Search
  • Follow NativePlanet
Share
» »ಒಡಿಶಾದ ಕಂಧಮಲ್‌ನಲ್ಲಿರುವ ಆಕರ್ಷಣೆಗಳಿವು

ಒಡಿಶಾದ ಕಂಧಮಲ್‌ನಲ್ಲಿರುವ ಆಕರ್ಷಣೆಗಳಿವು

ಕಂಧಮಲ್ ತನ್ನಲ್ಲಿ ತಯಾರಾಗುವ ಬಿದಿರಿನ ಕರ ಕುಶಲ ವಸ್ತುಗಳಿಗೆ, ಡೊಕ್ರಾ, ಟೆರ್‍ರಾಕೋಟಾ ಮತ್ತು ಬಂಬೂ ವಸ್ತುಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ.

ಕಂಧಮಲ್ ಒಡಿಶಾದ ಅತ್ಯಂತ ಆಕರ್ಷಣೀಯವಾದ ಪ್ರವಾಸಿ ತಾಣವಾಗಿದೆ. ಪ್ರಾಕೃತಿಕ ಸೌಂದರ್ಯ ಮತ್ತು ಮೂಲ ನಿವಾಸಿಗಳಾದ ಬುಡಕಟ್ಟು ಜನರು ಇಲ್ಲಿನ ಆಕರ್ಷಣೆಗೆ ಮೆರುಗನ್ನು ನೀಡಿರುವ ಅಂಶಗಳಾಗಿವೆ. ಕಂಧಮಲ್‍ನಲ್ಲಿ ಪ್ರವಾಸಿಗರು ಬೃಹತ್ ಪ್ರಮಾಣದಲ್ಲಿ ಹರಡಿಕೊಂಡಿರುವ ಕಾಫಿ ತೋಟಗಳನ್ನು ನೋಡಬಹುದು. ಇವು ದರಿಂಗ್‍ಬಡಿ ಎಂದು ಕರೆಯಲಾಗುವ ಮುಗಿಲೆತ್ತರಕ್ಕೆ ನಿಂತಿರುವ ಬೆಟ್ಟಗಳಲ್ಲಿ ನೆಲೆಗೊಂಡಿವೆ.

ಕರಕುಶಲ ವಸ್ತುಗಳಿಗೆ ಪ್ರಸಿದ್ಧಿ

ಕರಕುಶಲ ವಸ್ತುಗಳಿಗೆ ಪ್ರಸಿದ್ಧಿ

PC: Sushobhanroy
ಕಂಧಮಲ್ ತನ್ನಲ್ಲಿ ತಯಾರಾಗುವ ಬಿದಿರಿನ ಕರ ಕುಶಲ ವಸ್ತುಗಳಿಗೆ, ಡೊಕ್ರಾ, ಟೆರ್‍ರಾಕೋಟಾ ಮತ್ತು ಬಂಬೂ ವಸ್ತುಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಕಂಧಮಲ್ ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದೆ. ಇವುಗಳು ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುತ್ತಿರುತ್ತವೆ. ಪಟುಡಿ ಜಲಪಾತ, ಲುಡು ಜಲಪಾತ, ಕಟ್ರಮಲ್ ಮತ್ತು ಪಕಡಧಾರಾ ಜಲಪಾತಗಳು ತಮ್ಮ ಮನಮೋಹಕ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ತಮ್ಮತ್ತ ಆಕರ್ಷಿಸುತ್ತಿವೆ.

