Search
  • Follow NativePlanet
Share
» »ರಸ್ತೆಯಲ್ಲಿ ಓಡಾಡೋದು ಕಷ್ಟವಾದ್ರೆ ಸ್ಕೈವಾಕ್ ಮಾಡಿ, ಏನಿದು ಸ್ಕೈವಾಕ್

ರಸ್ತೆಯಲ್ಲಿ ಓಡಾಡೋದು ಕಷ್ಟವಾದ್ರೆ ಸ್ಕೈವಾಕ್ ಮಾಡಿ, ಏನಿದು ಸ್ಕೈವಾಕ್

ದೆಹಲಿಯು ನಮ್ಮ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ನಿಮಗೆ ಐತಿಹಾಸಿಕ ತಾಣಗಳ ಜೊತೆಗೆ ಮಜಾಮಾಡುವ ಸಾಕಷ್ಟು ತಾಣಗಳು ಸಿಗುತ್ತವೆ. ಅವುಗಳ ಜೊತೆ ಇದೀಗ ಇನ್ನೊಂದು ತಾಣ ಸೇರಿಕೊಂಡಿದೆ. ಅದುವೇ ದೆಹಲಿಯ ಸ್ಕೈ ವಾಕ್.

ಸ್ಕೈವಾಕ್

ಸ್ಕೈವಾಕ್

ದೆಹಲಿಯಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಾ ಹೋಗುತ್ತಿರುವಂತೆ ವಾಹನಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಹೀಗಿರುವಾಗ ಪಾದಚಾರಿಗಳು ನಡೆಯುವುದು ಕಷ್ಟಕರವಾಗಿದೆ. ಆದರೆ ಇದೀಗ ಆ ಸಮಸ್ಯೆ ನಿವಾರಣೆಯಾಗಿದೆ. ಐಟಿಓನಲ್ಲಿ ನಿರ್ಮಿಸಲಾಗಿರುವ ಹೊಸ ಸ್ಕೈವಾಕ್ ಈ ಪ್ರದೇಶದಲ್ಲಿ ಕೆಲಸಕ್ಕೆ ಹೋಗುವ ಹಾಗೂ ಪಾದಚಾರಿಗಳಿಗೆ ಬಹಳ ಅನುಕೂಲಕರವಾಗಿದೆ.

 30 ಸಾವಿರ ಜನರು ಓಡಾಡುತ್ತಾರೆ

30 ಸಾವಿರ ಜನರು ಓಡಾಡುತ್ತಾರೆ

ಇಂತಹ ಜನನಿಬಿಡ ಪ್ರದೇಶದಲ್ಲಿ ರಸ್ತೆ ದಾಟುವುದೇ ಒಂದು ದೊಡ್ಡ ತಲೆನೋವಾಗಿರುತ್ತದೆ. ಹೀಗಿರುವಾಗ ಈ ಸ್ಕೈ ವಾಕ್‌ನಿಂದ ದಿನಕ್ಕೆ ಸುಮಾರು 30 ಸಾವಿರ ಮಂದಿಯಾದರೂ ಆರಾಮವಾಗಿ ರಸ್ತೆ ದಾಟುತ್ತಾರೆ.

ಯಾವೆಲ್ಲಾ ದಾರಿಯಲ್ಲಿ ಸಾಗುತ್ತದೆ

ಯಾವೆಲ್ಲಾ ದಾರಿಯಲ್ಲಿ ಸಾಗುತ್ತದೆ

ತಿಲಕ್ ಮಾರ್ಗ, ಬಹಾದ್ದೂರ್ ಶಾಹ ಜಾಫರ್ ಮಾರ್ಗ, ಸಿಕಂದರ್ ರಸ್ತೆ ಹಾಗೂ ಮಥುರಾ ರೋಡ್‌ನ್ನು ಪ್ರಗತಿ ಮೈದಾನದಿಂದ ಐಟಿಓನ ಡಬ್ಲ್ಯೂ ಪಾಯಿಂಟ್ ಕ್ರಾಸಿಂಗ್‌ನಲ್ಲಿ ಕನೆಕ್ಟ್ ಮಾಡುತ್ತದೆ.

ಫೂಟ್‌ ಓವರ್‌ ಬ್ರಿಡ್ಜ್‌ಗಿಂತ ಭಿನ್ನ

ಫೂಟ್‌ ಓವರ್‌ ಬ್ರಿಡ್ಜ್‌ಗಿಂತ ಭಿನ್ನ

ಈ ಸ್ಕೈವಾಕ್‌ನ ವಿಶೇಷತೆ ಎಂದರೆ ಇದು ಉಳಿದ ಫೂಟ್‌ ಓವರ್‌ ಬ್ರಿಡ್ಜ್‌ಗಿಂತಲೂ ಉದ್ದ ಹಾಗೂ ಅಗಲವಾಗಿರುತ್ತದೆ. ಸ್ಕೈವಾಕ್ 400 ಮೀಟರ್ ಉದ್ದ ಮತ್ತು 5 ಮೀ ವಿಶಾಲವಾಗಿದೆ. ಲೂಪ್ ಮತ್ತು ರಾಂಪ್ನ ಉದ್ದ 130 ಮೀಟರ್ ಮತ್ತು ಅದರ ಅಗಲವು 3 ಮೀ. ಇದೆ.

