Search
  • Follow NativePlanet
Share
» »ನೋಡಲೇಬೇಕಾದ ಭಾರತದ ಗೋಲ್ಡನ್ ಟ್ರಯಾಂಗಲ್ ಆಕರ್ಷಣೆಗಳು

ನೋಡಲೇಬೇಕಾದ ಭಾರತದ ಗೋಲ್ಡನ್ ಟ್ರಯಾಂಗಲ್ ಆಕರ್ಷಣೆಗಳು

ದೆಹಲಿ, ಆಗ್ರಾ ಮತ್ತು ಜೈಪುರ - ಭಾರತದ ಈ ಮೂರು ನಗರಗಳು ಭಾರತದ ಪ್ರಯಾಣದಲ್ಲಿಯ ಗೋಲ್ಡನ್ ಟ್ರಯಾಂಗಲ್ ಸ್ಥಳಗಳೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗೆ ಕರೆಯುವುರಲ್ಲಿ ಅತಿಶಯೋಕ್ತಿಯೇನಿಲ್ಲ. ಏಕೆಂದರೆ ಈ ಸ್ಥಳಗಳು ತಮ್ಮ ಸಂದರ್ಶಕರಿಗೆ ಭಾರತದ ಒಂದು ಉತ್ತಮವಾದ ಮತ್ತು ಶುದ್ದವಾದ ರೂಪದ ಉತ್ಸಾಹಭರಿತ ಅನ್ವೇಷಣೆಯ ಅನುಭವವನ್ನು ಒದಗಿಸಿಕೊಡುತ್ತವೆ.

ಒಂದು ದೇಶವು ತೀವ್ರವಾದ ಮತ್ತು ವೈವಿಧ್ಯತೆಯ ಸಂಗಮಗಳಾದ ಸಂಸ್ಕೃತಿ, ಭೂಪ್ರದೇಶ, ಪಾಕಪದ್ದತಿ, ಭಾಷೆಗಳು ಮತ್ತು ವಾಸ್ತುಶಿಲ್ಪಗಳನ್ನು ಹೊಂದಿದ್ದರೆ ಯಾರಿಗೇ ಆಗಲಿ ಆ ಸ್ಥಳಗಳನ್ನು ಭೇಟಿ ಕೊಡಲೇ ಬೇಕು ಎನ್ನುವಂತಹ ಆಸಕ್ತಿಯನ್ನು ಉಂಟುಮಾಡುತ್ತದೆ. ಆದುದರಿಂದ ಇಂತಹ ಸ್ಥಳಗಳಿಗೆ ಭೇಟಿ ಕೊಡುವುದು ಯಾವುದೇ ಪ್ರವಾಸಿಗರಿಗೂ ಕೂಡಾ ಸಣ್ಣ ವಿಷಯವಾಗಿರುವುದಿಲ್ಲ.

ಸಿಟಿ ಪ್ಯಾಲೇಸ್ (ನಗರ ಅರಮನೆ), ಜೈಪುರ

ಸಿಟಿ ಪ್ಯಾಲೇಸ್ (ನಗರ ಅರಮನೆ), ಜೈಪುರ

ಗೋಲ್ಡನ್ ಟ್ರಯಾಂಗಲ್ ನ ಮಾರ್ಗದಲ್ಲಿ ನೀವು ಒಮ್ಮೆ ಜೈಪುರ ತಲುಪಿದ ಕೂಡಲೇ ಇಲ್ಲಿಯ ಸಿಟಿ ಪ್ಯಾಲೇಸ್ ಗೆ ಭೇಟಿ ಕೊಡುವುದು ಕಡ್ಡಾಯ ಎನ್ನಬಹುದು. ಇಲ್ಲಿ ಇತಿಹಾಸ ಮತ್ತು ಅವುಗಳಿಗೆ ಸಂಬಂಧಿಸಿದ ಕಥೆಗಳು ಅಲ್ಲದೆ ಜೈಪುರದ ಸುವರ್ಣ ಯುಗದ ಅನೇಕ ಕುತೂಹಲಕಾರಿ ಛಾಯಾಗ್ರಾಹಕರು, ವರ್ಣಚಿತ್ರಗಳು ಇತ್ಯಾದಿಗಳ ಆಕರ್ಷಕ ಸಂಗ್ರಹಗಳನ್ನು ಒಳಗೊಂಡಿದೆ. ಅಲ್ಲದೆ ಇದು ರಾಜಸ್ಥಾನದ ರಾಜ ಮನೆತನದ ನೆಲೆಯಾಗಿತ್ತು ಎನ್ನುವುದೇ ಈ ಸ್ಥಳಕ್ಕೆ ಇನ್ನೂ ಹೆಚ್ಚಿನ ಮಹತ್ವವನ್ನು ನೀಡಿದೆ.

