Search
  • Follow NativePlanet
Share
» »ಕುತೂಹಲ ಕೆರಳಿಸುವ ಪಂಚರಥಗಳು!

ಕುತೂಹಲ ಕೆರಳಿಸುವ ಪಂಚರಥಗಳು!

ಕುತೂಹಲ ಕೆರಳಿಸುವ ದ್ರಾವಿಡ ವಾಸ್ತುಶೈಲಿಯನ್ನು ಅದ್ಭುತವಾಗಿ ಅನಾವರಣಗೊಳಿಸುವ ಒಂದೊಂದೆ ಬಡೆಗಳಲ್ಲಿ ಕೆತ್ತಲಾಗಿರುವ ಮಹಾಬಲಿಪುರಂನ ಪಂಚರಥಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ

By Vijay

ಸಮುದ್ರ ತೀರದ ಮರಳ ಹಾಸಿನ ಮೇಲೆ ನೆಲೆಯೂರಿದ್ದ ಹೆಬ್ಬಂಡೆಗಳಲ್ಲಿ ಏಕ ಶಿಲೆಯ ಬಂಡೆಗಳನ್ನು ಬಲು ಸೂಕ್ಷ್ಮವಾಗಿ ಆಯ್ದುಕೊಂಡು ರಥದ ರೂಪದಲ್ಲಿ ಕಡೆಯಲಾದ ಶಿಲಾ ಸ್ಮಾರಕಗಳೆ ಪಂಚರಥಗಳು. ದ್ರಾವಿಡ ವಾಸ್ತುಶೈಲಿಯನ್ನು ಅದ್ಭುತವಾಗಿ ಅನಾವರಣಗೊಳಿಸುವ ಈ ರಚನೆಗಳು ಸುಮಾರು ಆರರಿಂದ ಏಳನೆಯ ಶತಮಾನದಲ್ಲಿ ನಿರ್ಮಾಣವಾದವುಗಳು.

ಅಷ್ಟು ಪುರಾತನವಾದ ಆ ರಚನೆಗಳು ಇಂದಿಗೂ ಹಾಗೆ ನಿಂತಿರುವುದನ್ನು ನೋಡಿದಾಗ ಸಾಕಷ್ಟು ರೋಮಾಂಚನ ಉಂಟಾಗುತ್ತದೆ. ಪಗೋಡ ಶೈಲಿಯನ್ನು ಕಾಣಬಹುದಾಗಿದ್ದರಿಂದ ಒಮ್ಮೊಮ್ಮೆ ಇವು ಬೌದ್ಧ ಸ್ಮಾರಕಗಳಾಗಿರಬಹುದೆಂಬ ಗೊಂದಲ ಉಂಟಾದರೂ ಹತ್ತಿರದಿಂದ ಗಮನಿಸಿದಾಗ ದ್ರಾವಿಡ ಶೈಲಿಯು ದಟ್ಟವಾಗಿ ಅನಾವರಣಗೊಳ್ಳುವುದನ್ನು ಕಾಣಬಹುದು.

ಮಹಾಬಲಿಪುರಂ : ಬೀಚಲ್ಲೊಂದು ವಿಶಿಷ್ಟ ದೇವಾಲಯ

ವಿಶೇಷವೆಂದರೆ ಈ ಬಂಡೆ ರಥಗಳು ಮಹಾಭಾರತದ ಪಂಚ ಪಾಂಡವರಿಗೆ ಮುಡಿಪಾದ ಅದ್ಭುತ ರಚನೆಗಳಾಗಿದ್ದು ದ್ರೌಪದಿ ಸಮೇತವಾಗಿ ಪ್ರತ್ಯೇಕವಾಗಿ ಎಲ್ಲರಿಗೂ ಮುಡಿಪಾದ ರಥಗಳು ಇಲ್ಲಿರುವುದನ್ನು ಗಮನಿಸಬಹುದಾಗಿದೆ. ಹಾಗಾಗಿ ಇವುಗಳನ್ನು ಪಂಚರಥಗಳೆಂದು ಕರೆಯುತ್ತಾರೆ.

