Search
  • Follow NativePlanet
Share
» »ಮೂಗಿನಲ್ಲಿ ಸಾಲಿಗ್ರಾಮ ಇರುವ ಶಿಕಾರಿಪುರದ ಹುಚ್ಚರಾಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ಮೂಗಿನಲ್ಲಿ ಸಾಲಿಗ್ರಾಮ ಇರುವ ಶಿಕಾರಿಪುರದ ಹುಚ್ಚರಾಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ಶಿಕಾರಿಪುರದಲ್ಲಿ ಆಕರ್ಷಣೀಯ ಸ್ಥಳಗಳ ಪೈಕಿ ಹೆಚ್ಚು ಜನರು ಭೇಟಿ ನೀಡುವ ಸ್ಥಳವೆಂದರೆ ಹುಚ್ಚರಾಯ ದೇವಸ್ಥಾನ. ಹೊನ್ನಲಿ ರಸ್ತೆಯ ಶಿಕಾರಿಪುರ ನಗರದ ಹೊರವಲಯದಲ್ಲಿರುವ ಈ ದೇವಾಲಯವನ್ನು ಭ್ರಾಂತೇಷ ದೇವಸ್ಥಾನ ಎಂದೂ ಕರೆಯಲಾಗುತ್ತದೆ.

ಶಿಕಾರಿಪುರ ಎಂಬುದು ಶಿವಮೊಗ್ಗ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮತ್ತು ತಾಲ್ಲೂಕು ಪ್ರಧಾನ ಕಚೇರಿಯಾಗಿದೆ.ಶಿಕಾರಿಪುರವು ಶಿವಮೊಗ್ಗದಿಂದ 53 ಕಿ.ಮೀ ದೂರದಲ್ಲಿದೆ ಮತ್ತು ಸಮುದ್ರ ಮಟ್ಟದಿಂದ 603 ಮೀಟರ್ ಎತ್ತರದಲ್ಲಿದೆ. ಶಿಕಾರಿಪುರವು ಬಯಲು ಪ್ರದೇಶ ಮತ್ತು ಮಲೆನಾಡುನ ಉಷ್ಣವಲಯದ ಕಾಡುಗಳ ನಡುವೆ ಇದೆ. ಇಲ್ಲಿನ ಪ್ರಮುಖ ತಾಣಗಳಲ್ಲಿ ಹುಚ್ಚರಾಯ ದೇವಸ್ಥಾನ ಬಹಳ ಮುಖ್ಯವಾದದ್ದು. ಈ ದೇವಸ್ಥಾನವು ಲಕ್ಷಾಂತರ ಭಕ್ತರನ್ನು ಒಳಗೊಂಡಿದೆ.

ಹುಚ್ಚರಾಯ ದೇವಸ್ಥಾನ

ಹುಚ್ಚರಾಯ ದೇವಸ್ಥಾನ

PC: MikeLynch
ಶಿಕಾರಿಪುರದಲ್ಲಿ ಆಕರ್ಷಣೀಯ ಸ್ಥಳಗಳ ಪೈಕಿ ಹೆಚ್ಚು ಜನರು ಭೇಟಿ ನೀಡುವ ಸ್ಥಳವೆಂದರೆ ಹುಚ್ಚರಾಯ ದೇವಸ್ಥಾನ. ಹೊನ್ನಲಿ ರಸ್ತೆಯ ಶಿಕಾರಿಪುರ ನಗರದ ಹೊರವಲಯದಲ್ಲಿರುವ ಈ ದೇವಾಲಯವನ್ನು ಭ್ರಾಂತೇಷ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಈ ಹುಚ್ಚರಾಯ ದೇವಸ್ಥಾನ ಹಾಗೂ ಈ ಹೆಸರಿನ ಹಿಂದೆ ಒಂದು ಕಥೆಯೇ ಇದೆ.

