Search
  • Follow NativePlanet
Share
» »ಕಾರ್ಗಿಲ್ ಯುದ್ಧ ನೆನಪಿಸಿಕೊಳ್ಳುವ ಇಂಡಿಯಾ ಗೇಟ್

ಕಾರ್ಗಿಲ್ ಯುದ್ಧ ನೆನಪಿಸಿಕೊಳ್ಳುವ ಇಂಡಿಯಾ ಗೇಟ್

By Vijay

1999, ಜೂನ್-ಜುಲೈ ಸಮಯ. ಇಡೀ ಭಾರತ ದೇಶವೆ ಅಂದು ಏಕಾಗ್ರತೆಯಿಂದ ದೇವರಲ್ಲಿ ಪ್ರಾರ್ಥಿಸುತ್ತ ಕುಳಿತಿದ್ದ ಸಂದರ್ಭ. ತಾಯಿ ಭಾರತ ಮಾತೆಯ ಕೆಚ್ಚೆದೆಯ ಗಂಡುಗಲಿಗಳು ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ಹಗಲಿರುಳೆನ್ನದೆ ನುಸುಳುಕೋರರು ವಶಪಡಿಸಿಕೊಂಡಿದ್ದ ಭಾರತದ ಕೆಲ ಭಾಗಗಳನ್ನು ಮತ್ತೆ ಮರಳಿ ಪಡೆಯಲು ರಣರಂಗದಲ್ಲಿ ರೌದ್ರಾವತಾರ ತಾಳಿ ವೀರಾವೇಶದಿಂದ ಹೋರಾಡುತ್ತಿದ್ದರು.

ಇಂದು ಹೀಗಿದೆ ನೋಡಿ ನಮ್ಮ ಕಾರ್ಗಿಲ್

60 ದಿನಗಳ ಕಾಲ ಸತತವಾಗಿ ಭಾರತಾಂಬೆಯ ಪುತ್ರರಾದ ನಮ್ಮ ವೀರ ಭಾರತೀಯ ಸೈನಿಕರು ಹೋರಾಡಿ ತಮ್ಮ ಗುರಿಯನ್ನು ಸಾಧಿಸಿದಾಗ ಕ್ಯಾಲೆಂಡರ್ ತೋರಿಸುತ್ತಿದ್ದ ದಿನಾಂಕ ಜುಲೈ 26, 1999. ಆ ಒಂದು ದಿನವೆ ಕಾರ್ಗಿಲ್ ವಿಜಯ ದಿನವಾಗಿ ಭಾರತದೆಲ್ಲೆಡೆ ಬಲು ಸಂಭ್ರಮದಿಂದ ಆಚರಿಸಲಾಯಿತು. ಹೀಗೆ ಘನಗೋರವಾಗೆ ನಡೆದ ಯುದ್ಧವೆ ಕಾರ್ಗಿಲ್ ಯುದ್ಧ.

ಕಾರ್ಗಿಲ್ ಯುದ್ಧ ನೆನಪಿಸಿಕೊಳ್ಳುವ ಇಂಡಿಯಾ ಗೇಟ್

ಚಿತ್ರಕೃಪೆ: wikipedia

ಕಾರ್ಗಿಲ್-ಡ್ರಾಸ್ ಸೆಕ್ಟರ್ ನಲ್ಲಿ ಅಂದಿನಿಂದ ಪ್ರಾರಂಭವಾದ ಕಾರ್ಗಿಲ್ ವಿಜಯ ದಿನ ಇಂದಿಗೂ ಪ್ರತಿ ವರ್ಷ 26 ರಂದು ಆಚರಿಸಲ್ಪಡುತ್ತದೆ. ಕೇವಲ ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರಾಂತ್ಯ್ದಲ್ಲಿರುವ ಕಾರ್ಗಿಲ್ ಪಟ್ಟಣದಲ್ಲಿ ಮಾತ್ರವಲ್ಲದೆ ಈ ದಿನವು ದೆಹಲಿಯಲ್ಲೂ ವಿಶೇಷವಾಗಿ ಆಚರಿಸಲ್ಪಡುತ್ತದೆ. ಅದರಲ್ಲೂ ವಿಶೇಷವಾಗಿ ಇಂಡಿಯಾ ಗೇಟ್ ಈ ಒಂದು ಅದ್ಭುತ ದಿನಕ್ಕೆ ಪ್ರತಿ ವರ್ಷ ಹೆಮ್ಮೆಯಿಂದ ಸಜ್ಜಾಗಿರುತ್ತದೆ.

ಈ ದಿನದಂದು ದೇಶದ ಪ್ರಧಾನಿಯು ಇಂಡಿಯಾ ಗೇಟ್ ದ್ವಾರಕ್ಕೆ ಭೇಟಿ ನೀಡಿ ಅಲ್ಲಿರುವ ಅಮರ ಜ್ಯೋತಿ ಬಳಿ ನಿಂತು ಕಾರ್ಗಿಲ್ ಯುದ್ಧದಲ್ಲಿ ತಮ್ಮ ಜೀವ ಕೊಟ್ಟು ಅಮರರಾದ ಸೈನಿಕರಿಗೆ ಗೌರವಾರ್ಪಣೆಗಳನ್ನು ಸಲ್ಲಿಸುತ್ತಾರೆ. ಈ ರೀತಿಯಾಗಿ ಇಂಡಿಯಾ ಗೇಟ್ ಆ ದಿನದಂದು ತಾಯಿ ಭಾರತಾಂಬೆಯ ವೀರ ಪುತ್ರರ ಬಲಿದಾನವನ್ನು ನೆನೆಸಿಕೊಳ್ಳುವಂತೆ ಪ್ರೇರೇಪಿಸುತ್ತದೆ ಎಂದರೆ ತಪ್ಪಾಗಲಾರದು.

