Search
  • Follow NativePlanet
Share
» »ಲೋಣಾರ್ ಕ್ರೇಟರ್ ಉಲ್ಕಾಪಾತದ ಗುಂಡಿ

ಲೋಣಾರ್ ಕ್ರೇಟರ್ ಉಲ್ಕಾಪಾತದ ಗುಂಡಿ

By Vijay

ಇಂದು ಭೂಮಿಯ ಕೆಲ ಭಾಗಗಳಲ್ಲಿ ವಿಚಿತ್ರವಾಗಿ ರೂಪಗೊಂಡಂತಹ ಕಂದಕಗಳಿರುವುದನ್ನು ಗಮನಿಸಬಹುದು. ವಿಜ್ಞಾನಿಗಳ ಪ್ರಕಾರ, ಈ ಗುಂಡಿಗಳು ಲಕ್ಷಾಂತರ ವರ್ಷಗಳ ಹಿಂದೆ ಸೌರ್ಯವ್ಯೂಹದಲ್ಲಿ ಕಂಡುಬರುವ ಉಲ್ಕಾ ಶಿಲೆಗಳು ರಭಸದಿಂದ ಭೂಮಿಯೆಡೆಗೆ ತೂರಿ ಬಂದು ಅಪ್ಪಳಿಸಿದಾಗ ಒಡಮುಡಿದವುಗಳಾಗಿವೆ.

ಇದೆ ರೀತಿಯಲ್ಲಿ ಭಾರತದಲ್ಲೂ ಸಹ ಒಂದು ಬೃಹತ್ತಾದ ಗುಂಡಿಯನ್ನು ನೋಡಬಹುದಾಗಿದೆ. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ, ಈ ಗುಂಡಿಯ ವಯಸ್ಸು ಸುಮಾರು 52000+6000 ಅಥವಾ 52000-6000 ವರ್ಷಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಆದರೆ 2010 ರಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ, ಇದರ ವಯಸ್ಸು 570000+46000 ಇಲ್ಲವೆ 570000-46000 ವರ್ಷಗಳಷ್ಟು ಎಂದು ಹೇಳಲಾಗಿದೆ.

ಬಂಪರ್ ಬುಧವಾರ ಮಾರಾಟ : Goibibo.co ನಿಂದ ಎಲ್ಲ ಕೊಡುಗೆಗಳನ್ನು ಪಡೆಯಿರಿ

ವಿಶೇಷ ಲೇಖನ : ಪ್ರಾಕೃತಿಕ ವಿಸ್ಮಯಗಳು

ಲೋಣಾರ್ ಕ್ರೇಟರ್ ಉಲ್ಕಾಪಾತದ ಗುಂಡಿ

ಚಿತ್ರಕೃಪೆ: Aditya Laghate

ವೃತ್ತಾಕಾರದ ಈ ಗುಂಡಿಯ ವ್ಯಾಸವು ಸುಮಾರು 1.2 ಕಿ.ಮೀ ಗಳಷ್ಟಿದೆ ಎಂದರೆ ನೀವೇ ಉಹಿಸಬಹುದು ಇದರ ಅಗಾಧತೆಯನ್ನು. ಈ ಕೆರೆಯ ನೀರು ಕ್ಷಾರಯುಕ್ತವಾಗಿದ್ದು ಸೇವಿಸಲು ಯೋಗ್ಯವಾಗಿಲ್ಲ. ಅಲ್ಲದೆ ಕೇಲ ನಿರ್ದಿಷ್ಟ ಜಲ ಸೂಕ್ಷ್ಮ ಜೀವಿಗಳನ್ನು ಹೊರತುಪಡಿಸಿ ಇತರೆ ಸಾಮಾನ್ಯವಾಗಿ ಜಲದಲ್ಲಿ ಕಂಡುಬರುವಂತಹ ಮೀನುಗಳು ಹಾಗೂ ಇತರೆ ಜೀವಿಗಳು ಇಲ್ಲಿ ಕಂಡುಬರುವುದಿಲ್ಲ.

ಲೋಣಾರ್ ಕೆರೆ ಎಂತಲೆ ಪ್ರಸಿದ್ಧಿ ಪಡೆದಿರುವ ಈ ಗುಂಡಿಯು ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಲೋಣಾರ್ ಎಂಬ ಪಟ್ಟಣದಲ್ಲಿದೆ. ಲೋಣಾರ್ ಮುಂಬೈ ಮಹಾನಗರದಿಂದ 550 ಕಿ.ಮೀ ಹಾಗೂ ಔರಂಗಾಬಾದ್ 160 ಕಿ.ಮೀ ದೂರದಲ್ಲಿದೆ. ಅಜಂತಾ ಗುಹೆಗಳು ಇಲ್ಲಿಂದ ಕೇವಲ ನಾಲ್ಕುವರೆ ಘಂಟೆಗಳಷ್ಟು ಪ್ರಯಾಣಾವಧಿಯಷ್ಟು ದೂರದಲ್ಲಿದೆ. ಲೋಣಾರ್ ಸಾಕಷ್ಟು ಪ್ರವಾಸಿ ತಾಣಗಳಿಗೆ ಹತ್ತಿರವಿದ್ದರೂ ಸಹ ಇಲ್ಲಿಗೆ ತೆರಳುವ ಜನಗಳ ಸಂಖ್ಯೆ ತುಂಬ ಕಡಿಮೆ.

