Search
  • Follow NativePlanet
Share
» »ನಾಲ್ಕನೇಯ ಶತಮಾನದ ಕಂಗ್ರಾ ಕೋಟೆ

ನಾಲ್ಕನೇಯ ಶತಮಾನದ ಕಂಗ್ರಾ ಕೋಟೆ

By Vijay

ಹಿಮಾಚಲ ಪ್ರದೇಶ ರಾಜ್ಯದ ಧರ್ಮಶಾಲಾ ಜಿಲ್ಲೆಯ ಕಂಗ್ರಾ ಪಟ್ಟಣದ ಹೊರವಲಯದಲ್ಲಿ ಕಾಲಕ್ಕೆ ಸೆಡ್ಡು ಹೊಡೆಯುತ್ತ ನಿಂತಿದೆ ಕಂಗ್ರಾ ಕೋಟೆ. ಅಲೆಕ್ಸಾಂಡರ್ ಮಹಾದೊರೆಯ ನಾಲ್ಕನೇಯ ಶತಮಾನಕ್ಕೆ ಸಂಬಂಧಿಸಿದ ಯುದ್ಧ ದಾಖಲೆಗಳಲ್ಲಿ ಮೊದಲ ಬಾರಿಗೆ ಈ ಕೋಟೆಯ ಕುರಿತು ಪ್ರಸ್ತಾಪಿಸಲಾಗಿದೆ.

ಕಂಗ್ರಾದ ರಜಪೂತ ವಂಶಸ್ಥರಿಂದ ಈ ಕೋಟೆಯು ನಿರ್ಮಿಸಲ್ಪಟ್ಟಿದ್ದು, ಇದರ ಮೂಲವು ಅತಿ ಪುರಾತನವಾದ, ಮಹಾಭಾರತದಲ್ಲಿ ಪ್ರಸ್ತಾಪಿಸಲಾದ ತ್ರಿಗರ್ತ ಸಾಮ್ರಾಜ್ಯಕ್ಕೆ ಕೊಂಡೊಯ್ಯುತ್ತದೆ. ಹಿಮಾಲಯ ಶ್ರೇಣಿ ಪ್ರದೇಶದ ಅತಿ ದೊಡ್ಡದಾದ ಕೋಟೆ ಇದಾಗಿದ್ದು ಬಹುಶಃ ಭಾರತದ ಅತಿ ಪುರಾತನ ಕೋಟೆಯೂ ಸಹ ಆಗಿದೆ.

 ಕಂಗ್ರಾ ಕೋಟೆ:

ಕಂಗ್ರಾ ಕೋಟೆ:

ಮೊದಲಿ ಮೊಹ್ಮದ್ ಘಜ್ನಿಯು ಈ ಕೋಟೆಯನ್ನು 1337 ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡನು. ನಂತರ ಮೊಹ್ಮದ್ ಬಿನ್ ತಘುಲಕ್ ಇದನ್ನು ತನ್ನ ತೆಕ್ಕೆಗೆ ತೆಗೆದುಕೊಂಡನು.

ಚಿತ್ರಕೃಪೆ: Aleksandr Zykov

 ಕಂಗ್ರಾ ಕೋಟೆ:

ಕಂಗ್ರಾ ಕೋಟೆ:

ಸುಮಾರು 1351 ರಲ್ಲಿ ಫಿರೋಜ್ ಶಾ ತಘುಲಕ್ ಈ ಕೋಟೆಯನ್ನು ವಶಪಡಿಸಿಕೊಂಡನು. ಕೊನೆಯದಾಗಿ ಮುಘಲ್ ದೊರೆ ಜಹಾಂಗೀರನು ಈ ಕೋಟೆಯನ್ನು 1622 ರ ಸಮಯದಲ್ಲಿ ವಶಪಡಿಸಿಕೊಂಡನು.

ಚಿತ್ರಕೃಪೆ: Aleksandr Zykov

 ಕಂಗ್ರಾ ಕೋಟೆ:

ಕಂಗ್ರಾ ಕೋಟೆ:

ಮುಘಲ್ ಸಾಮ್ರಾಜ್ಯ ಕೊನೆಗೊಳ್ಳುತ್ತಿರುವಾಗ, ಪ್ರದೇಶದ ಮೂಲ ಒಡೆಯರಾಗಿದ್ದ ರಜಪೂತ್ ವಂಶದ ಎರಡನೇಯ ರಾಜಾ ಸಂಸಾರ್ ಚಂದ್ ಈ ಕೋಟೆಯನ್ನು ಮರಳಿ ಪಡೆದನು. ನಂತರ ಈತ ಪಕ್ಕದ ಗುರ್ಖಾಗಳೊಂದಿಗೆ ಯುದ್ಧ ಸಾರಿ ಕೋಟೆಯನ್ನು ಕಳೆದುಕೊಂಡು ನಂತರದ ಸಮಯದಲ್ಲಿ ಪಂಜಾಬಿನ ರಂಜೀತ್ ಸಿಂಘನು ಇದರ ಅಧಿಪತಿಯಾದ.

