Search
  • Follow NativePlanet
Share
» »ಭೀಮತಾಲ್ ಮತ್ತು ಸಾತ್‍ತಾಲ್ ಎಂಬ ನೈನಿತಾಲ್ ಕೆರೆಗಳು

ಭೀಮತಾಲ್ ಮತ್ತು ಸಾತ್‍ತಾಲ್ ಎಂಬ ನೈನಿತಾಲ್ ಕೆರೆಗಳು

By Vijay

ಮಹಾಭಾರತದ ಪ್ರಮುಖ ಪಾತ್ರಧಾರಿಗಳಾದ ಪಂಚ ಪಾಂಡವರು ಪಟ್ಟ ಕಷ್ಟಗಳು ಅನೇಕ. ಜೂಜಿನಲ್ಲಿ ಸೋತು ವನವಾಸ ಅಲೆಯುತ್ತಿದ್ದಾಗ ಪಾಂಡವರು ಅಲೆದ ಜಾಗಗಳಿಗೆ ಲೆಕ್ಕವಿಲ್ಲವೆಂದೆ ಹೇಳಬಹುದು. ಇವರು ಅಲೆದಾಡಿದ ಹಲವಾರು ಸ್ಥಳಗಳಲ್ಲಿ ಏನಾದರೊಂದು ಪ್ರಸಂಗಗಳು ಜರುಗಿ ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ.

ನೈನಿತಾಲ್ ಏಕಿಷ್ಟು ಜನಪ್ರೀಯ ನಿಮಗೆ ಗೊತ್ತೆ?

ಈ ಲೇಖನದಲ್ಲಿ ಅಂತಹ ಒಂದು ಸ್ಥಳದ ಕುರಿತು ತಿಳಿಸಲಾಗಿದೆ. ಅದೆ ಭೀಮತಾಲ್. ಅಥವಾ ಇದನ್ನು ಕನ್ನಡದಲ್ಲಿ ಭೀಮನ ಕೊಳ ಎಂದು ಕರೆಯಬಹುದು. ಈ ಕೆರೆಯು ಇಂದು ಪ್ರವಾಸಿ ಆಕರ್ಷಣೆಯಾಗಿ ಜನಪ್ರೀಯಗೊಳ್ಳುತ್ತಿದ್ದು ದಿನದಿಂದ ದಿನಕ್ಕೆ ಈ ಕೆರೆಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಭೀಮತಾಲ್ ಮತ್ತು ಸಾತ್‍ತಾಲ್ ಎಂಬ ನೈನಿತಾಲ್ ಕೆರೆಗಳು

ಚಿತ್ರಕೃಪೆ: genobz

ಭೀಮತಾಲ್ ಕೆರೆಯಿರುವುದು ಉತ್ತರಾಖಂಡ ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣವಾದ ನೈನಿತಾಲ್ ನಲ್ಲಿ. ನೈನಿತಾಲ್ ಪಟ್ಟಣದಿಂದ ಸುಮಾರು 22 ಕಿ.ಮೀ ಗಳಷ್ಟು ದೂರದಲ್ಲಿ ಈ ಸುಂದರ ಕೆರೆಯಿದೆ ಹಾಗೂ ನೈನಿತಾಲ್ ನಿಂದ ಬಾಡಿಗೆ ಕಾರುಗಳು, ವಾಹನಗಳು ಇಲ್ಲಿಗೆ ತೆರಳಲು ಲಭ್ಯ. ಈ ಕೊಳದ ಬಳಿ ಭೀಮನಿಂದ ನಿರ್ಮಿತವಾದ ಭೀಮೇಶ್ವರ ದೇವಾಲಯವಿದೆ.