ಹಂಪಿಯಲ್ಲಿರುವ ಮಾತುಂಗ ಬೆಟ್ಟವನ್ನು ಹತ್ತಿದ್ದೀರಾ?ಹಂಪಿಯಲ್ಲಿರುವ ಮಾತುಂಗ ಬೆಟ್ಟವನ್ನು ಹತ್ತಿದ್ದೀರಾ?

ದೇವಸ್ಥಾನದ ಉತ್ಸವಗಳು

ದೇವಸ್ಥಾನದ ಉತ್ಸವಗಳು

ಪ್ರತಿ ವರ್ಷ ದಾವಂದ ಹುಣ್ಣಿಮೆಯಂದು ರಥೋತ್ಸವವನ್ನು ಆಚರಿಸಲಾಗುತ್ತದೆ. ಹುನುಮ ಜಯಂತಿಯನ್ನು ತೆಪ್ಪೋತ್ಸವದೊಂದಿಗೆ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ತೆಪ್ಪೋತ್ಸವನ್ನು ದೇವಸ್ಥಾನದಿಂದ ಸ್ಪಲ್ಪ ದೂರದಲ್ಲಿರುವ ಕೆರೆಯಲ್ಲಿ ಆಚರಿಸಲಾಗುತ್ತದೆ. ಉತ್ಸವದ ಸಂದರ್ಭದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಆಗಮಿಸುತ್ತಾರೆ. ಸುಡುಮದ್ದು ಪ್ರದರ್ಶನ ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.

ನೂರಾರು ವರ್ಷಗಳ ಇತಿಹಾಸ

ನೂರಾರು ವರ್ಷಗಳ ಇತಿಹಾಸ

ಸುಮಾರು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿ ಎರಡು ರಥಗಳಿವೆ. ಒಂದು ದೊಡ್ಡ ರಥ ಇನ್ನೊಂದು ಸಣ್ಣ ರಥ. ಉತ್ಸವದ ಸಂದರ್ಭದಲ್ಲಷ್ಟೇ ಈ ರಥವನ್ನು ಹೊರತರಲಾಗುತ್ತದೆ. ಪ್ರತಿವರ್ಷ ಉತ್ಸವಕ್ಕೆಂದು ರಥವನ್ನು ಅಲಂಕರಿಸಲು ರಥವನ್ನು ಹೊರತರುವಾಗ ಮಳೆಯಾಗುತ್ತದಂತೆ.

ಏಳು ಹೊಳೆಗಳ ನಡುವೆ ನೆಲೆಸಿರುವ ವನದುರ್ಗಾ ಭವಾನಿ ದೇವಿಯನ್ನು ಕಂಡಿರಾ?ಏಳು ಹೊಳೆಗಳ ನಡುವೆ ನೆಲೆಸಿರುವ ವನದುರ್ಗಾ ಭವಾನಿ ದೇವಿಯನ್ನು ಕಂಡಿರಾ?

ಮೂಗಿನ ಮೇಲೆ ಸಾಲಿಗ್ರಾಮ

ಮೂಗಿನ ಮೇಲೆ ಸಾಲಿಗ್ರಾಮ

ಈ ಭ್ರಾಂತೀ‍ಷ ಆಂಜನೇಯ ದೇವಸ್ಥಾನದ ವಿಶೇಷತೆಯೆಂದರೆ ಆಂಜನೇಯ ಮೂರ್ತಿಯ ಮೂಗಿನ ಮೇಲೆ ಸಾಲಿಗ್ರಾಮ ಇರುವುದು. ಮೈಸೂರು ಪುರಾತತ್ವ ಇಲಾಖೆಯ ವರದಿಯಂತೆ ಈ ದೇವಾಲಯವನ್ನು ೧೯೪೧ರಲ್ಲಿ ವೀರಶೈವರಾದ ಹುಚ್ಚಪ್ಪಸ್ವಾಮಿ ನಿರ್ಮಿಸಿದರು ಎನ್ನಲಾಗುತ್ತದೆ.

