Search
  • Follow NativePlanet
Share
» »ಇಲ್ಲಿಗೆ ಹೋದ್ರೆನೇ ಗೊತ್ತಾಗೋದು ಇಲ್ಲಿನ ದಸರಾದ ವೈಭವ

ಇಲ್ಲಿಗೆ ಹೋದ್ರೆನೇ ಗೊತ್ತಾಗೋದು ಇಲ್ಲಿನ ದಸರಾದ ವೈಭವ

ನವರಾತ್ರಿ ಉತ್ಸವವನ್ನು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ, ಈ ಬಾರಿ ನವರಾತ್ರಿಯು ಅಕ್ಟೋಬರ್ 10 ರಿಂದ 19ರವರೆಗೆ ನಡೆಯಲಿದೆ. ದೇಶದ ಪ್ರಸಿದ್ಧ ಮಂದಿರಗಳಲ್ಲಿ ಈಗಾಗಲೇ ನವರಾತ್ರಿ ತಯಾರಿ ಬಹಳ ಜೋರಾಗಿಯೇ ನಡೆಯುತ್ತಿದೆ. ಇಂದು ನಾವು ದೇಶದಲ್ಲಿ ನವರಾತ್ರಿ ಉತ್ಸವವನ್ನು ಆಚರಿಸಲು ಬೆಸ್ಟ್‌ ಸ್ಥಳಗಳು ಯಾವುವು? ಎಲ್ಲಿ ವಿಜಯದಶಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎನ್ನುವುದನ್ನು ನಾವು ತಿಳಿಸಲಿದ್ದೇವೆ.

ಮೈಸೂರು, ಕರ್ನಾಟಕ

ಮೈಸೂರು, ಕರ್ನಾಟಕ

ಮೈಸೂರು ದಸರಾ ಇಡೀ ದೇಶದಲ್ಲೇ ಬಹಳ ಫೇಮಸ್, ಅಲ್ಲಿನ ಅರಮನೆ, ರಾಜ ಮನೆತನ, ಅಂಬಾರಿ ಇವೆಲ್ಲಾ ದಸರಾಕ್ಕೆ ಇನ್ನಷ್ಟು ಮೆರುಗನ್ನು ನೀಡುತ್ತದೆ. ನಾಡಹಬ್ಬ ಎಂದೇ ಕರೆಯಲಾಗುವ ದಸರಾದ ಮುಖ್ಯ ಆಕರ್ಷಣೆಯೇ ಅಲ್ಲಿನ ದೀಪಗಳಿಂದಾಲಂಕೃತವಾದ ಅರಮನೆ. ದಸರಾದ 10 ದಿನಗಳ ಕಾಲ ಅರಮನೆಯನ್ನು ಲಕ್ಷಾಂತರ ಬಲ್ಭ್‌ಗಳಿಂದ ಅಲಂಕರಿಸಲಾಗುತ್ತದೆ.ವಿಜಯದಶಮಿಯಂದು ಜಂಬೂ ಸವಾರಿ ಮೈಸೂರಿನ ಬೀದಿಗಳಲ್ಲಿ ನಡೆಯುತ್ತದೆ. ಪಂಜಿನ ಕವಾಯತು ನಡೆಯುತ್ತದೆ. ಚಾಮುಂಡಿ ಬೆಟ್ಟದ ಮೇಲಿರುವ ತಾಯಿಯ ದರ್ಶನವನ್ನು ಪಡೆಯಬಹುದು. ಇಡೀ ಮೈಸೂರು ಬೀದಿಗಳು ವಿದ್ಯುತ್‌ ಆಲಂಕೃತವಾಗಿರುತ್ತದೆ.

