Search
  • Follow NativePlanet
Share
» »ಹಿಂದೂ ಕೋಟೆಗಳ ಕಂಠಿಹಾರದ ಸುಂದರ ಮುತ್ತು

ಹಿಂದೂ ಕೋಟೆಗಳ ಕಂಠಿಹಾರದ ಸುಂದರ ಮುತ್ತು

By Vijay

ಭಾರತದ ಮಧ್ಯದಲ್ಲಿ ಸ್ಥಿತವಿರುವ ಮಧ್ಯ ಪ್ರದೇಶವು ಪ್ರವಾಸಿ ದೃಷ್ಟಿಯಿಂದ ಒಂದು ಕುತೂಹಲಕರವಾದ ರಾಜ್ಯವಾಗಿದೆ. 'ಹಾರ್ಟ್ ಆಫ್ ಇಂಡಿಯಾ' ಅಥವಾ ಭಾರತದ ಹೃದಯವೆಂದು ಜನಪ್ರಿಯವಾಗಿ ಕರೆಯಲ್ಪಡುವ ಈ ರಾಜ್ಯದ ಭೌಗೋಳಿಕ ಹಿನ್ನಿಲೆ, ಶ್ರೀಮಂತ ಇತಿಹಾಸ, ಪ್ರಾಕೃತಿಕ ಸೌಂದರ್ಯ, ಸಂಸ್ಕೃತಿ-ಸಂಪ್ರದಾಯ, ಜನ ಎಲ್ಲವೂ ಒಟ್ಟಿಗೆ ಸೇರಿ ಇದನ್ನು ಒಂದು ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸುವಲ್ಲಿ ಯಶಸ್ವಿಯಾಗಿವೆ.

ಗೊಐಬಿಬೊದಿಂದ ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ ಮೇಲೆ ರೂ. 6000 ದವರೆಗೂ ಕಡಿತ

ಗ್ವಾಲಿಯರ್, ಮಧ್ಯ ಪ್ರದೇಶದ ನಾಲ್ಕನೇಯ ಅತಿ ದೊಡ್ಡ ನಗರವಾಗಿದ್ದು, ರಾಜ್ಯದ ಪ್ರವಾಸಿ ರಾಜಧಾನಿ ಎಂದೇ ಜನಮನ್ನಣೆ ಗಳಿಸಿದೆ. ಗ್ವಾಲಿಯರ್ ಮುಖ್ಯವಾಗಿ ತನ್ನಲ್ಲಿರುವ ಅದ್ಭುತವಾದ ಕೋಟೆಯಿಂದ ಪ್ರಖ್ಯಾತಿ ಪಡೆದಿದ್ದು ಜನಪ್ರೀಯ ಪ್ರವಾಸಿ ಕೇಂದ್ರವಾಗಿದೆ. ಪಾರಂಪಾರಿಕ ನಗರವೆಂದು ಹೆಸರುವಾಸಿಯಾಗಿರುವ ಗ್ವಾಲಿಯರ್ ನಗರವು ಮತ್ತೊಂದು ವಿಶ್ವಪ್ರಸಿದ್ಧ ತಾಣವಾದ ಆಗ್ರಾದ ದಕ್ಷಿಣ ದಿಕ್ಕಿಗೆ ಕೇವಲ 122 ಕೀಲೋ ಮೀಟರಗಳಷ್ಟು ದೂರದಲ್ಲಿದೆ.

ವಿಶೇಷ ಲೇಖನ : ಭಾರತದ ಅತ್ಯದ್ಭುತ ಕೋಟೆಗಳು

ಭಾರತದಲ್ಲಿ ಹಿಂದೂ ನಿರ್ಮಿತ ಕೋಟೆಗಳ ಪಟ್ಟಿಯಲ್ಲಿ ಗ್ವಾಲಿಯರ್ ಕೋಟೆಗೆ ವಿಶೇಷ ಸ್ಥಾನಮಾನವನ್ನೆ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಹಿಂದೂ ಕೋಟೆಗಳ ಕಂಠಿಹಾರದಲ್ಲಿ ಈ ಕೋಟೆಯು ಒಂದು ಮುತ್ತಿದ್ದಂತೆ ಎಂದು ವರ್ಣಿಸಲಾಗಿದೆ. ಇದರಿಂದಲೆ ಈ ಕೋಟೆಗೆ ನೀಡಲಾಗಿರುವ ಮಹತ್ವವನ್ನು ಅರಿಯಬಹುದು. ಈ ಒಂದು ಕಾರಣದಿಂದಲೆ ಸಾಕಷ್ಟು ಪ್ರವಾಸಿಗರು ಗ್ವಾಲಿಯರ್ ಗೆ ಭೇಟಿ ನೀಡುತ್ತಾರೆ.