ಹುಚ್ಚಪ್ಪರಾಯ ಹೆಸರು ಬಂದಿದ್ದು ಹೇಗೆ?

ಹುಚ್ಚಪ್ಪರಾಯ ಹೆಸರು ಬಂದಿದ್ದು ಹೇಗೆ?

ಹುಚ್ಚಪ್ಪ ಸ್ವಾಮಿಯ ಕನಸಿನಲ್ಲಿ ಹನುಮಂತನು ಬಂದು ಊರಿನ ದೊಡ್ಡ ಕರೆಯಲ್ಲಿ ತನ್ನ ವಿಗ್ರಹವಿದೆ ಅದನ್ನು ಹೊರತೆಗೆದು ಪ್ರತಿಷ್ಠಾಪಿಸುವಂತೆ ಹೇಳುತ್ತಾನೆ. ಅದರಂತೆಯೇ ಊರಿನವರು ಹುಚ್ಚಪ್ಪ ಸ್ವಾಮಿ ಹೇಳಿದ ಸ್ಥಳದಲ್ಲಿ ಅಗೆಯುತ್ತಾರೆ, ಆಗ ಪ್ರಸನ್ನ ಆಂಜನೇಯ ಸ್ವಾಮಿಯ ವಿಗ್ರಹ ದೊರೆಯುತ್ತದೆ ಅದನ್ನು ತೆಗೆದು ಪ್ರತಿಷ್ಠಾಪಿಸಲು ಜಾಗ ಹುಡುಕುತ್ತಿದ್ದಾಗ ಹುಚ್ಚಪ್ಪಸ್ವಾಮಿಯ ಮಠದಲ್ಲೇ ಪ್ರತಿಷ್ಠಾಪಿಸಲು ಯೋಚಿಸುತ್ತಾರೆ ಊರಿನವರು. ಆದರೆ ಹುಚ್ಚಪ್ಪ ತನ್ನ ಹೆಸರನ್ನು ಆ ದೇವರಿಗೆ ಇಡುವುದಾದರೆ ಮಾತ್ರ ಜಾಗ ನೀಡುವುದಾಗಿ ಹೇಳುತ್ತಾನೆ. ಅದರಂತೆಯೇ ಈ ದೇವರಿಗೆ ಹುಚ್ಚರಾಯ ಸ್ವಾಮಿ ಎಂದು ಹೆಸರಿಡಲಾಯಿತು ಎನ್ನಲಾಗುತ್ತದೆ.

ಮೂಗಿನ ಭಾಗದಲ್ಲಿ ಸಾಲಿಗ್ರಾಮ ಬಂದಿದ್ದು ಹೇಗೆ?

ಮೂಗಿನ ಭಾಗದಲ್ಲಿ ಸಾಲಿಗ್ರಾಮ ಬಂದಿದ್ದು ಹೇಗೆ?