ಶೃಂಗೇರಿ ಶಾರದೆಯ ಸನ್ನಿಧಾನದಲ್ಲಿರುವ ಮೂಗುತ್ತಿ ಮೀನು ನೋಡಿದ್ರೆ ಅದೃಷ್ಟವಂತೆಶೃಂಗೇರಿ ಶಾರದೆಯ ಸನ್ನಿಧಾನದಲ್ಲಿರುವ ಮೂಗುತ್ತಿ ಮೀನು ನೋಡಿದ್ರೆ ಅದೃಷ್ಟವಂತೆ

ಕುಲ್ಲು , ಹಿಮಾಚಲ ಪ್ರದೇಶ

ಕುಲ್ಲು , ಹಿಮಾಚಲ ಪ್ರದೇಶ

ಕುಲ್ಲು ದಸರಾ ಕುಲ್ಲು ಕಣಿವೆಯ ಪ್ರಸಿದ್ಧ ಉತ್ಸವವಾಗಿದ್ದು ಹಿಮಾಚಲ ಪ್ರದೇಶದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಇದನ್ನು ಆಚರಿಸಲಾಗುತ್ತದೆ. ಕುಲ್ಲು ಕಣಿವೆಯಲ್ಲಿ ಧಲ್ಪುರ್ ಮೈದಾನದಲ್ಲಿ ಇದನ್ನು ಆಚರಿಸಲಾಗುತ್ತದೆ. ಇದು ವಿಜಯದಶಮಿ ದಿನದಂದು ಪ್ರಾರಂಭವಾಗುತ್ತದೆ ಮತ್ತು ಏಳು ದಿನಗಳವರೆಗೆ ಮುಂದುವರಿಯುತ್ತದೆ. ಮನಾಲಿಯ ದೇವತೆಯಾದ ಹಿಡಿಂಬಾ ಸೇರಿದಂತೆ ಸುಮಾರು 200 ಸ್ಥಳೀಯ ದೇವತೆಗಳನ್ನು ಈ ಸಮಯದಲ್ಲಿ ರಘುನಾಥ್‌ಜೀ ದೇವಾಲಯಕ್ಕೆ ಧಾರ್ಮಿಕ ಆಚರಣೆ ಮೂಲಕ ತರಲಾಗುತ್ತದೆ. ಕೊನೆಯ ದಿನದಂದು ಬಿಯಸ್ ನದಿಯ ದಡದಲ್ಲಿ ಮರದ ತುಂಡನ್ನು ಹಾಗೂ ಹುಲ್ಲಿನ ರಾಶಿಗೆ ಬೆಂಕಿ ಹಾಕುವುದರ ಮೂಲಕ ಈ ಆಚರಣೆ ಕೊನೆಗೊಳ್ಳುತ್ತದೆ.

ಕೊಲ್ಕತ್ತಾ, ಪಶ್ಚಿಮ ಬಂಗಾಳ

ಕೊಲ್ಕತ್ತಾ, ಪಶ್ಚಿಮ ಬಂಗಾಳ

ದುರ್ಗಾ ಪೂಜೆಯು ಪಶ್ಚಿಮಬಂಗಾಳದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ಇದು ಐದು ದಿನಗಳ ಆಚರಣೆಯಾಗಿದ್ದು, 10 ನೇ ದಿನದಂದು ದುರ್ಗೇಯನ್ನು ವಿಸರ್ಜಿಸಲಾಗುತ್ತದೆ. ಈ ಸಂದರ್ಭದಲ್ಲಿ ದುರ್ಗೆಯು ನಿಮ್ಮ ಮನೆಗೆ ಭೇಟಿ ನೀಡುತ್ತಾಳೆ ಎನ್ನಲಾಗುತ್ತದೆ. ದಸರಾ ಸಂದರ್ಭ ಕೊಲ್ಕತ್ತಾದ ಪ್ರತೀ ಬೀದಿ ಬೀದಿಗಳಲ್ಲಿ ವಿಭಿನ್ನ ಪೆಂಡಲ್‌ಗಳನ್ನು ಹಾಕಿ ದೊಡ್ಡ ದೊಡ್ಡ ದುರ್ಗೇ ಮೂರ್ತಿಯನ್ನು೫ ದಿನಗಳ ಕಾಲ ಪೂಜಿಸಲಾಗುತ್ತದೆ.

