Search
  • Follow NativePlanet
Share
» »ಶಂಖೋಧರ : ಇದೆ ಶ್ರೀಕೃಷ್ಣನ ಮೂಲ ಸಾಮ್ರಾಜ್ಯ!

ಶಂಖೋಧರ : ಇದೆ ಶ್ರೀಕೃಷ್ಣನ ಮೂಲ ಸಾಮ್ರಾಜ್ಯ!

By Vijay

ಇದನ್ನು ಜನಪ್ರೀಯವಾಗಿ ಶ್ರೀಕೃಷ್ಣನ ಸಾಮ್ರಾಜ್ಯ ಎಂತಲೆ ಕರೆಯಲಾಗುತ್ತದೆ. ಮೂಲತಃ ಇದೊಂದು ಅದ್ಭುತ ದ್ವೀಪ ಪ್ರದೇಶ ಅಥವಾ ನಡುಗಡ್ಡೆ. ಭಾರತದ ಮುಖ್ಯ ಭೂಮಿಯಿಂದ ಸಮುದ್ರದ ಮೂಲಕ ಮೂರು ಕಿ.ಮೀ ದೂರದಲ್ಲಿರುವ ಜನಪ್ರೀಯಗೊಳ್ಳುತ್ತಿರುವ ಪ್ರವಾಸಿ ತಾಣ. ವಿಶೇಷವೆಂದರೆ ದ್ವಾರಕೆಯಿಂದ ಕೇವಲ ಮೂವತ್ತೇ ಕಿ.ಮೀ ಗಳಷ್ಟು ದೂರದಲ್ಲಿದೆ.

ದಕ್ಷಿಣದಲ್ಲಿರುವ ಕೃಷ್ಣನ ಕೆಲವು ಸುಂದರ ದೇವಾಲಯಗಳು

ಹೌದು, ಇದನ್ನು ಬೇಟ್/ಬೇಯ್ಟ್ ದ್ವಾರಕಾ ಎಂತಲೂ ಕರೆಯುತ್ತಾರೆ ಹಾಗೂ ಇದು ಗುಜರಾತ್ ರಾಜ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಗುಜರಾತ್ ರಾಜ್ಯದ ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಎಂಬ ಕರಾವಳಿ ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿ ಬೇಟ್ ದ್ವಾರಕಾ ಸ್ಥಿತವಿದೆ. ಅರಬ್ಬಿ ಸಮುದ್ರ ಪ್ರವೇಶದ್ವಾರ ಎಂದೇ ಹೇಳಲಾಗುವ ಗಲ್ಫ್ ಆಫ್ ಕಚ್ ನಲ್ಲಿ ಈ ದ್ವೀಪವಿದೆ.

ಶಂಖೋಧರ : ಇದೆ ಶ್ರೀಕೃಷ್ಣನ ಮೂಲ ಸಾಮ್ರಾಜ್ಯ!

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: AngMoKio

ಪುರಾತತ್ವ ಇಲಾಖೆಯು ನಡೆಸಿದ ಅಧ್ಯಯನದ ಪ್ರಕಾರ, ಹರಪ್ಪ ನಾಗರಿಕತೆಯ ನಂತರದಲ್ಲಿ ಇಲ್ಲಿ ನಾಗರಿಕ ಪ್ರದೇಶ ಅಭಿವೃದ್ಧಿಯಾಗಿತ್ತೆಂದು ಹೇಳಲಾಗಿದೆ. ಅಲ್ಲದೆ ಮಹಾಭಾರತದ ಸಭಾಪರ್ವದಲ್ಲಿ ಉಲ್ಲೇಖಿಸಲಾದ ಅಂತರ್ದ್ವೀಪವು ಇದೆ ಬೇಟ್ ದ್ವಾರಕಾ ಎಂದು ಗುಜರಾತಿ ವಿದ್ವಾಂಸ ಉಮಾಶಂಕರ ಜೋಷಿಯವರ ಅಭಿಪ್ರಾಯವಾಗಿದೆ. ಇದರಲ್ಲಿ ದ್ವಾರಕೆಯ ರಾಜನು ದೋಣಿಯ ಮೂಲಕ ಇಲ್ಲಿಗೆ ತೆರಳುತ್ತಿದ್ದನೆಂಬ ವಿಷಯವಿದೆ.