ಹೆಚ್ಚಿನ ಲೇಖನಗಳು : ಕರ್ನಾಟಕದ ಜನಪ್ರೀಯ ಕೋಟೆಗಳು ಭಾರತದ ಮೊದಲ ಪ್ರಾಚೀನ ಕೋಟೆ

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ಪ್ರಸಿದ್ಧ ಐತಿಹಾಸಿಕ ನಗರವಾಗಿದ್ದು ತನ್ನ ದೇವಸ್ಥಾನಗಳು, ಪ್ರಾಚೀನ ಸ್ಥಳಗಳು, ಆಕರ್ಷಕ ಸ್ಮಾರಕಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಇದು ಪ್ರವಾಸಿಗರನ್ನು ತನ್ನ ಐತಿಹಾಸಿಕ ವೈಭವದ ದಿನಗಳೆಡೆಗೆ ಕರೆದುಕೊಂಡು ಹೋಗುತ್ತದೆ.

ಚಿತ್ರಕೃಪೆ: Varun Shiv Kapur

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಈ ನಗರವು ತನ್ನ ಗ್ವಾಲಿಯರ್ ಕೋಟೆಗೆ ಪ್ರಸಿದ್ಧವಾಗಿದೆ. ಇದು ಉತ್ತರ ಭಾರತದ ಅನೇಕ ಪ್ರಸಿದ್ಧ ರಾಜವಂಶಗಳಿಗೆ ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಇಲ್ಲಿ ಕಂಡು ಬರುವ ಐತಿಹಾಸಿಕ ಸ್ಮಾರಕಗಳು, ಕೋಟೆಗಳು,ಮತ್ತು ವಸ್ತು ಸಂಗ್ರಹಾಲಯಗಳು ನಮ್ಮನ್ನು ಐತಿಹಾಸಿಕ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ.

ಚಿತ್ರಕೃಪೆ: Tom Maloney

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಕ್ರಿ.ಶ ಎಂಟನೇಯ ಶತಮಾನದಲ್ಲಿ ಸೂರಜ ಸೇನ ಎಂಬ ರಾಜನು ಗ್ವಾಲಿಯರ್ ನಗರವನ್ನು ಸ್ಥಾಪಿಸಿದನು ಎಂದು ಹೇಳಲಾಗುತ್ತದೆ. 'ಗ್ವಾಲಿಪ' ಎಂಬ ಸಂತನ ನೆನೆಪಿಗಾಗಿ ಅವನು ಈ ನಗರಕ್ಕೆ ಗ್ವಾಲಿಯರ್ ಎಂದು ನಾಮಕರಣ ಮಾಡಿದನು.

ಚಿತ್ರಕೃಪೆ: Tom Maloney

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ವಾಲಿಪ ಸಂತನು ಸೂರಜ ಸೇನ ದೊರೆಯ ಕುಷ್ಟ ರೋಗವನ್ನು ನಿವಾರಿಸಿದ್ದನು. ನಿಮಗೆ ಇತಿಹಾಸದ ಪುಟಗಳಲ್ಲಿ ಗ್ವಾಲಿಯರ್ ನಗರದ ಕುರಿತು ಮಾಹಿತಿಯು ಕ್ರಿ.ಶ ಆರನೇಯ ಶತಮಾನದ ನಂತರ ಕಂಡು ಬರುತ್ತದೆ. ಇಂದಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿ ನಿಲಯ.

ಚಿತ್ರಕೃಪೆ: Mohitt

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಈ ನಗರವು ಕ್ರಿ.ಶ ಆರನೇಯ ಶತಮಾನದಲ್ಲಿ ಹೂಣರಿಂದ ಆಳಲ್ಪಟ್ಟಿತ್ತು. ನಂತರ ಇದು ಕನೌಜಿನ ಗುಜ್ಜರ ಪ್ರಾರಿಹಾರರ ಕೈ ವಶವಾಯಿತು. ಇವರು ಇದನ್ನು ಕ್ರಿ.ಶ 923 ರವರೆಗೆ ಇದನ್ನು ಆಳಿದರು. ನಂತರ ಕ್ರಿ.ಶ ಹತ್ತನೇ ಶತಮಾನದವರೆಗೆ ಕಚವಾ ರಜಪೂತರು ಇದನ್ನು ಆಳಿದರು. ಗ್ವಾಲಿಯರ್ ನಗರದಲ್ಲಿರುವ ಜೀವಾಜಿ ಚೌಕ್.

