Search
  • Follow NativePlanet
Share
» » ಕರ್ನಾಟಕದ ಉಡುಪಿ ಜಿಲ್ಲೆಯ ಅಷ್ಟೇನೂ ಹೆಸರುವಾಸಿಯಾಗದ ಈ ಜಲಪಾತಗಳಿಗೆ ಒಮ್ಮೆ ಭೇಟಿ ನೀಡಿ

ಕರ್ನಾಟಕದ ಉಡುಪಿ ಜಿಲ್ಲೆಯ ಅಷ್ಟೇನೂ ಹೆಸರುವಾಸಿಯಾಗದ ಈ ಜಲಪಾತಗಳಿಗೆ ಒಮ್ಮೆ ಭೇಟಿ ನೀಡಿ

ಕರ್ನಾಟಕದಲ್ಲಿರುವ ಹಲವಾರು ಜಲಪಾತಗಳು ಕಾಲಾನಂತರ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದ್ದರೂ, ಅನ್ವೇಷಣೆಗೆ ಒಳಗಾಗಬೇಕಾದುವುಗಳು ಇನ್ನೂ ಸಾಕಷ್ಟು ಉಳಿದುಕೊಂಡಿವೆ. ಕೆಲವು ದಟ್ಟವಾದ ಕಾಡುಗಳಲ್ಲಿ ಮರೆಯಾಗಿದ್ದರೆ, ಇನ್ನು ಕೆಲವು ದಟ್ಟವಾದ ಕಾಡುಗಳ ಮೇಲಾವರಣದ ಅಡಿಯಲ್ಲಿ ಹುದುಗಿವೆ.

ವಿಶಾಲವಾದ ಆಕಾಶದ ಕೆಳಗೆ ಹಿತವಾದ ಮತ್ತು ಸ್ವಚ್ಚವಾದ ನೀರಿನಲ್ಲಿ ಸ್ನಾನ ಮಾಡಲು ಯಾರು ತಾನೆ ಬಯಸುವುದಿಲ್ಲ ಹೇಳಿ? ಇಂತಹುದೇ ಒಂದು ಅನುಭವವನ್ನು ನೀವು ಪಡೆಯಬೇಕೆಂದಿದ್ದಲ್ಲಿ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಅಷ್ಟೇನೂ ಹೆಸರುವಾಸಿಯಾಗದ ಜಲಪಾತಗಳಿಗೆ ಒಮ್ಮೆ ಭೇಟಿ ಕೊಡಲೇಬೇಕು. ಈ ಜಲಪಾತಗಳು ನಿಮ್ಮನ್ನು ತಮ್ಮ ವಿಶಾಲವಾದ ಸೌಂದರ್ಯತೆಯಿಂದ ಮಂತ್ರಮುಗ್ದಗೊಳಿಸುವುದರಲ್ಲಿ ಸಂಶಯವೇ ಇಲ್ಲ.

ಈ ಜಲಪಾತಗಳು ಶೇಕಡಾ ನೂರಕ್ಕೆ ನೂರರಷ್ಟು ನೈಸರ್ಗಿಕ ಪರಿಸರವನ್ನು ತನ್ನ ಸುತ್ತ ಮುತ್ತ ಅಳವಡಿಸಿಕೊಂಡು ಶ್ರೀಮಂತವಾಗಿದೆ. ಆದುದರಿಂದ ಇಂತಹ ಜಲಪಾತಗಳನ್ನು ವಾರಾಂತ್ಯದಲ್ಲಿ ಭೇಟಿ ಕೊಡುವುದರಿಂದ ಒಂದು ಅದ್ಬುತವಾದ ಅನುಭವವನ್ನು ಪಡೆಯಬಹುದಾಗಿದೆ. ಇಂತಹ ರಹಸ್ಯ ಸೌಂದರ್ಯತೆಗಳನ್ನು ಭೇಟಿ ಕೊಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇವುಗಳ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ಓದಿ ತಿಳಿಯಿರಿ.