ಶ್ರೀ ಕೃಷ್ಣದೇವರಾಯದ ಗುರುವಾಗಿದ್ದ ವ್ಯಾಸರಾಯ ಸ್ವಾಮಿ ಶಿಕಾರಿಪುರದಲ್ಲಿರುವ ಹನುಮನ ವಿಗ್ರಹ ಭಿನ್ನವಾಗಿರುವುದನ್ನು ಗಮನಿಸುತ್ತಾರೆ. ಹಂಪೆಯಲ್ಲಿ ಯಂತ್ರೋದ್ದಾರ ಹನುಮಂತ ದೇವರನ್ನು ಪ್ರತಿಷ್ಠಾಪಿಸಿ ಒಲಿಸಿಕೊಂಡಿದ್ದ ಸ್ವಾಮಿಗಳು ಶಿಖಾರಿಪುರದಲ್ಲಿ ಆಂಜನೇಯನ್ನು ಪ್ರತಿಷ್ಠಾಪಿಸಲು ಮುಂದಾಗುತ್ತಾರೆ. ಮೂಲ ವಿಗ್ರಹದ ಯಥಾವತ್‌ ಆಂಜನೇಯಸ್ವಾಮಿಯ ವಿಗ್ರಹವನ್ನು ಕೆತ್ತಿಸಲಾಗುತ್ತದೆ. ಆದರೆ ಅದನ್ನು ತರುವಾಗ ಮೂಗಿನ ಭಾಗ ಭಗ್ನವಾಗುತ್ತದೆ. ಭಗ್ನವಾದ ಮೂರ್ತಿಯನ್ನು ಪೂಜಿಸುವುದು ಸರಿಯಲ್ಲ ಹಾಗಾಗಿ ವ್ಯಾಸರಾಯರ ಸಲಹೆಯ ಮೇರೆಗೆ ಉತ್ತರ ಭಾರತದ ಹಿಮಾಚಲದಿಂದ ಸಾಲಿಗ್ರಾಮವನ್ನು ತಂದು ಮೂಗಿನ ಭಾಗದಲ್ಲಿ ಜೋಡಿಸಿ ಪ್ರತಿಷ್ಠಾಪಿಸಲಾಗುತ್ತದೆ.

ಮೂಲ ದೇವರ ವಿಗ್ರಹ ಇನ್ನೂ ಇದೆ

ಮೂಲ ದೇವರ ವಿಗ್ರಹ ಇನ್ನೂ ಇದೆ

ಈಗ ಈ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಿ ಪುನಃ ನಿರ್ಮಿಸಲಾಗಿದೆ. ಹಳೆಯ ಕಟ್ಟಡವನ್ನು ನಾಶಗೊಳಿಸಿ ಹೊಸ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಹಿಂದೆ ಮಠದಲ್ಲಿದ್ದ ಹುಚ್ಚರಾಯ ಸ್ವಾಮಿಗೆ ಸೇರಿದ್ದ ಗೆಜ್ಜೆಗಳು ಹಾಗೂ ಊರುಗೋಲನ್ನು ಈಗಲೂ ಈ ದೇವಾಲಯಗಳಲ್ಲಿ ಕಾಣಬಹುದು. ಪ್ರತಿಷ್ಠಾಪಿಸಿ ಭಗ್ನವಾಗಿದ್ದ ಮೂಲದೇವರ ವಿಗ್ರಹ ಕೂಡಾ ದೇವಾಲಯದ ಗೋಡೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ.

42 ಫೀಟ್ ಎತ್ತರ ಶಿವನ ಮೂರ್ತಿ

42 ಫೀಟ್ ಎತ್ತರ ಶಿವನ ಮೂರ್ತಿ

ಈಗ ಈ ದೇವಸ್ಥಾನವು ಮುಜರಾಯಿ ಇಲಾಖೆಯ ಅಡಿಯಲ್ಲಿದೆ. ದೇವಸ್ಥಾನದ ಬಳಿ ಇರುವ ಹುಚ್ಚರಾಯ ಕೆರೆಯನ್ನು ಅಭೀವೃದ್ಧಿ ಪಡಿಸಲಾಗಿದ್ದು ಉದ್ಯಾನವನ್ನು ನಿರ್ಮಿಸಿ ಉದ್ಯಾನದಲ್ಲಿ 42 ಫೀಟ್ ಎತ್ತರ ಶಿವನ ಮೂರ್ತಿಯನ್ನು ನಿರ್ಮಿಸಲಾಗಿದೆ. ಸುಮಾರು ಅರ್ಧ ಎಕರೆ ಜಾಗದಲ್ಲಿ ಈ ದೇವಾಲಯವಿದೆ.

ತಲುಪುವುದು ಹೇಗೆ?