ಅಂದಹಾಗೆ ಈ ಪಂಚರಥಗಳು ಇರುವುದು ಪ್ರಸಿದ್ಧ ಕಡಲ ತಡಿಯ ಐತಿಹಾಸಿಕ ನಗರವಾದ ಮಹಾಬಲಿಪುರಂನಲ್ಲಿ. ಮಾಮ್ಮಲ್ಲಪುರಂ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ಮಹಾಬಲಿಪುರಂ ತಮಿಳುನಾಡಿನ ಕಂಚೀಪುರಂ ಜಿಲ್ಲೆಯಲ್ಲಿದ್ದು ಚೆನ್ನೈ ನಗರದಿಂದ ಕೇವಲ 60 ಕಿ.ಮಿ ಗಳಷ್ಟು ದೂರವಿದ್ದು ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಏಕಶಿಲೆ

ಏಕಶಿಲೆ

ಪಂಚರಥಗಳಲ್ಲಿ ಒಂದಾಗಿದೆ ಧರ್ಮರಾಜ ಅಥವಾ ಯುಧಿಷ್ಟರ ರಥ. ಗುಲಾಬಿ ಬಣ್ಣದ ಗ್ರಾನೈಟ್ ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾಗಿದೆ. ಮೂಲತಃ ಈ ರಚನೆಗಳ ನಿರ್ಮಾಣದ ಗೌರವ ಸಲ್ಲಬೇಕಾದುದು ಪಲ್ಲವ ದೊರೆ ಮಹೇಂದ್ರವರ್ಮ ಹಾಗೂ ಅವನ ಪುತ್ರನಾದ ಒಂದನೇಯ ನರಸಿಂಹವರ್ಮನಿಗೆ.

ವಿತ್ರಕೃಪೆ: michael clarke stuff

ಪೂಜೆಯೆ ಇಲ್ಲ

ಪೂಜೆಯೆ ಇಲ್ಲ

ಇದು ದೇವಾಲಯದಂತೆ ಕಂಡುಬಂದರೂ ಸಹ ಇದು ದೇವಾಲಯವಲ್ಲ. ಅಲ್ಲದೆ ಇದನ್ನು ಎಂದಿಗೂ ಪೂಜಿಸಲಾಗಿಲ್ಲ ಹಾಗೂ ಇದರ ಕೆತ್ತನೆಯು ಸಂಪೂರ್ಣವಾಗಿಯೂ ಪೂರ್ಣಗೊಂಡಿಲ್ಲ. ಇದಕ್ಕೆ ಕಾರಣ ಈ ರಥಗಳ ನಿರ್ಮಾಣದ ಕೊನೆಯ ಹಂತದಲ್ಲಿ ನರಸಿಂಹವರ್ಮ ತೀರಿಕೊಂಡಿದ್ದು ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಚಿತ್ರಕೃಪೆ: Bernard Gagnon

ಶಿವನಿಗೆ ಮುಡಿಪಾದ

ಶಿವನಿಗೆ ಮುಡಿಪಾದ

ಆದಾಗ್ಯೂ ಕೆಲವು ಇತಿಹಾಸಕಾರರು ಇದು ಶಿವನಿಗೆ ಮುಡಿಪಾಗಿದೆ ಎಂದು ಹೇಳುತ್ತಾರಾದರೂ ಮೊದಲಿನಿಂದಲೂ ಇದು ಧರ್ಮರಾಜ ರಥ ಎಂದೆ ಕರೆಯಲ್ಪಡುತ್ತದೆ. ಮರಳಿನ ಹಾಸಿಗೆಯ ಮೇಲೆ ಕೆತ್ತಲಾಗಿರುವ ಈ ರಥಗಳು ಅದ್ಭುತವಾಗಿ ಕಂಡುಬರುತ್ತವೆ.

ಚಿತ್ರಕೃಪೆ: michael clarke stuff

ಸುಂದರವಾಗಿವೆ

ಸುಂದರವಾಗಿವೆ

ನೈರುತ್ಯ ದಿಕ್ಕಿನ ಒಂದೆ ರೇಖೆಯಲ್ಲಿ ಎಲ್ಲ ಐದು ರಥಗಳ ನಿರ್ಮಾಣ ಮಾಡಲಾಗಿದ್ದು ಸುಂದರವಾಗಿ ಕಂಡುಬರುತ್ತವೆ. ಧರ್ಮರಾಜ ರಥವೆ ಮಿಕ್ಕೆಲ್ಲ ರಥಗಳಿಗಿಂತ ದೊಡ್ಡದಾದ ರಚನೆಯಾಗಿ ಕಂಡುಬರುವುದರಿಂದ ಇದಕ್ಕೆ ಧರ್ಮರಾಜನ ರಥ ಎಂದು ಕರೆಯಲಾಗುತ್ತದೆ ಎಂದು ಹಲವರ ಅಭಿಪ್ರಾಯವಾಗಿದೆ.

