕೃತಿ ಮತ್ತು ವನ್ಯಜೀವಿಗಳನ್ನು ನೋಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X