Search
  • Follow NativePlanet
Share
» »ಪರಿಸರಪ್ರವಾಸೋದ್ಯಮಕ್ಕೆ ಇಂಬು ನೀಡುವ ಚೇರುಂಬ

ಪರಿಸರಪ್ರವಾಸೋದ್ಯಮಕ್ಕೆ ಇಂಬು ನೀಡುವ ಚೇರುಂಬ

By Vijay

ಪ್ರವಾಸೋದ್ಯಮದ ಒಂದು ಶಾಖೆಯಾಗಿರುವ ಪರಿಸರಪ್ರವಾಸೋದ್ಯಮ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಮನ್ನಣೆಗಳಿಸುತ್ತಿದೆ. ಪ್ರವಾಸೋದ್ಯಮ ಎಂದಾಗ ಸಾಮಾನ್ಯವಾಗಿ ಸಾಕಷ್ಟು ಪ್ರವಾಸಿಗರು ಹೆಚ್ಚು ಜನಪ್ರೀಯವಾದ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಆ ಸ್ಥಳಗಳು ಹೆಚ್ಚಿನ ಜನ ಸಾಂದ್ರತೆ ಪಡೆದು ಅಲ್ಪ ಪ್ರಮಾಣದಲ್ಲಿ ಕಲುಶಿತಗೊಳ್ಳುತ್ತಿರುತ್ತವೆ.

ನಿಮಗಿಷ್ಟವಾಗಬಹುದಾದ : ಕೇರಳದ ಅದ್ಭುತ ಕಾಡುಗಳಲ್ಲೊಂದು ಪಯಣ

ಆದರೆ ಪರಿಸರಪ್ರವಾಸೋದ್ಯಮದಲ್ಲಿ ವಸ್ತು ಸ್ಥಿತಿ ಕೊಂಚ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಹೆಚ್ಚು ಜನರು ಭೇಟಿ ನೀಡದ, ನೈಸರ್ಗಿಕ ಸಂಪತ್ತುಗಳಿಗೆ ತೊಂದರೆ ಕೊಡದೆ, ಕಲ್ಮಶರಹಿತವಾದ ವಾತಾವರಣ ಹೊಂದಿರುವ ಸ್ಥಳಗಳಿಗೆ ಭೆಟಿ ನೀಡುವುದಾಗಿದೆ.

ಪರಿಸರಪ್ರವಾಸೋದ್ಯಮಕ್ಕೆ ಇಂಬು ನೀಡುವ ಚೇರುಂಬ

ಚಿತ್ರಕೃಪೆ: Baluperoth

ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಪರಿಸರವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಉದ್ದೆಶದಿಂದ ಪರಿಸರಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ನೀಡುತ್ತಿವೆ. ಅದರ ಒಂದು ಭಾಗವಾಗಿ ಸಾಕಷ್ಟು ಕಡೆಗಳಲ್ಲಿ ಪರಿಸರಪ್ರವಾಸೋದ್ಯಮವನ್ನು ಬೆಳೆಸುವ ದೃಷ್ಟಿಯಿಂದ ಹಳ್ಳಿಗಳನ್ನು ನಿರ್ಮಿಸಲಾಗುತ್ತಿದೆ.

ಪರಿಸರಪ್ರವಾಸೋದ್ಯಮಕ್ಕೆ ಇಂಬು ನೀಡುವ ಚೇರುಂಬ

ಚಿತ್ರಕೃಪೆ: wikimedia

ಇಂತಹ ಒಂದು ಪರಿಸರಪ್ರವಾಸೋದ್ಯಮದ ಯೋಜನೆಗಳಲ್ಲಿ ಒಂದಾಗಿದೆ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಕರುವಾರಕುಂಡಂನಲ್ಲಿರುವ ಚೇರುಂಬ ಎಂಬ ಸುಂದರ ಹಳ್ಳಿ. ಇದು ಪಶ್ಚಿಮ ಘಟ್ಟಗಳ ದಟ್ಟ ಬೆಟ್ಟ ಕಾಡು ಪ್ರದೇಶಗಳಲ್ಲಿ ಬರುವುದರಿಂದ ಇಲ್ಲಿನ ವಾತಾವರಣ ಅದ್ಭುತವಾಗಿದ್ದು ಕಲ್ಮಶರಹಿತವಾಗಿದೆ.

ನಿಮಗಿಷ್ಟವಾಗಬಹುದಾದ : ಮುನ್ನಾರ್ ಭೇಟಿಯ ಹಿಂದಿರುವ ರಹಸ್ಯ

ಓಲಿಪುಳಾ ನದಿಯು ಇಲ್ಲಿನ ಪಶ್ಚಿಮಘಟ್ಟಗಳಲ್ಲಿ ಹುಟ್ಟಿ ಹರಿದಿರುವುದರಿಂದ ನೈಸರ್ಗಿಕವಾಗಿ ಈ ಪ್ರದೇಶ ಜಲ ಸಂಪನ್ಮೂಲವಾಗಿದೆ. ಹೆಚ್ಚು ಆಧುನೀಕರಣ ಆವರಿಸದೆ ಇದ್ದುದಕ್ಕೆ ಇದು ಪರಿಸರಪ್ರವಾಸೋದ್ಯಮಕ್ಕೆ ಆದರ್ಶಮಯವಾದ ಸ್ಥಳವಾಗಿದೆ. ಇನ್ನೂ ಇಲ್ಲಿ ಪ್ರವಾಸಿ ಚಟುವಟಿಕೆ ವಿಸ್ತರಿಸುವಿಕೆಯ ದೃಷ್ಟಿಯಿಂದ ಸಾಕಷ್ಟು ಅಭಿವೃದ್ಧಿಯನ್ನು ಮಾಡಲಾಗಿದೆ.

ಪರಿಸರಪ್ರವಾಸೋದ್ಯಮಕ್ಕೆ ಇಂಬು ನೀಡುವ ಚೇರುಂಬ

ಚಿತ್ರಕೃಪೆ: Baluperoth

ರಮಣೀಯವಾದ ಬೆಟ್ಟಗುಡ್ಡಗಳ ಹಿನ್ನಿಲೆಯಲ್ಲಿ ಹಾಯಾಗಿ ನಡೆಯುತ್ತ ಸಾಗಲು ಪಾದಚಾರಿ ಮಾರ್ಗ, ಮಕ್ಕಳಿಗಾಗಿ ಉದ್ಯಾನ ಹಾಗೂ ನೀರಿನಲ್ಲಿ ದೋಣಿ ವಿಹಾರಗಳಂತಹ ಹಲವಾರು ಸೌಲಭ್ಯಗಳನ್ನು ಈ ಹಳ್ಳಿಯಲ್ಲಿ ಒದಗಿಸಲಾಗಿದೆ. ಮಲಪ್ಪುರಂನಿಂದ 42 ಕಿ.ಮೀ ದೂರವಿರುವ ಕರುವಾರಕುಂಡ ಹಾಗೂ ಚೇರುಂಬ ತಲುಪಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X