Search
  • Follow NativePlanet
Share
» »ತಂಪಾದ ಎರಡು ಸುಂದರ ಸ್ಥಳಗಳಿಗೊಂದು ಸಲಾಂ

ತಂಪಾದ ಎರಡು ಸುಂದರ ಸ್ಥಳಗಳಿಗೊಂದು ಸಲಾಂ

By Vijay

ಹಿಮಾಲಯದ ಮಡಿಲಲ್ಲಿ ಪ್ರಶಾಂತವಾಗಿ ನೆಲೆಸಿರುವ ಶ್ವೇತಮಯ ಹಾಗು ಹಸಿರಿನಿಂದ ಕೂಡಿದ ತಾಣವೆ ಜಮ್ಮು ಮತ್ತು ಕಾಶ್ಮೀರ ರಾಜ್ಯ. ಈ ರಾಜ್ಯವು ತನ್ನ ಪ್ರಕೃತಿ ವೈಭವದಿಂದಾಗಿ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರಖ್ಯಾತಿಯನ್ನು ಗಳಿಸಿದೆ. ಈ ರಾಜ್ಯವು ಪ್ರಮುಖವಾಗಿ ಮೂರು ಭಾಗಗಳಲ್ಲಿ ವಿಂಗಡನೆಗೊಂಡಿದ್ದು, ಅವುಗಳೆಂದರೆ, ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಖ್.

ವಾರಾಂತ್ಯ ಕೊಡುಗೆ : ಮೇಕ್ ಮೈ ಟ್ರಿಪ್ ನಿಂದ ಹೋಟೆಲ್ ಬುಕ್ಕಿಂಗ್ ಮೇಲೆ ನೇರ 35% ರಷ್ಟು ಕಡಿತ

ಭಾರತದಲ್ಲಿ ಅತ್ಯಂತ ಚಿರಪರಿಚಿತವಾಗಿರುವ ಈ ರಾಜ್ಯದಲ್ಲಿ ಭೇಟಿ ನೀಡಲು ಪ್ರವಾಸಿ ಆಕರ್ಷಣೆಗಳಿಗೇನೂ ಕಮ್ಮಿ ಇಲ್ಲ. ಪ್ರತಿ ವರ್ಷವೂ ಸಹಸ್ರಾರು ಸಂಖ್ಯೆಯಲ್ಲಿ ಜಗತ್ತಿನ ಮೂಲೆ ಮೂಲೆಗಳಿಂದ ಪ್ರವಾಸಿಗರು ಈ ರಾಜ್ಯಕ್ಕೆ ಭೇಟಿ ನೀಡುತ್ತಲೆ ಇರುತ್ತಾರೆ. ನಿಸರ್ಗ ಪ್ರೇಮಿ ಹಾಗು ಸಾಹಸಪ್ರಿಯರಿಗಂತೂ ಈ ರಾಜ್ಯ ಸ್ವರ್ಗವೆಂದರೂ ತಪ್ಪಾಗಲಾರದು.

ವಿಶೇಷ ಲೇಖನ : ಹೀಗಿದೆ ನಮ್ಮ ಕಾರ್ಗಿಲ್

ಅದ್ಭುತಮಯ ಪರ್ವತ ಶ್ರೇಣಿಗಳು, ಸ್ಫಟಿಕ ಶುದ್ಧ ನೀರಿನ ತೊರೆಗಳು, ಅಸಂಖ್ಯಾತ ಪವಿತ್ರ ದೇಗುಲಗಳು, ಹಿಮನದಿಗಳು ಮತ್ತು ಕಣ್ಣಿಗೆ ಮುದ ನೀಡುವ ಉದ್ಯಾನಗಳು ಇವೆಲ್ಲವೂ ಸೇರಿ ಒಟ್ಟಾರೆಯಾಗಿ ಈ ಪ್ರದೇಶವನ್ನು ಖಂಡಿತವಾಗಿ ಭೂಮಿಯ ಮೇಲಿನ ಸ್ವರ್ಗವನ್ನೆ ಆಗಿಸಿದೆ ಎಂದು ಹೇಳಬಹುದು. ಪ್ರಸ್ತುತ ಲೇಖನದ ಮೂಲಕ ಈ ರಾಜ್ಯದಲ್ಲಿರುವ ಎರಡು ಸುಂದರ ಸ್ಥಳಗಳಿಗೆ ಭೇಟಿ ನೀಡಿ.