ಹುಮಾಯೂನ್ ಸಮಾಧಿ , ದೆಹಲಿ

ಹುಮಾಯೂನ್ ಸಮಾಧಿ , ದೆಹಲಿ

ಈ ವ್ಯಾಪ್ತಿಯಲ್ಲಿರುವ ತಾಣಗಳು ಒಂದಕ್ಕಿಂತ ಒಂದು ಆಕರ್ಷಣೀಯವಾಗಿದೆ. ಆದುದರಿಂದ ಇವುಗಳಿಗೆ ಭಾರತದ ಗೋಲ್ಡನ್ ಟ್ರಯಾಂಗಲ್ ಅನ್ನುವ ಪದವು ಅನ್ವರ್ಥಕವಾದುದೇ ಆಗಿದೆ. ಈ ಟ್ರಯಾಂಗಲ್ ನಲ್ಲಿ ದೆಹಲಿಯ ನಗರಗಳು ಮತ್ತು ಎನ್ ಸಿ ಆರ್ , ಆಗ್ರಾ ಮತ್ತು ಜೈಪುರ ಸೇರಿವೆ. ಅಲ್ಲದೆ ರಾಜಸ್ಥಾನದ ಇನ್ನೊಂದು ಅದ್ಬುತವಾದ ತಾಣವೂ ಹೌದು. ಭಾರತದ ನಕ್ಷೆಯಲ್ಲಿ ಈ ನಗರಗಳನ್ನು ಗುರುತಿಸಲು ಪ್ರಯತ್ನಿಸಿ. ಮತ್ತು ನಿಮಗೆ ಇದು ತ್ರಿಕೋಣಾಕೃತಿಯಲ್ಲಿ ಇರುವುದು ಕಂಡು ಬರುತ್ತದೆ ಆದುದರಿಂದ ಈ ಹೆಸರನ್ನು ಇಡಲಾಗಿದೆ.
ನೀವು ನಿಮ್ಮ ಗೋಲ್ಡನ್ ಟ್ರಯಾಂಗಲ್ ನ ಪ್ರವಾಸವನ್ನು ದೆಹಲಿಯಲ್ಲಿರುವ ಹುಮಾಯೂನನ ಸಮಾಧಿಯಿಂದ ಪ್ರಾರಂಭಿಸಬಹುದು. ಇದು ಇನ್ಸ್ಟಾಗ್ರಾಮರ್ ನ ಒಂದು ನೆಚ್ಚಿನ ಸ್ಥಳವಾಗಿದ್ದು ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಮತ್ತು ರಾಜಧಾನಿಯನ್ನು ಮೊಘಲರ ಒಂದು ಅತ್ಯಂತ ಪ್ರೀತಿ ಪಾತ್ರವಾದ ಸ್ಥಳವೆಂದು ಬಣ್ಣಿಸುತ್ತದೆ.

ಲೋಟಸ್ ದೇವಾಲಯ , ದೆಹಲಿ

ಲೋಟಸ್ ದೇವಾಲಯ , ದೆಹಲಿ

ದೆಹಲಿಯ ಲೋಟಸ್ ದೇವಾಲಯವು ನಗರದ ಒಂದು ಅತ್ಯಂತ ಸುಂದರವಾದ ತಾಣಗಳಲ್ಲಿ ಒಂದಾಗಿದೆ ಅದರಲ್ಲೂ ಇಲ್ಲಿಯ ವಾಸ್ತುಶಿಲ್ಪವು ಕಣ್ಸೆಳೆಯುವಂತಿದೆ. ಈ ದೇವಾಲಯವು ತಾವರೆಯ ಆಕಾರದಲ್ಲಿ ನಿರ್ಮಿಸಲಾಗಿದೆ. ಇದು ಬಹಾಯಿ ಯವರ ಪೂಜೆ ಮಾಡುವ ಸ್ಥಳವಾಗಿದೆ. ಮತ್ತು ಇನ್ಸ್ಟಾಗ್ರಾಂಗೆ ಒಂದು ಸಂವೇದನಾಶಿಲ ಚಿತ್ರವನ್ನು ಒದಗಿಸುತ್ತದೆ.

