Search
  • Follow NativePlanet
Share
» »ಬೆಂಗಳೂರು ಸಮೀಪದ ಗುಡಿಬಂಡೆಗೆ ಹೋಗಿದ್ದೀರಾ?

ಬೆಂಗಳೂರು ಸಮೀಪದ ಗುಡಿಬಂಡೆಗೆ ಹೋಗಿದ್ದೀರಾ?

ಬೆಟ್ಟಗಳು ಮತ್ತು ಸರೋವರಗಳಿಂದ ಕೂಡಿರುವ ಸಣ್ಣ ಪಟ್ಟಣ ಇದು. ಇದು ಪ್ರಕೃತಿಯ ತಾಜಾ ಸೌಂದರ್ಯವನ್ನು ಆಸ್ವಾದಿಸಲು ಪರಿಪೂರ್ಣ ಸ್ಥಳವಾಗಿದೆ.

ಬೆಂಗಳೂರಿನಲ್ಲಿ ಇರುವ ಪ್ರಸಿದ್ಧ ತಾಣಗಳು ಬೇಕಾಷ್ಟಿವೆ. ಅವುಗಳನ್ನು ಹೊರತುಪಡಿಸಿ ಬೆಂಗಳೂರಿನಲ್ಲಿ ಸಾಕಷ್ಟು ಕಡಿಮೆ ಅನ್ವೇಷಿತ ಸ್ಥಳಗಳಿವೆ. ಅವುಗಳನ್ನು ನಾವು ಹುಡುಕಿಕೊಂಡು ಹೋಗಬೇಕಷ್ಟೇ. ಈ ಕಡಿಮೆ ಅನ್ವೇಷಿತ ಸ್ಥಳಗಳು ನಿಮ್ಮ ವೀಕೆಂಡ್‌ನಲ್ಲಿ ಕಾಲಕಳೆಯಲು ಸೂಕ್ತವಾದ ತಾಣಗಳಾಗಿರುವುದರಲ್ಲಿ ಸಂಶಯವೇ ಇಲ್ಲ.

 ಗುಡಿಬಂಡೆ

ಗುಡಿಬಂಡೆ

ಬೆಂಗಳೂರಿನ ಕಡಿಮೆ ಅನ್ವೇಷಿತ ಸ್ಥಳಗಳಲ್ಲಿ ಒಂದು ಇಲ್ಲಿನ ಗುಡಿಬಂಡೆ ಕೂಡಾ ಒಂದು. ಬೆಟ್ಟಗಳು ಮತ್ತು ಸರೋವರಗಳಿಂದ ಕೂಡಿರುವ ಸಣ್ಣ ಪಟ್ಟಣ ಇದು. ಇದು ಪ್ರಕೃತಿಯ ತಾಜಾ ಸೌಂದರ್ಯವನ್ನು ಆಸ್ವಾದಿಸಲು ಪರಿಪೂರ್ಣ ಸ್ಥಳವಾಗಿದೆ. ನೀವು ಪ್ರಕೃತಿಯ ಪ್ರೇಮಿಯಾಗಿದ್ದರೆ, ಈ ಸ್ಥಳವನ್ನು ಇಷ್ಟಪಡುತ್ತೀರಿ. ಗುಡಿಬಂಡೆಯ ಮತ್ತು ಸುತ್ತಮುತ್ತಲಿನ ಸ್ಥಳದ ಬಗ್ಗೆ ತಿಳಿದುಕೊಳ್ಳೋಣ.

 ಪಿಕ್‌ನಿಕ್ ಸ್ಪಾಟ್

ಪಿಕ್‌ನಿಕ್ ಸ್ಪಾಟ್

PC: Karthik Prabhu

ಬೆಂಗಳೂರಿನ ವಾತಾವರಣ ಹೇಗಿರುತ್ತದೆ ಅನ್ನೋದು ನಿಮಗೆ ಗೊತ್ತೇ ಇದೆ. ಬಹಳ ತಂಪಾದ ವಾತಾವರಣ ಇರುತ್ತದೆ. ಹಾಗಾಗಿ ನೀವು ಗುಡಿಬಂಡೆಗೆ ವರ್ಷವಿಡೀ ಭೇಟಿ ನೀಡಬಹುದು. ಇದೊಂದು ಉತ್ತಮ ಪಿಕ್‌ನಿಕ್ ಸ್ಪಾಟ್ ಆಗಿದೆ. ಒಂದು ವೇಳೆ ನಿಮಗೆ ಬೆಂಗಳೂರಿನ ಬಿಸಿಲಿನಿಂದ ತಪ್ಪಿಸಿಕೊಳ್ಳಬೇಕೆಂದಿದ್ದರೆ ಅಕ್ಟೋಬರ್‌ನಿಂದ ಫೆಬ್ರವರಿ ವರೆಗೆ ಹೋಗಬಹುದು.