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ದ್ರಾಸ್ : "ಲಡಾಖ್ ನ ಪ್ರವೇಶ ದ್ವಾರ" ಎಂಬ ಹೆಗ್ಗಳಿಕೆ ಹೊಂದಿರುವ ದ್ರಾಸ್, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾರ್ಗಿಲ್ ಜಿಲ್ಲೆಯಲ್ಲಿದೆ. ಈ ತಾಣವು ಸಮುದ್ರಮಟ್ಟದಿಂದ 3280 ಮೀ. ಎತ್ತರದಲ್ಲಿ ನೆಲೆಸಿದ್ದು, ಪ್ರಪಂಚದಲ್ಲೆ ಸೈಬೀರಿಯಾದ ನಂತರ ಎರಡನೇಯ ಅತಿ ಶೀತಮಯ ಪ್ರದೇಶ ಇದೆಂದು ಹಣೆಪಟ್ಟಿ ಹೊತ್ತಿಕೊಂಡಿದೆ.

ಚಿತ್ರಕೃಪೆ: nevil zaveri

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

1999 ರಲ್ಲಿ ಭಾರತ ಹಾಗು ಪಾಕಿಸ್ತಾನದ ಮಧ್ಯೆ ಯುದ್ಧ ನಡೆದಿದ್ದ ಕಾರ್ಗಿಲ್ ಪಟ್ಟಣದಿಂದ ಈ ಪ್ರದೇಶವು ಕೇವಲ 62 ಕಿ.ಮೀ ದೂರದಲ್ಲಿದ್ದು, ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಲಡಾಖ್ ಮಾತ್ರವಲ್ಲದೆ, ಇತರೆ ಪ್ರಖ್ಯಾತ ಗಿರಿಧಾಮಗಳು ಹಾಗು ಜಮ್ಮು ಮತ್ತು ಕಾಶ್ಮೀರದ ನಗರಗಳಿಗೆ ದ್ರಾಸ್ ಪ್ರವೇಶ ದ್ವಾರವಾಗಿಯೂ ಕಾರ್ಯನಿರ್ವಹಿಸುತ್ತದೆ.

ಚಿತ್ರಕೃಪೆ: Narender9

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಈ ಪಟ್ಟಣವು ತನ್ನಲ್ಲಿರುವ ಕಡಿದಾದ/ಒರಟಾದ ಭೂಮಿಗಳಿಂದ ಸಾಹಸಮಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು ಪ್ರವಾಸಿಗರ ಮಧ್ಯೆ ಜನಪ್ರಿಯವಾಗಿದೆ. ಚಾರಣಕ್ಕೂ ಪ್ರಸಿದ್ಧವಾಗಿರುವ ಈ ತಾಣದಿಂದ ಪ್ರವಾಸಿಗರು ಇಲ್ಲಿನ ಸುರು ಕಣಿವೆಯ ಚಾರಣವನ್ನು ಕೈಗೊಳ್ಳಬಹುದು. ಇಷ್ಟೆ ಅಲ್ಲ, ಪ್ರವಾಸಿಗರು 5200 ಮೀ. ಎತ್ತರದ ಮಾರ್ಗವಾದ ಅಮರ್ನಾಥ ಗುಹೆಯ ಚಾರಣ ಮಾರ್ಗವನ್ನೂ ಕೂಡ ಆಯ್ಕೆ ಮಾಡಿಕೊಳ್ಳಬಹುದು.

ಚಿತ್ರಕೃಪೆ: Lev Yakupov

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಪ್ರವಾಸಿಗರು ದ್ರಾಸ್ ಗೆ ಭೇಟಿ ನೀಡಿದಾಗ ದ್ರಾಸ್ ಯುದ್ಧ ಸ್ಮಾರಕವನ್ನು ನೋಡಲು ಮರೆಯಬಾರದು. ಈ ಸ್ಮಾರಕವನ್ನು ಕಾರ್ಗಿಲ್ ಕಾಳಗದಲ್ಲಿ ಹುತಾತ್ಮರಾದ ಸೈನಿಕರ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ದಾಖಲೆಗಳ ಪ್ರಕಾರ, ಈ ಯುದ್ಧದಲ್ಲಿ ಎರಡೂ ಕಡೆಯ(ಭಾರತ ಮತ್ತು ಪಾಕಿಸ್ತಾನ)ಸುಮಾರು 1200 ಸೈನಿಕರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ.

ಚಿತ್ರಕೃಪೆ: Rohan

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಅದ್ಭುತವಾಗಿ ಕಂಗೊಳಿಸುವ, ರೋಮಾಂಚನಗೊಳಿಸುವ ದ್ರಾಸ್ ಕಣಿವೆಯ ಒಂದು ಸುಂದರ ನೋಟ.