ಜಾಮಾ ಮಸೀದಿ ದೆಹಲಿ

ಜಾಮಾ ಮಸೀದಿ ದೆಹಲಿ

ಭಾರತದ ಅತ್ಯಂತ ದೊಡ್ಡ ಮಸೀದಿಯಾಗಿರುವ ಜಾಮಾ ಮಸೀದಿಯು ನಿಮ್ಮನ್ನ ಹಳೆಯ ದೆಹಲಿಯ ಅತ್ಯಂತ ಪ್ರಸಿದ್ದವಾದ ಬೀದಿಗಳಿಗೆ ಕರೆದೊಯ್ಯುತ್ತದೆ ಇದು ಛಾಯಾಗ್ರಾಹಕರಿಗೆ ಒಂದು ಅಚ್ಚುಮೆಚ್ಚಿನ ಆಕರ್ಷಕ ಸ್ಥಳವಾಗಿದೆ. ಈ ಮಸೀದಿಯನ್ನು ಮೊಘಲ್ ಚಕ್ರವರ್ತಿ ಶಹಜಹಾನನಿಂದ 1644ರಲ್ಲಿ ನಿರ್ಮಿಸಲ್ಪಟ್ಟಿತು.

ತಾಜ್ ಮಹಲ್ ಆಗ್ರಾ

ತಾಜ್ ಮಹಲ್ ಆಗ್ರಾ

ಇದಕ್ಕೆ ಯಾವುದೇ ಪರಿಚಯ ಅಥವಾ ವಿವರಣೆಯ ಅಗತ್ಯವಿಲ್ಲ. ಭಾರತದಲ್ಲಿರುವ ಇದು ಜಗತ್ತಿನ ಏಳು ಅದ್ಬುತಗಳಲ್ಲಿ ಒಂದೆನಿಸಿದೆ. ಇದೊಂದು ಬೆರಗುಗೊಳಿಸುವಂತಹ ರಚನೆಯಾಗಿದ್ದು ನಿಮ್ಮ ಮನಸ್ಸನ್ನು ಕದಿಯುತ್ತದೆ. ಇದನ್ನು ನೀವು ಖಂಡಿತವಾಗಿಯೂ ನೋಡಲೇ ಬೇಕು.

ಇಂಡಿಯಾ ಗೇಟ್ , ದೆಹಲಿ

ಇಂಡಿಯಾ ಗೇಟ್ , ದೆಹಲಿ

ದೆಹಲಿಯ ಇಂಡಿಯಾ ಗೇಟ್ ಅನ್ನು ನಿಖರವಾಗಿ ದೆಹಲಿಯ ಆರ್ಕ್-ಡಿ -ಟ್ರೈಯೆಂಪ್ ಎಂದು ಕರೆಯಬಹುದು ಮತ್ತು ಇದು ಯುದ್ದ ಸ್ಮಾರಕವಾಗಿದ್ದು ಇದು ಭಾರತದ ರಾಜಧಾನಿಯ ಹೃದಯ ಭಾಗದಲ್ಲಿದೆ. ಇದರ ಸುತ್ತಮುತ್ತಲಿನ ಪ್ರದೇಶಗಳು ಉದ್ಯಾನವನಗಳಿಂದ ಕೂಡಿದೆ ಮತ್ತು ಸದ್ದು ಗದ್ದಲಗಳಿಂದ ಕೂಡಿದ್ದು ಇದು ಪಿಕ್ನಿಕ್ ತಾಣವೂ ಆಗಿದೆ. ಇಲ್ಲಿ ಸಂಜೆಯ ಹೊತ್ತಿನಲ್ಲಿ ಅಂದರೆ ರಾತ್ರಿಯಾಗುವುದಕ್ಕಿಂತ ಮೊದಲು ಅಡ್ಡಾಡುವುದು ಒಂದು ಉತ್ತಮ ಆಯ್ಕೆಯಾಗಿದ್ದು ಇಲ್ಲಿಯ ಸ್ಥಳೀಯರ ಜೊತೆ ಸಲಿಗೆಯಿಂದ ಇರಬಹುದಾಗಿದೆ.