ತಿರುಮಲದಲ್ಲಿರುವ ಬಂಗಾರದ ನೀರಿನ ಬಾವಿಯನ್ನು ನೋಡಿದ್ದೀರಾ?ತಿರುಮಲದಲ್ಲಿರುವ ಬಂಗಾರದ ನೀರಿನ ಬಾವಿಯನ್ನು ನೋಡಿದ್ದೀರಾ?

ಐತಿಹಾಸಿಕ ತಾಣ

ಐತಿಹಾಸಿಕ ತಾಣ

ಬೆಂಗಳೂರಿನ ಸಮೀಪದಲ್ಲಿನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ ಗುಡಿಬಂಡೆ . ಇದು ಒಂದು ಸಣ್ಣ ಪಟ್ಟಣವಾಗಿದ್ದು, ಬೆಟ್ಟಗಳು ಮತ್ತು ಗುಡಿಬಂಡೆ ಕೋಟೆಗೆ ಪ್ರಸಿದ್ಧವಾಗಿದೆ. ಇದು ಹಲವಾರು ಶತಮಾನಗಳಷ್ಟು ಹಿಂದಿನದು. ಆದ್ದರಿಂದ, ಪಟ್ಟಣವು ಐತಿಹಾಸಿಕ ಮತ್ತು ನೈಸರ್ಗಿಕ ಪ್ರಾಮುಖ್ಯತೆ ಹೊಂದಿದೆ.

 ಬೆಟ್ಟಗಳು

ಬೆಟ್ಟಗಳು

PC: Karthik960

ಗುಡಿಬಂಡೆ ಮತ್ತು ಸುತ್ತಮುತ್ತಲಿನ ಪ್ರದೇಶವು ಹಲವಾರು ದೇವಾಲಯಗಳು ಮತ್ತು ಸುಂದರವಾದ ಸರೋವರಗಳಿಗೆ ನೆಲೆಯಾಗಿದೆ. ಆದ್ದರಿಂದ, ಬೆಟ್ಟಗಳು, ದೇವಾಲಯಗಳು, ಸ್ಮಾರಕಗಳು ಮತ್ತು ಸರೋವರಗಳ ಮಧ್ಯೆ ಇದು ಪರಿಪೂರ್ಣವಾದ ವಾರಾಂತ್ಯದ ಸ್ಥಳವಾಗಿದೆ.

ಈ ದೇವಸ್ಥಾನದ ಒಳಗೆ ನಾಯಿಗಳಿಗಿದೆ ಪ್ರವೇಶ, ಮಾಂಸಾಹಾರವೇ ನೈವೇದ್ಯಈ ದೇವಸ್ಥಾನದ ಒಳಗೆ ನಾಯಿಗಳಿಗಿದೆ ಪ್ರವೇಶ, ಮಾಂಸಾಹಾರವೇ ನೈವೇದ್ಯ

ಸಾಕಷ್ಟು ಬಸ್‌ ಸೌಲಭ್ಯಗಳಿವೆ

ಸಾಕಷ್ಟು ಬಸ್‌ ಸೌಲಭ್ಯಗಳಿವೆ

ಹಿಂದೆ ಈ ಪ್ರದೇಶವು ಚೋಳ ಸಾಮ್ರಾಜ್ಯರಿಂದ ಆಳಲ್ಪಡುತ್ತಿತ್ತು ಎನ್ನಲಾಗುತ್ತದೆ. ಇದೊಂದು ಐತಿಹಾಸಿಕ ತಾಣವಾಗಿದೆ. ಇತಿಹಾಸ ಪ್ರೀಯರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಬೆಂಗಳೂರು ಸುತ್ತಮುತ್ತ ನೀವು ಕಡಿಮೆ ಅನ್ವೇಷಿತ ತಾಣಗಳಿಗೆ ಭೇಟಿ ನೀಡಬೇಕೆಂದಿದ್ದಲ್ಲಿ ಈ ತಾಣಗಳಿಗೆ ಹೋಗಬಹುದು. ಬೆಂಗಳೂರಿನಿಂದ ಸಾಕಷ್ಟು ಸಿಟಿ ಬಸ್‌ಗಳು ಅಲ್ಲಿಗೆ ಸಂಚರಿಸುತ್ತಿದ್ದು, ೨ ಗಂಟೆಯಲ್ಲಿ ನೀವು ಬೆಂಗಳೂರಿನಿಂದ ಗುಡಿ ಬಂಡೆಯನ್ನು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X