ಚಕಪಡ ಹಳ್ಳಿ ಶಿವನ ದೇವಾಲಯ

ಚಕಪಡ ಹಳ್ಳಿ ಶಿವನ ದೇವಾಲಯ

PC: MKar
ಚಕಪಡ ಹಳ್ಳಿಯು ತನ್ನಲ್ಲಿರುವ ಶಿವನ ದೇವಾಲಯದಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇದರ ಆವರಣದಲ್ಲಿರುವ ಮರಗಳು ದಕ್ಷಿಣಕ್ಕೆ ಬಾಗಿರುವುದು ಇಲ್ಲಿನ ವಿಶೇಷತೆಯಾಗಿದೆ. ಎರಡು ಬೆಟ್ಟಗಳು ಸೇರುವ ಸ್ಥಳದಲ್ಲಿ ನೆಲೆಗೊಂಡಿರುವ ಬಲಸ್ಕುಂಪ ಹಳ್ಳಿಯು ನೋಡುಗರನ್ನು ಮೂಕ ವಿಸ್ಮಿತಗೊಳಿಸುವ ಸೌಂದರ್ಯವನ್ನು ಹೊಂದಿದೆ. ಬೆಲ್‍ಗಡ್‍ನ ದಟ್ಟವಾದ ಅರಣ್ಯ ಪ್ರದೇಶದ ನಡುವೆ ನೆಲೆಸಿರುವ ಸ್ಥಳೀಯ ಬುಡಕಟ್ಟು ಜನರು ಮತ್ತು ವನ್ಯ ಮೃಗಗಳು ಕಂಧಮಲ್‍ನ ನೋಡಲೇ ಬೇಕಾದ ತಾಣವಾಗಿದೆ.

ಕಳಿಂಗ ಕಣಿವೆ

ಕಳಿಂಗ ಕಣಿವೆ

PC:MKar
ಇಲ್ಲಿ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳನ್ನು ನೋಡಬಹುದು. ಕಳಿಂಗ ಕಣಿವೆಯು ಅರಣ್ಯ ಸಂವರ್ಧನೆಯ ಹಾಗು ಔಷಧೀಯ ಸಸ್ಯಗಳ ಸಂರಕ್ಷಣೆಗೆ ಹೆಸರುವಾಸಿಯಾಗಿದ್ದು, ತನ್ನ ವಿಶಿಷ್ಟವಾದ ಪರಿಮಳದಿಂದಾಗಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಮೈ ಮನಸ್ಸುಗಳಿಗೆ ಪುನಃಶ್ಚೇತನವನ್ನು ಒದಗಿಸುತ್ತಿದೆ. ಸಾಹಸ ಪ್ರಿಯರಿಗೆ ಫುಲ್ಬನಿಯಲ್ಲಿ ಚಾರಣ ಮತ್ತು ದೋಣಿಯಾನ ಮಾಡುವ ಅವಕಾಶಗಳನ್ನು ಸಲುಂಕಿ ನದಿ ಮತ್ತು ಅದರ ಪಕ್ಕದ ಬೆಟ್ಟವು ಒದಗಿಸುತ್ತದೆ.

ಯಾವಾಗ ಭೇಟಿ ಸೂಕ್ತ

ಯಾವಾಗ ಭೇಟಿ ಸೂಕ್ತ

PC: MKar
ಕಂಧಮಾಲ್‍ನಲ್ಲಿ ಕಡೆಯದಾಗಿ ಯಾವುದೇ ಕಾರಣಕ್ಕೂ ಕಡೆಗಣಿಸಲಾಗದಂತಹ ದರಿಂಗ್‍ಬಡಿ ಗಿರಿಧಾಮವಿದೆ. ಇದು ಒಡಿಶಾದ ಏಕೈಕ ಬೇಸಿಗೆ ತಾಣವಾಗಿದ್ದು, ಚಳಿಗಾಲದಲ್ಲಿ ಹಿಮಪಾತಕ್ಕು ಸಹ ಸಾಕ್ಷಿಯಾಗುತ್ತದೆ. ಕಂಧಮಾಲ್‍ಗೆ ಭೇಟಿ ನೀಡಲು ಸೆಪ್ಟೆಂಬರ್ ನಿಂದ ಮೇ ನಡುವಿನ ಅವಧಿ ಅತ್ಯುತ್ತಮ ಕಾಲವಾಗಿರುತ್ತದೆ.