ಶಿಕಾರಿಪುರಗೆ ಸಮೀಪದ ರೈಲು ನಿಲ್ದಾಣವೆಂದರೆ ಶಿವಮೊಗ್ಗ. ಶಿವಮೊಗ್ಗಕ್ಕೆ ಬೆಂಗಳೂರು ಹಾಗೂ ಮೈಸೂರಿನಿಂದ ಸಾಕಷ್ಟು ರೈಲು ಸೇವೆಗಳಿವೆ. ಸಮೀಪದಲ್ಲಿರುವ ರೈಲು ನಿಲ್ದಾಣವೆಂದರೆ ಮಂಗಳೂರು ವಿಮಾನ ನಿಲ್ದಾಣ. ಆದರೆ ವಿಮಾನ ನಿಲ್ದಾಣದಿಂದ ಮತ್ತೆ ಬಸ್‌ ಮೂಲಕ ಪ್ರಯಾಣ ಬೆಳೆಸಬೇಕಾಗುತ್ತದೆ. ಶಿಕಾರಿಪುರಕ್ಕೆ ಬಸ್‌ ಮೂಲಕ ಬರುವುದು ಬೆಸ್ಟ್‌. ಮೈಸೂರು- ಚೆನ್ನರಾಯಪಟ್ಟಣ- ಅರಸೀಕೆರೆ-ಕಡೂರು-ಶಿವಮೊಗ್ಗ ಮಾರ್ಗವಾಗಿ ಶಿಕಾರಿಪುರವನ್ನು ತಲುಪಬಹುದು.

 ಮದಗಮಾಸುರ ಟ್ಯಾಂಕ್

ಮದಗಮಾಸುರ ಟ್ಯಾಂಕ್

PC: Facebook

ಶಿಕಾರಿಪುರದಲ್ಲಿರುವ ಅನೇಕ ಪ್ರೇಕ್ಷಣೀಯ ಸ್ಥಳಗಳ್ಲಿ ಮದಗದ ಕೆರೆಯೂ ಒಂದು. ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಈ ಹಾಡನ್ನು ಬಹಳಷ್ಟು ಜನರು ಕೇಳಿರುತ್ತೀರಾ, ಈ ಕೆರೆಯ ಬಗ್ಗೆಯೇ ಈ ಹಾಡಿನಲ್ಲಿ ಬಣ್ಣಿಸಿರುವುದು. ಮದಗಮಾಸುರ ಟ್ಯಾಂಕ್ ಶಿಕಾರಿಪುರದಿಂದ 10 ಕಿ.ಮೀ. ದೂರದಲ್ಲಿದೆ. ಮದಗಮಾಸುರು ಟ್ಯಾಂಕ್ ಅಥವಾ ಭಗೀರಥಿ ಟ್ಯಾಂಕ್ ಎಂದು ಕರೆಯಲಾಗುವ ಈ ಟ್ಯಾಂಕ್‌ನ್ನು ಕುಮುದ್ವತಿ ನದಿಯ ಉದ್ದಕ್ಕೂ ನಿರ್ಮಿಸಲಾಗಿದೆ. ಇದು ಪ್ರವಾಸಿಗರಿಗೆ ಸೂಕ್ತ ಪಿಕ್ನಿಕ್ ತಾಣವಾಗಿದೆ ಮತ್ತು ಅನೇಕ ಪ್ರವಾಸಿಗರು ನೆರೆಯ ಜಿಲ್ಲೆಗಳಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಮಾಸೂರ್ ಸರೋವರ ಮತ್ತು ಕೆಂಚಮ್ಮನಾ ಕೆರೆ ಎಂದೂ ಕರೆಯಲ್ಪಡುವ ಮದಗದ ಕೆರೆ ಮಸೂರ್ ಸಮೀಪದ ಮದಗಾ ಎಂಬಲ್ಲಿನ ಸುಂದರವಾದ ದೊಡ್ಡ ಸರೋವರವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X