ಚಿತ್ರಕೃಪೆ: Av.kumar85

ಗ್ರಾನೈಟ್ ಕಲ್ಲು

ಗ್ರಾನೈಟ್ ಕಲ್ಲು

ಪಂಚರಥಗಳಲ್ಲಿ ಒಂದಾಗಿದೆ ಭೀಮ ರಥ. ಗುಲಾಬಿ ಬಣ್ಣದ ಗ್ರಾನೈಟ್ ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾಗಿದೆ. ಮೂಲತಃ ಈ ರಚನೆಗಳ ನಿರ್ಮಾಣದ ಗೌರವ ಸಲ್ಲಬೇಕಾದುದು ಪಲ್ಲವ ದೊರೆ ಮಹೇಂದ್ರವರ್ಮ ಹಾಗೂ ಅವನ ಪುತ್ರನಾದ ಒಂದನೇಯ ನರಸಿಂಹವರ್ಮನಿಗೆ.

ಚಿತ್ರಕೃಪೆ: michael clarke stuff

ಮೂರನೆಯ

ಮೂರನೆಯ

ಸರತಿ ಸಾಲಿನಲ್ಲಿರುವ ಮೂರನೆಯ ರಥ ಸ್ಮಾರಕ ರಚನೆ ಇದಾಗಿದ್ದು ಪಶ್ಚಿಮಕ್ಕೆ ಮುಖ ಮಾಡಿ ನಿಂತಿದೆ ಭೀಮ ರಥ. ಸಿಂಹದ ಕೆತ್ತನೆಯುಳ್ಳ ಖಂಬಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: McKay Savage

ಕೆತ್ತಲಾಗಿದೆ

ಕೆತ್ತಲಾಗಿದೆ

ಭೀಮ ರಥವೂ ಸಹ ಒಂದೆ ಬಂಡೆಯಲ್ಲಿ ಕೆತ್ತಲಾದ ಅದ್ಭುತ ಸ್ಮಾರಕವಾಗಿದೆ. 42 ಅಡಿ ಉದ್ದ, 24 ಅಡಿ ಅಗಲ ಹಾಗೂ 25 ಅಡಿಗಳಷ್ಟು ಎತ್ತರವನ್ನು ಹೊಂದಿರುವ ಸ್ಮಾರಕ ಇದಾಗಿದೆ.

ಚಿತ್ರಕೃಪೆ: Wikitom2

ಶಿವ

ಶಿವ

ಶಿವನಿಗೆ ಮುಡಿಪಾದ ರಥ ರಚನೆ ಇದಾಗಿದೆಯಾದರೂ ಅರ್ಜುನರಥ ಎಂತಲೆ ಕರೆಯಲ್ಪಡುತ್ತದೆ. ಈ ರಥವು ಚಿಕ್ಕದಾದ ಮುಖ ಮಂಟಪವನ್ನು ಹೊಂದಿದೆ. ಒಳಗೆ ಯಾವುದೆ ರೀತಿಯ ಕೆತ್ತನೆಗಳಿಲ್ಲವಾದರೂ ಹೊರಗೋಡೆಯ ಮೇಲೆ ಕೆತ್ತನೆಗಳಿರುವುದನ್ನು ಕಾಣಬಹುದು.

ಚಿತ್ರಕೃಪೆ: Bernard Gagnon

ಮನುಷ್ಯ ಹಾಗೂ ದೇವತೆ

ಮನುಷ್ಯ ಹಾಗೂ ದೇವತೆ

ಇಲ್ಲಿರುವ ಕೆತ್ತನೆಗಳಲ್ಲಿ ಒಂದು ದ್ವಾರದ ಬಳಿ ದ್ವಾರಪಾಲಕರ ಕೆತ್ತನೆಗಳಿದ್ದರೆ, ಇನ್ನೊಂದು ಭಾಗದಲ್ಲಿ ಮನುಷ್ಯನ ಹಾಗೂ ದೇವತೆಗಳ ವಿವಿಧ ಭಂಗಿಯ ಕೆತ್ತನೆಗಳಿರುವುದನ್ನು ಕಾಣಬಹುದು.