ಕೂಸಳ್ಳಿ ಜಲಪಾತ

ಕೂಸಳ್ಳಿ ಜಲಪಾತ

ಉಡುಪಿ ನಗರದಿಂದ 120 ಕಿ.ಮೀ ಮತ್ತು ಮುರುಡೇಶ್ವರದಿಂದ 60 ಕಿ.ಮೀ ಅಂತರದಲ್ಲಿರುವ ಕೂಸಳ್ಳಿ ಹಳ್ಳಿಯ ದಟ್ಟವಾದ ಕಾಡಿನ ನಡುವೆ ಕೂಸಳ್ಳಿ ಜಲಪಾತವಿದೆ.ಕಲ್ಲಿನ ಭೂಪ್ರದೇಶದಿಂದ ಕೆಳಗೆ ಹರಿಯುವ ಮತ್ತು ಶ್ರೀಮಂತವಾದ ಕಾಡುಗಳು ಮತ್ತು ಸೊಂಪಾದ ಸಸ್ಯವರ್ಗದಿಂದ ಆವೃತವಾಗಿರುಅ ಕೂಸಳ್ಳಿ ಜಲಪಾತವು ಸುಮಾರು 470 ಅಡಿ ಎತ್ತರಿಂದ ಕೆಳಗೆ ಹರಿಯುತ್ತದೆ.

ಆದುದರಿಂದ, ಇದು ಈ ಪ್ರದೇಶದ ಅತಿ ಹೆಚ್ಚು ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಕಲ್ಲುಬಂಡೆಗಳಿಂದ ಆವೃತವಾಗಿರುವ ಕಾಡುಗಳ ನಡುವೆ ಹರಿಯುವುದರಿಂದ ಈ ಮನಮೋಹಕ ಜಲಪಾತವನ್ನು ತಲುಪಲು ಸರಿಯಾದ ಮಾರ್ಗಗಳಿಲ್ಲ.

ಈ ಜಲಪಾತವನ್ನು ಹತ್ತಿರದಿಂದ ಹೋಗಿ ನೋಡಬೇಕೆಂದಿದ್ದಲ್ಲಿ, ಕೂಸಳ್ಳಿ ಗ್ರಾಮದಿಂದ 5 ಕೀಮಿ.ದೂರದಷ್ಟು ಚಾರಣ ಮಾಡಬೇಕಾಗುತ್ತದೆ. ಆದರೂ ಈ ಕಲ್ಲು ಬಂಡೆಗಳಲ್ಲಿ ಹತ್ತಿ ನಡೆದು ಈ ಸ್ಥಳವನ್ನು ತಲುಪಲು ಬಹಳಷ್ಟು ಜಾಗರೂಕರಾಗಿಬೇಕಾಗುತ್ತದೆ.

ಅದರಲ್ಲೂ, ಮಳೆಗಾಲದ ಸಮಯದಲ್ಲಿ ಈ ಬಂಡೆಗಳು ಜಾರುವುದರಿಂದ ಈ ಸಮಯದಲ್ಲಿ ಈ ಜಲಪಾತಗಳ ಕಡೆಗೆ ಚಾರಣ ಮಾಡುವುದು ಕಷ್ಟಕರವಾದುದು. ನವೆಂಬರ್ ನಿಂದ ಡಿಸೆಂಬರ್ ಈ ಅವಧಿಯಲ್ಲಿ ಈ ಜಲಪಾತಕ್ಕೆ ಭೇಟಿ ಕೊಡುವುದಕ್ಕೆ ಸೂಕ್ತವಾದ ಸಮಯವಾಗಿರುತ್ತದೆ.

ಅರಿಸಿನ ಗುಂಡಿ ಜಲಪಾತ

ಅರಿಸಿನ ಗುಂಡಿ ಜಲಪಾತ

ಅರಸಿನ ಗುಂಡಿ ಜಲಪಾತವು ಮುರುಡೇಶ್ವರದಿಂದ 60 ಕಿ.ಮೀ ಹಾಗೂ ಉಡುಪಿ ನಗರದಿಂದ 85 ಕಿ.ಮೀ ಅಂತರದ ಕೊಡಚಾದ್ರಿ ಕಾಡುಗಳ ಹತ್ತಿರದಲ್ಲಿದೆ. ಈ ಜಲಪಾತವನ್ನು 2 ಕಿ.ಮೀ ಗಳಷ್ಟು ಚಾರಣ ಮಾಡುವುದರ ಮೂಲಕ ಸುಲಭವಾಗಿ ತಲುಪಬಹುದಾಗಿದೆ.

ಉತ್ತಮವಾದ ಹಾದಿಗಳ ಉಪಸ್ಥಿತಿಯಿಂದಾಗಿ ಚಾರಣಕ್ಕೆ ಅನುಕೂಲವಾಗಿರುವುದರಿಂದ ಚಾರಣಿಗರಿಗೆ ವಾರಾಂತ್ಯದಲ್ಲಿ ಸುಲಭವಾಗಿ ಭೇಟಿ ಕೊಡಬಹುದಾದ ಸ್ಥಳವಾಗಿದೆ. ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಮಧ್ಯದಲ್ಲಿ ನೆಲೆಸಿರುವ ಈ ವೈಭವೋಪೇತವಾಗಿರುವ ಸುಂದರವಾದ ಜಲಪಾತದ ಸುತ್ತಮುತ್ತಲಿನ ಪ್ರದೇಶಗಳು ಸೊಂಪಾದ ಹಸಿರಿನಿಂದ ಸುಂದರವಾಗಿದೆ.

