Search
  • Follow NativePlanet
Share
» »ಲೈಫ್‌ನಲ್ಲಿ ಒಮ್ಮೆಯಾದ್ರೂ ಶಿಮ್ಲಾದ ಐಸ್ ಸ್ಕೇಟಿಂಗ್ ಮಜಾ ಪಡೆಯಲೇ ಬೇಕು

ಲೈಫ್‌ನಲ್ಲಿ ಒಮ್ಮೆಯಾದ್ರೂ ಶಿಮ್ಲಾದ ಐಸ್ ಸ್ಕೇಟಿಂಗ್ ಮಜಾ ಪಡೆಯಲೇ ಬೇಕು

ಮುನಿಸಿಪಾಲಿಟಿ ಕಟ್ಟಡವು ಒಂದು ಬಲೂನನ್ನು ಹಾರಿಸುತ್ತಿರುತ್ತದೆ. ಅದು ಪ್ರವಾಸಿಗರಿಗೆ ಮಂಜುಗಡ್ಡೆಯ ಲಭ್ಯ ಮತ್ತು ಅಲಭ್ಯತೆಯ ಸೂಚನೆಯನ್ನು ಒದಗಿಸುತ್ತಿರುತ್ತದೆ.

ಶಿಮ್ಲಾ ಹಿಮಾಚಲ ಪ್ರದೇಶದ ಒಂದು ಸಾಹಸ ಕೇಂದ್ರವಾಗಿದೆ. ರೋಮಾಂಚಕ ಸಾಹಸದ ಅನ್ವೇಷಣೆಯಲ್ಲಿ ಸಾವಿರಾರು ಪ್ರವಾಸಿಗರು ಶಿಮ್ಲಾಕ್ಕೆ ಭೇಟಿ ನೀಡುತ್ತಾರೆ. ಶಿಮ್ಲಾದಲ್ಲಿ ಮಾಡುವ ಅತ್ಯಂತ ಆಹ್ಲಾದಿಸಬಹುದಾದ ಚಟುವಟಿಕೆಯೆಂದರೆ ಅದು ಐಸ್ ಸ್ಕೇಟಿಂಗ್.

ಶಿಮ್ಲಾ ಐಸ್ ಸ್ಕೇಟಿಂಗ್

ಶಿಮ್ಲಾ ಐಸ್ ಸ್ಕೇಟಿಂಗ್

PC:ice skating club
ಐಸ್ ಸ್ಕೇಟಿಂಗ್ ಶಿಮ್ಲಾದ ಪ್ರಸಿದ್ಧ ಕ್ರೀಡೆಗಳಲ್ಲಿ ಒಂದಾಗಿದೆ. ಈ ಸುಂದರವಾದ ಪ್ರದೇಶವು ದೇಶದಲ್ಲಿಯೇ ಅತ್ಯಂತ ದೊಡ್ಡದಾದ ಐಸ್ ಸ್ಕೇಟಿಂಗ್ ರಿಂಕ್ ಅನ್ನು ಹೊಂದಿದೆ. ಶಿಮ್ಲಾ ಐಸ್ ಸ್ಕೇಟಿಂಗ್ ಕ್ಲಬ್ ಪ್ರವಾಸಿಗರಿಗೆ ಕಿರು ಅವಧಿ ಮತ್ತು ಒಂದು ಅವಧಿಯ ಸದಸ್ಯತ್ವವನ್ನು ನೀಡುತ್ತದೆ. ಪ್ರತಿದಿನವು ಬೆಳಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ಇಲ್ಲಿ ಸ್ಕೇಟಿಂಗ್‍ಗೆ ಅವಕಾಶವನ್ನು ಒದಗಿಸಲಾಗುತ್ತದೆ. ಅದು ಇಲ್ಲಿ ಲಭ್ಯವಿರುವ ಮಂಜುಗಡ್ಡೆಯ ಮೇಲೆ ಅವಲಂಬಿಸಿರುತ್ತದೆ ಎಂಬುದನ್ನು ಮರೆಯಬಾರದು.