ಫತೇಪುರ್ ಸಿಕ್ರಿ, ಆಗ್ರಾ

ಫತೇಪುರ್ ಸಿಕ್ರಿ, ಆಗ್ರಾ

ತಾಜ್ ಮಹಲ್ ಆಗ್ರಾದಲ್ಲಿ ತನ್ನ ಭವ್ಯತೆಯಿಂದ ಆಕರ್ಷಿಸಿದರೆ ನೀವು ಫತೇಪುರ್ ಸಿಕ್ರಿಯೂ ಕೂಡಾ ಭವ್ಯತೆಯಲ್ಲಿ ಇದಕ್ಕೆ ಹೊರತಾಗಿ ಇಲ್ಲ. ಇದು ಕಡಿಮೆ ಪ್ರಮಾಣದ ಪ್ರವಾಸಿಗರನ್ನು ಹೊಂದಿರುವುದರಿಂದ ಛಾಯಾಗ್ರಾಹಕರಿಗೆ ಇದೊಂದು ಸೂಕ್ತವಾದ ಸ್ಥಳವೆನಿಸಿದೆ. ಇದು ಅತ್ಯಂತ ಉತ್ಕೃಷ್ಟತೆಯಿಂದ ಕೂಡಿದ ಕರಕುಶಲತೆಯನ್ನು ಹೊಂದಿದೆ ಅಲ್ಲದೆ ಇದೊಂದು ವಾಸ್ತುಶಿಲ್ಪವನ್ನು ಪ್ರಚೋದಿಸುವ ವಿಸ್ಮಯವಾದುದರಿಂದ ಭೇಟಿ ನೀಡಲು ತಪ್ಪಿಸಲೇಬಾರದು.

ಹವಾ ಮಹಲ್, ಜೈಪುರ

ಹವಾ ಮಹಲ್, ಜೈಪುರ

ಇದು ಜೈಪುರದ ಅತ್ಯಂತ ಹೆಚ್ಚಾಗಿ ಛಾಯಾಗ್ರಾಹಣಕ್ಕೆ ಒಳಗಾಗುವ ಸ್ಥಳವೆನಿಸಿದೆ. ಇದು ಅತ್ಯಂತ ಆಸಕ್ತಿಯಿಂದ ಮಾಡಲಾಗಿರುವ ರಚನೆಯಾಗಿದೆ. ಇದನ್ನು ಕೆಂಪು ಮತ್ತು ಗುಲಾಬಿ ಬಣ್ಣದ ಮರಳುಗಲ್ಲಿನಿಂದ ಮಾಡಲಾಗಿದೆ. ಮತ್ತು ಜೈಪುರಕ್ಕೆ ಪಿಂಕ್ ಸಿಟಿ ಎನ್ನುವ ಹೆಸರು ಬರಲು ಕಾರಣವಾಗಿದೆ.
ಇದು ಸಿಟಿ ಪ್ಯಾಲೇಸ್ ಗೆ ಅತ್ಯಂತ ಹತ್ತಿರದಲ್ಲಿದೆ ಆದುದರಿಂದ ಒಂದೇ ಸಲ ಎರಡೂ ಕಡೆಗೂ ಭೇಟಿ ಕೊಡಬಹುದಾಗಿದೆ. ರಾಜಸ್ಥಾನದ ಇನ್ನಿತರ ಸ್ಥಳಗಳಂತೆ ಈ ಸ್ಥಳವೂ ಕೂಡಾ ಕೆಮರಾ ಕಣ್ಣಿಗೆ ಸೆರೆಹಿಡಿಯಲು ಅತ್ಯಂತ ಯೋಗ್ಯವಾದುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X