ಚಿತ್ರಕೃಪೆ: YashiWong

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಮರಾಠ ವಂಶದವಳಾದ ಝಾನ್ಸಿ ರಾಣಿ ಲಕ್ಷ್ಮಿ ಬಾಯಿಯು 1857 ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಪ್ರಥಮ ಸ್ವಾತಂತ್ರ್ಯ ದಂಗೆಯಲ್ಲಿ ಹೋರಾಡಿ , ದೇಶಕ್ಕಾಗಿ ತನ್ನ ಪ್ರಾಣವನ್ನು ಅರ್ಪಿಸಿದ ಪುಣ್ಯ ಸ್ಥಳ ಗ್ವಾಲಿಯರ್ ನಗರ.

ಚಿತ್ರಕೃಪೆ: YashiWong

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಗ್ವಾಲಿಯರ್‌ನ ಪ್ರವಾಸೋದ್ಯಮವು ತನ್ನ ಪ್ರವಾಸಿಗರಿಗಾಗಿ ಅತ್ಯಂತ ಆಕರ್ಷಕ ಸ್ಥಳಗಳನ್ನು ಹೊಂದಿದೆ. ಗ್ವಾಲಿಯರ್ ಕೋಟೆ, ಪೂಲ ಬಾಗ್, ಸೂರಜ ಕುಂಡ, ಹಾಥಿ ಪೂಲ, ಮನಮಂದಿರ ಅರಮನೆ, ಜಯ ವಿಲಾಸ ಮಹಲ್ ಹೀಗೆ ಅನೇಕ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸಿ ತಮ್ಮ ಕಡೆ ವಶಕರಿಸಿಕೊಳ್ಳುತ್ತವೆ. ಗ್ವಾಲಿಯರ್ ನಗರದಲ್ಲಿರುವ ಟೌನ್ ಹಾಲ್.

ಚಿತ್ರಕೃಪೆ: YashiWong

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಅಷ್ಟೇ ಅಲ್ಲದೇ ಇದು ಭಾರತದ ಪ್ರಸಿದ್ಧ ಸಂಗೀತಗಾರನಾದ ತಾನಸೇನನ ಜನ್ಮ ಸ್ಥಳವಾಗಿದೆ. ಇವರ ಸ್ಮರಣೆಗಾಗಿ ಪ್ರತಿವರ್ಷ ಗ್ವಾಲಿಯರ್‌‌‌‌‌ನಲ್ಲಿ ತಾನಸೇನ ಸಂಗೀತ ಉತ್ಸವವನ್ನು ಏರ್ಪಡಿಸಲಾಗುತ್ತದೆ. ಗ್ವಾಲಿಯರ್ ಘರಾನಾ ಇದೊಂದು ಹಿಂದುಸ್ತಾನಿ ಸಂಗೀತದ ಪ್ರಸಿದ್ಧ ಖಯಾಲ್ ಘರಾನಾ ಶೈಲಿ ಆಗಿದ್ದು, ಈ ರಾಗಕ್ಕೆ ಗ್ವಾಲಿಯರ್ ನಗರದ ಹೆಸರನ್ನೇ ಇಡಲಾಗಿದೆ. ತಾನಸೇನರ ಸಮಾಧಿ.

ಚಿತ್ರಕೃಪೆ: Simon Wagner

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಹಾಥಿ ಪೂಲ, ಗ್ವಾಲಿಯರ್ ಕೋಟೆಯ ಪ್ರಮುಖ ಪ್ರವೇಶದ್ವಾರವಾಗಿದೆ. ಇದು ಕೋಟೆಯ ಆರು ಪ್ರವೇಶ ದ್ವಾರಗಳನ್ನು ದಾಟಿದ ಮೇಲೆ ಇದನ್ನು ಪ್ರವೇಶಿಸಬಹುದಾಗಿದೆ. ಹಾಥಿ ಪೂಲ ಇದು ಏಳನೇಯ ಮತ್ತು ಮುಖ್ಯ ದ್ವಾರವಾಗಿದ್ದು ಇದರ ನಂತರ ನಾವು ಗ್ವಾಲಿಯರ್ ಕೋಟೆಯನ್ನು ಪ್ರವೇಶಿಸಬಹುದಾಗಿದೆ.