ಚಿತ್ರಕೃಪೆ: Rohan

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಬಸ್ಸು ಇಲ್ಲವೆ ಟ್ಯಾಕ್ಸಿಗಳ ಮುಖಾಂತರ ದ್ರಾಸ್ ಗೆ ತಲುಪಬಹುದಾಗಿದೆ. ದ್ರಾಸ್ ಗೆ ಶ್ರೀನಗರದಿಂದ ಮಾತ್ರವೆ ಬಸ್ಸಿನ ಸೌಲಭ್ಯವಿದ್ದು, ಶ್ರೀನಗರಕ್ಕೆ ಭಾರತದ ಹಲವು ಪ್ರಮುಖ ನಗರಗಳಾದ ದೆಹಲಿ, ಲುಧಿಯಾನಾ, ಚಂಡೀಗಢ್, ಅಂಬಾಲಾ, ಜಲಂಧರ್ ಮತ್ತು ಶಿಮ್ಲಾಗಳಿಂದ ಬಸ್ಸುಗಳ ಸಂಪರ್ಕವಿದೆ.

ಚಿತ್ರಕೃಪೆ: Sharada Prasad CS

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ನುನ್ ಕುನ್ : ಹಿಮಾಲಯದ ಎರಡು ಶಿಖರ ಶ್ರೇಣಿಗಳ ಶೃಂಗಶ್ರೇಣಿಯೆ ನುನ್ ಕುನ್. ಇಲ್ಲಿರುವ ಎರಡು ಶೃಂಗಗಳನ್ನು ಪ್ರತ್ಯೇಕವಾಗಿ ನುನ್ ಹಾಗೂ ಕುನ್ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.

ಚಿತ್ರಕೃಪೆ: Mahuasarkar25

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ನುನ್ ಶೃಂಗವು ಭಾರತದ ಸರಹದ್ದಿನಲ್ಲಿ ಬರುವ ಹಿಮಾಲಯದ ಅತಿ ಎತ್ತರದ ಶಿಖರ ಶೃಂಗವಾಗಿದೆ. ಇದರ ಒಟ್ಟು ಎತ್ತರ 23,409 ಅಡಿಗಳು.

ಚಿತ್ರಕೃಪೆ: Mahuasarkar25

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಇದಕ್ಕೆ ಹೊಂದಿಕೊಂಡಂತೆ ಇರುವ ಮತ್ತೊಂದು ಶೃಂಗವನ್ನು ಕುನ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದರ ಎತ್ತರವು 23,218 ಅಡಿಗಳು.

ಚಿತ್ರಕೃಪೆ: Mahuasarkar25

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಈ ಶೃಂಗ ಶ್ರೇಣಿಯು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು ಅದ್ಭುತವಾದ ದೃಶ್ಯ ನೋಟಗಳನ್ನು ಭೇಟಿ ನೀಡುವವರಿಗೆ ಕರುಣಿಸುತ್ತದೆ. ಈ ಶೃಂಗಶ್ರೇಣಿಯು ಸುರು ಕಣಿವೆ ಬಳಿಯಿದ್ದು, ಇದು ಜಮ್ಮುಕಾಶ್ಮೀರ ರಾಜ್ಯದ ರಾಜಧಾನಿ ಶ್ರೀನಗರದ ಪೂರ್ವಕ್ಕೆ ಸುಮಾರು 250 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Narender9

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ವಿಶೇಷವಾಗಿ ಕುನ್ ಶೃಂಗವು ನುನ್ ಶೃಂಗದ ಉತ್ತರ ದಿಕ್ಕಿಗಿದ್ದು, ನಾಲ್ಕು ಕಿ.ಮೀ ಗಳಷ್ಟು ಉದ್ದದ ಹಿಮ ಭೂಮಿಯಿಂದ ಪ್ರತ್ಯೇಕಿಸಲ್ಪಟ್ಟಿದೆ.

ಚಿತ್ರಕೃಪೆ: Malikbek

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಜಮ್ಮು- ಕಾಶ್ಮೀರದ ಎರಡು ಸುಂದರ ಸ್ಥಳಗಳು:

ಕಾರ್ಗಿಲ್ ಮತ್ತು ಲೇಹ ಪಟ್ಟಣಗಳನ್ನು ಒಂದಕ್ಕೊಂದು ಬೆಸೆಯುವ ರಸ್ತೆಯ ಮೂಲಕ ಈ ಶೃಂಗಶ್ರೇಣಿಯನ್ನು ತಲುಪಬಹುದಾಗಿದೆ.

ಚಿತ್ರಕೃಪೆ: Sajith T S

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X