ಗುಲ್ಬರ್ಗಾದಲ್ಲಿದ್ದಾಳಂತೆ ಜಮ್ಮುವಿನ ವೈಷ್ಣೋದೇವಿಗುಲ್ಬರ್ಗಾದಲ್ಲಿದ್ದಾಳಂತೆ ಜಮ್ಮುವಿನ ವೈಷ್ಣೋದೇವಿ

ಅಹಮದಾಬಾದ್, ಗುಜರಾತ್

ಅಹಮದಾಬಾದ್, ಗುಜರಾತ್

ನವರಾತ್ರಿ 9 ದಿನಗಳ ಆಚರಣೆಯನ್ನು ಆನಂದಿಸಲು ಗುಜರಾತ್ ಒಂದು ಉತ್ತಮ ಸ್ಥಳವಾಗಿದೆ. ಮಾ ಶಕ್ತಿಯ ಒಂಭತ್ತು ಅಂಶಗಳನ್ನುಪೂಜಿಸಲಾಗುತ್ತದೆ. ಒಂಬತ್ತು ರಾತ್ರಿಯ ಉತ್ಸವದ ಮುಖ್ಯ ಆಕರ್ಷಣೆಯೆಂದರೆ ಗುಜರಾತ್‌ನ ಜಾನಪದ ನೃತ್ಯ. ಪ್ರತಿ ದಿನವೂ ಆರತಿಯ ಕಾರ್ಯಕ್ಷಮತೆ ಪ್ರಾರಂಭವಾಗುತ್ತದೆ. ನಂತರ ಶಕ್ತಿ ದೇವತೆಯ ಪ್ರತಿಮೆಯ ಸುತ್ತ ಗಾರ್ಬಾ ಜಾನಪದ ನೃತ್ಯವನ್ನು ಜನರು ನಿರ್ವಹಿಸುತ್ತಾರೆ. ಗರ್ಬಾವನ್ನು ಮಧ್ಯರಾತ್ರಿಯವರೆಗೂ ನಡೆಸಲಾಗುತ್ತದೆ.

ದುರ್ಗಾ ದೇವಿ

ದುರ್ಗಾ ದೇವಿ

ಈ ಒಂಬತ್ತು ದಿನಗಳ ಕಾಲ ಉತ್ಸವದ ಸಮಯದಲ್ಲಿ, ಅಹಮದಾಬಾದ್ ನಗರವು ಸುಂದರವಾಗಿ ವರ್ಣಮಯ ದೀಪಗಳಿಂದ ಅಲಂಕರಿಸಲ್ಪಟ್ಟಿರುತ್ತದೆ. ನವರಾತ್ರಿ ಉತ್ಸವದ ಎಂಟನೇ ಮತ್ತು ಒಂಬತ್ತನೇ ದಿನದಂದು ಜನರು ದುರ್ಗಾ ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಬಳ್ಳಾರಿಯ ಗಾಣಾಗಟ್ಟೆ ಮಾಯಮ್ಮಳ ಪವಾಡ ಕೇಳಿದ್ದೀರಾ?ಬಳ್ಳಾರಿಯ ಗಾಣಾಗಟ್ಟೆ ಮಾಯಮ್ಮಳ ಪವಾಡ ಕೇಳಿದ್ದೀರಾ?

ವಿಜಯವಾಡಾ, ಆಂಧ್ರಪ್ರದೇಶ

ವಿಜಯವಾಡಾ, ಆಂಧ್ರಪ್ರದೇಶ

ವಿಜಯದಶಮಿ ಅಥವಾ ದಸರಾ ಆಂಧ್ರ ಪ್ರದೇಶದ ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ. ವಿಜಯವಾಡಾ ಕನಕಾ ದುರ್ಗಾ ದೇವಸ್ಥಾನದಲ್ಲಿ ಈ ಉತ್ಸವವನ್ನು ಹೆಚ್ಚು ಆಚರಿಸಲಾಗುತ್ತದೆ. ಇದನ್ನು 9 ದಿನಗಳ ಕಾಲ ಆಚರಿಸಲಾಗುತ್ತದೆ ಮತ್ತು ವಿಜಯದಶಮಿಯ 10 ನೇ ದಿನದಂದು ಮುಕ್ತಾಯವಾಗುತ್ತದೆ.
ಹತ್ತು ದಿನಗಳ ಉತ್ಸವದ ಸಮಯದಲ್ಲಿ ಕನಕಾ ದುರ್ಗಾ ದೇವಿಯನ್ನು ವಿವಿಧ ರೂಪಗಳಲ್ಲಿ (ಅವತಾರಗಳು) ಅಲಂಕರಿಸಲಾಗುತ್ತದೆ. ದಿನದ ಅಲಂಕಾರವು ಪ್ರತಿ ದಿನದ ಜ್ಯೋತಿಷ್ಯ ನಕ್ಷತ್ರದ ಪ್ರಕಾರ ಆಯ್ಕೆ ಮಾಡಲಾಗುತ್ತದೆ.