ಚಿತ್ರಕೃಪೆ: Noeljoe85

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಈ ಕೋಟೆಯು ಭಾರತದ ವೈಭಯುತ ಮತ್ತು ಬೃಹತ ಸ್ಮಾರಕಗಳಲ್ಲಿ ಒಂದಾಗಿದೆ. ಈ ಕೋಟೆಯು ಗ್ವಾಲಿಯರ್ ನಗರದ ಮಧ್ಯಭಾಗದಲ್ಲಿದ್ದು ಒಂದು ಬೆಟ್ಟದ ಮೇಲೆ ನೆಲೆ ನಿಂತಿದೆ. ಪ್ರವಾಸಿಯು ಕೋಟೆಯ ಮೇಲೆ ನಿಂತು ನೋಡಿದರೆ ಸಂಪೂರ್ಣ ಗ್ವಾಲಿಯರ್ ನಗರ ಮತ್ತು ಸುಂದರ ಕಣಿವೆಯ ಪಕ್ಷಿ ನೋಟ ಅವರಿಗೆ ಕಾಣಸಿಗುತ್ತದೆ.

ಚಿತ್ರಕೃಪೆ: Aniisng7

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಈ ಬೆಟ್ಟಕ್ಕೆ ಹೋಗಲು ಅಂಕುಡೊಂಕಾದ ದಾರಿ ಇದೆ, ಈ ಅಂಕುಡೊಂಕಾದ ದಾರಿಯಲ್ಲಿ ನಿಮಗೆ ಜೈನ ತಿರ್ಥಂಕರರ ಭವ್ಯವಾದ ಕಲ್ಲಿನ ಕೆತ್ತನೆಗಳು ಕಂಡು ಬರುತ್ತವೆ.

ಚಿತ್ರಕೃಪೆ: YashiWong

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಜಯ ವಿಲಾಸ ಅರಮನೆಯು ಸಿಂಧಿಯ ರಾಜವಂಶದವರ ವಾಸಸ್ಥಳವಾಗಿದೆ ಮತ್ತು ಇಂದಿಗೂ ಇದು ಅವರ ಪೂರ್ವಜರ ವಾಸಸ್ಥಾನವಾಗಿದೆ. ಈ ಅರಮನೆಯ ಒಂದು ಭಾಗವನ್ನು ವಸ್ತು ಸಂಗ್ರಹಾಲಯವನ್ನಾಗಿ ಉಪಯೋಗಿಸಲಾಗುತ್ತಿದೆ. ಇದನ್ನು 1809 ರಲ್ಲಿ ಜಿಯಾಜಿ ರಾವ ಸಿಂಧಿಯ ರವರು ನಿರ್ಮಿಸಿದರು.

ಚಿತ್ರಕೃಪೆ: Shobhit Gosain

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಮನಮಂದಿರ ಅರಮನೆಯು ಮಹಾನ್ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಮತಿಹೀನ ಅಧಿಕಾರ ಮದದ ಅನೇಕ ಹೃದಯ ಕಲುಕುವ ಕಥನಗಳನ್ನು ಇದು ಹೇಳುತ್ತದೆ ಎಂದು ಹೇಳಬಹುದು. ಮಧ್ಯಕಾಲೀನ ಯುಗದ ವಾಸ್ತುಶಿಲ್ಪದೊಂದಿಗೆ ಹಿಂದು ವಾಸ್ತುಶಿಲ್ಪ ಶೈಲಿಯು ಸಮ್ಮಿಳಿತಗೊಂಡ ಒಂದು ಅಪೂರ್ವ ಮತ್ತು ಅನನ್ಯ ಉದಾಹರಣೆ ಇದಾಗಿದೆ. ಇದು ನಾಲ್ಕು ಮಹಡಿಗಳ ಕಟ್ಟಡ ಆಗಿದ್ದು, ಎರಡು ಕಟ್ಟಡಗಳು ನೆಲದ ಅಡಿಯಲ್ಲಿ ಇವೆ, ಇದು ವೃತ್ತಾಕಾರದ ಆಕಾರವನ್ನು ಹೊಂದಿದೆ.