ಸೆಪ್ಟಂಬರ್ ನಿಂದ ಡಿಸೆಂಬರ್ ತಿಂಗಳುಗಳ ವರೆಗಿನ ಅವಧಿಯು ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ. ಅಲ್ಲದೇ, ಈ ಸ್ಥಳವು ಪ್ರೇಮಿಗಳಿಗೆ ಒಂದು ಸೂಕ್ತವಾದ ಪಿಕ್ನಿಕ್ ತಾಣವಾಗಿದೆ. ಈ ಜಲಪಾತದ ತಳಭಾಗದಲ್ಲಿ ನಿರ್ಮಿಸಲಾದ ಈಜುಕೊಳದಲ್ಲಿ ಸ್ನಾನ ಮಾಡಬಹುದಾಗಿದೆ.

ಈ ಈಜುಕೊಳದಲ್ಲಿ ಹಲವಾರು ಚೂಪಾದ ಬಂಡೆಗಳು ಇರುವುದರಿಂದ ಈಜುವಾಗ ಜಾಗರೂಕರಾಗಿರಬೇಕಾಗುತ್ತದೆ. ಅರಸಿನ ಗುಂಡಿ ಜಲಪಾತವನ್ನು ತಲುಪಲು ಸುಮಾರು 8ಕಿ.ಮೀ ದೂರದ ದಟ್ಟವಾದ ಕಾಡು ದಾರಿಯನ್ನು ಹಾದು ಹೋಗಬೇಕಾಗುತ್ತದೆ. ಮತ್ತು 2ಕಿ.ಮೀ ದಾರಿಯನ್ನು ಚಾರಣ ಮಾಡಬೇಕಾಗುತ್ತದೆ. ಹಾಗಿದ್ದಲ್ಲಿ , ಈ ಸಾಹಸಮಯ ಪ್ರಯಾಣವನ್ನು ಕೈಗೊಳ್ಳುವುದರ ಬಗ್ಗೆ ನಿಮ್ಮ ಅಭಿಪ್ರಾಯ ಹೇಗೆ?

ಕುಡುಮರಿ ಜಲಪಾತ

ಕುಡುಮರಿ ಜಲಪಾತ

ಕುಡುಮರಿ ಜಲಪಾತವು ಚಕ್ತಿಕಲ್ ಗ್ರಾಮದಲ್ಲಿದ್ದು ಈ ಜಲಪಾತವು ಉಡುಪಿ ನಗರದಿಂದ ಸುಮಾರು 110 ಕಿ.ಮೀ ಮತ್ತು ಮುರುಡೇಶ್ವರದಿಂದ 100 ಕಿ.ಮೀ ಅಂತರದಲ್ಲಿದೆ. ಈ ಜಲಪಾತವು ಪರ್ವತಗಳು ಮತ್ತು ದಟ್ಟವಾದ ಕಾಡುಗಳಿಂದ ಸುತ್ತುವರಿದಿರುವುದರಿಂದ ಪರ್ವತಾರೋಹಿಗಳು ಮತ್ತು ಚಾರುಣಿಗರಿಗೆ ಒಂದು ಸೂಕ್ತವಾದ ಸ್ಥಳವೆನಿಸಿದೆ.

ಅಲ್ಲದೇ, ಇತ್ತೀಚೆಗೆ ಇದು ಶಿಬಿರಾರ್ಥಿಗಳಿಂದಲೂ ಜನಪ್ರಿಯತೆಯನ್ನು ಗಳಿಸುತ್ತಿದೆ. ಸುಮಾರು 1,000 ಅಡಿ ಎತ್ತರದಿಂದ ಕೆಳಕ್ಕೆ ಹರಿಯುವ ಈ ಅದ್ಭುತ ಜಲಪಾತವು ತನ್ನ ಪ್ರವಾಸಿಗರಿಗೆ ಅರಬ್ಬೀ ಸಮುದ್ರದ ವಿಹಂಗಮ ನೋಟಗಳು ಮತ್ತು ಹತ್ತಿರದ ಸ್ಥಳಗಳು ಸುಂದರವಾದ ನಯನ ಮನೋಹರ ದೃಶ್ಯಾವಳಿಗಳನ್ನು ಸಹ ಒದಗಿಸುತ್ತದೆ.