ಬಲೂನ್ ಹಾರಿಸುತ್ತಾರೆ

ಬಲೂನ್ ಹಾರಿಸುತ್ತಾರೆ

PC: Marcosleal
ಮುನಿಸಿಪಾಲಿಟಿ ಕಟ್ಟಡವು ಒಂದು ಬಲೂನನ್ನು ಹಾರಿಸುತ್ತಿರುತ್ತದೆ. ಅದು ಪ್ರವಾಸಿಗರಿಗೆ ಮಂಜುಗಡ್ಡೆಯ ಲಭ್ಯ ಮತ್ತು ಅಲಭ್ಯತೆಯ ಸೂಚನೆಯನ್ನು ಒದಗಿಸುತ್ತಿರುತ್ತದೆ. ಶಿಮ್ಲಾದಲ್ಲಿರುವ ಐಸ್ ಸ್ಕೇಟಿಂಗ್ ರಿಂಕ್ ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಮತ್ತು ಸ್ಥಳೀಯರನ್ನು ಆಕರ್ಷಿಸುತ್ತದೆ. ಸ್ಕೇಟಿಂಗ್ ಮಾಡುವಾಗ ಬೆಚ್ಚಗಿನ ಮತ್ತು ಸೂಕ್ತ ಬಟ್ಟೆಗಳನ್ನು ಧರಿಸಿ. ಸ್ಕೇಟ್‌ಗಳನ್ನು ಬಾಡಿಗೆಗೆ ಪಡೆಯಬಹುದು.

ಏಕೈಕ ನೈಸರ್ಗಿಕ ಐಸ್ ಸ್ಕೇಟಿಂಗ್ ರಿಂಕ್

ಏಕೈಕ ನೈಸರ್ಗಿಕ ಐಸ್ ಸ್ಕೇಟಿಂಗ್ ರಿಂಕ್

PC:ice skating club
ಶಿಮ್ಲಾವು ಕೆಳ ಹಿಮಾಲಯದ ತಪ್ಪಲಿನಲ್ಲಿ ನೆಲೆಗೊಂಡಿದೆ.. ಇದು ಭಾರತದಲ್ಲಿರುವ ಏಕೈಕ ನೈಸರ್ಗಿಕ ಐಸ್ ಸ್ಕೇಟಿಂಗ್ ರಿಂಕ್ ಆಗಿದೆ. ಸ್ಕೇಟ್ ಮಾಡಲು ನೈಸರ್ಗಿಕವಾಗಿ ಹೆಪ್ಪುಗಟ್ಟಿದ ಮಂಜಿನೊಂದಿಗೆ ತೆರೆದ ಪ್ರದೇಶವನ್ನು ಹೊಂದಿರುವ, ಐಸ್ ಸ್ಕೇಟಿಂಗ್ ಅನ್ನು ಆನಂದಿಸಲು ಇದು ಅತ್ಯುತ್ತಮ ಸ್ಥಳವಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಸ್ಕೇಟಿಂಗ್ ಅನ್ನು ಆನಂದಿಸಲು ಡಿಸೆಂಬರ್ ನಿಂದ ಫೆಬ್ರವರಿಯವರೆಗಿನ ದಿನಗಳು ಅತ್ಯುತ್ತಮವಾಗಿರುತ್ತವೆ. ಆಗ ಇಲ್ಲಿನ ನೆಲವು ಪ್ರಾಕೃತಿಕ ಮಂಜುಗಡ್ಡೆಯಿಂದ ಆವೃತವಾಗಿರುತ್ತದೆ. ಚಳಿಗಾಲದಲ್ಲಿ ಶಿಮ್ಲಾದಲ್ಲಿ ಐಸ್ ಸ್ಕೇಟಿಂಗ್ ಉತ್ಸವವನ್ನು ನಡೆಸಲಾಗುತ್ತದೆ. ಆಗ ಇಲ್ಲಿ ಮೋಜು ಮಸ್ತಿ ಮತ್ತು ಆನಂದಕ್ಕೆ ಪಾರವೇ ಇರುವುದಿಲ್ಲ. ಈ ಕ್ರೀಡೆಯ ಪರಿಣಾಮವಾಗಿ, ಶಿಮ್ಲಾದಲ್ಲಿ ಮಂದ ಚಳಿಗಾಲವು ಹಬ್ಬಗಳು ಮತ್ತು ಉತ್ಸವಗಳಿಂದ ಕೂಡಿರುತ್ತದೆ. ಹಾಗಾಗಿ, ಚಳಿಗಾಲದಲ್ಲಿ ಶಿಮ್ಲಾಕ್ಕೆ ಭೇಟಿ ನೀಡುವುದು ಸೂಕ್ತವಾಗಿದೆ.