ಚಿತ್ರಕೃಪೆ: Jolle

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ಕೋಟೆಯ ಪೂರ್ವದ ಭಾಗದಲ್ಲಿ ಈ ಸಾಸ್ ಬಹು ದೇವಸ್ಥಾನವನ್ನು ಕಾಣಬಹುದು. ಈ ಹೆಸರೇ ಒಂದು ವಿನೋದಮಯವಾಗಿದೆಯಲ್ಲವೇ? ಸತ್ಯ ಏನೆಂದರೆ ಇಲ್ಲಿರುವ ಸಾಸ್ ಎಂದರೆ ಅತ್ತೆ ಎಂದು ಅರ್ಥವಲ್ಲ. ಜೊತೆಗೆ ಬಹು ಎಂದರೆ ಸೊಸೆ ಎಂದೂ ಅರ್ಥವಲ್ಲ. ಇದು ವಿಷ್ಣು ದೇವರ ದೇವಸ್ಥಾನವಾಗಿದೆ.

ಚಿತ್ರಕೃಪೆ: Nagarjun Kandukuru

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

"ಸಾಸ್ತ್ರಬಹು" ಇದು ಭಗವಾನ್ ವಿಷ್ಣುವಿನ ಇನ್ನೊಂದು ಹೆಸರಾಗಿದೆ. ಸಾಸ್ತ್ರಬಹು ದೇವಸ್ಥಾನವು ಕಾಲ ಕಳೆದಂತೆ ಸಾಸ್ ಬಹು ದೇವಸ್ಥಾನ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಈ ಸಾಸ್‍ಬಹು ದೇವಸ್ಥಾನವು ವಿಷ್ಣುವಿನ ಒಂದು ಅವತಾರದ ನೆನೆಪಿಗಾಗಿ ಸಮರ್ಪಿತವಾಗಿದೆ. ಈ ದೇವಸ್ಥಾನದ ದ್ವಾರದ ಮೇಲೆ ಬ್ರಹ್ಮ, ವಿಷ್ಣು, ಮತ್ತು ಸರಸ್ವತಿ ದೇವತೆಯರ ಕೆತ್ತನೆಗಳು ಇವೆ.

ಚಿತ್ರಕೃಪೆ: Saranya Ghosh

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಕೆಂಪು ಮರಳಿನ ಕಲ್ಲು ಮತ್ತು ಕಮಲದ ಸುಂದರ ಕೆತ್ತನೆಗಳಿಂದ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇದು ಯಾವುದೇ ಕಮಾನುಗಳು ಇಲ್ಲದೇ ಒಂದು ಪಿರಮಿಡ್ ರಚನೆಯನ್ನು ಹೊಂದಿದೆ. ಇದು 11 ನೇ ಶತಮಾನದಲ್ಲಿ ಕಛ್ವಾಹ ವಂಶದ ರಾಜ ಮಹಿಪಾಲನಿಂದ ನಿರ್ಮಿತಗೊಂಡಿದೆ.

ಚಿತ್ರಕೃಪೆ: Georgegupta

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಗುಜರಿ ಮಹಲ್ ಭಾರತದ ಪ್ರಸಿದ್ಧ ಪುರಾತತ್ವ ವಸ್ತು ಸಂಗ್ರಾಹಾಲಯಗಳಲ್ಲಿ ಒಂದಾಗಿದ್ದು ಗ್ವಾಲಿಯರ್‌‌ನಲ್ಲಿ ನೆಲೆಸಿದೆ. ಈ ಅರಮನೆಯನ್ನು ರಾಜ ಮಾನಸಿಂಗನು ಗುಜರ ಸಮುದಾಯದ ತನ್ನ ರಾಣಿ ಮೃಗನಯನಿಗಾಗಿ ನಿರ್ಮಿಸಿದ್ದನು. ಆದ್ದರಿಂದ ಈ ಅರಮನೆಗೆ ಗುಜರಿ ಮಹಲ್ ಎಂದು ಹೆಸರು ಬಂದಿತು.

ಚಿತ್ರಕೃಪೆ: Jolle

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

1922 ರಲ್ಲಿ ಪುರಾತತ್ವ ಇಲಾಖೆಯು ಈ ಅರಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿತು. ಈ ವಸ್ತು ಸಂಗ್ರಹಾಲಯವು 28 ಗ್ಯಾಲರಿಗಳು ಮತ್ತು 9000 ಕಲಾಕೃತಿಗಳನ್ನು ಒಳಗೊಂಡಿದೆ. ಇಲ್ಲಿ ಕ್ರಿ.ಶ ಒಂದನೇಯ ಶತಮಾನದ ನಂತರದ ಕಲಾಕೃತಿಗಳನ್ನು ಕಾಣಬಹುದು. ಈ ವಸ್ತು ಸಂಗ್ರಹಾಲಯದಲ್ಲಿ ಅಮೂಲ್ಯ ಹರಳುಗಳು, ಆಭರಣಗಳು, ಟೆರ್‍ರಾಕೋಟಾ ವಸ್ತುಗಳು, ಆಯುಧಗಳು, ಕಲಾಕೃತಿಗಳು, ಶಿಲ್ಪಗಳು, ವರ್ಣಚಿತ್ರಗಳು, ಶಾಸನಗಳು, ಕುಂಬಾರಿಕೆ ಮುಂತಾದ ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ.

