Search
  • Follow NativePlanet
Share
» »ಸಕಲೇಶಪುರದ ಬಳಿ ಇರುವ ಜೇನುಕಲ್ಲು ಗುಡ್ಡಕ್ಕೆ ಟ್ರೆಕ್ಕಿಂಗ್ ಕೈಗೊಂಡಿದ್ದೀರಾ?

ಸಕಲೇಶಪುರದ ಬಳಿ ಇರುವ ಜೇನುಕಲ್ಲು ಗುಡ್ಡಕ್ಕೆ ಟ್ರೆಕ್ಕಿಂಗ್ ಕೈಗೊಂಡಿದ್ದೀರಾ?

ಬೆಟ್ಟ ಬೈರಾವೇಶ್ವರ ದೇವಸ್ಥಾನದಿಂದ 8 ಕಿ.ಮೀ ದೂರದಲ್ಲಿ ಮತ್ತು ಸಕಲೇಶಪುರದಿಂದ 40 ಕಿ.ಮೀ ದೂರದಲ್ಲಿ, ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಜೆಂಕಕಲ್ ಗುಡ್ಡ ಅಥವಾ ಜೇನುಕಲ್ಲು ಗುಡ್ಡ ಪರ್ವತ ಶಿಖರವಾಗಿದೆ. ಇದು ಕರ್ನಾಟಕದ ಎರಡನೇ ಅತ್ಯಂತ ಎತ್ತರದ ಶಿಖರ ಮತ್ತು ಸಕಲೇಶಪುರದಲ್ಲಿನ ಅತ್ಯುತ್ತಮ ಚಾರಣ ಸ್ಥಳಗಳಲ್ಲಿ ಒಂದಾಗಿದೆ.

ಅದ್ಭುತ ತಾಣ

ಹಸಿರು ಬೆಟ್ಟದ ಹೊದಿಕೆಯಿಂದ ಕೂಡಿರುವ ವಿವಿಧ ಬೆಟ್ಟದ ದೃಶ್ಯವನ್ನು ನೋಡಿದರೆ ಜೆಂಕಲ್ ಗುಡ್ಡವು ನಿಜಕ್ಕೂ ಚಾರಣ ಪ್ರಿಯರಿಗೆ ಅದ್ಭುತ ತಾಣವಾಗಿದೆ.

ತುಂಗಾ,ಭದ್ರಾ, ನೇತ್ರಾವತಿ ನದಿಯ ಉಗಮಸ್ಥಾನ ಈ ಪುಣ್ಯ ತಾಣತುಂಗಾ,ಭದ್ರಾ, ನೇತ್ರಾವತಿ ನದಿಯ ಉಗಮಸ್ಥಾನ ಈ ಪುಣ್ಯ ತಾಣ

ಬೈರವೇಶ್ವರ ದೇವಸ್ಥಾನ

ಬೆಟ್ಟ ಬೈರವೇಶ್ವರ ದೇವಸ್ಥಾನದಿಂದ ಜೆನಕುಲ್ಲು ಗುಡ್ಡ ಶಿಖರವನ್ನು ತಲುಪಬಹುದು. ದೇವಸ್ಥಾನದಿಂದ 8 ಕಿ.ಮೀ ದೂರದಲ್ಲಿದೆ. ಚಾರಣದ ಮೂಲಕ ಈ ಸ್ಥಳವನ್ನು ನಾಲ್ಕು-ಐದು ಗಂಟೆಯಲ್ಲಿ ತಲುಪಬಹುದು.

ಕಡಿದಾದ ದಾರಿ

ಚಾರಣದ ಆರಂಭವು ಸಲೀಸಾಗಿರುತ್ತದೆ. ನಡೆದಾಡಲು ಸಾಕಷ್ಟು ಸ್ಥಳವಿರುತ್ತದೆ. ಆದರೆ ಕ್ರಮೇಣ ಮೇಲಕ್ಕೆ ಏರುತ್ತಾ ಹೋದಂತೆ ರಸ್ತೆಯು ಕಡಿದಾಗುತ್ತಾ ಹೋಗುತ್ತದೆ. ಕೆಲವು ಸ್ಥಳಗಳಲ್ಲಿ ಬಂಡೆಗಳ ಮೂಲಕ ಕಿರಿದಾದ ಮಾರ್ಗವನ್ನು ನ್ಯಾವಿಗೇಟ್ ಮಾಡುವುದು ಬಹಳ ಕಷ್ಟಕರವಾಗಿದೆ.

ಈ ಗುಹೆಯೊಳಗಿನ ಶಿವಲಿಂಗದ ದರ್ಶನ ಪಡೆಯುವುದು ಒಂದು ಸಾಹಸವೇ ಸರಿಈ ಗುಹೆಯೊಳಗಿನ ಶಿವಲಿಂಗದ ದರ್ಶನ ಪಡೆಯುವುದು ಒಂದು ಸಾಹಸವೇ ಸರಿ

ಮಳೆಗಾಲದಲ್ಲಿ ಕಷ್ಟ

ಮಳೆಗಾಲದಲ್ಲಿ ಇಲ್ಲಿಗೆ ಚಾರಣ ಕೈಗೊಳ್ಳುವುದು ಚಾರಣಿಗರಿಗೆ ನಿಜಕ್ಕೂ ಒಂದು ಸವಾಲೇ ಸರಿ. ಎಟ್ಟಿನ ಭುಜ, ಕುಮಾರ ಪರ್ವತ ಮತ್ತು ಶೇಷಪರ್ವತಂತಹ ಅನೇಕ ಪ್ರಸಿದ್ಧ ಶಿಖರಗಳನ್ನು ಈ ಬೆಟ್ಟದ ಮೇಲ್ಭಾಗದಿಂದ ಕಾಣಬಹುದು.

ದೀಪದ ಕಲ್ಲು

ಜೇನುಕಲ್ ಸಮೀಪದ ಬೆಟ್ಟ ದಿಗ್ಗಾಲು ಅಥವಾ ದೀಪದ ಕಲ್ಲು ಎಂದು ಕರೆಯಲ್ಪಡುತ್ತದೆ. ಜೇನುಕಲ್ಲು ಬೆಟ್ಟದೊಂದಿಗೆ ಇಲ್ಲಿಗೂ ಟ್ರೆಕ್ಕಿಂಗ್‌ ಮಾಡಲಾಗುತ್ತದೆ . ಮಳೆಗಾಲದದಲ್ಲಿ ಬೆಟ್ಟವಿಡೀ ಮಂಜಿನಿಂದ ಕೂಡಿರುವುದರಿಂದ ರಸ್ತೆಗಳು ಕಾಣೋದಿಲ್ಲ. ಹಾಗಾಗಿ ಮಳೆಗಾಲದಲ್ಲಿ ಈ ಪರ್ವತವನ್ನು ಏರುವುದು ತುಂಬಾನೇ ಅಪಾಯಕಾರಿ.

ಎಲ್ಲೋರಾ ಗುಹೆ ಬಳಿ ಇರುವ 12 ನೇ ಜ್ಯೋತಿರ್ಲಿಂಗದ ದರ್ಶನ ಪಡೆದಿದ್ದೀರಾ? ಎಲ್ಲೋರಾ ಗುಹೆ ಬಳಿ ಇರುವ 12 ನೇ ಜ್ಯೋತಿರ್ಲಿಂಗದ ದರ್ಶನ ಪಡೆದಿದ್ದೀರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X