ಚಿತ್ರಕೃಪೆ: Aleksandr Zykov

 ಕಂಗ್ರಾ ಕೋಟೆ:

ಕಂಗ್ರಾ ಕೋಟೆ:

ಅಂತಿಮವಾಗಿ ಈ ಕೋಟೆಯು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಪಾಲಾಯಿತು. ಪ್ರಸ್ತುತ ಕಂಗ್ರಾ ಕಣಿವೆಯಲ್ಲಿರುವ ಈ ಬೃಹತ್ ಕೋಟೆಯು ತನ್ನಲ್ಲಿ ಇತಿಹಾಸದ ಅತಿ ದೊಡ್ಡ ಕಥೆಯನ್ನು ಹೊತ್ತುಕೊಂಡು ಭೇಟಿ ನೀಡುವ ಪ್ರವಾಸಿಗರಿಗೆ ತನ್ನ ಗತ ವೈಭವವನ್ನು ಹೇಳುತ್ತಿದೆ.

ಚಿತ್ರಕೃಪೆ: Aleksandr Zykov

 ಕಂಗ್ರಾ ಕೋಟೆ:

ಕಂಗ್ರಾ ಕೋಟೆ:

ಕಂಗ್ರಾ ಕೋಟೆಯು ಕಂಗ್ರಾ ಪಟ್ಟಣದ ಹೊರವಲಯದಲ್ಲಿದ್ದು ಪೂರಣ ಕಂಗ್ರಾ ಎಂಬಲ್ಲಿ ಚೂಪಾದ ಕಲ್ಲಿನ ಬೆಟ್ಟವೊಂದರ ಮೇಲೆ ಸ್ಥಿತವಿದೆ.

ಚಿತ್ರಕೃಪೆ: Aleksandr Zykov

 ಕಂಗ್ರಾ ಕೋಟೆ:

ಕಂಗ್ರಾ ಕೋಟೆ:

ಕಂಗ್ರಾ ಕೋಟೆಯ ಅಮೋಘ್ ಪರಿಸರ.

ಚಿತ್ರಕೃಪೆ: Aleksandr Zykov

 ಕಂಗ್ರಾ ಕೋಟೆ:

ಕಂಗ್ರಾ ಕೋಟೆ:

ಕಂಗ್ರಾ ಕೋಟೆಯ ಅಮೋಘ್ ಪರಿಸರ.

ಚಿತ್ರಕೃಪೆ: Aleksandr Zykov

 ಕಂಗ್ರಾ ಕೋಟೆ:

ಕಂಗ್ರಾ ಕೋಟೆ:

ಕಂಗ್ರಾ ಕೋಟೆಯ ಅಮೋಘ್ ಪರಿಸರ.

ಚಿತ್ರಕೃಪೆ: Aleksandr Zykov

 ಕಂಗ್ರಾ ಕೋಟೆ:

ಕಂಗ್ರಾ ಕೋಟೆ:

ಕಂಗ್ರಾ ಕೋಟೆಯ ಅಮೋಘ್ ಪರಿಸರ.

ಚಿತ್ರಕೃಪೆ: John Hill

 ಕಂಗ್ರಾ ಕೋಟೆ:

ಕಂಗ್ರಾ ಕೋಟೆ:

ಕಂಗ್ರಾ ಕೋಟೆಯ ಅಮೋಘ್ ಪರಿಸರ.

ಚಿತ್ರಕೃಪೆ: Vssun

 ಕಂಗ್ರಾ ಕೋಟೆ:

ಕಂಗ್ರಾ ಕೋಟೆ:

ಕಂಗ್ರಾ ಕೋಟೆಯ ಅಮೋಘ್ ಪರಿಸರ.

ಚಿತ್ರಕೃಪೆ: Vssun

 ಕಂಗ್ರಾ ಕೋಟೆ:

ಕಂಗ್ರಾ ಕೋಟೆ:

ಕಂಗ್ರಾ ಕೋಟೆಯ ಅಮೋಘ್ ಪರಿಸರ.

ಚಿತ್ರಕೃಪೆ: John Hill

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X