ಶಂಖೋಧರ : ಇದೆ ಶ್ರೀಕೃಷ್ಣನ ಮೂಲ ಸಾಮ್ರಾಜ್ಯ!

ಬೇಟ್ ದ್ವಾರಕಾ, ಚಿತ್ರಕೃಪೆ: Asdelhi95

ಅಲ್ಲದೆ ಶ್ರೀಕೃಷ್ಣನು ರಾಧೆಯ ಜೊತೆ ಹೆಚ್ಚು ಕಾಲ ಈ ಸುಂದರವಾದ ಸ್ಥಳದಲ್ಲಿ ಕಳೆದಿದ್ದನೆಂಬ ಪ್ರತೀತಿಯಿದೆ. ಬೇಸಿಗೆಯ ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಶ್ರೀಕೃಷ್ಣನು ಆಗಾಗ ಇಲ್ಲಿಗೆ ಬರುತ್ತಿದ್ದನೆಂದು ಸ್ಥಳ ಪುರಾಣದ ಪ್ರಕಾರ ತಿಳಿದು ಬರುತ್ತದೆ. ಇದೊಂದು ಆಕರ್ಷಕ ಪ್ರವಾಸಿ ತಾಣವಾಗಿದ್ದು ಆಂಜನೇಯ, ಹಾಗೂ ಕೃಷ್ಣನ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ ಒಂದು ಗುರುದ್ವಾರವೂ ಸಹ ಇಲ್ಲಿದೆ.

ಶಂಖೋಧರ : ಇದೆ ಶ್ರೀಕೃಷ್ಣನ ಮೂಲ ಸಾಮ್ರಾಜ್ಯ!

ಬೇಟ್ ದ್ವಾರಕಾ

ಇಲ್ಲಿರುವ ಕೃಷ್ಣನ ದೇವಾಲಯ 500 ವರ್ಷಗಳಷ್ಟು ಪುರಾತನವಾದುದೆಂದು ಹೇಳಲಾಗುತ್ತದೆ ಹಾಗೂ ಪದ್ಧತಿಯಂತೆ ಇಂದಿಗೂ ಇಲ್ಲಿಗೆ ಭೇಟಿ ನೀಡುವ ಭಕ್ತರು ಬ್ರಾಹ್ಮಣರಿಗೆ ಅಕ್ಕಿಯನ್ನು ದಾನವನ್ನಾಗಿ ನಿಡುತ್ತಾರೆ. ಆಂಜನೇಯನ ದೇವಾಲಯ ಸಾಕಷ್ಟು ವಿಶಿಷ್ಟವಾಗಿದೆ ಕಾರಣ ಆಂಜನೇಯನ ಜೋತೆ ಅವನ ಮಗನಾದ ಮಕರಧ್ವಜನ ವಿಗ್ರಹವು ಇಲ್ಲಿರುವುದರಿಂದ.

ಶಂಖೋಧರ : ಇದೆ ಶ್ರೀಕೃಷ್ಣನ ಮೂಲ ಸಾಮ್ರಾಜ್ಯ!

ಬೇಟ್ ದ್ವಾರಕಾ, ಚಿತ್ರಕೃಪೆ: T.sujatha

ಇನ್ನೂ ಪ್ರಾಕೃತಿಕವಾಗಿ ಹೇಳಬೇಕೆಂದರೆ ಈ ನಡುಗಡ್ಡೆಯು ಶಾಂತ ಪರಿಸರವನ್ನು ಹೊಂದಿದ್ದು ಎಲ್ಲೆಡೆ ವಿಶಾಲವಾದ ನೀಳ ವರ್ಣದ ಸಮುದ್ರ ನೀರಿನಿಂದ ಅದ್ಭುತವಾಗಿ ಗೋಚರಿಸುತ್ತದೆ. ಓಖಾ ಇಲ್ಲಿಗೆ ತೆರಳಲು ಹತ್ತಿರದ ಭಾರತ ಮುಖ್ಯ ಭೂಮಿಯ ಕರಾವಳಿ ಗ್ರಾಮವಾಗಿದ್ದು ಇಲ್ಲಿಂದ ದೋಣಿಯ ಮೂಲಕವೆ ಸಾಗಿ ಬೇಟ್ ದ್ವಾರಕಾವನ್ನು ಪ್ರವೇಶಿಸಬಹುದು.