ಚಿತ್ರಕೃಪೆ: G41rn8

ಸುಂದರ ಸ್ತ್ರೀಯರು

ಸುಂದರ ಸ್ತ್ರೀಯರು

ರಚನೆಯ ಒಂದು ಭಾಗದಲ್ಲಂತೂ ಇಂದ್ರ ದೇವನು ಆನೆ ಸವಾರಿ ಮಾಡುತ್ತಿರುವುದನ್ನು ಹಾಗೂ ನಿಂತ ಇಬ್ಬರು ಸುಂದರ ಸ್ತ್ರೀಯರನ್ನು ಅದ್ಭುತವಾಗಿ ಕೆತ್ತಲಾಗಿದೆ. ಇದರ ಮೋಹಕತೆ ಎಷ್ಟಿದೆ ಎಂದರೆ ಹಲವಾರು ಕವಿಗಳು ಇದರಿಂದ ಪ್ರಭಾವಗೊಂಡು ಕವಿತೆಗಳನ್ನು ರಚಿಸಿದ್ದಾರೆ.

ಚಿತ್ರಕೃಪೆ: Jean-Pierre Dalbéra

ಆನೆ

ಆನೆ

ಅರ್ಜುನ ರಥದ ಎದುರು ಬದಿಯಲ್ಲಿ ನಕುಲ-ಸಹದೇವರ ರಥವಿದೆ. ಎರಡು ಮಹಡಿಗಳ ಈ ರಥ ಸ್ಮಾರಕವು ಇಂದ್ರದೇವನಿಗೆ ಮುಡಿಪಾಗಿದೆ. ಆನೆಯ ಕೆತ್ತನೆಯನ್ನು ಇಲ್ಲಿ ಕಾಣಬಹುದಾಗಿದ್ದು ಆನೆ ಸಮುದ್ರದೆಡೆ ಮುಖ ಮಾಡಿ ನಿಂತಿವೆ.

ಚಿತ್ರಕ್ರುಪೆ: G41rn8

ಪ್ರವೇಶದ್ವಾರ

ಪ್ರವೇಶದ್ವಾರ

ಈ ರಥಗಳಿರುವ ಸಂಕೀರ್ಣದ ಪ್ರವೇಶ ದ್ವಾರದಲ್ಲಿಯೆ ದ್ರೌಪದಿ ರಥವಿರುವುದನ್ನು ಕಾಣಬಹುದು. ಇದು ನೋಡಲು ಆಕರ್ಷಕ ಹಾಗೂ ನಯನಮನೋಹರವಾಗಿದೆ.

ಚಿತ್ರಕೃಪೆ: Sharda Crishna

ದುರ್ಗಾದೇವಿ

ದುರ್ಗಾದೇವಿ

ಗುಡಿಸಲಿನ ರೀತಿಯಲ್ಲಿ ಈ ಅದ್ಭುತವಾದ ರಥ ಸ್ಮಾರಕವನ್ನು ಕೆತ್ತಲಾಗಿದೆ ಹಾಗೂ ಇದು ದುರ್ಗಾ ದೇವಿಗೆ ಮುಡಿಪಾಗಿದೆ. ಪ್ರವೇಶ ದ್ವಾರದಲ್ಲಿ ವಿಶಿಷ್ಟವಾಗಿ ದ್ವಾರಪಾಲಿಕೆಯರನ್ನು ಕಾಣಬಹುದು.

ಚಿತ್ರಕೃಪೆ: Amritamitraghosh

ಕಮಲದ ಮೇಲೆ

ಕಮಲದ ಮೇಲೆ

ಪೂರ್ವಕ್ಕಿರುವ ಗೋಡೆಯ ಮೇಲೆ ದುರ್ಗಾ ದೇವಿಯು ಕಮಲದ ಮೇಲೆ ನಿಂತಿರುವ ಭಂಗಿಯನ್ನು ಅದ್ಭುತವಾಗಿ ಕೆತ್ತಲಾಗಿರುವುದನ್ನು ಗಮನಿಸಬಹುದು. ಎದುರು ಬದಿಯಲ್ಲಿ ದೇವಿಯ ವಾಹನವಾದ ಸಿಂಹದ ಕೆತ್ತನೆಯಿದೆ.

ಚಿತ್ರಕೃಪೆ: Sharda Crishna

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X