ಫ್ರೀ ವೈಫೈ

ಫ್ರೀ ವೈಫೈ

ಹಾನ್ಸ್ ಭವನದಲ್ಲಿ FOB ಕೂಡ ಪಾದಚಾರಿಗಳಿಗಾಗಿ ನಿರ್ಮಿಸಲ್ಪಟ್ಟಿದ್ದು. ಸ್ಕೈವಾಕ್‌ನಲ್ಲಿ ಫುಡ್‌ ಸ್ಟಾಲ್, ಫ್ರೀ ವೈಫೈ, ಪಾದಚಾರಿಗಳಿಗೆ ಕುಳಿತುಕೊಳ್ಳಲು ಸ್ಥಳವೂ ಇದೆ. ಇದು ಪ್ರಗತಿ ಮೈದಾನದಿಂದ ಪ್ರಾರಂಭವಾಗಿ ನಾಲ್ಕು ಕಡೆಗಳಲ್ಲಿ ಎಕ್ಸಿಟ್ ಆಗುತ್ತದೆ. ಮಥುರಾ ರೋಡ್‌ ಬಸ್‌ಸ್ಟ್ಯಾಂಡ್‌ನಲ್ಲಿ ಮೊದಲ ಎಕ್ಸಿಟ್‌ ಆದ್ರೆ ಎರಡನೇಯದು ಮೆಟ್ರೋ ಲೈನ್‌ನ ಕೆಳಗೆ ಲೇಡಿ ಆರ್ವಿನ್ ಕಾಲೇಜ್‌ ಬಳಿ.

ಉಕ್ಕಿನಿಂದ ನಿರ್ಮಿಸಿದ್ದು

ಉಕ್ಕಿನಿಂದ ನಿರ್ಮಿಸಿದ್ದು

ಸ್ಕೈವಾಕ್ ಮತ್ತು ಎಫ್ಒಬಿಗಳನ್ನು ಉಕ್ಕಿನಿಂದ ನಿರ್ಮಿಸಲಾಗಿದೆ. ಗ್ರಾನೈಟ್ ನೆಲಹಾಸು ಮತ್ತು ಸ್ಟೇನ್ಲೆಸ್ ಸ್ಟೀಲ್ ರೇಲಿಂಗ್ ಅನ್ನು ಸಹ ಒದಗಿಸಲಾಗಿದೆ. ಈ ರಚನೆಯು ಆಕರ್ಷಕ ಬಟ್ಟೆಯ ಛಾವಣಿಯನ್ನು ಹೊಂದಿದೆ.

ಸಿಸಿಟಿವಿ ಕಣ್ಗಾವಲು

ಸಿಸಿಟಿವಿ ಕಣ್ಗಾವಲು

ಸ್ಕೈವಾಕ್ನಲ್ಲಿ 6 ಲಿಫ್ಟ್‌ಗಳಿವೆ. 20 ಜನರನ್ನು ಹೊಂದುವ ಸಾಮರ್ಥ್ಯವನ್ನು ಹೊಂದಿವೆ . ಸೌರ ಪಿವಿ ಮಾಡ್ಯೂಲ್‌ಗಳು, ವೈ-ಫೈ, ಸಿಸಿಟಿವಿಗಳನ್ನು ಸ್ಕೈವಾಕ್ ಮತ್ತು ಎಫ್ಒಬಿಗಳಲ್ಲಿ ಕೂಡ ಒದಗಿಸಲಾಗಿದೆ. ಎಲ್ಇಡಿ ಫಿಟ್ಟಿಂಗ್‌ಗಳನ್ನು ಸಹ ಒದಗಿಸಲಾಗಿದೆ. ಸಂಪೂರ್ಣ ಸ್ಕೈವಾಕ್ ಸಿಸಿಟಿವಿ ಕಣ್ಗಾವಲಿನಡಿಯಲ್ಲಿದೆ. ನೀವು ದೆಹಲಿ ಪ್ರವಾಸಕ್ಕೆ ಹೋಗಿದ್ದರೆ ಅಲ್ಲಿನ ಸ್ಕೈವಾಕ್‌ ಅನುಭವವನ್ನು ಪಡೆಯುವುದನ್ನು ಮರೆಯದಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X