ಚಿತ್ರಕೃಪೆ: Jolle

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಗುಜರಿ ಮಹಲ್ ವಸ್ತು ಸಂಗ್ರಹಾಲಯದಲ್ಲಿ ಕಂಡು ಬರುವ ಶಿಲ್ಪಗಳಲ್ಲಿ ನೀವು ಜಗತ್ಪ್ರಸಿದ್ಧವಾದ ಶಿಲಾ ಭಂಜಿಕ ಯಕ್ಷಿ, ತ್ರಿಮೂರ್ತಿ ನಟರಾಜ, ಅರ್ಧ ನಾರೀಶ್ವರ ಮತ್ತು ಯಮರಾಜ ಶಿಲ್ಪಗಳನ್ನು ಕಾಣಬಹುದು. ಇದು ಮಧು ಮತ್ತು ಧಾರ್ ಪ್ರದೇಶಗಳ 75 ವರ್ಷಗಳ ಹಳೆಯ ಛಾಯಾಚಿತ್ರಗಳನ್ನು ಹೊಂದಿದೆ. ಹದಿನೈದನೇ ಶತಮಾನದಲ್ಲಿ ಜೀವಿಸಿದ್ದ ಪ್ರಸಿದ್ಧ ಸಂಗೀತಗಾರ ತಾನಸೇನನ ಕುರಿತು ದಾಖಲೆಗಳನ್ನು ಹೊಂದಿದೆ. ಇತಿಹಾಸದ ಕುರಿತು ಪ್ರೀತಿಯುಳ್ಳ ಪ್ರತಿಯೊಬ್ಬರು ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಲೇ ಬೇಕು. ಸಂಗ್ರಹಾಲಯದಲ್ಲಿರುವ ಒಂದು ಅತ್ಯಂತ ಪುರಾತನ ವಿಷ್ಣುವಿನ ತುಸು ಭಗ್ನಗೊಂಡ ವಿಗ್ರಹ.

ಚಿತ್ರಕೃಪೆ: Sailko

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ವಿಶೇಷ:

ಗ್ವಾಲಿಯರ್ ನಗರವನ್ನು ವಿಮಾನ, ರೇಲ್ವೆ ಮತ್ತು ರಸ್ತೆಗಳ ಮಾರ್ಗವಾಗಿಯೂ ತಲುಪಬಹುದಾಗಿದೆ. ಈ ನಗರವು ವಿಮಾನ ನಿಲ್ದಾಣ ಮತ್ತು ಜನ ಜಂಗುಳಿಯ ರೇಲ್ವೇ ನಿಲ್ದಾಣವನ್ನು ಹೊಂದಿದೆ. ಗ್ವಾಲಿಯರ್ ನಗರವನ್ನು ನೋಡಲು ಚಳಿಗಾಲದ ಅವಧಿಯು ಅತ್ಯಂತ ಯೋಗ್ಯವಾದ ಸಮಯವಾಗಿದೆ. ದೆಹಲಿ,ಇಂದೋರ, ಆಗ್ರಾ ಮತ್ತು ಜಯಪುರಗಳಿಂದ ಬಸ್ಸುಗಳ ಸೌಲಭ್ಯ ಇದೆ. ಇಲ್ಲಿ ಟ್ಯಾಕ್ಸಿಗಳ ಉತ್ತಮವಾದ ಸೌಲಭ್ಯ ಇದೆ. ಇವುಗಳು ಗ್ವಾಲಿಯರ್ ಮತ್ತು ಭಾರತದ ನೆರೆಯ ಪ್ರಮುಖ ನಗರಗಳ ನಡುವೆ ನಿತ್ಯವು ಸಾರಿಗೆ ಸಂಚಾರವನ್ನು ಒದಗಿಸುತ್ತದೆ.

ಚಿತ್ರಕೃಪೆ: Vinayaraj

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X