ಭೀಮತಾಲ್ ಮತ್ತು ಸಾತ್‍ತಾಲ್ ಎಂಬ ನೈನಿತಾಲ್ ಕೆರೆಗಳು

ಚಿತ್ರಕೃಪೆ: Raja Harjai

ಇನ್ನೊಂದು ವಿಶೇಷವೆಂದರೆ, ಈ ಕೊಳದ ಮಧ್ಯದಲ್ಲಿ ಚಿಕ್ಕ ನಡುಗಡ್ಡೆಯೊಂದರಲ್ಲಿ ಮತ್ಸ್ಯಾಲಯವಿದೆ. ಅಲ್ಲದೆ ಬಹಳಷ್ಟು ಸರ್ಕಾರಿ ಕಚೇರಿಗಳು ಭೀಮತಾಲ್ ಗೆ ವರ್ಗಾವಣೆಗೊಂಡಿದ್ದು ಪ್ರಸ್ತುತ ಪ್ರವಾಸೋದ್ಯಮವು ಬೆಳೆಯುತ್ತಿದೆ. ಅಲ್ಲದೆ ಭೀಮತಾಲ್ ಸುತ್ತ ಮುತ್ತಲಿನಲ್ಲಿ ಇತರೆ ಎರಡು ಆಕರ್ಷಣೆಗಳಿವೆ.

ಭೀಮತಾಲ್ ಮತ್ತು ಸಾತ್‍ತಾಲ್ ಎಂಬ ನೈನಿತಾಲ್ ಕೆರೆಗಳು

ಸಾತ್‍ತಾಲ್ ಕೆರೆ, ಚಿತ್ರಕೃಪೆ: draskd

ಇಂದು ಆಕರ್ಷಣೆಯೆಂದರೆ ನಳ ದಮಯಂತಿ ಕೆರೆ. ಈ ಕೆರೆಯಲ್ಲೆ ಹಿಂದೆ ನಳ ಮಹಾರಾಜನು ಮುಳುಗಿ ಹೋಗಿದ್ದನೆಂಬೆ ಪ್ರತೀತಿಯಿದೆ. ಅಲ್ಲದೆ ಭೀಮತಾಲ್ ನಿಂದ ಇನ್ನೈದು ಕಿ.ಮೀ ದೂರದಲ್ಲಿ ಕೆರೆಗಳ ಗುಂಪಾದ ಸಾತ್‍ತಾಲ್ ಎಂಬ ಇನ್ನೊಂದು ಸುಂದರ ಕೆರೆಯಿದೆ.

ಸಾತ್‍ತಾಲ್ ನಿಸರ್ಗಪ್ರಿಯ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವೆಂದೆ ಹೇಳಬಹುದು. ಏಕೆಂದರೆ ಇಲ್ಲಿ ಅದ್ಭುತ ಹಾಗೂ ರಮಣೀಯ ಪ್ರಕೃತಿ ಒಂದೆಡೆಯಿದ್ದರೆ ಅದಕ್ಕೆ ಭೂಷಣವೆಂಬಂತೆ ಹಲವಾರು ವೈವಿಧ್ಯಮಯ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ. ಪಕ್ಷಿಪ್ರಿಯ ಛಾಯಾಗ್ರಾಹಕ ಪ್ರವಾಸಿಗರಿಗೆ ಈ ತಾಣ ಒಂದು ಸುವರ್ಣಾವಕಾಶವಿದ್ದಂತೆ.

ಭೀಮತಾಲ್ ಮತ್ತು ಸಾತ್‍ತಾಲ್ ಎಂಬ ನೈನಿತಾಲ್ ಕೆರೆಗಳು

ಚಿತ್ರಕೃಪೆ: Alosh Bennett

ಪ್ರವಾಸಿಗರು ನೈನಿತಾಲ್ ತಲುಪಲು ಖಾಸಗಿ ಮತ್ತು ಸಾರ್ವಜನಿಕ ಬಸ್ ಸೇವೆ ಪಡೆಯಬಹುದು. ಅಲ್ಲದೆ, ಖಾಸಗಿ ವೋಲ್ವೋ ಬಸ್ ಗಳು ದೆಹಲಿಯಿಂದ ನೈನಿತಾಲ್ ಗೆ ಲಭ್ಯವಿದೆ. ಸೆಮಿ ಡಿಲಕ್ಸ್ ಮತ್ತು ಡೀಲಕ್ಸ್ ಬಸ್ಸುಗಳು ಅಲ್ಮೋರಾ, ರಾನಿಖೇತ್ ಮತ್ತು ಬದ್ರಿನಾಥ್ ನಿಂದ ನೈನಿತಾಲ್ ಗೆ ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X