ವಿಶೇಷ ಲೇಖನ : ಮಹಾರಾಷ್ಟ್ರದ ಸುಂದರ ಗಿರಿಧಾಮಗಳು

ಲೋಣಾರ್ ಕ್ರೇಟರ್ ಉಲ್ಕಾಪಾತದ ಗುಂಡಿ

ಚಿತ್ರಕೃಪೆ: Nagwani

ಲೋಣಾರ್ ಕೆರೆಯು ಸುತ್ತಲೂ ದಟ್ಟವಾಗಿ ಬೆಳೆದ ಗಿಡ ಮರಗಳ ಕಾಡಿನಿಂದ ಆವೃತವಾಗಿದೆ. ಈ ಕಾಡಿನಲ್ಲಿ ನವಿಲು, ಗೂಬೆಗಳಿಂದ ಹಿಡಿದು ವಿವಿಧ ಬಗೆಯ ಪಕ್ಷಿಗಳನ್ನು ಕಾಣಬಹುದು. ಅಂದರೆ ಪಕ್ಷಿಪ್ರೀಯ ಛಾಯಾಗ್ರಾಹಕರಿಗೆ ಈ ಪ್ರದೇಶ ಸ್ವರ್ಗವೆಂದೇ ಹೇಳಬಹುದು. ಅಲ್ಲದೆ ಲೋಣಾರ್ ಸರೋವರದಲ್ಲಿ ಔಷಧೀಯ ಮಹತ್ವವುಳ್ಳ ವಿಶಿಷ್ಟ ಸಸ್ಯ ರಾಶಿಗಳನ್ನು ಕಾಣಬಹುದು.

ಲೋಣಾರ್ ಕ್ರೇಟರ್ ಉಲ್ಕಾಪಾತದ ಗುಂಡಿ

ಲೋಣಾರ್ ಕೆರೆ ಬಳಿಯಿರುವ ದೈತ್ಯ ಸೂದನ ದೇವಾಲಯ
ಚಿತ್ರಕೃಪೆ: Smundra

ಸರೋವರ ತಾಣದ ಬಳಿ ಕಮಲ್ಜಿ ಹಾಗೂ ದೈತ್ಯ ಸೂದನ ದೇವಾಲಯಗಳನ್ನು ಕಾಣಬಹುದಾಗಿದೆ. ದೈತ್ಯ ಸೂದನ ದೇವಾಲಯವು ಖಜುರಾಹೋ ದೇವಾಲಯಗಳ ರೀತಿಯಲ್ಲಿ ಸುಂದರವಾಗಿ ಕೆತ್ತಲ್ಪಟ್ಟಿದೆ. ಮುಖ್ಯ ವಿಗ್ರಹವು ಕಲ್ಲಿನ ರೀತಿಯಲ್ಲಿರುವ ವಿಶಿಷ್ಟ ಅದಿರಿನಲ್ಲಿ ಕೆತ್ತಲ್ಪಟ್ಟಿದೆ.

ಲೋಣಾರ್, ಜಗತ್ತಿನಲ್ಲೆ ಏಕೈಕ ಬಸಾಲ್ಟಿಕ್ ಶಿಲೆಯಲ್ಲಿ ರೂಪಗೊಂಡ ಕೆರೆಯಾಗಿಯೂ, ಭಾರತದ ಏಕೈಕ ವೇಗವಾಗಿ ಉಲ್ಕೆಗಳು ಅಪ್ಪಳಿಸಿದರಿಂದುಂಟಾದ ಕೆರೆಯಾಗಿಯೂ ಪ್ರಸಿದ್ಧಿ ಪಡೆದಿದೆ. ಸರೋವರದ ಅಗಲವು 6000 ಅಡಿಗಳಷ್ಟಿದ್ದರೆ, ಆಳವು 500 ಅಡಿಗಳಷ್ಟಿದೆ. ಲೋಣಾರ್ ನಿಜವಾಗಿಯೂ ನೋಡಲು ಅತಿ ಸುಂದರವಾದ ಕೆರೆಯಾಗಿದ್ದು ಪ್ರವಾಸಿ ದೃಷ್ಟಿಯಿಂದ ಮಹತ್ವ ಪಡೆದಿದೆ.

ಲೋಣಾರ್ ಕ್ರೇಟರ್ ಉಲ್ಕಾಪಾತದ ಗುಂಡಿ

ಲೋಣಾರ್ ಗುಂಡಿಯ ಉಪಗ್ರಹ ಚಿತ್ರ

ಲೋಣಾರ್ ಅನ್ನು ಮುಂಬೈನಿಂದ ರಸ್ತೆ ಮೂಲಕವಾಗಿ ಔರಂಗಾಬಾದ್ ಹಾಗೂ ಜಲ್ನಾ ಮಾರ್ಗವಾಗಿ ತಲುಪಬಹುದು. ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಔರಂಗಾಬಾದ್ ನಲ್ಲಿದ್ದರೆ, ರೈಲು ನಿಲ್ದಾಣವು ಮಲ್ಕಾಪುರದಲ್ಲಿದೆ. ಇನ್ನು ತಂಗಲು ಅಥವಾ ವಸತಿ ಹೂಡಲು ಲೋಣಾರ್ ನಲ್ಲಿ ವಸತಿ ಗೃಹಗಳು ಹಾಗೂ ಹೋಟೆಲ್ ಗಳು ಸುಲಭವಾಗಿ ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X