ವಾರಣಾಸಿ, ಉತ್ತರ ಪ್ರದೇಶ

ವಾರಣಾಸಿ, ಉತ್ತರ ಪ್ರದೇಶ

ನವರಾತ್ರಿ ಉತ್ಸವದ ಆರಂಭದಿಂದ ಹತ್ತು ದಿನಗಳ ಕಾಲ ದಸರಾ ವರೆಗೆ ವಾರಣಾಸಿಯು ಸಂತರು ಮತ್ತು ಭಕ್ತರ ನೆಚ್ಚಿನ ತಾಣವಾಗಿದೆ. ಇಲ್ಲಿನ ದಸರಾ ಹಬ್ಬದ ಮುಖ್ಯ ಆಕರ್ಷಣೆ ರಾಮ್ ಲೀಲಾ. ರಾಮಲೀಲಾ ಒಂದು ನೃತ್ಯ ನಾಟಕವಾಗಿದ್ದು, ರಾಮ, ಸೀತಾ ಮತ್ತು ಲಕ್ಷ್ಮಣರ ವನವಾಸದ ಕಥೆಯನ್ನು ತೋರಿಸಲಾಗುತ್ತದೆ, ನವರಾತ್ರಿ ಸಮಯದಲ್ಲಿ ಇಡೀ ನಗರವು ರಾಮ್ ಲೀಲಾ ಮೈದಾನವಾಗುತ್ತದೆ, ರಾಮನಗರದಲ್ಲಿರುವ ರಾಮಲೀಲಾ ಮೈದಾನವು ಮುಖ್ಯ ನಗರ್ರದಿಂದ 15ಕಿ.ಮೀ ದೂರದಲ್ಲಿದೆ.

ಕೋಟಾ,ರಾಜಸ್ಥಾನ

ಕೋಟಾ,ರಾಜಸ್ಥಾನ

ಕೋಟಾ ದಸರಾ ಉತ್ಸವಗಳು ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಗುವ ರಾಜಸ್ಥಾನದ ಉತ್ಸವವಾಗಿದೆ. ಪ್ರವಾಸೋದ್ಯಮದ ವಿಶೇಷ ಸ್ಥಳವನ್ನು ಹೊಂದಿದೆ. ಸ್ಥಳೀಯರು ಉತ್ಸವದಲ್ಲಿ ಭಾಗವಹಿಸುತ್ತಾರೆ. ಜೊತೆಗೆ ಬಹಳಷ್ಟು ಪ್ರವಾಸಿಗರೂ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಕೋಟಾ ದಸರಾ ಉತ್ಸವದ ಪ್ರಮುಖ ಆಕರ್ಷಣೆ ಎಂದರೆ 75 ಅಡಿ ಎತ್ತರದ ರಾವಣ.

ಶಕುಂತಲಾ ಸ್ನಾನ ಮಾಡುತ್ತಿದ್ದ ಜಲಪಾತ ಇಲ್ಲಿದೆ ನೋಡಿ

ರಾಮನಿಗೆ ಪ್ರಾರ್ಥನೆ ಸಲ್ಲಿಸಲು ಮತ್ತು ರಾವಣನ ಮೇಲೆ ವಿಜಯವನ್ನು ಆಚರಿಸಲು ಹಳ್ಳಿಗರು ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ದಸರಾ ಸಂದರ್ಭ ಮೆರವಣಿಗೆಯೂ ನಡೆಯುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X