ಇಂತಹ ಸುಂದರವಾಗಿರುವ ಹಾಗೂ ಅದ್ಬುತವಾದ ಜಲಪಾತದಲ್ಲಿ ಸ್ನಾನ ಮಾಡಿ ನಿಮ್ಮ ಮನಸ್ಸು ದೇಹ ಮತ್ತು ಆತ್ಮವನ್ನು ವಿಶ್ರಾಂತಿಗೊಳಿಸಲು ಬಯಸುವಿರಾ? ಹಾಗಿದ್ದಲ್ಲಿ ಇದರ ಭವ್ಯತೆಯನ್ನು ನಿಮ್ಮ ಕಣ್ಣಾರೆ ನೋಡಲು ಈ ಸ್ಥಳಕ್ಕೆ ನಿಮ್ಮ ಪ್ರವಾಸವನ್ನು ಆಯೋಜಿಸಿ.

ಚಕ್ತಿಕಲ್ ಗ್ರಾಮದಿಂ ಕುಡುಮರಿ ಜಲಪಾತಕ್ಕೆ 2 ಗಂಟೆಗಳ ಚಾರಣ ಮಾಡಬೇಕಾಗುತ್ತದೆ. ಅಕ್ಟೋಬರ್ ತಿಂಗಳಿನಿಂದ ಏಪ್ರಿಲ್ ತಿಂಗಳ ಕೊನೆಯವರೆಗೆ ಈ ಭವ್ಯವಾದ ಸೌಂದರ್ಯತೆಯನ್ನು ನೋಡಲು ಸೂಕ್ತ ಸಮಯವಾಗಿದೆ.

ಜೋಮ್ಲು ತೀರ್ಥ ಜಲಪಾತ

ಜೋಮ್ಲು ತೀರ್ಥ ಜಲಪಾತ

ಜೀವನದ ನಿರಂತರ ಚಟುವಟಿಕೆಗಳಿಂದ ಸ್ವಲ್ಪ ವಿಶ್ರಾಂತಿ ಬಯಸುವಿರಾ? ಹಾಗಿದ್ದಲ್ಲಿ ಜೋಮ್ಲು ತೀರ್ಥ ಜಲಪಾತಕ್ಕೆ ಒಮ್ಮೆ ಪ್ರವಾಸಕ್ಕೆ ಆಯೋಜಿಸಿ. ಹೌದು ಉಡುಪಿ ಜಿಲ್ಲೆಯಲ್ಲಿರುವ ಇನ್ನೊಂದು ಸೌಂದರ್ಯತೆ ಎಂದರೆ ಅದು ಜೋಮ್ಲು ತೀರ್ಥ ಜಲಪಾತ.

ಈ ಜಲಪಾತವು ಮುಖ್ಯ ಪಟ್ಟಣ ಉಡುಪಿಯಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಸೀತಾ ನದಿಯಲ್ಲಿದೆ. ಈ ಸ್ಥಳವನ್ನು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು ಆದ್ದರಿಂದ, ಅದನ್ನು ತಲುಪಲು ನೀವು ಚಾರಣ ಮಾಡಬೇಕಾಗಿಲ್ಲ. ಪ್ರಕೃತಿಯ ತೆಕ್ಕೆಯಲ್ಲಿ ಸಮಯವನ್ನು ಆನಂದವಾಗಿ ಕಳೆಯಲು ಇದೊಂದು ಸೂಕ್ತವಾದ ತಾಣವಾಗಿದೆ.

ಈ ಜಲಪಾತದ ಸುತ್ತಮುತ್ತಲೂ ಹಸಿರುಮಯವಾರುವುದರಿಂದ ಅನೇಕ ಛಾಯಾಗ್ರಾಹಕರು ಹಾಗೂ ಪ್ರಕೃತಿ ಪ್ರೇಮಿಗಳಿಗೆ ಅತ್ಯಂತ ಪ್ರಿಯವಾದ ಸ್ಥಳವಾಗಿದೆ ಅಲ್ಲದೆ ಇತ್ತೀಚೆಗೆ ಈ ಸ್ಥಳಕ್ಕೆ ಜನರು ಕುಟುಂಬ ಸಮೇತರಾಗಿ ಪಿಕ್ನಿಕ್ ಬಂದು ಇಲ್ಲಿಯ ಸೌಂದರ್ಯತೆಯ ಶಾಶ್ವತ ನೆನಪನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X