Search
  • Follow NativePlanet
Share
» »ಕರ್ನಾಟಕದ ಸುಂದರ ಕಡಲ ತೀರ ಮರವಂತೆ

ಕರ್ನಾಟಕದ ಸುಂದರ ಕಡಲ ತೀರ ಮರವಂತೆ

By Vijay

ಕಡಲ ತೀರಗಳು ಸಾಮಾನ್ಯವಾಗಿ ಎಲ್ಲರಿಗೂ ಸಂತಸ ನೀಡುತ್ತವೆ. ಕಣ್ಣು ಹಾಯಿಸಿದಷ್ಟೂ ಅನಂತವಾಗಿ ಚಾಚಿರುವ ಸಮುದ್ರದ ನೋಟ, ರಪ ರಪ ಎಂದು ಒಂದೆ ಸಮನೆ ತೀರಕ್ಕೆ ಅಪ್ಪಳಿಸುತ್ತಿರುವ ಸಮುದ್ರದಲೆಗಳು [ತರಂಗಂಬಾಡಿಯ ನಾದಮಯ ಅಲೆಗಳು], ದಂಡೆಗುಂಟ ನಾ ಎತ್ತರ, ನೀ ಎತ್ತರ ಎಂಬಂತೆ ಬೆಳೆದು ನಿಂತಿರುವ ತೆಂಗಿನ ಮರಗಳು ಇವೆಲ್ಲವೂ ಸೇರಿ ಕಡಲ ತೀರಗಳನ್ನು ಒಂದು ವಿಶಿಷ್ಟ ಸ್ಥಳವನ್ನಾಗಿ ಮಡಿ ಬಿಡುತ್ತವೆ.

ಚಿತ್ರಕೃಪೆ: Sankara Subramanian

ನಮ್ಮ ನಾಡಿನ ತುಂಬೆಲ್ಲ ನೂರಾರು ಸಂಖ್ಯೆಯಲ್ಲಿ ಕಡಲ ತೀರಗಳನ್ನು ಕಾಣಬಹುದಾಗಿದೆ. ಒಂದಕ್ಕಿಂತ ಒಂದು ಸುಂದರ ಎಂಬಂತೆ ಆಕರ್ಷಿಸುತ್ತವೆ ಈ ಬೀಚುಗಳು. ಇನ್ನು ಹದಿಹರೆಯದವರ ಪಾಲಿಗೆ ಬೀಚುಗಳೆಂದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿರುತ್ತದೆ. ಸಾಹಸಮಯ ಜಲ ಕ್ರೀಡೆಗಳು, ಮೋಜು ಮಸ್ತಿಗಳು ಒಂದಕ್ಕೊಂದು ಅಂಟಿಕೊಂಡಿರುತ್ತವೆ. [ಭಾರತದ ಅದ್ಭುತ ಕಡಲ ತೀರಗಳು] ಹೀಗಾಗಿ ಎಲ್ಲ ಪ್ರಾಯದವರಿಗೂ ಬೀಚುಗಳೆಂದರೆ ಇಷ್ಟ.

ಚಿತ್ರಕೃಪೆ: Riju K

ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಳಿಯಿರುವ ಮರವಂತೆ ಎಂಬ ಹಳ್ಳಿಯು ತನ್ನ ಅತಿ ಮಧುರವಾದ ಹಾಗೂ ಅಷ್ಟೆ ಸುಂದರವಾದ ಕಡಲ ತೀರಕ್ಕೆ ಹೆಸರುವಾಸಿಯಾಗಿದೆ. ಈ ಕಡಲ ತೀರ ಎಷ್ಟೊಂದು ಸುಂದರವಾಗಿದೆ ಎಂದರೆ ಔಟ್ ಲುಕ್ ಎಂಬ ಪ್ರವಾಸಿ ನಿಯತಕಾಲಿಕೆಯು ಇದನ್ನು ಕರ್ನಾಟಕದಲ್ಲಿರುವ ಅತಿ ಸುಂದರ ಕಡಲ ತೀರಗಳ ಪಟ್ಟಿಯಲ್ಲಿ ಒಂದೆಂದು ಹೆಸರಿಸಿದೆ.

ಚಿತ್ರಕೃಪೆ: Ashwin Kumar

ಉಡುಪಿಯಿಂದ ಸುಮಾರು 55 ಕಿ.ಮೀ ಗಳಷ್ಟು ದೂರವಿರುವ ಈ ಕರಾವಳಿ ಹಳ್ಳಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ರ ಮೂಲಕ ತಲುಪಬಹುದಾಗಿದೆ. ವಿಶೇಷವೆಮ್ದರೆ ಈ ಹೆದ್ದಾರಿಯ ಒಂದು ಬದಿ ಸಮುದ್ರವಿದ್ದರೆ ಇನ್ನೊಂದು ಬದಿಯಲ್ಲಿ ಸೌಪರ್ಣಿಕಾ ನದಿ ಹರಿದಿದೆ. ಈ ರೀತಿಯ ದೃಶ್ಯವು ತನ್ನಲ್ಲೆ ತಾನೆ ವಿಶಿಷ್ಟವಾಗಿದ್ದು ಕಾಣ ಸಿಗುವುದು ಬಹು ಅಪರೂಪ ಎಂತಲೆ ಹೇಳಬಹುದು.

ಚಿತ್ರಕೃಪೆ: Ashwin Kumar

ಮರವಂತೆಯು ಮೂಲವಾಗಿ ಒಂದು ಶಾಂತ ಪರಿಸರದ ಅದ್ಭುತ ಕಡಲ ತೀರ ಪ್ರದೇಶವಾಗಿದ್ದು, ಭೇಟಿ ನೀಡುವವರಿಗೆ ನೆಮ್ಮದಿ, ಶಾಂತಿ ಹಾಗೂ ಆನಂದವನ್ನು ಕರುಣಿಸುತ್ತದೆ. ಮರವಂತೆಯ ಕಡಲ ತೀರದ ಬಳಿಯಿರುವ ಮರಸ್ವಾಮಿ ದೇವಾಲಯವು ಪ್ರಮುಖ ಆಕರ್ಷಣೆಯಾಗಿದೆ. ಈ ದೇವಾಲಯಕ್ಕೆ ವಿಶಿಷ್ಟ ಎಂಬುವಂತೆ ಮೂರು ಗರ್ಭ ಗೃಹಗಳಿದ್ದು ಮೂರು ಮೂಲ ದೇವತೆಗಳಿವೆ.

ಕರ್ನಾಟಕದ ಸುಂದರ ಕಡಲ ತೀರ ಮರವಂತೆ

ಚಿತ್ರಕೃಪೆ: Ashwin Kumar

ಈ ದೇವಾಲಯದ ಮೂರು ದೇವತೆಗಳ ಪೈಕಿ ಒಂದು ವಿಷ್ಣುವಿನ ಅವತಾರವಾದ ವರಾಹ ದೇವತೆಗೆ ಮುಡಿಪಾಗಿದೆ. ಆದ್ದರಿಂದ ಈ ದೇವಸ್ಥಾನವನ್ನು ವರಾಹಸ್ವಾಮಿ ದೇವಸ್ಥಾನ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ದೇವತೆಗಳ ಜೊತೆಗೆ ಈ ದೇವಸ್ಥಾನದಲ್ಲಿ ಆಮೆ, ಮೊಸಳೆ ಹಾಗಿ ಮೀನೂ ಸಹ ಪೂಜಿಸಲ್ಪಡುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X