ಕಾರ್ಗಿಲ್ ಯುದ್ಧ ನೆನಪಿಸಿಕೊಳ್ಳುವ ಇಂಡಿಯಾ ಗೇಟ್

ಚಿತ್ರಕೃಪೆ: Bharatiya29

ಇಂಡಿಯಾ ಗೇಟ್ ನವದೆಹಲಿಯಲ್ಲಿರುವ ದೇಶದ ಪ್ರಮುಖ ಹೆಗ್ಗುರುತು ಹಾಗೂ ಪ್ರವಾಸಿ ದೃಷ್ಟಿಯಿಂದಲೂ ಸಹ ಸಾಕಷ್ಟು ಗಮನ ಸೆಳೆದಿರುವ ತಾಣ. ಕಾರ್ಗಿಲ್ ವಿಜಯದಿನದಂದು ಮತ್ತಷ್ಟು ಕಳೆ ಪಡೆಯುತ್ತದೆ ಈ ಮಹಾನ್ ದ್ವಾರ. ದೆಹಲಿಗೆ ಮೊದಲ ಬಾರಿಗೆ ಭೇಟಿ ನೀಡುವವರಾಗಲಿ ಅಥವಾ ಆಗಾಗ ತೆರಳುವವರಾಗಲಿ ಇಂಡಿಯಾ ಗೇಟ್ ಅನ್ನು ನೋಡದೆ ಇರಲಾರರು.

ಮೂಲತಃ ಇಂಪೆರಿಯಲ್ ವಾರ್ ಗ್ರೇವ್ಸ್ ಕಮೀಷನ್ ಅಡಿಯಲ್ಲಿ ಅದರ ಭಾಗವಾಗಿ ನಿರ್ಮಾಣವಾದ ಈ ಸ್ಮಾರಕವು ಮೊದಲನೇಯ ಮಹಾಯುದ್ಧದಲ್ಲಿ ಮಡಿದವರ ಗೌರವಾರ್ಥವಾಗಿ 1917 ರಲ್ಲಿ ನಿರ್ಮಿಸಲಾದ ರಚನೆ. ಕ್ರಮೇಣವಾಗಿ ಆಲ್ ಇಂಡಿಯಾ ವಾರ್ ಮೆಮೋರಿಯಲ್ ಆಗಿ ಗುರುತಿಸಿಕೊಂಡಿತು.

ಕಾರ್ಗಿಲ್ ಯುದ್ಧ ನೆನಪಿಸಿಕೊಳ್ಳುವ ಇಂಡಿಯಾ ಗೇಟ್

ಚಿತ್ರಕೃಪೆ: AKS.9955

1971 ರಲ್ಲಿ ಬಾಂಗ್ಲಾ ದೇಶದ ಉದಯದ ಸಂದರ್ಭದಲ್ಲಿ ಭಾರತೀಯ ಸೈನಿಕರು ಹುತಾತ್ಮರಾದವರ ನೆನಪಿಗಾಗಿ ಇಂಡಿಯಾ ಗೇಟ್ ನಲ್ಲಿ ಅಮರ ಜ್ಯೋತಿಯನ್ನು ನೆಡಲಾಯಿತು. ಇದು ರೈಫಲ್ ಹಾಗೂ ಅದರ ನಾಳದ ತುದಿಗೆ ನೇತು ಹಾಕಲಾದ ಸೈನಕನ ಶಿರತ್ರಾಣ ಹಾಗೂ ಸಿ ಎನ್ ಜಿ ಗ್ಯಾಸಿನಿಂದ ಸದಾ ಊರಿಯುವ ದಿಪವನ್ನು ನಾಲ್ಕು ಕಡೆ ಒಳಗೊಂಡಿದೆ.

ಬೆಕ್ಕಸ ಬೆರಗಾಗಿಸುವ ದೆಹಲಿ ನಗರ ಜೀವನ

ಈ ಅದ್ಭುತ ಆಕರ್ಷಣೆಯು ಪ್ರವಾಸಿಗರಿಂದ ಭೇಟಿ ನೀಡಲ್ಪಟ್ಟಾಗ ಅವರ ಮೈಮನಗಳಲ್ಲಿ ರೋಮಾಂಚನ ಉಂಟು ಮಾಡುವುದಲ್ಲದೆ ರೋಮ ರೋಮಗಳು ಸೆಟೆದು ನಿಲ್ಲುವಂತೆ ಮಾಡುತ್ತವೆ. ನಮ್ಮ ಭಾರತೀಯ ಯೋಧರ ಕುರಿತು ನಮಗಿರುವ ಹೆಮ್ಮೆ ಇನ್ನಷ್ಟು ಮಗದಷ್ಟು ಹೆಚ್ಚಾಗುವಂತೆ ಮಾಡುತ್ತದೆ. ಹೀಗೆ ಇಂಡಿಯಾ ಗೇಟ್ ಕಾರ್ಗಿಲ್ ವಿಜಯದ ದಿನದಂದೂ ಸಹ ಅದ್ಭುತವಾಗಿ ಕಂಗೊಳಿಸುತ್ತದೆ ಎಂದರೆ ತಪ್ಪಾಗಲಾರದು.

ದೆಹಲಿಗಿರುವ ರೈಲುಗಳ ವೇಳಾಪಟ್ಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X