ಇತರ ಸ್ಪರ್ಧೇಗಳು

ಕಾರ್ನೀವಲ್‌ನಲ್ಲಿ ಭಾಗವಹಿಸುವವರು ಮನರಂಜನೆಗಾಗಿ ಐಸ್ ಹಾಕಿ ಪಂದ್ಯಗಳು, ಐಸ್ ಸ್ಕೇಟಿಂಗ್ ಸ್ಪರ್ಧೆಗಳು, ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಮತ್ತು ನೃತ್ಯ ಮತ್ತು ಸಂಗೀತ ಸ್ಪರ್ಧೆಗಳಂತಹ ಹಲವಾರು ಸ್ಪರ್ಧೆಗಳು ಮತ್ತು ಕ್ರೀಡೆಗಳನ್ನು ಒಳಗೊಂಡಿದೆ. ಸ್ನೇಹಿತರು ಮತ್ತು ಕುಟುಂಬಕ್ಕೆ ಉಡುಗೊರೆಗಳನ್ನು ಮತ್ತು ಸ್ಮರಣಿಕೆಗಳನ್ನು ಖರೀದಿಸ ಬಹುದು. ಕಿಯೋಸ್ಕ್‌ಗಳಲ್ಲಿ ರುಚಿಕರವಾದ ಸ್ಥಳೀಯ ಆಹಾರವನ್ನು ಸವಿಯಬಹುದು. ಈ ಹೊರಾಂಗಣ ಕ್ರಿಯೆಯನ್ನು ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ಪ್ರಕಾಶಮಾನವಾದ ದಿನದಲ್ಲಿ ನಡೆಸಲಾಗುತ್ತದೆ.

ತಲುಪುವುದು ಹೇಗೆ?


ಶಿಮ್ಲಾ ಐಸ್ ಸ್ಕೇಟಿಂಗ್ ರಿಂಕ್ ವೃತ್ತಾಕಾರದ ರಸ್ತೆಯಲ್ಲಿದೆ. ಪ್ರವಾಸಿಗರು ಆಟೋ ರಿಕ್ಷಾವನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು ಅಥವಾ ರಿಂಕ್‌ಗೆ ಹೋಗಬಹುದು. ಖಾಸಗಿ ವಾಹನಗಳು ಪ್ರಯಾಣಿಸುವವರು ಕಾರ್ಟ್ ರಸ್ತೆ ಮತ್ತು ವೃತ್ತಾಕಾರದ ರಸ್ತೆಯ ಮೂಲಕ ಮೈದಾನವನ್ನು ತಲುಪಬಹುದು.

ಜುಬ್ಬರ್ಹಟ್ಟಿ ಶಿಮ್ಲಾದ ವಿಮಾನ ನಿಲ್ದಾಣವಾಗಿದ್ದು ಇದು ನಗರದಿಂದ 23 ಕಿಲೋಮೀಟರ್ ದೂರದಲ್ಲಿದೆ. ದೆಹಲಿ ಮತ್ತು ಕುಲ್ಲುಗಳಿಂದ ದೈನಂದಿನ ವಿಮಾನಗಳು ಇವೆ. ನೀವು ದೇಶದ ಯಾವುದೇ ಭಾಗದಿಂದ ಅಥವಾ ವಿದೇಶದಿಂದ ಪ್ರಯಾಣಿಸಲು ಬಯಸಿದರೆ ನೀವು ದೆಹಲಿಯಲ್ಲಿ ವಿಮಾನವನ್ನು ಬದಲಾಯಿಸಬೇಕು.

ಶಿಮ್ಲಾಗೆ ಪ್ರಯಾಣಿಸಲು ಉತ್ತಮ ಮಾರ್ಗವೆಂದರೆ ರೈಲಿನ ಮೂಲಕ. ಶಿಮ್ಲಾವನ್ನು ಕಲ್ಕಾಗೆ ಸಂಪರ್ಕಿಸುವ ಟ್ರ್ಯಾಕ್‌ನಲ್ಲಿ ರೈಲುಗಳು ಚಲಿಸುತ್ತವೆ. ಈ 96 ಕಿಲೋಮೀಟರ್ ಉದ್ದದ ರೈಲ್ವೆ ಟ್ರ್ಯಾಕ್ 102 ಸುರಂಗಗಳು, 87 ಸೇತುವೆಗಳು, ತೀಕ್ಷ್ಣ ವಕ್ರಾಕೃತಿಗಳು, ಇಳಿಜಾರುಗಳು ಮತ್ತು ಹಿಮಾಲಯದ ಅದ್ಭುತ ದೃಶ್ಯಗಳ ಮೂಲಕ ಮಾಂತ್ರಿಕ ರೈಲು ಸವಾರಿಯನ್ನು ಒದಗಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X