ಕಂಧಮಾಲ್‍ಗೆ ತಲುಪುವುದು ಹೇಗೆ ?

ಕಂಧಮಾಲ್‍ಗೆ ತಲುಪುವುದು ಹೇಗೆ ?

PC: Mkar
ಕಂಧಮಲ್‍ಗೆ ಭುಬನೇಶ್ವರ್, ಸಂಬಲ್‍ಪುರ್ ಮತ್ತು ಬೆಹ್ರಾಂಪುರಗಳ ಮೂಲಕ ರಸ್ತೆ ಮಾರ್ಗವಾಗಿ ತಲುಪಬಹುದು. ಈ ರಸ್ತೆಗಳು ಉಬ್ಬು ತಗ್ಗುಗಳಿಂದ ಕೂಡಿದ ರಸ್ತೆಯನ್ನು ಹೊಂದಿದ್ದರು, ರಸ್ತೆಯ ಇಕ್ಕೆಲಗಳಲ್ಲಿ ಕಂಡು ಬರುವ ನಯನ ಮನೋಹರ ದೃಶ್ಯ ವೈಭವವವು ನೋಡುಗರನ್ನು ಮೂಕ ವಿಸ್ಮಿತಗೊಳಿಸುತ್ತವೆ. ಭುಬನೇಶ್ವರ್, ಸಂಬಲ್‍ಪುರ್ ಮತ್ತು ಬೆಹ್ರಾಂಪುರಗಳಿಂದ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಫುಲ್ಬನಿಗೆ ಹೋಗಿ ಬರುತ್ತಿರುತ್ತವೆ.

ಸಂಬಲ್‍ಪುರ್ ಜಿಲ್ಲೆಯ ರೈರಖೋಲ್ ಇಲ್ಲಿಗೆ ಸಮೀಪದ ರೈಲು ನಿಲ್ದಾಣವನ್ನು ಹೊಂದಿದೆ. ಕಂಧಮಲ್‍ಗೆ ಸಮೀಪದ ಪ್ರಮುಖ ರೈಲು ನಿಲ್ದಾಣವು ಬೆಹ್ರಾಮ್‍ಪುರದಲ್ಲಿ ನೆಲೆಗೊಂಡಿದೆ. ಇದು ಫುಲ್ಬನಿಯಿಂದ 165 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ನಿಲ್ದಾಣವನ್ನು ತಲುಪಿದ ನಂತರ ಪ್ರವಾಸಿಗರು ಫುಲ್ಬಾನಿಗೆ ಬಸ್ ಅಥವಾ ಟ್ಯಾಕ್ಸಿಯ ಮೂಲಕ ತಲುಪಬಹುದು.

ಕಂಧಮಲ್‍ಗೆ ಸಮೀಪದ ವಿಮಾನ ನಿಲ್ದಾಣವು ಭುಬನೇಶ್ವರದಲ್ಲಿ ನೆಲೆಗೊಂಡಿದೆ. ಇದು ಇಲ್ಲಿಂದ 211 ಕಿ.ಮೀ ದೂರದಲ್ಲಿದೆ. ಇದರ ಜೊತೆಗೆ ಫುಲ್ಬನಿಯಿಂದ 5 ಕಿ.ಮೀ ದೂರದಲ್ಲಿರುವ ಗುಡರಿ ಎಂಬಲ್ಲಿ ಒಂದು ಸಣ್ಣ ಏರ್ ಸ್ಟ್ರಿಪ್ ಇದೆ. ಇಲ್ಲಿ ಸಣ್ಣ ವಿಮಾನಗಳು ಅಥವಾ ಹೆಲಿಕಾಪ್ಟರನ್ನು ಇಳಿಸಬಹುದು. ಭುಬನೇಶ್ವರ್ ವಿಮಾನ ನಿಲ್ದಾಣವನ್ನು ತಲುಪಿದ ನಂತರ ಪ್ರವಾಸಿಗಳು ಬಸ್‍ ಮೂಲಕ ಕಂಧಮಲ್ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X