ಶಂಖೋಧರ : ಇದೆ ಶ್ರೀಕೃಷ್ಣನ ಮೂಲ ಸಾಮ್ರಾಜ್ಯ!

ಆಂಜನೇಯ ಹಾಗೂ ಪುತ್ರ ಮಕರಧ್ವಜ, ಚಿತ್ರಕೃಪೆ: Sunilkr05

ಹೀಗೆ ಸಮುದ್ರದಲ್ಲಿ ಸಾಗುವಾಗ ವಿನೂತನ ರೀತಿಯ ಅನುಭವವನ್ನು ನೀವು ಪಡೆಯಬಹುದು. ವಿವಿಧ ಸಮುದ್ರ ಪಕ್ಷಿಗಳ ವೀಕ್ಷಣೆ ಮಾಡಬಹುದು. ಇನ್ನೊಂದು ಸಂಗತಿಯೆಂದರೆ ಸಾಮಾನ್ಯವಾಗಿ ದ್ವಾರಕೆಗೆ ಭೆಟಿ ನೀಡುವ ಪ್ರವಾಸಿಗರು ದ್ವಾರಕೆಯಿಂದ 32 ಕಿ.ಮೀ ದೂರದಲ್ಲಿರುವ ಬೇಟ್ ದ್ವಾರಕೆಗೆ ಭೇಟಿ ನೀಡದೆ ಮರಳುವುದು ಬಲು ವಿರಳ.

ಶಂಖೋಧರ : ಇದೆ ಶ್ರೀಕೃಷ್ಣನ ಮೂಲ ಸಾಮ್ರಾಜ್ಯ!

ಪ್ರವಾಸಿಗರಿಗೆಂದು ನೆಡಲಾದ ಪ್ರವಾಸಿ ಕುಟಿರಗಳು, ಚಿತ್ರಕೃಪೆ: Kuldip Pipaliya

ಬೇಟ್ ದ್ವಾರಕೆಯಲ್ಲಿ ಹಿಂದೆ ಭಾರತೀಯ ಪುರಾತತ್ವ ಇಲಾಖೆ ಉತ್ಖನನ ಮಾಡಿದಾಗ ಇಲ್ಲಿ ಹಲವಾರು ಶಾಸನಗಳು ದೊರೆತಿದ್ದು ಅವುಗಳ ಪ್ರಕಾರವಾಗಿ ಶ್ರೀಕೃಷ್ಣನ ಮೂಲ ಸ್ಥಳ ಇದಾಗಿತ್ತೆಂದು ತಿಳಿದುಬರುತ್ತದೆ. ಹಾಗಾಗಿ ದ್ವಾರಕೆಗೆ ಬರುವ ಕೃಷ್ಣ ಭಕ್ತರು ಬೇಟ್ ದ್ವಾರಕೆಗೂ ಸಹ ಭೇಟಿ ನೀಡುತ್ತಾರೆ.

ದಕ್ಷಿಣದ ದ್ವಾರಕೆಯೂ ಇದೆ! ವೈಕುಂಠ ಕ್ಷೇತ್ರವೂ ಇದೆ!

ಇನ್ನೂ ಸಮುದ್ರದಲ್ಲಿ ದೊರೆಯುವ, ಮನೆಯ ಅಲಂಕಾರಿಕ ವಸ್ತುಗಳಾಗಿ ಬಳಸಲ್ಪಡುವ ಸಾಕಷ್ಟು ಆಕರ್ಷಕವಾಗಿ ಕಂಡುಬರುವ ಶಂಖಗಳು, ಕಪ್ಪೆ ಚಿಪ್ಪುಗಳು ಇಲ್ಲಿ ಅಗಾಧ ಪ್ರಮಾಣದಲ್ಲಿ ದೊರೆಯುವುದರಿಂದ ಇದಕ್ಕೆ ಶಂಖೋಧರ ಎಂಬ ಹೆಸರೂ ಸಹ ಬಂದಿದೆ. ಸಾಮಾನ್ಯವಾಗಿ ಇಲ್ಲಿನ ದುನ್ನಿ ಎಂಬ ಸ್ಥಳದಲ್ಲಿ ಬೇಸಿಗೆಯ ಸಮಯದಲ್ಲಿ ಪ್ರವಾಸಿಗರಿಗೆಂದು ಕ್ಯಾಂಪ್ ಗಳನ್ನು ಹಾಕಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X